Author: admin

ಸುಳ್ಯ: ಕೊಡಗು ಸಂಪಾಜೆಯ ಹಾಸ್ಟೆಲ್‌ನಲ್ಲಿ ಮರ್ಮಾಂಗಕ್ಕೆ ಏಟಾಗಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಬಾಲಕನಿಗೆ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆರ್ಥಿಕ ನೆರವು ಒದಗಿಸಲಾಯಿತು. https://chat.whatsapp.com/Ge11n7QCiMj5QyPvCc0H19 ಸಂಘದ ಅಧ್ಯಕ್ಷ ಎನ್.ಸಿ.ಅನಂತ್ ಊರುಬೈಲು ಆಸ್ಪತ್ರೆಗೆ ಭೇಟಿ ನೀಡಿ, ಸಾಂತ್ವನ ಹೇಳಿ, ಧೈರ್ಯ ತುಂಬಿ ಆರ್ಥಿಕ ನೆರವು ನೀಡಿ ಶೀಘ್ರ ಚೇತರಿಕೆಗಾಗಿ ಹಾರೈಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಆನಂದ, ನಿರ್ದೇಶಕಿ ವಾಣಿ ಜಗದೀಶ್‌ ಮತ್ತು ಸುಜಿತ್‌ ಕಟ್ಟಕೋಡಿ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಸುಳ್ಯ: ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ 15ನೇ ವಾರ್ಷಿಕ ಮಹಾಸಭೆಯು ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಿಟ್ಟಿ ಬಿ.ನಡುನಿಲಂ ಅಧ್ಯಕ್ಷತೆ ವಹಿಸಿದ್ದರು. 2023-24ನೇ ಸಾಲಿನಲ್ಲಿ ಸಂಘವು ಉತ್ತಮ ವ್ಯವಹಾರ ನಡೆಸಿದೆ. ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡಲು ತೀರ್ಮಾನಿಸಲಾಯಿತು. https://chat.whatsapp.com/Ge11n7QCiMj5QyPvCc0H19 ರೆ.ಫಾ.ಆದರ್ಶ್ ಜೋಸೆಫ್, ಚಾಕೋ ಫಿಲಿಫ್ ಮತ್ತು ಜಾನಿ.ಕೆ.ಪಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ತಾಲೂಕಿನಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಕೊಡಲ್ಪಡುವ ಪ್ರೋತ್ಸಾಹಧನವನ್ನು ರೋಯನ್ ಪ್ರಿನ್ಸೆಸ್ ಡಿಸೋಜ ಅವರಿಗೆ ಕೊಡಲಾಯಿತು. ಆಡಳಿತ ಮಂಡಳಿ ವರದಿಯನ್ನು ಸುನಿತಾ ಎಂ.ಡಿಸೋಜ ಮಂಡಿಸಿದರು. ಲೆಕ್ಕಪತ್ರ ಮಂಡನೆಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಪಿ.ಜೆ ನಿರ್ವಹಿಸಿದರು. ಸಂಘದ ಅಧ್ಯಕ್ಷ ಬಿಟ್ಟಿ ಬಿ.ನೆಡುನಿಲಂ ಸ್ವಾಗತಿಸಿ, ನಿರ್ದೇಶಕ ಲಿಯೋ ಜೋಸ್ ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ರಾಜ್ಯದಲ್ಲಿಯೇ ಮಾದರಿಯಾಗಿ ಬೆಳೆದಿರುವ ಸಂಸ್ಥೆ: ಯು.ಎಸ್‌. ಕಳಗೊಂಡದ ಬಣ್ಣನೆ ಹಿರೇಕೆರೂರು: ಹಿರೇಕೆರೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ರೈತರ ಏಳಿಗೆಗೆ ಸೇವೆ ಸಲ್ಲಿಸುತ್ತ ಪ್ರತಿವರ್ಷ ಅಭಿವೃದ್ಧಿ ಪಥದತ್ತ ಸಾಗಿ ಹೆಮ್ಮರವಾಗಿ ಬೆಳೆದು ಬಂದಿದೆ ಎಂದು ಟಿಎಪಿಸಿಎಂಎಸ್ ಉಪಾಧ್ಯಕ್ಷ ಯು.ಎಸ್‌. ಕಳಗೊಂಡದ ಹೇಳಿದರು. https://chat.whatsapp.com/Ge11n7QCiMj5QyPvCc0H19 ಹಿರೇಕೆರೂರು ಟಿಎಪಿಸಿಎಂಎಸ್‌ನ ೬೩ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಟಿಎಪಿಸಿಎಂಎಸ್ 1959ರಲ್ಲಿ ದಿ.ಬಿ.ಜಿ.ಬಣಕಾರ ನೇತೃತ್ವದಲ್ಲಿ ತಾಲೂಕಿನ ಸಹಕಾರಿಗಳ ಸಹಕಾರದಿಂದ 75 ಸದಸ್ಯರಿಂದ 7,845 ರೂ. ಬಂಡವಾಳದಿಂದ ಆರಂಭಗೊಂಡ ಸಂಘವು ಹೆಮ್ಮರವಾಗಿ ಬೆಳೆದು ರೈತರ ಪಾಲಿಗೆ ವರದಾನವಾಗಿದೆ. ಗೊಬ್ಬರ, ಡೀಸೆಲ್, ಪೆಟ್ರೋಲ್ ಮತ್ತು ರೈತರಿಗೆ ಕಾಲಕಾಲಕ್ಕೆ ವ್ಯವಸಾಯದ ಪೂರಕ ಸಾಮಗ್ರಿಗಳನ್ನು ಒದಗಿಸಿ ರಾಜ್ಯದಲ್ಲಿಯೇ ಮಾದರಿಯಾಗಿ ಬೆಳೆದಿರುವ ಏಕೈಕ ಸಂಸ್ಥೆಯಾಗಿದೆ’ ಎಂದು ಬಣ್ಣಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಬಣಕಾರ ವಾರ್ಷಿಕ ವರದಿ ಓದಿದರು. ಸಭೆಯಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಎಸ್‌.ಬಿ.ತಿಪ್ಪಣ್ಣನವರ, ಆ‌ರ್.ಎಸ್.ಪಾಟೀಲ, ಮಹೇಶ ಗುಬ್ಬಿ, ಎನ್‌.ವೈ.ಲೆಕ್ಕಪ್ಪಳವರ, ಭೀಮಪ್ಪ ಯತ್ತಿನಹಳ್ಳಿ, ಹೂವಪ್ಪ ಕವಲಿ, ಎಸ್.ಆರ್.ಹೊಂಡದ, ಮಂಜುಳಾ ಬಾಳಿಕಾಯಿ,…

Read More

ಮಂಗಳೂರು: ಪ್ರೇರಣಾ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆ ಮಂಗಳವಾರ ನಡೆಯಿತು. ಅಧ್ಯಕ್ಷೆ ಫ್ಲೇವಿ ಡಿಸೋಜ, ಉಪಾಧ್ಯಕ್ಷೆ ಸುನೀತಾ ನಾಯ್ಕ್ ಹಾಗೂ12 ಜನ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಮತ್ತು ವ್ಯವಸ್ಥಾಪಕಿ ಸವಿತಾ ಎಸ್ ಉಪಸ್ಥಿತರಿದ್ದರು. https://chat.whatsapp.com/Ge11n7QCiMj5QyPvCc0H19

Read More

ಉಪ್ಪಿನಂಗಡಿ: ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ವಾರ್ಷಿಕ 4.04 ಲಕ್ಷ ರೂ. ಲಾಭ ಗಳಿಸಿದ್ದು ಲಾಭಾಂಶದಲ್ಲಿ ಅರ್ಹ ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರೋಬರ್ಟ್ ಡಿಸೋಜ ಹೇಳಿದರು. ಉಪ್ಪಿನಂಗಡಿಯ ದೀನರ ಕನ್ಯಾಮಾತೆ ದೇವಾಲಯದ ಹಾಲ್‌ನಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ವರ್ಷಾಂತ್ಯದಲ್ಲಿ 41,44,500.00 ರೂ. ಪಾಲು ಬಂಡವಾಳ ಸಂಗ್ರಹಿಸಿದ್ದು, 8,14,26,876.15 ರೂ. ವಿವಿಧ ಖಾತೆಗಳಲ್ಲಿ ಜಮೆ ಇರುತ್ತದೆ. ಆರ್ಥಿಕ ವರ್ಷದ ಕೊನೆಗೆ ರೂ. 33,77,59,845.75 ವ್ಯವಹಾರ ಮಾಡಿದ್ದು 4.04 ಲಕ್ಷ ಲಾಭ ಬಂದಿದೆ ಎಂದು ಮಾಹಿತಿ ನೀಡಿದರು. https://chat.whatsapp.com/Ge11n7QCiMj5QyPvCc0H19 ಸಂಘದ ನಿರ್ದೇಶಕರಾದ ಗ್ರೆಗೋರಿ ಲೋಬೊ, ವಿನ್ಸೆಂಟ್ ಮಿನೇಜಸ್, ಸಿಲ್ವೆಸ್ಟರ್ ವೇಗಸ್, ಸೆಬೆಸ್ಟಿಯನ್ ಲೋಬೊ, ಐರಿನ್‌ ಬೋಬೊ ಉಪಸ್ಥಿತರಿದ್ದರು. ಉಪ್ಪಿನಂಗಡಿ ಕೇಂದ್ರ ಕಚೇರಿಯ ಗುಮಾಸ್ತೆ ತನುಶ್ರೀ ಹಾಗೂ ಕಡಬ ಶಾಖೆಯ ಪೂಜಾಶ್ರೀ ಬಿ. ಪ್ರಾರ್ಥಿಸಿದರು. ನೆಲ್ಯಾಡಿ ಶಾಖೆಯ ಗುಮಾಸ್ತ ಜೋನ್ನಿ ಡಿಸೋಜ ಹಿಂದಿನ ಸಭೆಯ ನಡವಳಿಗಳನ್ನು…

Read More

ಮಹಾಸಭೆಯಲ್ಲಿ ಶೇ.20 ಡಿವಿಡೆಂಡ್ ಘೋಷಣೆ ಉತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಗೌರವಾರ್ಪಣೆ ಕಾರ್ಕಳ: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ ರೂ.147 ಕೋಟಿ ವ್ಯವಹಾರ ನಡೆಸಿದ್ದು ರೂ.55.46 ಲಕ್ಷ ನಿವ್ವಳ ಲಾಭ ಗಳಿಸಿದೆ. https://chat.whatsapp.com/Ge11n7QCiMj5QyPvCc0H19 ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸಂತೋಷ್ ರಾವ್ ಮಾತನಾಡಿ ಸಂಘದ 2023-2024ನೇ ಸಾಲಿನಲ್ಲಿ ಸಂಘದ ಪ್ರಗತಿ ಹಾಗೂ ಸಂಘವು ಆರ್ಥಿಕ ಸಾಲಿನಲ್ಲಿ ನಡೆಸಿದ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಾರ್ಷಿಕ ಸಾಲಿನ ಅಂತ್ಯಕ್ಕೆ ಸಂಘವು ರೂ.30.55 ಲಕ್ಷ ಪಾಲು ಬಂಡವಾಳ ಹೊಂದಿದ್ದು ರೂ. 29.57 ಕೋಟಿ ಠೇವಣಿ ಸಂಗ್ರಹವಾಗಿದೆ. ರೂ.25.57 ಕೋಟಿ ಸಾಲ ವಿತರಿಸಿದ್ದು ರೂ. 34.63 ಕೋಟಿ ದುಡಿಮೆ ಬಂಡವಾಳ ಹೊಂದಿದೆ. ಶೇ.2೦ ಡಿವಿಡೆಂಡ್‌ ನೀಡಲು ನಿರ್ಧರಿಸಲಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಅರುಣ್ ಕುಮಾರ್ ಎಸ್.ವಿ ಇವರನ್ನು ಸಂಘದ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಭೆಯಲ್ಲಿ ಘೋಷಿಸಿದರು. ಅರುಣ್…

Read More

ಪಿಯುಸಿ, ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಗುರುಪುರ: ಎಡಪದವು ವ್ಯವಸಾಯ ಸೇವಾ ಸಹಕಾರ ಸಂಘ ಇದರ 2023-24ನೇ ಮಹಾಸಭೆ ಸಂಘದ ಅಧ್ಯಕ್ಷ ನೀಲಯ ಎಂ.ಅಗರಿಯವರ ಅಧ್ಯಕ್ಷತೆಯಲ್ಲಿ ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಸಾಧನ ಸಭಾಂಗಣದಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ಎಸ್‌ 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, 2024-2025ನೇ ಸಾಲಿನ ಆಯ-ವ್ಯಯ ಪಟ್ಟಿ ಮುಂದಿನ ಅಭಿವೃದ್ಧಿ ಯೋಜನೆಗಳನ್ನು ಮಂಡಿಸಿದರು. https://chat.whatsapp.com/Ge11n7QCiMj5QyPvCc0H19 ಒಟ್ಟು 4250 “ಎ” ತರಗತಿ ಸದಸ್ಯರಿದ್ದು ಒಟ್ಟು ಠೇವಣಿ ರೂ. 28.81 ಕೋಟಿ ಆಗಿದೆ. ಸದಸ್ಯರ ಬೇಡಿಕೆಗೆ ಅನುಗುಣವಾಗಿ ರೂ. 24.76 ಕೋಟಿ ಸಾಲ ವಿತರಿಸಲಾಗಿದೆ. ಈ ಪೈಕಿ ರೈತ ಸದಸ್ಯರಿಗೆ ರೂ.6.9 ಕೋಟಿ ಕೃಷಿ ಉದ್ದೇಶಗಳಿಗೆ ಸಾಲ ವಿತರಿಸಿ ಶೇಕಡಾ 96ರಷ್ಟು ಸಾಲ ವಸೂಲಾಗಿದೆ. ಸಂಘವು ರೂ.53.34 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇಕಡಾ 20 ಡಿವಿಡೆಂಡ್ ಘೋಷಿಸಿದೆ. 109 ನವೋದಯ ಸ್ವ-ಸಹಾಯ ಗುಂಪು ರಚಿಸಿ, ರೂ.2.42 ಕೋಟಿ ಸಾಲ ನೀಡಲಾಗಿದೆ.…

Read More

ಮಂಗಳೂರು: 2023-24ನೇ ಸಾಲಿನಲ್ಲಿ ಅತ್ಯಧಿಕ ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳನ್ನು ಖರೀದಿಸಿ ಮಾರಾಟ ಮಾಡಿರುವುದಕ್ಕೆ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ ನಿಯಮಿತದ ಮಹಾಸಭೆಯಲ್ಲಿ ಮಂಗಳವಾರ ಎಡಪದವು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ದ್ವಿತೀಯ ಬಹುಮಾನ ನೀಡಿ ಪುರಸ್ಕರಿಸಿದೆ. https://chat.whatsapp.com/Ge11n7QCiMj5QyPvCc0H19 ಸಂಸ್ಥೆಯ ಪರವಾಗಿ ಅಧ್ಯಕ್ಷ ನೀಲಯ ಅಗರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ಅವರು ಅಭಿನಂದನಾ ಪತ್ರ ಸ್ವೀಕರಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ, ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಂಗಳೂರು: ಪದವು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಪದವು ಕೈಕಂಬ, ಮಂಗಳೂರು, ಇದರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷೆ ಸುಮನಾ ಶರಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2023-24ರ ಸಾಲಿನಲ್ಲಿ 2.72 ಕೋಟಿ ರೂ. ಪಾಲು ಬಂಡವಾಳ ಹೊಂದಿದ್ದು ರೂ. 43.73 ಕೋಟಿ ಠೇವಣಿ ಹಾಗೂ ರೂ. 7.12 ಕೋಟಿ ನಿಧಿಗಳು ಇದೆ. ರೂ.38.81 ಕೋಟಿ ಸಾಲದ ಹೊರಬಾಕಿ ಇದೆ. 2023-24ರ ಸಾಲಿನಲ್ಲಿ ರೂ. 1.35 ಕೋಟಿ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಿಸಲಾಗಿದೆ. ಸದ್ರಿ ಸಂಘವು ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ಎ ತರಗತಿ ಕಾಯ್ದುಕೊಂಡಿದೆ. ಸಂಘದ ಆರ್ಥಿಕ ಲೆಕ್ಕಪತ್ರಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಂಡು ಮಂಜೂರು ಮಾಡಲಾಯಿತು. ಅಧ್ಯಕ್ಷೆ ಸುಮನಾ ಶರಣ್ ಸ್ವಾಗತಿಸಿ, ಸಂಘದ ಸಮಗ್ರ ಚಿತ್ರಣವನ್ನು ವಿವರಿಸಿದರು. 2024-25ರ ಸಾಲಿಗೆ ಸಂಘದ ಕಾರ್ಯಚಟುವಟಿಕೆಗಳ ವಿವರಣೆ ನೀಡಿ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಸಹಕಾರ ಕೋರಿದರು. https://chat.whatsapp.com/Ge11n7QCiMj5QyPvCc0H19…

Read More

14.26 ಕೋಟಿ ರೂ. ವ್ಯಾಪಾರ ವಹಿವಾಟು, ಶೇ.15 ಡಿವಿಡೆಂಡ್ ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ ಮಂಗಳೂರು (ಹಾಪ್‌ಕಾಮ್ಸ್) ಇದರ 2023-24ನೇ ಸಾಲಿನ ಮಹಾಸಭೆ ಬಲ್ಮಠದ ಶಾಂತಿ ನಿಲಯದಲ್ಲಿ ಜರಗಿತು. https://chat.whatsapp.com/Ge11n7QCiMj5QyPvCc0H19 ಸಂಸ್ಥೆಯು ವರದಿ ವರ್ಷದಲ್ಲಿ 14.26 ಕೋಟಿ ರೂ. ವ್ಯಾಪಾರ ವಹಿವಾಟಿನೊಂದಿಗೆ 34.86 ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ಅನ್ನು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಘೋಷಣೆ ಮಾಡಿದರು.  ಮುಂದಿನ ಕರ್ನಾಟಕ ಮಹಾಮಂಡಳದ ಯೋಜನೆಯಲ್ಲಿ ತೋಟಗಾರಿಕೆ ಅನುದಾನದಿಂದ ಪಡೀಲಿನ ತೋಟಗಾರಿಕೆ ಇಲಾಖೆಯ ಖಾಲಿ ಇರುವ ಸ್ಥಳದಲ್ಲಿ ರೈತರಿಂದ ತೆಂಗಿನಕಾಯಿ ಖರೀದಿಸುವ ಮತ್ತುಸಗಟು ವ್ಯಾಪಾರ ಕೇಂದ್ರದ ಮೂಲಭೂತ ಸೌಕರ್ಯಕ್ಕಾಗಿ 70 ಲಕ್ಷ ರೂ. ಅನುದಾನ ಮತ್ತುತೆಂಗಿನಕಾಯಿ ಸುಲಿಯುವ ವಿದ್ಯುತ್ ಚಾಲಿತ ಯಂತ್ರೋಪಕರಣ ಖರೀದಿಗಾಗಿ 4.25 ಲಕ್ಷ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ವರದಿ ವರ್ಷದಲ್ಲಿ ಹಾಪ್‌ಕಾಮ್ಸ್ ಸಂಸ್ಥೆಯು ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿ ಮುಂದುವರಿದಿರುತ್ತದೆ.…

Read More