ಮಂಗಳೂರು: ಸಫಲ ಸೌಹಾರ್ದ ಸಹಕಾರಿ ಸಂಘದ ಐದನೇ ಶಾಖೆ ಮೆಲ್ಕಾರ್ನಲ್ಲಿ ನವಂಬರ್ 18ರಂದು ಸೋಮವಾರ ಕಾರ್ಯಾರಂಭಗೊಳ್ಳಲಿದೆ. ಮೆಲ್ಕಾರ್ನ ಆರ್.ಆರ್ ಕಮರ್ಷಿಯಲ್ ಸೆಂಟರ್ನ ನೆಲಮಹಡಿಯಲ್ಲಿ ಬೆಳಗ್ಗೆ 11ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.
https://chat.whatsapp.com/Ge11n7QCiMj5QyPvCc0H19
ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣನವರು ದೀಪ ಬೆಳಗಿಸಿ ಶಾಖಾ ಕಚೇರಿ ಉದ್ಘಾಟಿಸುವರು. ಕಟ್ಟಡದ ಮಾಲೀಕ ಎಂ.ರಾಮರಾಜ್ ರಾವ್ ಭದ್ರತಾ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ. ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ಸಹಕಾರ ರತ್ನ ರಾಜಶೇಖರ ಗಾಣಿಗ ಭದ್ರತಾ ಕೋಶ ಉದ್ಘಾಟನೆ ಮಾಡಲಿದ್ದಾರೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಭಟ್ ಶಾಖಾಧಿಕಾರಿ ಕೊಠಡಿ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ನಗದು ಕೊಠಡಿ ಉದ್ಘಾಟಿಸಲಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಗಣಕಯಂತ್ರ ಉದ್ಘಾಟಿಸುವರು.
11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಂಬೈನ ಸಾಫಲ್ಯ ಸೇವಾ ಸಂಘದ ಅಧಕ್ಷ ಶ್ರೀನಿವಾಸ ಸಫಲ್ಯ ಸಭಾ ಕಾರ್ಯಕ್ರ ಮ ಉದ್ಘಾಟಿಸುವರು. ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣನವರು ಆಶೀರ್ವಚನ ನೀಡಲಿದ್ದಾರೆ. ಸಫಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ರಾಜೇಶ್ ನಾಯಕ್ ನಿರಖು ಠೇವಣಿ ಪತ್ರ ಬಿಡುವರು. ಮಾಜಿ ಸಚಿವ ಬಿ.ರಮಾನಾಥ ರೈ ಸಫಲ ನಗದು ಪತ್ರ ಬಿಡುಗಡೆ ಮಾಡಲಿದ್ದಾರೆ. ಬಂಟ್ವಾಳ ಪುರಸಭೆ ಅಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ ಮಾಸಿಕ ಠೇವಣಿ ಖಾತೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಶಂಭೂರು ಸೇಕ್ರೆಡ್ ಹಾರ್ಟ್ ಜೀಸಸ್ ಚರ್ಚ್ನ ಧರ್ಮಗುರು ಫಾ.ಸಂತೋಷ್ ಡಿಸೋಜ ಉಳಿತಾಯ ಖಾತೆ ಪುಸ್ತಕ ಬಡುಗಡೆ ಮಾಡಲಿದ್ದಾರೆ. ಬಂಟ್ವಾಳ ಪುರಸಭೆ ಸದಸ್ಯ ಅಬೂಬಕ್ಕರ್ ಸಿದ್ದಿಕ್, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಸಪಲ್ಯ ಇಡ್ಕಿದು ಗೌರವ ಉಪಸ್ಥಿತರಿರಲಿದ್ದಾರೆ.
ಸಫಲ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರೇಮಾನಂದ ಎ, ಪ್ರಧಾನ ವ್ಯವಸ್ಥಾಪಕ ಪ್ರಮೋದ್, ಗೌರವ ಸಲಹೆಗಾರ ಹರಿದಾಸ್ ಯು, ಶಾಖಾಧಿಕಾರಿ (ಪ್ರಭಾರ) ತೃಪ್ತಿ, ನಿರ್ದೇಶಕರಾದ ರಮೇಶ್ ಎಸ್, ಭಾಸ್ಕರ ಸಫಳಿಗ, ಎ.ಮಾಧವ ಸುವರ್ಣ, ಮಾಧವ ಮಾವೆ, ಜಯರಾಮ ಬಿ, ವೆಂಕಟೇಶ್ ಎಂ, ಪಿ.ಗೋಪಾಲಕೃಷ್ಣ, ಅನಿಲ್ ಕುಮಾರ್, ಮಹಾಬಲ ಅಡ್ಯಾರ್, ಮೋನಪ್ಪ ಸಪಳಿಗ, ತಿರುಮಲೇಶ್ ಸಪಳಿಗ, ಮೋಹಿನಿ ಎಚ್, ಅನಿತಾ ಮತ್ತು ಸತ್ಯಪ್ರಭಾ, ನಾಮನಿರ್ದೇಶಿತ ಸದಸ್ಯರಾದ ಯು.ಬಿ ವಿಜಯಕುಮಾರ್ ಮತ್ತು ಸೂರಜ್, ಶಾಖಾ ಉಸ್ತುವಾರಿ ಸಮಿತಿಯ ಅಧ್ಯಕ್ಷ ಎಂ.ಎನ್.ಕುಮಾರ್, ಸದಸ್ಯರಾದ ದಾಮೋದರ ಮೆಲ್ಕಾರ್, ಪುರುಷೋತ್ತಮ ಎಸ್, ರಾಜೇಶ್ ಮೆಂಡನ್ ಮತ್ತು ವೀಣಾ ವಿಶ್ವನಾಥ್ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com