ಸಹಕಾರ ಸಂಘ ಸ್ವಾಭಿಮಾನದ ಜೀವನಕ್ಕೆ ಸಹಕಾರಿ: ಉಳಿಯ ದೇವು ಮೂಲ್ಯಣ್ಣ ಅಭಿಪ್ರಾಯ
ಬಂಟ್ವಾಳ: ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಯುವಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಉಳಿತಾಯ ಮನೋಭಾವದಿಂದ ಸ್ವಾಭಿಮಾನದ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಹೇಳಿದರು.
ಮೆಲ್ಕಾರ್‌ನಲ್ಲಿ ಸೋಮವಾರ ಸಫಲ ಸೌಹಾರ್ದ ಸಹಕಾರಿ ಸಂಘದ ಐದನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
https://chat.whatsapp.com/Ge11n7QCiMj5QyPvCc0H19
https://chat.whatsapp.com/Ge11n7QCiMj5QyPvCc0H19
ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಎರಡು ಶಾಖೆಗಳ ಜೊತೆಗೆ ಗಾಣದ ಎಣ್ಣೆ ಉದ್ಯಮ ಆರಂಭಿಸಲು ಚಿಂತನೆ ನಡೆಸಲಾಗಿದೆ’ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಶುಭ ಹಾರೈಸಿದರು. ಕಟ್ಟಡ ಮಾಲೀಕ ಎಂ.ರಾಮರಾಜ್ ರಾವ್ ಭದ್ರತಾ ಕೊಠಡಿ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರರ್ದೇಶಕಿ ಭಾರತಿ ಭಟ್ ಶಾಖಾಧಿಕಾರಿ ಕೊಠಡಿ, ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ನಗದು ಕೊಠಡಿ, ಅವಿಭಜಿತ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್. ಗಣಕಯಂತ್ರ ಉದ್ಘಾಟಿಸಿದರು.
ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ ಮಾಸಿಕ ಠೇವಣಿ ಖಾತೆ ಪುಸ್ತಕ ಮತ್ತು ಶಂಭೂರು ಸೇಕ್ರೆಡ್ ಹಾರ್ಟ್ ಜೀಸಸ್ ಚರ್ಚ್‌ನ ಧರ್ಮಗುರು ಸಂತೋಷ್ ಡಿಸೋಜ ಉಳಿತಾಯ ಖಾತೆ ಪುಸ್ತಕ ಬಿಡುಗಡೆಗೊಳಿಸಿದರು. ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದಿಕ್, ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಸಪಲ್ಯ ಇಡ್ಕಿದು ಶುಭ ಹಾರೈಸಿದರು.
ಸಂಘದ ಉಪಾಧ್ಯಕ್ಷ ಪ್ರೇಮಾನಂದ ಎ., ಪ್ರಧಾನ ವ್ಯವಸ್ಥಾಪಕ ಪ್ರಮೋದ್, ಗೌರವ ಸಲಹೆಗಾರ ಹರಿದಾಸ್ ಯು., ಪ್ರಭಾರ ಶಾಖಾಧಿಕಾರಿ ತೃಪ್ತಿ, ನಿರ್ದೇಶಕರಾದ ರಮೇಶ್ ಎಸ್., ಭಾಸ್ಕರ್ ಸಪಳಿಗ, ಮಾಧವ ಸುವರ್ಣ, ಜಯರಾಮ್ ಬಿ., ವೆಂಕಟೇಶ್ ಎಂ., ಪಿ.ಗೋಪಾಲಕೃಷ್ಣ, ಅನಿಲ್ ಕುಮಾರ್, ಕೆ.ಮೋನಪ್ಪ ಸಪಲಿಗ, ತಿರುಮಲೇಶ್ ಸಪಳಿಗ, ಮೋಹಿನಿ ಎಚ್., ಅನಿತಾ, ಸತ್ಯಪ್ರಭಾ, ನಾಮನಿರ್ದೇಶಿತ ನಿರ್ದೇಶಕರಾದ ಯು.ಬಿ.ವಿಜಯ ಕುಮಾರ್, ಸೂರಜ್, ಶಾಖಾ ಉಸ್ತುವಾರಿ ಅಧ್ಯಕ್ಷ ಎಂ.ಎನ್.ಕುಮಾರ್, ಸದಸ್ಯರಾದ ದಾಮೋದರ ಮೆಲ್ಕಾರ್, ಪುರುಷೋತ್ತಮ ಎಸ್., ರಾಜೇಶ್ ಮೆಂಡನ್, ವೀಣಾ ವಿಶ್ವನಾಥ್, ವಸಂತಿ ಗಂಗಾಧರ್ ಮೊದಲಾದವರು ಹಾಜರಿದ್ದರು.
ನಿರ್ದೇಶಕ ಮಾಧವ ಮಾವೆ ಸ್ವಾಗತಿಸಿ, ಮಹಾಬಲ ಅಡ್ಯಾರ್ ವಂದಿಸಿದರು. ಸುಕೇಶ್ ಠೇವಣಿದಾರರ ವಿವರ ನೀಡಿ, ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com