ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸಲಹೆ
ಪುತ್ತೂರು: ಕಷ್ಟದಲ್ಲಿರುವ ಜನರಿಗೆ ಸಾಲ ನೀಡಿ, ಸಹಕರಿಸುವ ಕೆಲಸ ಬ್ಯಾಂಕುಗಳಿಂದ ನಡೆಯಬೇಕು. ಸಮಾಜಕ್ಕೆ ಮಾಡಿದ ಉಪಕಾರವನ್ನು ಪ್ರತಿಯೊಬ್ಬರೂ ನೆನಪಿಡುವ ಕೆಲಸ ಮಾಡಬೇಕು. ರೈತರ ಸಂಕಷ್ಟದಲ್ಲಿ ಸ್ಪಂದಿಸುವ ಕಾರ್ಯವನ್ನು ಟೌನ್ ಬ್ಯಾಂಕ್ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ವಿಟ್ಲದಲ್ಲಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ವಿಟ್ಲ ಶಾಖೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
https://chat.whatsapp.com/Ge11n7QCiMj5QyPvCc0H19
ಕ್ಯಾಂಪ್ಕೋ ಮಾಜಿ ಅಧ್ಯಕ್ಷ, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾತನಾಡಿ, ಜಿಡಿಪಿಯಲ್ಲಿ ಶೇ.25ರಷ್ಟು ಸಹಕಾರಿಯ ಕೊಡುಗೆಯಿದೆ. ದೇಶದಲ್ಲಿ 52 ರೀತಿಯ ಸಹಕಾರಿ ಸಂಸ್ಥೆಗಳಿದ್ದು, 8.5 ಲಕ್ಷದ ಸಂಸ್ಥೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿಗೆ ರಾಷ್ಟ್ರೀಯ ನಿಯಮಾವಳಿಗಳನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಮೊಳಹಳ್ಳಿ ಶಿವರಾಯರ ಭಾವಚಿತ್ರ ಅನಾವರಣ ಮಾಡಲಾಯಿತು. ಗೋವರ್ಧನ ವಿಟ್ಲ ಅವರಿಗೆ ಪ್ರಥಮ ಠೇವಣಿ ಪತ್ರವನ್ನು ಹಸ್ತಾಂತರ ಮಾಡಲಾಯಿತು. 2025ನೇ ಸಾಲಿನ ಕ್ಯಾಲೆಂಡರಿನ ಬಿಡುಗಡೆ ನಡೆಯಿತು. ಕಟ್ಟಡ ಮಾಲೀಕ ಪೀಟರ್ ಫ್ರಾನ್ಸಿನ್ ಅವರನ್ನು ಗೌರವಿಸಲಾಯಿತು.
ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಬ್ಯಾಂಕ್‌ನ ನಿರ್ದೇಶಕರಾದ ಸದಾಶಿವ ಪೈ, ಕಿರಣ್ ಕುಮಾರ್ ರೈ, ಚಂದ್ರಶೇಖರ ಗೌಡ ಕೆ. ನಾರಾಯಣ ಎ. ಬಿ., ವಿನೋದ್ ಕುಮಾರ್ ಜಿ., ಮಲ್ಲೇಶ್ ಕುಮಾರ್, ಜಯಂತಿ, ಹೇಮಾವತಿ, ವೃತ್ತಿಪರ ನಿರ್ದೇಶಕ ಅರವಿಂದ ಕೃಷ್ಣ ಬಿ. ಮತ್ತಿತರರು ಉಪಸ್ಥಿತರಿದ್ದರು.
ಅದ್ವಿಕಾ ಪ್ರಾರ್ಥಿಸಿದರು. ಬ್ಯಾಂಕಿನ ಉಪಾಧ್ಯಕ್ಷ ವಿಶ್ವಾಸ್ ಶೆಣೈ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ ಶೆಟ್ಟಿ ವಂದಿಸಿದರು. ವಿಟ್ಲ ಶಾಖಾ ವ್ಯವಸ್ಥಾಪಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ಶಾಖೆಯ ಪವನ್, ಉದಯ ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com