ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ
ಮಡಂತ್ಯಾರಿನಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರ ಸಂಘದ 22ನೇ ಶಾಖೆ ಕಾರ್ಯಾರಂಭ
ಬೆಳ್ತಂಗಡಿ: ಯಾವುದೇ ಒಂದು ಸಂಸ್ಥೆ ಪಾರದರ್ಶಕವಾಗಿ ವ್ಯವಹಾರ ನಡೆಸಿದಾಗ ಯಶಸ್ಸು ಸಾಧ್ಯ. ಸಮಾಜದ ಉನ್ನತಿಗೆ ಸಹಕಾರ ತತ್ವದ ಪಾತ್ರ ಮಹತ್ವದ್ದು, ಮಾನವೀಯ ಮೌಲ್ಯವನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ. ಬದುಕು ಗಟ್ಟಿಯಾಗಲು ಸಂಸ್ಕಾರ, ಸಹಕಾರ, ಸಂಘಟನೆ, ಸಮೃದ್ಧಿ ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆಯನ್ನು ಸೋಮವಾರ ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಮಡಂತ್ಯಾರು ‘ಆಲ್ಫಾ ಕಾಂಪ್ಲೆಕ್ಸ್’ ನ ಮೊದಲನೇ ಮಹಡಿಯಲ್ಲಿ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.
https://chat.whatsapp.com/Ge11n7QCiMj5QyPvCc0H19
ಅರ್ಹತೆ ನೋಡಿ ಸಹಕಾರ ನೀಡುವ ಕೆಲಸವಾಗಬೇಕು. ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ. ಸಾಮಾನ್ಯ ಜನರಿಗೆ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಸಂಸ್ಥೆಯ ಹುಟ್ಟಾಗಿದೆ. ಕೊಡು -ಕೊಳ್ಳುವಿಕೆಯ ಗುಣ ಇಲ್ಲಿ ಅಗತ್ಯ. ಒಗ್ಗಟ್ಟಿನಿಂದ ಸಹಕಾರ ಸಂಘಗಳು ಮತ್ತಷ್ಟು ಗಟ್ಟಿಯಾಗುತ್ತವೆ. ಗ್ರಾಹಕರೇ ಸಹಕಾರಿಯ ಜೀವಾಳ. ಮಾನವೀಯ ಮೌಲ್ಯ ಬಹಳಷ್ಟು ಶ್ರೇಷ್ಟವಾದುದು. ಅದನ್ನು ಬೆಳಸುವ ಕೆಲಸವಾಗಬೇಕು. ಸಂಪತ್ತಿನ ದಾನ ಜೀವನದಲ್ಲಿ ಅಗತ್ಯ. ಲೋಕ ಹಿತದ ಕಾರ್ಯ ಎಲ್ಲರಿಂದಲೂ ಆಗಲಿ. ಶಾಖೆ ಬೆಳವಣಿಗೆಯೊಂದಿಗೆ ಸಮಾಜ ಹಿತ ಸಾಧ್ಯ ಎಂದು ಹೇಳಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಗೌರವ ಮಾರ್ಗದರ್ಶಕಿ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿ ಕಡಿಮೆ ಅವಧಿಯಲ್ಲಿ ಅತೀ ಎತ್ತರಕ್ಕೆ ಏರಿರುವ ಸಹಕಾರಿ ನಮ್ಮದು ಎನ್ನಲು ಸಂತಸವಾಗುತ್ತಿದೆ.ಢವಾಗಲು ಭದ್ರ ಬುನಾದಿ ಅಗತ್ಯ. ಸೇವಾ ಮನೊಭಾವದ ಸೇವೆ ನಮ್ಮಲ್ಲಿದ್ದಾಗ ಯಶಸ್ಸು ಹೆಚ್ಚು. ಗ್ರಾಹಕ ಬಂಧುಗಳ ಸಹಕಾರ ಸಂಸ್ಥೆಯ ಏಳಿಗೆಗೆ ಪೂರಕ ಎಂದರು.
ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ ಗ್ರಾಹಕರ ಸೆಳೆತ ಹೆಚ್ಚಾದಾಗ ಸಂಸ್ಥೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೆಚ್ಚಿನ ರಾಷ್ಟ್ರೀಕೃತ ಬ್ಯಾಂಕ್‌ಗಳ ಹುಟ್ಟು ನಮ್ಮ ಜಿಲ್ಲೆಯಲ್ಲೇ ಆಗಿವೆ ಎನ್ನುವುದು ಸಂತಸ ತರುವ ವಿಚಾರ. ಜನರ ಏಳಿಗೆ ಇಂತಹ ಸಹಕಾರಿ ಸಂಘದಿಂದ ಸಾಧ್ಯ. ಸರಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ರೆ.ಫಾದರ್ ಸ್ಟ್ಯಾನಿ ಗೋವೆಸ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶುಭ ಹಾರೈಸಿದರು. ಗುರುವಾಯನಕೆರೆ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಯು.ಚಂದ್ರಶೇಖರ ಭಟ್, ವೇದಮೂರ್ತಿ ಚಂದ್ರಶೇಖರ ಉಪಾಧ್ಯಾಯ ನಂದಿಬೆಟ್ಟ, ದಂತವೈದ್ಯ ಡಾ.ವಿಶುಕುಮಾರ್ ಶೆಟ್ಟಿ, ಶ್ರೀ ಕ್ಷೇತ್ರ ಪಾರಂಕಿಯ ಮಾಜಿ ಆಡಳಿತ ಮೊಕ್ತಸರ ಬಿ.ರತ್ನಾಕರ ಶೆಟ್ಟಿ ಮುಡಾಯೂರು, ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ನವೀನ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಬಿ.ಭಟ್, ಮೈಸೂರು ಪ್ರಾಂತೀಯ ಹಿರಿಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು, ಕಟ್ಟಡದ ಮಾಲಕರಾದ ಲಾವ್ಯಮೀನ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ವೇಣುಗೋಪಾಲ್ ಮಾರ್ಲ ಮಂಗಳೂರು, ತಾರಾನಾಥ ಶೆಟ್ಟಿ ಒಡಿಯೂರು, ಲೋಕನಾಥ ಶೆಟ್ಟಿ ಮಂಗಳೂರು, ಶಾರದಾಮಣಿ ಸುಳ್ಯ, ಸರಿತಾ ಅಶೋಕ್ ಮಂಗಳೂರು, ದೇವಪ್ಪ ನಾಯ್ಕ್ ಉಪ್ಪಳಿಗೆ, ಗಣಪತಿ ಭಟ್ ಸೇರಾಜೆ, ಮೋನಪ್ಪ ಪೂಜಾರಿ ಕರೆಮಾರು, ಸೋಮಪ್ಪ ನಾಯ್ಕ ಕಡಬ, ಜಯಪ್ರಕಾಶ್ ರೈ ನೂಜಿಬೈಲು, ಭವಾನಿಶಂಕರ ಶೆಟ್ಟಿ ಪುತ್ತೂರು, ಅಶೋಕ್ ಕುಮಾರ್ ಯು.ಎಸ್. ಬಿ.ಸಿ.ರೋಡ್, ಎಂ.ಉಗ್ಗಪ್ಪ ಶೆಟ್ಟಿ ಕೊಂಬಿಲ, ಕರುಣಾಕರ ಜಿ. ಉಚ್ಚಿಲ್ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಡಂತ್ಯಾರು ಶಾಖಾ ವ್ಯವಸ್ಥಾಪಕಿ ಪವಿತ್ರ ಎನ್ ಪ್ರಾರ್ಥಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com