Author: admin
ಮೂಡುಬಿದಿರೆ: ಶಿರ್ತಾಡಿ ನವಮೈತ್ರಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಮಹಾಸಭೆ ಶಿರ್ತಾಡಿಯ ಹೊಟೇಲ್ ಶ್ರೀಬ್ರಹ್ಮ ರೆಸಿಡೆನ್ಸಿ ಸಭಾಂಗಣದಲ್ಲಿ ಜರುಗಿತು. https://chat.whatsapp.com/Ge11n7QCiMj5QyPvCc0H19 ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ಸಹಕಾರಿಯ ಕೇಂದ್ರ ಕಚೇರಿ ಹೊಂದಿರುವ ಮೈತ್ರಿ ಸೌಧ ನೂತನ ಕಟ್ಟಡವನ್ನು 2025ರ ಮಾರ್ಚ್ ತಿಂಗಳಲ್ಲಿ ಉದ್ಘಾಟಿಸುವುದಾಗಿ ತಿಳಿಸಿದರು. ಕಟ್ಟಡ ಉದ್ಘಾಟನೆ ನಂತರ ಕಾರ್ಕಳ ತಾಲೂಕಿನ ಮುರತ್ತಂಗಡಿ ಮತ್ತು ಇರ್ವತ್ತೂರು, ಬೆಳ್ತಂಗಡಿ ತಾಲೂಕಿನ ಅಂಡಿಂಜೆಯಲ್ಲಿ ನೂತನ ಶಾಖೆಗಳನ್ನು ತೆರೆಯಲು ನಿರ್ಧರಿಸಿರುವುದಾಗಿ ತಿಳಿಸಿದರು. 12 ವರ್ಷಗಳನ್ನು ಪೂರೈಸಿರುವ ಸಹಕಾರಿಯು ಮಾರ್ಚ್ ಅಂತ್ಯಕ್ಕೆ 3387 ಸದಸ್ಯರನ್ನು ಹೊಂದಿದ್ದು, 17.12 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 14.24 ಕೋಟಿ ಠೇವಣಿ, 13.71 ಕೋಟಿ ಸಾಲ ಮತ್ತು ಮುಂಗಡ ಹೊಂದಿದ್ದು, ವಿವಿಧ ಬ್ಯಾಂಕ್‌ಗಳ ನಿರಖು ಠೇವಣಿಯಲ್ಲಿ 3.80 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಒಟ್ಟಾರೆ 29.09 ಲಕ್ಷ ರೂ. ಲಾಭ ಗಳಿಸಿರುವ ಸಹಕಾರಿ ಬ್ಯಾಂಕಿಂಗ್ ಸೇವೆಗಳು ಮಾತ್ರವಲ್ಲದೆ ಇ-ಸ್ಟ್ಯಾಂಪಿಂಗ್, ಪಹಣಿ…
ಮಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಭಾನುವಾರ ಮಂಗಳೂರಿನ ಯೆಯ್ಯಾಡಿಯ ಪ್ರಧಾನ ಕಚೇರಿಯಲ್ಲಿ ಸಹಕಾರಿಯ ಅಧ್ಯಕ್ಷ ಉರ್ಬನ್ ಪಿಂಟೋ ಅಧ್ಯಕ್ಷತೆಯಲ್ಲಿ ಜರುಗಿತು. https://chat.whatsapp.com/Ge11n7QCiMj5QyPvCc0H19 ಸಹಕಾರಿಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಯಾ ಸುಧಾಕರ್‌ವಾರ್ಷಿಕ ವರದಿ ಮಂಡಿಸಿದರು. ಸಹಕಾರಿಯ ಉಪಾಧ್ಯಕ್ಷ ಸದಾಶಿವ ಬಂಗೇರ ಸ್ವಾಗತಿಸಿದರು. ನಿರ್ದೇಶಕರಾದ ಶೈಲೇಶ್‌ಮಲ್ಯ, ಕುಶಲ್‌ಪೂಜಾರಿ, ಸುಬ್ರಹ್ಮಣ್ಯ ರಾವ್‌ಪಿ., ನವೀನ್‌ಚಂದ್ರ, ರವಿಪ್ರಸಾದ್ ಶೆಟ್ಟಿ, ರವಿ ಸುವರ್ಣ, ಎಡ್ವರ್ಡ್‌ಸಿಕ್ವೇರ, ಅಶೋಕ್‌ಕುಮಾರ್, ದಿನೇಶ್‌ರಾವ್, ಆರ್.ಕೆ.ಪುರುಷೋತ್ತಮ, ಸುರೇಖಾ ಪುರುಷೋತ್ತಮ ಉಪಸ್ಥಿತರಿದ್ದರು. ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಕುಶಲ್ ಪೂಜಾರಿ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
2023-24ನೇ ಸಾಲಿನಲ್ಲಿ ರೂ. 13,04,029.20 ಲಾಭ ಕಟೀಲು: ನಂದಿನಿ ಪತ್ತಿನ ಸಹಕಾರ ಸಂಘ (ನಿ) ಕಟೀಲು ಇದರ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಆಡಳಿತ ಕಚೇರಿಯ ವಠಾರದಲ್ಲಿ ನಡೆಯಿತು. ಸಾಮಾನ್ಯ ಸಭೆಯ ನೋಟೀಸ್ ಅನ್ನು ಸಂಘದ ಸಿಬ್ಬಂದಿ ಲಾವಣ್ಯ ಓದಿದರು. ಕಳೆದ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಸಂಘದ ಹಿರಿಯ ಸಿಬ್ಬಂದಿ ದಿವ್ಯಾ ಡಿ.ಅಮೀನ್ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಬಬಿತಾ ಎಂ. 2023-24ನೇ ಸಾಲಿನ ಆಡಳಿತ ವರದಿ ಮಂಡಿಸಿದರು. 2024-25ನೇ ಸಾಲಿನ ಬಜೆಟ್ ಮತ್ತು ಕಳೆದ ಸಾಲಿನ ಬಜೆಟ್‌ಗಿಂತ ಹೆಚ್ಚಾದ ಖರ್ಚನ್ನು ಸಂಘದ ಗುಮಾಸ್ತೆ ಲಾವಣ್ಯ ಮಂಡಿಸಿದರು. ಹಿರಿಯ ಗುಮಾಸ್ತೆ ದಿವ್ಯಾ ಡಿ.ಅಮೀನ್ 2024-25ನೇ ಸಾಲಿನ ಕ್ರಿಯಾಯೋಜನೆಗಳನ್ನು ಮಂಡಿಸಿದರು. https://chat.whatsapp.com/Ge11n7QCiMj5QyPvCc0H19 2023-24ನೇ ಸಾಲಿನ ಲೆಕ್ಕ ಪರಿಶೋಧಿತ ಆರ್ಥಿಕ ತಕ್ತೆಗಳನ್ನು, ನಿವ್ವಳ ಲಾಭದ ವಿಂಗಡಣೆಯನ್ನು ಸಂಘದ ಮುಖ್ಯ ಕಾರ್ಯನಿರ್ವಹಧಿಕಾರಿ ಶಶಿಧರ ಶೆಟ್ಟಿ ಮಂಡಿಸಿದರು. 2023-24ನೇ ಸಾಲಿನಲ್ಲಿ ಸಂಘವು ರೂ. 13,04,029.20 ಲಾಭ ಗಳಿಸಿದ್ದು, ಸಂಘದ ಅಧ್ಯಕ್ಷ ಕೆ.ನೀಲಯ ಕೋಟ್ಯಾನ್ ಶೇಕಡಾ 10 …
ಉಡುಪಿ: ಹೊಸಾಡು ಸೇವಾ ಸಹಕಾರ ಸಂಘ ನಿ. ಮುಳ್ಳಿಕಟ್ಟೆ ಇದರ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಾಡು ಇಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮಾತನಾಡಿ, ನಮ್ಮ ಸಂಘವು ನಿಮ್ಮೆಲ್ಲರ ಪ್ರೋತ್ಸಾಹದಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಮುಂದೆಯೂ ನಿಮ್ಮ ಸಹಕಾರ ಅಗತ್ಯವಾಗಿ ಬೇಕು ಎಂದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಲೆಕ್ಕಪರಿಶೋಧನಾ ವರದಿ ವಾಚಿಸಿದರು. ಸಿಬ್ಬಂದಿ ಶಿಲ್ಪಾ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರಶೇಖರ, ನಿರ್ದೇಶಕರಾದ ಸತೀಶ್ ಶೆಟ್ಟಿ, ದಿನೇಶ್ ಜೋಗಿ, ಶಶಿಧರ ಅಡಿಗ, ಪ್ರದೀಪ ಬಿಲ್ಲವ, ರಾಮ ಗಾಣಿಗ, ಶರತ್ ಶೆಟ್ಟಿ, ನವೀನ್ ಫೆರ್ನಾಂಡಿಸ್, ರೇಖಾ ಪುತ್ರನ್, ಅಕ್ಷತಾ ರವೀಂದ್ರ ಹಾಗೂ ಸಂಘದ ಸದಸ್ಯರು ಹಾಜರಿದ್ದರು. ಸಿಇಒ ನವೀನ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ರೇಖಾ ಪುತ್ರನ್ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ, ಶೇಕಡಾ 10 ಡಿವಿಡೆಂಡ್ ಘೋಷಣೆ ಮಂಗಳೂರು: ಎಂ.ಸಿ.ಸಿ. ಬ್ಯಾಂಕಿನ ವಾರ್ಷಿಕ ಮಹಾಸಭೆ ಮಂಗಳೂರಿನ ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ(ಲೊಯೊಲಾ ಹಾಲ್) ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆಯಲ್ಲಿ ಜರುಗಿತು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ ಮತ್ತು ನಿರ್ದೇಶಕ ಡೇವಿಡ್ ಡಿಸೋಜ ಜ್ಯೋತಿ ಬೆಳಗಿಸಿದರು. ಅನಿಲ್ ಲೋಬೊ, ಜೆರಾಲ್ಡ್ ಜೂಡ್ ಡಿಸಿಲ್ವ, ಸದಸ್ಯರಾದ ಎಡ್ಮಂಡ್ ಫ್ರಾಂಕ್ (ಮಾಜಿ ಉಪಾಧ್ಯಕ್ಷರು ಎಂ.ಸಿ.ಸಿ. ಬ್ಯಾಂಕ್), ರೋನ್ಸ್ ಬಂಟ್ವಾಳ್, ರೋಹನ್ ಮೊಂತೇರೊ, (ಮ್ಯಾನೇಜಿಂಗ್ ಡೈರೆಕ್ಟರ್, ರೋಹನ್ ಕಾರ್ಪೊರೇಶನ್) ಪಿಯುಸ್ ಎಲ್.ರೋಡ್ರಿಗಸ್(ಮಾಜಿ ನಿರ್ದೇಶಕರು ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ) ಮತ್ತು ಲೂವಿ ಪಿಂಟೊ (ಅಧ್ಯಕ್ಶರು, ಮಾಂಡ್ ಸೊಭಾಣ್) ಇವರು ಬ್ಯಾಂಕಿನ ಸಂಸ್ಥಾಪಕರಿಗೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಗೌರವಿಸಿದರು. ಬ್ಯಾಂಕಿನ 106ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ರತ್ನ ಅನಿಲ್ ಲೋಬೊ, ಎಂ.ಸಿ.ಸಿ. ಬ್ಯಾಂಕ್ ಎಂದೇ ಪ್ರಖ್ಯಾತವಾಗಿರುವ ಮಂಗಳೂರು…
69 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ, ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿ ವಿಟ್ಲ: ಕಳೆದ 69 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಿ, ಪ್ರತಿ ವರ್ಷವೂ ಉತ್ತಮ ಲಾಭ ಗಳಿಸಿ ಸಮಾಜಮುಖಿ ಕೆಲಸಗಳಲ್ಲಿ ಕೈ ಜೋಡಿಸಿರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2023-24ನೇ ಸಾಲಿನಲ್ಲಿ 2.97 ಕೋಟಿ ರೂ.ಗಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇಕಡಾ 22 ಡಿವಿಡೆಂಡ್ ಘೋಷಿಸಲಾಗಿದೆ. ವರದಿ ವರ್ಷದಲ್ಲಿ 8025 ಸದಸ್ಯರು, 127.19 ಕೋಟಿ ರೂ. ಠೇವಣಾತಿ ಇದೆ. ಸುಮಾರು 154.65 ಕೋಟಿ ರೂ. ದುಡಿಯುವ ಬಂಡವಾಳ ಹಾಗೂ 83.76 ಕೋಟಿ ರೂ. ಸಾಲ ವಿತರಿಸಿದೆ. ವರದಿ ಸಾಲಿನಲ್ಲಿ ದಾಖಲೆಯ 690.20 ಕೋಟಿ ರೂ.ಗಳ ವ್ಯವಹಾರ ನಡೆಸಿ, ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮವನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲ ತಾಲೂಕಿನ ಕಾರ್ಯವ್ಯಾಪ್ತಿ ಹೊಂದಿರುವ ಬ್ಯಾಂಕ್, ವಿಟ್ಲದಲ್ಲಿ ಪ್ರಧಾನ ಕಛೇರಿ, ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡ್, ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿದ್ದು, ಬ್ಯಾಂಕ್ ಸಂಪೂರ್ಣ ಕಂಪ್ಯೂಟರೀಕರಣಗೊಂಡಿದ್ದು ಸಿ.ಬಿ.ಎಸ್. ವ್ಯವಸ್ಥೆಯಲ್ಲಿ ತ್ವರಿತ…
ಇಫ್ಕೋ ಆಯೋಜನೆ, 17 ಸಂಘಟನೆಗಳ ಜಂಟಿ ಆಶ್ರಯ ನವದೆಹಲಿ: ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ(ಐಸಿಎ)ದ ಸಾಮಾನ್ಯ ಸಭೆ ಮತ್ತು ಜಾಗತಿಕ ಸಹಕಾರ ಸಮ್ಮೇಳನ ನವೆಂಬರ್ 25ರಿಂದ 30ರ ತನಕ ನಡೆಯಲಿದೆ. ಐಸಿಎಯ 130 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಈ ಸಮ್ಮೇಳನ ಭಾರತದಲ್ಲಿ ನಡೆಯುತ್ತಿದ್ದು ದೇಶದ ಸಹಕಾರ ವಲಯದ ಬೆಳವಣಿಗೆಗೆ ಇದು ಮಹತ್ವದ ಕೊಡುಗೆ ನೀಡಲಿದೆ ಎಂದು ಇಫ್ಕೋ ಚೇರ್‌ಮೆನ್ ದಿಲೀಪ್ ಸಂಘಾನಿ ತಿಳಿಸಿದ್ದಾರೆ. ಇಫ್ಕೋ ಮತ್ತು ಐಸಿಎಯ 17 ಇತರ ಸದಸ್ಯ ಸಂಘಟನೆಗಳು ಸಮ್ಮೇಳನವನ್ನು ಆಯೋಜಿಸಿದ್ದು ನವದೆಹಲಿಯ ಭಾರತ್ ಮಂಟಪ ಇದಕ್ಕೆ ಸಜ್ಜಾಗಿದೆ. ʼಸಹಕಾರ: ಎಲ್ಲರಿಗೂ ಸಮೃದ್ಧಿಯ ಬಾಗಿಲುʼ ಎಂಬುದು ಈ ಸಮ್ಮೇಳನದ ಧ್ಯೇಯವಾಕ್ಯವಾಗಿದ್ದು ಇದು ಸಹಕಾರದಿಂದ ಸಮೃದ್ಧತೆಯನ್ನು ಸಾಧಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿಗೆ ಪೂರಕವಾಗಿದೆ ಎಂದು ಸಂಘಾನಿ ತಿಳಿಸಿದ್ದಾರೆ. https://chat.whatsapp.com/Ge11n7QCiMj5QyPvCc0H19 ಭಾರತದ ಸಹಕಾರ ಕ್ಷೇತ್ರವು ಜಾಗತಿಕವಾಗಿ ಪ್ರಮುಖ ಶಕ್ತಿಯಾಗಿ ಪಡಿಮೂಡುವಲ್ಲಿ ಅಮಿತ್ ಶಾ ನೇತೃತ್ವದ ಸಚಿವಾಲಯವು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ತೆರಿಗೆ ಸುಧಾರಣೆಗಳು, ಪ್ರಾಥಮಿಕ ಕೃಷಿ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಪಂಪ್‌ವೆಲ್‌ನಲ್ಲಿರುವ ಸಭಾಂಗಣದಲ್ಲಿ ಶುಕ್ರವಾರ ಸಂಪನ್ನಗೊಂಡಿತು. https://chat.whatsapp.com/Ge11n7QCiMj5QyPvCc0H19 ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಕೊಟ್ಟಾರಿ ಎಚ್. ವಾರ್ಷಿಕ ವರದಿ ಮಂಡಿಸಿದರು. ಸಭೆಯಲ್ಲಿ ಸದಸ್ಯರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಒಕ್ಕೂಟದ ವತಿಯಿಂದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾಡುವುದು ಹಾಗೂ ಸಹಕಾರಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ಕೇಂದ್ರಬಿಂದುವಾಗಿ ಸಂಘಟಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಜಿಲ್ಲೆಯ ಎಲ್ಲ ಸೌಹಾರ್ದ ಸಹಕಾರಿ ಸಂಘಗಳ ಸದಸ್ಯತ್ವ ಮಾಡುವುದೆಂದು ತೀರ್ಮಾನಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ನಿಕಟಪೂರ್ವ ಅಧ್ಯಕ್ಷ ಎ.ಸುರೇಶ್ ರೈ ಮಾರ್ಗದರ್ಶನ ನೀಡಿದರು. ಸಂಯುಕ್ತ ಸಹಕಾರಿಯ ನಿರ್ದೇಶಕಿ, ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟದ ಸೌಹಾರ್ದ ಸಹಕಾರಿಯ ವೃತ್ತಿಪರ ನಿರ್ದೇಶಕಿ ಭಾರತಿ ಜಿ.ಭಟ್ ಸಲಹೆಗಳನ್ನು ನೀಡಿದರು. ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ…
ಶೇ. 22 ಡಿವಿಡೆಂಡ್ ಘೋಷಣೆ ಮಂಗಳೂರು: ದಿ ಕರಾವಳಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅತ್ತಾವರ ಮಂಗಳೂರು ಇದರ 33ನೇ ವಾರ್ಷಿಕ ಮಹಾಸಭೆ ಸೊಸೈಟಿ ಅಧ್ಯಕ್ಷ ಎ.ಎಸ್ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಪ್ಪು ಜೆರೋಸಾ ಹೈಸ್ಕೂಲ್‌ನಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19 ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಎಂ. ಗತವರ್ಷದ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ರಮೇಶ್ ಮೆಂಡನ್ ಟಿ., ನಿರ್ದೇಶಕರಾದ ಪ್ರಕಾಶ್ ಬಿ., ತಾರಾನಾಥ ಸುವರ್ಣ, ಭರತ್ ಕುಮಾರ್ ಎ., ಶೋಭಾ ಎ, ಪದ್ಮನಾಭ, ಉಷಾ, ರಾಜನ್ ಕುಮಾರ್ ಎಚ್.ಎಸ್. ಉಪಸ್ಥಿತರಿದ್ದರು. ನಿರ್ದೇಶಕರಾದ ವಿಶ್ವಾಸ್ ಕುಮಾರ್ ದಾಸ್, ರವೀಂದ್ರ ಟಿ. ಸೊಸೈಟಿಯ ಬೆಳವಣಿಗೆಯ ಬಗ್ಗೆ ತಿಳಿಸಿದರು. ಸೊಸೈಟಿ 2023-24ನೇ ಸಾಲಿನಲ್ಲಿ 5.51 ಕೋಟಿ ರೂ. ಲಾಭ ಗಳಿಸಿದೆ. ಶೇ.22ರಷ್ಟು ಡಿವಿಡೆಂಡ್ ಘೋಷಣೆ ಮಾಡಿದೆ. ಜಾಮೀನು ಸಾಲ, ಆಭರಣ ಸಾಲ, ಆಸ್ತಿ, ಆಧಾರ ಸಾಲ, ಗೃಹ ಸಾಲ, ವಾಹನ ಸಾಲ, ಜೀವ ವಿಮಾ ಪಾಲಿಸಿ, ರಾಷ್ಟ್ರೀಯ ಉಳಿತಾಯ ಪತ್ರ ಆಧಾರ ಸಾಲ ನೀಡುವ ಯೋಜನೆಗಳೊಂದಿಗೆ ಕಾರ್ಯವೆಸಗುತ್ತಿದೆ.…
ವಾರ್ಷಿಕ ಮಹಾಸಭೆಯಲ್ಲಿ 65% ಬೋನಸ್ ನೀಡಲು ಪ್ರಸ್ತಾಪ ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2023 _24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಣೂರು ನರಸಿಂಹ ಕಾಮತ್, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ವೈಜ್ಞಾನಿಕ ದರ ನಿಗದಿ ಮಾಡಿದರೆ ಮಾತ್ರ ಮುಂದಿನ ವರ್ಷಗಳಲ್ಲಿ ಹೈನುಗಾರಿಕೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪಶು ಆಹಾರದ ಬಳಕೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಸಿರು ಮೇವು ಹಾಗೂ ರಸಮೇವಿನ ಉತ್ಪಾದನೆ ಮತ್ತು ಬಳಕೆಯಿಂದ ಹಿಂಡಿಯ ಖರ್ಚು ಕಡಿಮೆಯಾಗಿ, ಹೈನುಗಾರಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ. ಒಕ್ಕೂಟದ ಪ್ರೋತ್ಸಾಹಕ ಯೋಜನೆಗಳಾದ ಮಿಶ್ರ ತಳಿ ಕರು ಯೋಜನೆ, ಸಾಮೂಹಿಕ ರಾಸು ವಿಮಾ ಯೋಜನೆ,…
