ಹಬ್ಬದ ಆಚರಣೆಯಿಂದ ಸಹೋದರತ್ವ ಭಾವ: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅಭಿಪ್ರಾಯ
ಉಡುಪಿ: ಎಂ.ಸಿ.ಸಿ. ಬ್ಯಾಂಕ್‌ನ ಬ್ರಹ್ಮಾವರ, ಕುಂದಾಪುರ ಮತ್ತು ಉಡುಪಿ ಶಾಖೆಗಳ ಸಂಯುಕ್ತಾಶ್ರಯದಲ್ಲಿ ಬ್ರಹ್ಮಾವರ ಶಾಖೆಯ ಆವರಣದಲ್ಲಿ ಬುಧವಾರ ದೀಪಾವಳಿ ಹಬ್ಬ ಆಚರಿಸಲಾಯಿತು.
ಎಂಸಿಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯ ಸಿಬ್ಬಂದಿ ಪ್ರಾರ್ಥನಾ ಗೀತೆಯೊಂದಿಗೆ ಸಂಭ್ರಮಾಚರಣೆಗೆ ಮೆರುಗು ನೀಡಿದರು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅತಿಥಿಗಳೊಂದಿಗೆ ದೀಪ ಬೆಳಗಿಸಿದರು.
https://chat.whatsapp.com/Ge11n7QCiMj5QyPvCc0H19
ಅನಿಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೀಪಾವಳಿ ಆಚರಣೆಯ ಮಹತ್ವದ ಬಗ್ಗೆ ಹೇಳಿದರು. ಹಬ್ಬವು ಜನರಲ್ಲಿ ಸಹೋದರತ್ವದ ಮನೋಭಾವವನ್ನು ಬೆಳೆಸುತ್ತದೆ ಎಂದು ಹೇಳಿ ಬ್ಯಾಂಕಿಗೆ ನಿರಂತರ ಬೆಂಬಲ ನೀಡಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈಶ್ವರ ಮಲ್ಪೆ ಅವರ ಸಾಧನೆ ಮತ್ತು ಸಮಾಜಸೇವೆಗೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ಅನಿಲ್ ಲೋಬೊ ಸನ್ಮಾನಿಸಿದರು. ಇನ್ನೋರ್ವ ಅತಿಥಿ ಬಿ.ಎನ್.ಶಂಕರ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಿ.ಎ. ಹೆಗ್ಡೆ ಶುಭ ಹಾರೈಸಿದರು.
ಬ್ರಹ್ಮಾವರದ ಉದ್ಯಮಿ ಶ್ರೀಧರ್, ಕುಂದಾಪುರ ಶಾಖಾ ವ್ಯವಸ್ಥಾಪಕಿ ಜ್ಯೋತಿ ಬರೆಟ್ಟೊ ಮತ್ತು ಉಡುಪಿ ಶಾಖಾ ವ್ಯವಸ್ಥಾಪಕ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು. ಶಾಖೆಯ ನಿರ್ದೇಶಕ ಎಲ್ರಾಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಕುಂದಾಪುರ ಶಾಖೆಯ ಪ್ರಬಂಧಕಿ ಜ್ಯೋತಿ ಬರೆಟ್ಟೊ ವಂದಿಸಿ, ಬ್ರಹ್ಮಾವರ ಶಾಖಾ ಪ್ರಬಂಧಕ ಓವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಕುಂದಾಪುರದ ಎಸ್.ಪಿ. ಮ್ಯೂಸಿಕಲ್ ಮತ್ತು ಅಂಪಾರು ಯುನಿಕ್ ಡ್ಯಾನ್ಸ್ ಅಕಾಡೆಮಿಯಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.