Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಈ ದೇಶದ ಜಿಡಿಪಿಗೆ ಅತಿದೊಡ್ಡ ಕೊಡುಗೆ ಸಹಕಾರಿಗಳದ್ದು!
    News

    ಈ ದೇಶದ ಜಿಡಿಪಿಗೆ ಅತಿದೊಡ್ಡ ಕೊಡುಗೆ ಸಹಕಾರಿಗಳದ್ದು!

    adminBy adminNovember 26, 2024

    ಜನಸಂಖ್ಯೆಯ 30 ಶೇಕಡಾ ಪ್ರಮಾಣ ಸಹಕಾರ ಸಂಘಗಳ ಸದಸ್ಯರು!

    ದೇಶ ಪುಟ್ಟದಾದರೂ ಸಹಕಾರ ಕ್ಷೇತ್ರದ ಬೆಳವಣಿಗೆ ಮಾದರಿ

    ಮಂಗಳೂರು: ವಿಶ್ವ ಭೂಪಟದಲ್ಲಿ ಆ ದೇಶ ಪುಟ್ಟದಾಗಿದ್ದು ಕರ್ನಾಟಕದಷ್ಟೂ ಜನಸಂಖ್ಯೆಯನ್ನು ಹೊಂದಿಲ್ಲ. ಆದರೆ ಸಹಕಾರ ಕ್ಷೇತ್ರಕ್ಕೆ ಆ ದೇಶದ ಕೊಡುಗೆ ಅದ್ವಿತೀಯವಾದುದು. ಕೇವಲ 52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಆ ದೇಶದ ಜನ ತಮ್ಮ ದೇಶದ ಜಿಡಿಪಿಗೆ ಕೊಡುವ ಕೊಡುಗೆ ಆ ದೇಶದ ಒಟ್ಟು ಜಿಡಿಪಿಯ ಐದನೇ ಒಂದು ಪಾಲು. ಅಂದರೆ ಶೇ.20ರಷ್ಟು.

    ಯಾವುದು ಆ ದೇಶ ಎಂಬ ಕುತೂಹಲ ಸಹಜ. ಉತ್ತರ ನ್ಯೂಜಿಲೆಂಡ್‌. ಒಂದು ಸಂಶೋಧನೆಯ ಪ್ರಕಾರ ನ್ಯೂಜಿಲೆಂಡ್‌ಗೆ ಆ ದೇಶದ ಸಹಕಾರ ಕ್ಷೇತ್ರದಿಂದ ಶೇ.18-20ರಷ್ಟು ಕೊಡುಗೆ ಲಭಿಸುತ್ತಿದ್ದು ಇದು ವಿಶ್ವದಲ್ಲೇ ಅತಿ ಹೆಚ್ಚು. ನ್ಯೂಜಿಲೆಂಡ್‌ನ ಒಟ್ಟು ಜನಸಂಖ್ಯೆಯ ಶೇ.30ರಷ್ಟು (ಸರಿಸುಮಾರು 1.50 ಮಿಲಿಯ) ಜನ ಸಹಕಾರಿ ಕ್ಷೇತ್ರದ ಸದಸ್ಯರಾಗಿದ್ದು, ಸುಮಾರು 50,000 ಉದ್ಯೋಗಿಗಳು ಇಲ್ಲಿನ ಸಹಕಾರಿ ಕ್ಷೇತ್ರದ ಉದ್ಯೋಗಿಗಳಿದ್ದಾರೆ.

    vinay kumar soorinje sahakara mahamandala scdcc bank training programme D.K Ditrict sahakara union https://chat.whatsapp.com/Ge11n7QCiMj5QyPvCc0H19

    ಒಂದು ಅಂಕಿ ಆಂಶದ ಪ್ರಕಾರ  ನ್ಯೂಜಿಲೆಂಡ್‌ನ ಅಗ್ರ 30 ಕೋ ಆಪರೇಟಿವ್‌ ಸೊಸೈಟಿಗಳಿಂದಲೇ ದೇಶದ ಜಿಡಿಪಿಯ ಶೇ.13ರಷ್ಟು ಕೊಡುಗೆ ಸಿಗುತ್ತಿದೆ. ಇವೇ 30 ಸೊಸೈಟಿಗಳು ದೇಶದ 41,000ಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸುತ್ತಿವೆ.

    ನ್ಯೂಜಿಲೆಂಡ್‌ನಲ್ಲಿ ಸಹಕಾರಿ ಕ್ಷೇತ್ರ ಬೆಳೆದುಬಂದ ರೀತಿ:

    1846: ನ್ಯೂಜಿಲೆಂಡ್‌ನಿಂದ ಮೊದಲ ಡೈರಿ ಉತ್ಪನ್ನ ರಫ್ತು

    1864: ನ್ಯೂಜಿಲೆಂಡ್‌ನ ಮೊದಲ ಕೋ ಆಪರೇಟಿವ್‌ ಸೊಸೈಟಿ(ಬಿಲ್ಡಿಂಗ್‌ ಸೊಸೈಟಿ) -ನೆಲ್ಸನ್‌ ಬಿಲ್ಡಿಂಗ್‌ ಸೊಸೈಟಿ ಕಾರ್ಯಾರಂಭ

    1869: ಸೌತ್‌ಲ್ಯಾಂಡ್‌ ಬಿಲ್ಡಿಂಗ್‌, ಲ್ಯಾಂಡ್‌ ಮತ್ತು ಇನ್‌ವೆಸ್ಟ್‌ಮೆಂಟ್‌ ಸೊಸೈಟಿ (ಈಗಿನ ಎಸ್‌ಬಿಎಸ್‌ ಬ್ಯಾಂಕ್‌) ಆರಂಭ

    1871: ಒಟಾಗೊದಲ್ಲಿ ನ್ಯೂಜಿಲೆಂಡ್‌ನ ಮೊದಲ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭ

    1908: ಕೈಗಾರಿಕಾ ಮತ್ತು ಪ್ರಾವಿಡೆಂಟ್‌ ಸೊಸೈಟಿ ಕಾಯ್ದೆ ಅಂಗೀಕಾರ

    1920-1940: 600ರಷ್ಟು ಹಾಲು ಉತ್ಪಾದಕ ಕಂಪನಿಗಳು, ಈ ಪೈಕಿ ಶೇ.85ರಷ್ಟು ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಮತ್ತು ಉಳಿದ ಕ್ಷೇತ್ರಗಳಲ್ಲೂ ಸಹಕಾರಿಗಳ ಸಹಭಾಗಿತ್ವದಲ್ಲಿ ಸಂಘಗಳ ಸ್ಥಾಪನೆ(ಉದಾಹರಣೆ: ವೈದ್ಯಕೀಯ, ಆಹಾರ, ಮಾರುಕಟ್ಟೆ, ತೋಟಗಾರಿಕೆ, ವಿದ್ಯುತ್‌, ಸಹಕಾರ ಬ್ಯಾಂಕ್‌ ಇತ್ಯಾದಿ)

    1940-1980: ಈ 40 ವರ್ಷಗಳ ಅವಧಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ವಿವಿಧ ವಲಯಗಳ ಸಹಕಾರ ಸಂಘಗಳ  ಸ್ಥಾಪನೆ

    1984: ನ್ಯೂಜಿಲೆಂಡ್‌ ಕೃಷಿ ಸಹಕಾರ ಸಂಘಗಳ ಸಂಘ(ಈಗಿನ ಕೋಆಪರೇಟಿವ್‌ ಬ್ಯುಸಿನೆಸ್‌ ನ್ಯೂಜಿಲೆಂಡ್‌) ಆರಂಭ

    1996: ದಿ ಕೋ ಆಪರೇಟಿವ್‌ ಕಂಪನಿ ಆಕ್ಟ್‌ ಅಂಗೀಕಾರ

    2012: ಅಂತಾರಾಷ್ಟ್ರೀಯ ಸಹಕಾರ ವರ್ಷದ ಅಂಗವಾಗಿ ನಡೆಸಿದ ಸಮೀಕ್ಷೆಯಲ್ಲಿ ವಿಶ್ವಸಂಸ್ಥೆಯು ನ್ಯೂಜಿಲೆಂಡ್‌ ಜಾಗತಿಕ ಸಹಕಾರ ವಲಯದಲ್ಲೇ ಅತಿ ಹೆಚ್ಚಿನ ಸಹಕಾರ ಆರ್ಥಿಕತೆ ಎಂದು ಘೋಷಿಸಿತು

    2017: ನ್ಯೂಜಿಲೆಂಡ್‌ನಲ್ಲಿ ಮೊದಲ ಸಲ ಸಹಕಾರಿ ಆರ್ಥಿಕತೆಯನ್ನು ಪ್ರಕಟಿಸಲಾಯಿತು

    2020: ವ್ಯವಹಾರ ಶಿಕ್ಷಣದಲ್ಲಿ ಸಹಕಾರಿ ಶಿಕ್ಷಣವನ್ನು ಸಂಯೋಜಿಸಲು ಕೋಆಪರೇಟಿವ್‌ ಬ್ಯುಸಿನೆಸ್‌ ನ್ಯೂಜಿಲೆಂಡ್‌ ಸಂಸ್ಥೆಯು ಮಾಸ್ಸಿ ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡಿದೆ.

     

    2020ರ ಅಂಕಿ ಅಂಶ ಪ್ರಕಾರ ನ್ಯೂಜಿಲೆಂಡ್‌ನಲ್ಲಿ ಅಗ್ರ 10 ಸಹಕಾರ ಸಂಘಗಳ ಆದಾಯ(ಮಿಲಿಯನ್‌ಗಳಲ್ಲಿ)

    1. ಫಾಂಟೆರಾ ಕೋ ಆಪರೇಟಿವ್‌ ಗ್ರೂಪ್‌  – 20,282

    2. ಫುಡ್‌ಸ್ಟಫ್ಸ್‌ –ನಾರ್ತ್‌ ಐಲ್ಯಾಂಡ್‌ – 3,543

    3. ಝೆಸ್ಪ್ರಿ – 3,341

    4. ಫುಡ್‌ಸ್ಟಫ್ಸ್‌ –ಸೌತ್‌ ಐಲ್ಯಾಂಡ್‌ – 3,188

    5. ಅಲಾಯನ್ಸ್‌ ಗ್ರೂಪ್‌ – 1,834

    6. ಸಿಲ್ವರ್‌ ಫರ್ನ್‌ ಫಾರ್ಮ್ಸ್‌ – 1,249

    7. ಸದರ್ನ್‌ ಕ್ರಾಸ್‌ ಮೆಡಿಕಲ್‌ ಕೇರ್‌ ಸೊಸೈಟಿ – 1,138

    8. ಫಾರ್ಮ್‌ಲ್ಯಾಂಡ್ಸ್‌ ಕೋ ಆಪರೇಟಿವ್‌ ಸೊಸೈಟಿ -1,105

    9. ಬ್ಯಾಲೆನ್ಸ್‌ ಆಗ್ರಿ-ನ್ಯೂಟ್ರಿಶನ್ಸ್‌ -891

    10. ರಾವೆನ್ಸ್‌ಡೌನ್‌ ಫರ್ಟಿಲೈಸರ್ಸ್‌ ಕೋ ಆಪರೇಟಿವ್‌ -750

     

    2020ರ ಅಂಕಿ ಅಂಶ ಪ್ರಕಾರ ನ್ಯೂಜಿಲೆಂಡ್‌ನಲ್ಲಿ ಅಗ್ರ 10 ಸಹಕಾರ ಸಂಘಗಳಲ್ಲಿರುವ ಉದ್ಯೋಗಿಗಳು

    1. ಫಾಂಟೆರಾ ಕೋ ಆಪರೇಟಿವ್‌ ಗ್ರೂಪ್‌  – 19,593

    2. ಅಲಾಯನ್ಸ್‌ ಗ್ರೂಪ್‌ -5,000

    3. ಈಸ್ಟ್‌ಪ್ಯಾಕ್‌ -3,600

    4. ಫುಡ್‌ಸ್ಟಫ್ಸ್‌ –ನಾರ್ತ್‌ ಐಲ್ಯಾಂಡ್‌ – 1,197

    5. ಫುಡ್‌ಸ್ಟಫ್ಸ್‌ –ಸೌತ್‌ ಐಲ್ಯಾಂಡ್‌ – 1,867

    6. ಫಾರ್ಮ್‌ಲ್ಯಾಂಡ್ಸ್‌ ಕೋ ಆಪರೇಟಿವ್‌ ಸೊಸೈಟಿ -1,400

    7. ಬ್ಯಾಲೆನ್ಸ್‌ ಆಗ್ರಿ-ನ್ಯೂಟ್ರಿಶನ್ಸ್‌ -819

    8. ಲೈವ್‌ಸ್ಟಾಕ್‌ ಇಂಪ್ರೂವ್‌ಮೆಂಟ್‌ ಕಾರ್ಪೊರೇಶನ್‌ – 806

    9. ಎಫ್‌ಎಂಜಿ -750

    10. ರಾವೆನ್ಸ್‌ಡೌನ್‌ ಫರ್ಟಿಲೈಸರ್ಸ್‌ ಕೋ ಆಪರೇಟಿವ್‌ -650

    2020ರ ಅಂಕಿ ಅಂಶ ಪ್ರಕಾರ ನ್ಯೂಜಿಲೆಂಡ್‌ನಲ್ಲಿ ಅಗ್ರ 10 ಸಹಕಾರ ಸಂಘಗಳಲ್ಲಿರುವ ಸದಸ್ಯರು

    1. ಸದರ್ನ್‌ ಕ್ರಾಸ್‌ ಮೆಡಿಕಲ್‌ ಕೇರ್‌ ಸೊಸೈಟಿ – 8,79,198

    2. ದಿ ಕೋ ಆಪರೇಟಿವ್‌ ಬ್ಯಾಂಕ್‌ – 1,67,000

    3. ಯೂನಿಯನ್‌ ಬೆನೆಫಿಟ್ಸ್‌ ಮೆಡಿಕಲ್‌ ಸೊಸೈಟಿ – 91,909

    4. ಸೌತ್‌ಲ್ಯಾಂಡ್‌ ಬಿಲ್ಡಿಂಗ್‌ ಸೊಸೈಟಿ -78,928

    5. ಎಫ್‌ಎಂಜಿ -75,000

    6. ಫಾರ್ಮ್‌ಲ್ಯಾಂಡ್ಸ್‌ ಕೋ ಆಪರೇಟಿವ್‌ ಸೊಸೈಟಿ -72,000

    7. ಮೆಡಿಕಲ್‌ ಅಶೂರೆನ್ಸ್‌ ಸೊಸೈಟಿ -37,165

    8. ರಾವೆನ್ಸ್‌ಡೌನ್‌ ಫರ್ಟಿಲೈಸರ್ಸ್‌ ಕೋ ಆಪರೇಟಿವ್‌ -23,000

    9. ಸಿಲ್ವರ್‌ ಫರ್ನ್‌ ಫರ್ಮ್ಸ್‌ -21,016

    10. ಇಎ ನೆಟ್‌ವರ್ಕ್ಸ್‌ – 18,000

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Cooperative Fantera Co operative group GDP Newzealand Otago Sahakara Spandana Spandana NEws
    Previous Articleಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
    Next Article ಶ್ವೇತ ಕ್ರಾಂತಿಯ ಹರಿಕಾರ ವರ್ಗೀಸ್‌ ಕುರಿಯನ್‌ ಸಂಸ್ಮರಣೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.