ನವದೆಹಲಿ: ಕೇಂದ್ರ ಸಹಕಾರ ಸಚಿವಾಲಯದ ಸಲಹಾ ಸಮಿತಿಯನ್ನು ಕೇಂದ್ರ ಸರ್ಕಾರವು ರಚಿಸಿದ್ದು ಉಭಯ ಸದನಗಳ ಸದಸ್ಯರು ಇದರಲ್ಲಿ ಒಳಗೊಂಡಿದ್ದಾರೆ. ಬಿಜೆಪಿಯ ಝಾನ್ಸಿ ಲೋಕಸಭಾ ಕ್ಷೇತ್ರದ ಸಂಸದ ಅನುರಾಗ್ ಶರ್ಮ ಕಳೆದ ಬಾರಿಯ ತಂಡದಲ್ಲಿದ್ದ ಏಕೈಕ ಸದಸ್ಯರಾಗಿ ಉಳಿದುಕೊಂಡಿದ್ದಾರೆ.
https://chat.whatsapp.com/Ge11n7QCiMj5QyPvCc0H19
2019ರ ಅಕ್ಟೋಬರ್ 23ರಂದು ಈ ಹಿಂದಿನ ಸಮಿತಿ ರಚಿಸಲಾಗಿದ್ದು ಅದರಲ್ಲಿ 20 ಲೋಕಸಭಾ ಸದಸ್ಯರು ಮತ್ತು 8 ರಾಜ್ಯಸಭಾ ಸದಸ್ಯರಿದ್ದರು. ಈ ಬಾರಿ ರಚಿಸಲಾಗಿರುವ ತಂಡದಲ್ಲಿ 9 ಲೋಕಸಭಾ ಸದಸ್ಯರು ಮತ್ತು 4 ರಾಜ್ಯಸಭಾ ಸದಸ್ಯರಿದ್ದಾರೆ.
ಸಮಿತಿಯಲ್ಲಿ ಹೊಸಬರನ್ನು ಸೇರ್ಪೆಡೆ ಮಾಡುವ ಉದ್ದೇಶದಿಂದ ಹೊಸ ಸದಸ್ಯರನ್ನು ಸೇರಿಸಲಾಗಿದ್ದು ಉತ್ತರ ಪ್ರದೇಶದ ಬೃಜ್‌ಭೂಷಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್(ಬಿಜೆಪಿ), ಮಧ್ಯಪ್ರದೇಶದ ಶಿವಮಂಗಲ್ ಸಿಂಗ್ ತೋಮರ್(ಬಿಜೆಪಿ), ಮಹಾರಾಷ್ಟ್ರದ ಧಾರಯಶೀಲ್ ಮೋಹಿತೆ ಪಾಟೀಲ್(ಎನ್‌ಸಿಪಿ -ಶರದ್ ಪವಾರ್ ಬಣ), ಕರ್ನಾಟಕದ ಶ್ರೇಯಸ್ ಎಂ.ಪಟೇಲ್(ಕಾಂಗ್ರೆಸ್), ತೆಲಂಗಾಣದ ಸುರೇಶ್ ಕುಮಾರ್ ಶೇಟ್ಕರ್(ಕಾಂಗ್ರೆಸ್), ಉತ್ತರ ಪ್ರದೇಶದ ಅನುರಾಗ್ ಶರ್ಮ(ಬಿಜೆಪಿ), ಗುಜರಾತ್‌ನ ಪೂನಂಬೆನ್ ಮೇಡಮ್(ಬಿಜೆಪಿ), ಗುಜರಾಥ್‌ನ ದಭಿ ಭರತ್‌ಸಿಂಹಜಿ(ಕಾಂಗ್ರೆಸ್), ಮಹಾರಾಷ್ಟ್ರದ ಭೂಮರೆ ಸಂದೀಪನ್ ರಾವ್ ಅಸಾರಾಮ್(ಶಿವಸೇನಾ), ರಾಜ್ಯಸಭಾ ಸದಸ್ಯರಾದ ತಮಿಳುನಾಡಿನ ಎನ್.ಆರ್.ಇಳಂಗೋ(ಡಿಎಂಕೆ), ಉತ್ತರಾಖಂಡದ ನರೇಶ್ ಭನ್ಸಲ್(ಬಿಜೆಪಿ), ಮಹಾರಾಷ್ಟ್ರದ ರಜನಿ ಅಶೋಕ್‌ರಾವ್ ಪಾಟೀಲ್(ಕಾಂಗ್ರೆಸ್) ಮತ್ತು ಕರ್ನಾಟಕದ ಲೆಹರ್ ಸಿಂಗ್(ಬಿಜೆಪಿ) ಒಳಗೊಂಡಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com