ಮಂಗಳೂರು: ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಕಾವೂರು ಇದರ ಕೋಡಿಕಲ್ ಶಾಖೆ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಮಂದಿರ ಕೋಡಿಕಲ್ ಹಾಗೂ ಗಿರಿಜಾ ಸರ್ಜಿಕಲ್ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಕೋಡಿಕಲ್ ಶಾಖೆಯ ಆವರಣದಲ್ಲಿ ಇತ್ತೀಚೆಗೆ ನಡೆಸಲಾಯಿತು.
https://chat.whatsapp.com/Ge11n7QCiMj5QyPvCc0H19
ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಚಂದ್ರಶೇಖರ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುರುಅಂಬಾ ದೇವಸ್ಥಾನದ ಮುಖ್ಯ ಅರ್ಚಕ ರವೀಶ ರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಎಸ್.ಎನ್.ಡಿ.ಪಿ ಸಂಘ ಕೋಡಿಕಲ್ ಇದರ ಅಧ್ಯಕ್ಷ ಪದ್ಮನಾಭ ಕಾರ್ನಾಡ್, ಗಿರಿಜಾ ಸರ್ಜಿಕಲ್ ಪಾಲುದಾರರಾದ ಹರೀಶ್ ಕುಮಾರ್ ಯು, ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಕೆಸಿ ಎಂಟರ್‌ಪ್ರೈಸರ್ಸ್ ಮಾಲೀಕ ಕೆ.ಚೆನ್ನಯ್ಯ , ಎಸ್.ಎನ್.ಡಿ.ಪಿ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷೆ ದಯಾಮಣಿ ವಿಜಯ, ವಕೀಲ ವಿನೋಧರ ಪೂಜಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉಚಿತ ವೈದ್ಯಕೀಯ ತಪಾಸಣಾ ಶಿಬಿರದಿಂದ ಜನಸಾಮಾನ್ಯರಿಗೆ ಉಪಕಾರವಾಗಿದೆ. ಸಾಮಾಜಿಕ ಆರೋಗ್ಯಕ್ಕೆ ವಿಶೇಷ ಕೊಡುಗೆ ಕೂಡ ನೀಡಿದೆ. ಸಾಮಾಜಿಕ ಸೇವೆಯು ಸಹಕಾರಿಯ ಮಹತ್ವದ ಭಾಗವೆಂದು ಪ್ರೇರೇಪಿಸಿ ಇಂತಹ ಪ್ರಯತ್ನಗಳು ಸಾಮಾಜಿಕ ಬದ್ಧತೆಯ ಪ್ರತೀಕವಾಗಿದ್ದು, ಸಹಕಾರಿಯ ಉಜ್ವಲ ಭವಿಷ್ಯ ರೂಪಿಸಲು ಪೂರಕವಾಗಲಿದೆ. ಇಂಥ ಚಟುವಟಿಕೆಗಳು ಸಹಕಾರಿಯ ಸಮಾಜಮುಖಿ ಹಾದಿಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಗಣ್ಯರು ಶುಭ ಹಾರೈಸಿದರು.
ಎಸ್.ಎನ್.ಡಿ.ಪಿ ಸಂಘದ ಸದಸ್ಯರು, ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ , ಗಿರಿಜಾ ಸರ್ಜಿಕಲ್ ಇದರ ಸಿಬ್ಬಂದಿ ವರ್ಗದವರು, ಸಹಕಾರಿಯ ಸದಸ್ಯರು ಪಾಲ್ಗೊಂಡು ಶಿಬಿರವನ್ನು ಯಶಸ್ವಿಯಾಗಿ ನೆರವೇರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com