Author: admin

ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ 19 ಒಪ್ಪಂದಗಳಿಗೆ ಸಹಿ ಭೋಪಾಲ್‌: ದೇಶದ ಪ್ರಮುಖ ಕಂಪನಿಗಳಲ್ಲೊಂದಾದ ರಿಲಯನ್ಸ್‌ ಸಹಕಾರಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದ್ದು ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ (GIS) ಈ ಯೋಜನೆಗಳನ್ನು ಘೋಷಿಸಲಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಸಹಕಾರಿ ಸಚಿವ ವಿಶ್ವಾಸ್ ಸಾರಂಗ್ ಸಹಕಾರಿ ವಲಯದಲ್ಲಿ 2,305 ಕೋಟಿ ರೂ. ಮೌಲ್ಯದ 19 ಒಪ್ಪಂದಗಳಿಗೆ (MoU) ಸಹಿ ಹಾಕಿದ್ದಾರೆ. ಪ್ರಮುಖ ಹೂಡಿಕೆದಾರರ ಸಮ್ಮುಖದಲ್ಲಿ ಹಲವು ಉಪಕ್ರಮಗಳಿಗೆ ಸಹಿ ಹಾಕಲಾಗಿದ್ದು ಈ ಒಪ್ಪಂದಗಳು ಆರ್ಥಿಕ ಅಭಿವೃದ್ಧಿಯಲ್ಲಿ ಪರಿವರ್ತನಾತ್ಮಕ ಹೆಜ್ಜೆಯನ್ನು ಇಡಲಿದೆ ಮತ್ತು ಸಹಕಾರಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (CPPP) ಮಾದರಿಗೆ ಇದು ಹೊಸ ದಿಕ್ಕು ತೋರಿಸಲಿದೆ. https://chat.whatsapp.com/EbVKVnWB6rlHT1mWtsgbch ಸಹಕಾರಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (CPPP) ಮಾದರಿಯನ್ನು ಪರಚಯಿಸಿದ ಸಚಿವ ವಿಶ್ವಾಸ್ ಸಾರಂಗ್, ಈ ಉಪಕ್ರಮವು ದೇಶಾದ್ಯಂತ ಸಹಕಾರಿ ವಲಯದ ಕಾರ್ಯಚಟುವಟಿಕೆಗಳನ್ನು ಪುನಃರ್ರಚಿಸಲಿದೆ ಎಂದು ಹೇಳಿದರು. ಕೇಂದ್ರ ಸಹಕಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಿದ್ಧಾರ್ಥ್…

Read More

ಶಿವಮೊಗ್ಗ: ಕರ್ನಾಟಕ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ ನಿ., ಶಿಕಾರಿಪುರ, ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘ ನಿ., ಶಿಕಾರಿಪುರ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ನಿ., ಶಿಕಾರಿಪುರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕಾರಿಪುರ ಹಾಗೂ ಕುಶ್ವಿತ ಮಿನರಲ್ಸ್, (ಜನಸಿರಿ ವಾಟರ್ ಬಾದಲ್) ಶಿಕಾರಿಪುರ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್‌ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. https://chat.whatsapp.com/EbVKVnWB6rlHT1mWtsgbch ಶಿಕಾರಿಪುರ ಎಸ್‌.ಎಸ್‌ ರಸ್ತೆಯ ಸಾಂಸ್ಕೃತಿಕ ಭವನದಲ್ಲಿ ಬೆಳಗ್ಗೆ 10ರಿಂದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಿಳಾ ಜಾನಪದ ಕಲಾಮೇಳ, ಮಹಿಳಾ ಸಾಧಕರಿಗೆ ಸನ್ಮಾನ, ಮಹಿಳಾ ಸಹಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮತ್ತು ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶ ನಡೆಯಲಿದೆ. ಬೆಳಗ್ಗೆ 10ಕ್ಕೆ ಜಾನಪದ ಕಲಾಮೇಳ ನಡೆಯಲಿದ್ದು ಶಿಕಾರಿಪುರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ನೇಹಕ್ಕ ದಿವ್ಯ ಸಾನ್ನಿಧ್ಯದಲ್ಲಿ ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ ಅಧ್ಯಕ್ಷ…

Read More

ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿಕೆ ಗುವಾಹಟಿ: ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ. ಈ ವಿಷಯದಲ್ಲಿ ಪೆಟ್ರೋಲ್‌ನೊಂದಿಗೆ ಶೇ.20ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಎಥೆನಾಲ್‌ ಮಿಶ್ರಣ ಸಂಬಂಧ ನೀತಿ ಆಯೋಗದ ಅಧೀನದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಅಸ್ಸಾಂನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, 2026ರೊಳಗೆ ಶೇ.20ರಷ್ಟು ಎಥೆನಾಲ್‌ ಮಿಶ್ರಣದ ಗುರಿ ನಿಗದಿಯಾಗಿತ್ತು. ಈಗಾಗಲೇ ಶೇ.19.6ರಷ್ಟು ಗುರಿ ಸಾಧನೆಯಾಗಿದೆ. ಮುಂದಿನ ತಿಂಗಳು ನಿಗದಿತ ಗುರಿ ಪೂರ್ಣಗೊಳ್ಳಲಿದೆ. ಹೀಗಾಗಿ ಈಗ ನಮ್ಮ ಗುರಿ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್‌ ಮಿಶ್ರಣ ಮಾಡುವ ಕಡೆಗಿದೆ. ಪೆಟ್ರೋಲ್‌ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುವುದರ ಬಗ್ಗೆ ನಾವು ಕಾರ್ಯತತ್ಪರವಾಗಿದ್ದೇವೆ. ಈ ನಿಟ್ಟಿನಲ್ಲಿ ಸಮಿತಿ ಗಮನ ಹರಿಸಲಿದೆ ಎಂದು ಹೇಳಿದರು. ದೇಶದ ಎಥೆನಾಲ್‌ ಮಿಶ್ರಣ ಸಾಮರ್ಥ್ಯ 1,700 ಕೋಟಿ…

Read More

ಶಿವಮೊಗ್ಗ: ಸಿರಿಗಂಧ ಮಹಿಳಾ ಪತ್ತಿನ ಸಹಕಾರ ಸಂಘ ಶಿಕಾರಿಪುರ ಇದರ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಇತ್ತೀಚೆಗೆ ನಡೆದಿದೆ. https://chat.whatsapp.com/EbVKVnWB6rlHT1mWtsgbch ಸಾಮಾನ್ಯ ಕ್ಷೇತ್ರದಿಂದ ಲೋಲಾಕ್ಷಮ್ಮ (ಕಲ್ಮನೆ ಶಿಕಾರಿಪುರ), ಶಾಂತಲಾ ಬಿ(ಶಿಕಾರಿಪುರ), ಅಕ್ಕಮಹಾದೇವಿ(ಬೆಲವಂತನಕೊಪ್ಪ, ಸೊರಬ), ಶಶಿಕಲಾ (ಈಸೂರು), ಲಲಿತಮ್ಮ(ಈಸೂರು), ಮೀನಾಕ್ಷಿ (ಶಿವಮೊಗ್ಗ), ಲಲಿತಾ(ಗೌತಮಪುರ, ಸಾಗರ), ಗಂಗಮ್ಮ(ಗೌತಮಪುರ), ಗೀತಾ(ಅಂಜನಾಪುರ), ಶಶಿಕಲಾ(ಕಾಗಿನಲ್ಲಿ ಶಿಕಾರಿಪುರ), ಲತಾ(ಶಿಕಾರಿಪುರ), ಮಂಜುಳಾ(ಚಿನ್ನಿಕಟ್ಟಿ, ಹೊನ್ನಾಳಿ), ಪದ್ಮಾವತಿ(ಈಸೂರು) ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಎಯಿಂದ ಶಾಂತಮ್ಮ(ಕಲ್ಮನೆ), ಹಿಂದುಳಿದ ವರ್ಗ ಪ್ರವರ್ಗ ಬಿಯಿಂದ ರತ್ನಮ್ಮ(ಅರಿಶಿಣಗೆರೆ, ಶಿಕಾರಿಪುರ), ಪರಿಶಿಷ್ಟ ಪಂಗಡದಿಂದ ಸುಭದ್ರಮ್ಮ(ಕಲ್ಮನೆ) ಆಯ್ಕೆಯಾಗಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಅಭಿವಂದನೆ ಸ್ವೀಕರಿಸಿ, ಸವಲತ್ತು ವಿತರಿಸಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಹೇಳಿಕೆ ಮಂಗಳೂರು: ಮೊಳಹಳ್ಳಿ ಶಿವರಾಯರಿಂದ ಮೊದಲ್ಗೊಂಡು ಹಲವಾರು ಸಹಕಾರಿ ಧುರೀಣರಿಂದ ಸಹಕಾರಿ ಕ್ಷೇತ್ರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅವರ ಹಾದಿಯಲ್ಲಿ ಸಾಗಿ ಈ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವ ತೃಪ್ತಿಯಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್‌ ಹೇಳಿದರು. https://chat.whatsapp.com/EbVKVnWB6rlHT1mWtsgbch ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ‘ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಭಿವಂದನಾ ಸಮಿತಿ’ ವತಿಯಿಂದ ತಮ್ಮ 76ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಪ್ರಯುಕ್ತ ಏರ್ಪಡಿಸಿದ್ದ ಅಭಿವಂದನಾ ಸಮಾರಂಭ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾವಿರಾರು ಕೃಷಿಕರಿಗೆ ಆರ್ಥಿಕ ಶಕ್ತಿಯಾಗಿ ನಿಂತಿರುವ ಸಹಕಾರಿ ಕ್ಷೇತ್ರ ಇಂದು ಲಕ್ಷಾಂತರ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಕೂಡ ನೆರವಾಗಿದೆ. ಹಂತಹಂತವಾಗಿ ಬೆಳೆದ ಸಹಕಾರಿ ರಂಗ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅತ್ಯಂತ ಪವಿತ್ರವಾಗಿರುವ…

Read More

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಹಿಂದೂ ಯುವಸೇನೆ, ಕಾವು ಶ್ರೀ ಪಂಚಲಿಂಗೇಶ್ವರ ಶಾಖೆ ಕಂಕನಾಡಿ ಮತ್ತು ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಇವುಗಳ ಸಹಕಾರದೊಂದಿಗೆ ಮಾರ್ಚ್ 02ರಂದು ಭಾನುವಾರದ ಬಜಾಲಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬೃಹತ್ ಉಚಿತ ವೈದ್ಯಕೀಯ/ದಂತ/ಕಣ್ಣು/ಹೃದಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಬೆಳಗ್ಗೆ 9.30ರಿಂದ ಶಿಬಿರ ಆರಂಭವಾಗಲಿದ್ದು ಕೆಎಂಸಿ ಅತ್ತಾವರ ಹಾಗೂ ಯೆನೆಪೋಯ ಆಸ್ಪತ್ರೆಯ ತಜ್ಞ, ಹಿರಿಯ ಅನುಭವಿ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್‌ ಗುರುರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಲೂವಿಸ್ ಲೋಬೊ, ಉಪಾಧ್ಯಕ್ಷರಾಗಿ ಜೇಮ್ಸ್ ಡಿಸೋಜ ಆಯ್ಕೆಯಾಗಿದ್ದಾರೆ. https://chat.whatsapp.com/EbVKVnWB6rlHT1mWtsgbch ಗುರುವಾರ ಉಡುಪಿ ಕ್ರಿಸ್ತಜೋತಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ ಲೂವಿಸ್ ಲೋಬೊ ಆದಿ ಉಡುಪಿ ಹಾಗೂ ಉಪಾಧ್ಯಕ್ಷ ಜೇಮ್ಸ್ ಡಿಸೋಜ ಕಾಪು ಅವರನ್ನು ಆರಿಸಲಾಯಿತು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಸಹಕಾರ ಅಭಿವೃಧಿ ಅಧಿಕಾರಿ ಜಯಂತಿ ಎಸ್‌ ಚುನಾವಣಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಎ.ಫೆರ್ನಾಂಡಿಸ್ ಚುನಾವಣಾ ಪ್ರಕ್ರಿಯೆ ನೆರವೇರಿಸಿದರು. ಆಡಳಿತ ಮಂಡಳಿಗೆ ನೂತನವಾಗಿ ಚುನಾಯಿತರಾದ ನಿರ್ದೇಶಕರಾದ ಇಗ್ನೇಷಿಯಸ್ ಮೋನಿಸ್ ಮೂಡುಬೆಳ್ಳೆ, ಪರ್ಸಿ ಜಿ.ಡಿಸೋಜ ಕಲ್ಯಾಣಪುರ, ಆರ್ಚಿಬಾಲ್ಡ್ ಎಸ್. ಡಿಸೋಜ ತೊಟ್ಟಂ, ಡಾ॥ ನೇರಿ ಕರ್ನೇಲಿಯೋ ಕಕ್ಕುಂಜೆ-ಅಂಬಾಗಿಲು, ಶ್ರೀಮತಿ ಲಾಯ್ಸೆಟ್‌ ಜೆ.ಕರ್ನೇಲಿಯೋ ಕನ್ನರ್ಪಾಡಿ-ಕಡೇಕಾರು, ರಿಚರ್ಡ್ ಡಾಯಸ್ ಸಂತೆಕಟ್ಟೆ, ರಾಬರ್ಟ್ ಮ್ಯಾಕ್ಸಿಂ ಡಿಸೋಜ ಉಡುಪಿ, ಡಾಲ್ಫಿ ವಿಕ್ಟರ್‌ ಲೂವಿಸ್‌ ಉಡುಪಿ, ವಿಲಿಯಂ ಬಿ.ಮಚಾದೋ ಶಿರ್ವ, ಓನಿಲ್ ಜಾನ್ಸನ್…

Read More

ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ದರ್ಬೆ ಪುತ್ತೂರು ಇದರ ಪೂರಕ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ “ವೃತ್ತಿ ಬದುಕು ಹೇಗಿರಬೇಕು? ಉದ್ಯೋಗಸ್ಥರಿಗೊಂದು ಮಾರ್ಗದರ್ಶಿʼʼ ಕೃತಿ ಲೋಕಾರ್ಪಣೆಗೊಂಡಿತು. https://chat.whatsapp.com/EbVKVnWB6rlHT1mWtsgbch ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪುತ್ತೂರು ವಿವೇಕಾನಂದ ಕಾಲೇಜು(ಸ್ವಾಯತ್ತ) ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸರಸ್ವತಿ ಸಹಕಾರಿಯ ಸೇವಾಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು. ಲೋಕಾರ್ಪಣೆಗೊಂಡ ಕೃತಿಯ ಕುರಿತು ಮಾತನಾಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಕೃತಿಯು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದ್ದು ಲೇಖಕರು ವೃತ್ತಿ ಬದುಕಿನ ಪ್ರತಿಯೊಂದು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು. ಕೃತಿಯ ಲೇಖಕ, ರಾಜ್ಯ-ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಭಟ್‌ ಟಿ.ರಾಮಕುಂಜ ಮಾತನಾಡಿ ಓದುಗರು ಕೃತಿ ಓದಿ ಅದನ್ನು ಅನುಷ್ಠಾನಗೊಳಿಸಿಕೊಂಡರೆ ಸಾರ್ಥಕ್ಯ ನೀಡುತ್ತದೆ ಎಂದು ಹೇಳಿದರು. ಇದೇ ಸಂದರ್ಭ ಶ್ರೀ ಸರಸ್ವತಿ ಸಹಕಾರಿಯ ಪ್ರಥಮ ಶಾಖೆ ದರ್ಬೆಯು…

Read More

ಸತತ ಐದನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಡಾ.ವಾಣಿಶ್ರೀ ವಿಶ್ವನಾಥ್ ನೇತೃತ್ವದ ಬಳಗ ಬೆಂಗಳೂರು: ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಮುಂದಿನ ಐದು ವರ್ಷಗಳ ಅವಧಿಗೆ ಡಾ.ವಾಣಿಶ್ರೀ ವಿಶ್ವನಾಥ್‌ ಸತತ ಐದನೇ ಬಾರಿ ಆಯ್ಕೆಯಾಗಿದ್ದಾರೆ. 2025-30ರ ಅವಧಿಗೆ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ನೇತೃತ್ವದ 12 ಹಾಲಿ ನಿರ್ದೇಶಕರ ತಂಡ ಅವಿರೋಧವಾಗಿ ಆಯ್ಕೆಯಾಗಿತ್ತು. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಮತ್ತು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಇದರಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅವರ ನೇತೃತ್ವದ 12 ಜನ ಹಾಲಿ ನಿರ್ದೇಶಕರ ತಂಡ ಅವಿರೋಧವಾಗಿ ಆಯ್ಕೆಯಾಗಿದ್ದು, ಬುಧವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅಧ್ಯಕ್ಷರಾಗಿ 5ನೇ ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. https://chat.whatsapp.com/EbVKVnWB6rlHT1mWtsgbch ನೂತನ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ಸತತ ಐದನೇ ಬಾರಿ ಸಿಂಗನಾಯಕನಹಳ್ಳಿ ರೈತರ…

Read More

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜನಾರ್ದನ ಬೊಂಡಾಲ ಅವರನ್ನು ಆರಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಬಂಟ್ವಾಳದ ಬೈಪಾಸ್ ಜಂಕ್ಷನ್‌ನಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಗುರುವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಸಮಾಜ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಡಾ.ಅಮ್ಮೆಂಬಳ ಬಾಳಪ್ಪ ಅವರ ಕನಸು ನನಸಾಗಿದೆ. ಅಧ್ಯಕ್ಷ ಸುರೇಶ್ ಕುಲಾಲ್ ಮತ್ತವರ ತಂಡದ ಪ್ರಾಮಾಣಿಕ ಕೆಲಸದಿಂದಾಗಿ ಇಂದು ಸಂಘ ಜಿಲ್ಲಾಮಟ್ಟದಲ್ಲಿ ಎದ್ದು ಕಾಣುತ್ತಿದೆ ಎಂದರು. ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬರಬೈಲು ಮಾತನಾಡಿ ಅಪಪ್ರಚಾರವನ್ನು ಮೆಟ್ಟಿ ನಿಂತು ಚುನಾವಣೆಯಲ್ಲಿ ಎಲ್ಲಾ ಸ್ಥಾನ ಗೆಲ್ಲುವ ಮೂಲಕ ಸುರೇಶ್ ಕುಲಾಲ್ ಅವರ ತಂಡ ಉತ್ತಮ ಕಾರ್ಯ ಮಾಡಿದೆ ಎಂದರು. ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ…

Read More