ಸಾಗರ: ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ಶ್ರೀ ಶಾಂತೇಶ್ವರಿ ಮಹಿಳಾ ಪತ್ತಿನ ಸಹಕಾರ ಸಂಘ ಶಿಕಾರಿಪುರ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಶಿಕಾರಿಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಗರ ಉಪ ವಿಭಾಗದ ಪತ್ತಿನ ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಶಿಕಾರಿಪುರದ ಶ್ರೀ ಕಂತೆ ಸಿದ್ದೇಶ್ವರ ಸಭಾಂಗಣದಲ್ಲಿ ನೇತ್ರಾ ದೇವರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
https://chat.whatsapp.com/Ge11n7QCiMj5QyPvCc0H19
ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ.ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ ಬಿ.ಡಿ.ಭೂಕಾಂತ, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ನಿರ್ದೇಶಕರಾದ ಶಿವಮ್ಮ ಬಸವರಾಜಪ್ಪ, ಕವಿತಾ ಸುರೇಶ್, ಶಶಿಕಲಾ ರುದ್ರೇಶ್, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಡಿ.ಎಲ್. ಬಸವರಾಜ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕೆ.ಜಿ. ಮಮತಾ ಚಂದ್ರಕುಮಾರ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಮಾಜಿ ನಿರ್ದೇಶಕರಾದ ನಾಗರಾಜ್ ಸ್ವಾಮಿ, ಶಿವಮೊಗ್ಗ ಹಾಪ್‌ಕಾಮ್ ನಿರ್ದೇಶಕರಾದ ಶಾರದಮ್ಮ ನರಸಿಂಹಮೂರ್ತಿ, ಬಸವೇಶ್ವರ ಸಹಕಾರ ಒಕ್ಕೂಟ ಸಂಘದ ಅಧ್ಯಕ್ಷ ಮೌನೇಶ್ವರಪ್ಪ, ಉಪಾಧ್ಯಕ್ಷ ಪರಮೇಶ್ವರಪ್ಪ, ಚುರ್ಚಿಗುಂಡಿ ಕುಮದ್ವತಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಅನಸೂಯಮ್ಮ ಸಂಗಪ್ಪ,ಕುರಿ ಕೋಳಿ ಮೇಕೆ ಸಾಕಾಣಿಕೆದಾರರ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಎಂವಿ ಮುಖ್ಯ ಅತಿಥಿಗಳಾಗಿ ಹಾಜರಿದ್ದರು.
ಸಹಕಾರ ಸಂಘಗಳ ಇತ್ತೀಚಿನ ಕಾಯ್ದೆಗಳ ಬಗ್ಗೆ ಕೆಐಸಿಎಂ ಶಿವಮೊಗ್ಗ ಇದರ ಪ್ರಾಂಶುಪಾಲ ರವಿ. ಎನ್ ಮತ್ತು ಸಹಕಾರ ಸಂಘಗಳ ಲೆಕ್ಕಪತ್ರ ನಿರ್ವಹಣೆಯ ಬಗ್ಗೆ ಕೆಐಸಿಎಂ ಶಿವಮೊಗ್ಗದ ಉಪನ್ಯಾಸಕ ಏಕಾಂತ ಎಂ.ವಿ ತರಬೇತಿ ನೀಡಿದರು. ಶ್ರೀ ಶಾಂತೇಶ್ವರಿ ಮಹಿಳಾ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಮೀನಾಕ್ಷಿ ಪ್ರಭಾಕರ್ ಪಾಟೀಲ್ ಪ್ರಾರ್ಥಿಸಿ, ಕಾರ್ಯದರ್ಶಿ ರಾಜೇಶ್ವರಿ ಗೋಪಿ ಸ್ವಾಗತಿಸಿ, ಲತಾ ಕರಿಬಸಪ್ಪನವರು ವಂದಿಸಿ, ಆಶಾ ಷಣ್ಮುಖಪ್ಪ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com