Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ದೇಶದ ಮೊದಲ ಕ್ರೌಡ್‌ಫಂಡಿಂಗ್‌ ಫಿಲ್ಮ್‌ಗೆ ಪ್ರೊಡ್ಯೂಸರ್ಸ್‌ ಸಹಕಾರಿ ಬಂಧುಗಳು!
    News

    ದೇಶದ ಮೊದಲ ಕ್ರೌಡ್‌ಫಂಡಿಂಗ್‌ ಫಿಲ್ಮ್‌ಗೆ ಪ್ರೊಡ್ಯೂಸರ್ಸ್‌ ಸಹಕಾರಿ ಬಂಧುಗಳು!

    adminBy adminNovember 27, 2024

    ಭಾರತದ ಡೈರಿ ಚಳವಳಿಯ ನೈಜ ಕಥೆಯಾಧರಿಸಿದ ಸಿನಿಮಾ 1976ರಲ್ಲಿ ಬಿಡುಗಡೆ
    ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು ಅನಂತ್‌ನಾಗ್‌, ಗಿರೀಶ್‌ ಕಾರ್ನಾಡ್‌
    ದೇಶದ ಡೈರಿ ಚಳವಳಿಯ ದಿಕ್ಕನ್ನೇ ಬದಲಿಸಿತ್ತು ಹಾಲಿನ ಮನುಷ್ಯ ವರ್ಗೀಸ್‌ ಕುರಿಯನ್‌ ಪ್ರಯತ್ನ

    ಸಹಕಾರ ಕ್ಷೇತ್ರ ಇಂದು ಎಲ್ಲ ವಲಯಗಳಲ್ಲೂ ಮುಂಚೂಣಿಯಲ್ಲಿದೆ. ಹಣಕಾಸು, ಆರ್ಥಿಕ ವ್ಯವಹಾರ, ಕೃಷಿ, ಮೀನುಗಾರಿಕೆ, ಉದ್ಯಮ, ಹೈನುಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಸಹಕಾರಿಗಳು ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು ಎಂಬ ವಿಷಯ ಅನೇಕರಿಗೆ ತಿಳಿದಿಲ್ಲ.

    vinay kumar soorinje sahakara mahamandala scdcc bank training programme D.K Ditrict sahakara union https://chat.whatsapp.com/Ge11n7QCiMj5QyPvCc0H19
    ಇಂದು ಆರೋಗ್ಯ, ವಿದ್ಯಾಭ್ಯಾಸ, ಬಡವರ ಮನೆ ನಿರ್ಮಾಣಗಳಿಗೆ ಕ್ರೌಡ್‌ಫಂಡಿಂಗ್‌ ಸಾಮಾನ್ಯವಾಗಿದೆ. ಸಿನಿಮಾಕ್ಕೂ ಕ್ರೌಡ್‌ಫಂಡಿಂಗ್‌ ಮಾಡಲಾಗಿತ್ತು ಎಂಬುದು ಬಹಳ ಹಿಂದಿನ ಅಂದರೆ 48 ವರ್ಷಗಳ ಹಿಂದಿನ ಮಾತು. ದೇಶದ ಮೊದಲ ಕ್ರೌಡ್‌ಫಂಡಿಂಗ್‌ ಸಿನಿಮಾ ಎನಿಸಿರುವ ಶ್ಯಾಮ್‌ ಬೆನಗಲ್‌ ನಿರ್ದೇಶನದ “ಮಂಥನ್ʼʼ ಸಿನಿಮಾವನ್ನು ಕ್ರೌಡ್‌ಫಂಡಿಂಗ್‌ ಮೂಲಕವೇ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಐದು ಲಕ್ಷ ರೈತರು ಹಣ ತೊಡಗಿಸಿದ್ದು ಅವರೆಲ್ಲರೂ ಸಹಕಾರ ಕ್ಷೇತ್ರಕ್ಕೆ ಸೇರಿದವರು ಎಂಬುದು ಕುತೂಹಲಕಾರಿ ವಿಷಯ.
    1976ರಲ್ಲಿ ಬಿಡುಗಡೆಯಾದ ಮಂಥನ್ ಹಿಂದಿ ಸಿನಿಮಾ ಭಾರತದ ಡೈರಿ ಚಳವಳಿಯ ನೈಜ ಕಥೆಯನ್ನು ಆಧರಿಸಿದ್ದು, ದೇಶದ ಮಿಲ್ಕ್‌ಮ್ಯಾನ್‌ ಎಂಬ ಖ್ಯಾತಿ ಪಡೆದಿದ್ದ ಕ್ಷೀರ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಅವರ ಬಗ್ಗೆ ಬೆಳಕು ಚೆಲ್ಲಿತ್ತು. ಕರ್ನಾಟಕದ ಈಗಿನ ಹಿರಿಯ ನಟ ಅನಂತ್‌ನಾಗ್‌, ಗಿರೀಶ್‌ ಪಾಟೀಲ್‌, ಬಾಲಿವುಡ್‌ ಪ್ರಮುಖ ನಟರಾದ ನಾಸಿರುದ್ದೀನ್ ಶಾ , ಸ್ಮಿತಾ ಪಾಟೀಲ್ ಮತ್ತು ಅಮರೀಶ್ ಪುರಿ ಪ್ರಮುಖ ಪಾತ್ರದಲ್ಲಿದ್ದರು.



    ಚಿತ್ರ ನಿರ್ಮಾಣದ ಹಾದಿ ಬಹಳ ಕುತೂಹಲಕಾರಿಯಾಗಿತ್ತು. ಇದಕ್ಕಾಗಿ ಒಂದು ಸಣ್ಣ ಆಂದೋಲನ ನಡೆದಿದ್ದು, ಅದರಡಿಯಲ್ಲಿ, ಸಣ್ಣ ರೈತರು ಗುಜರಾತಿನ ಹಾಲು ಸಂಗ್ರಹಣಾ ಕೇಂದ್ರಗಳಿಗೆ ಬೆಳಳಗ್ಗೆ ಮತ್ತು ಸಂಜೆ ಹಾಲು ಮಾರಾಟ ಮಾಡಿದರು. ನಂತರ ಅದನ್ನು ಬೆಣ್ಣೆ ಮತ್ತು ಇತರ ಉತ್ಪನ್ನಗಳಾಗಿ ಸಂಸ್ಕರಿಸಲು ಡೈರಿಗಳಿಗೆ ಸಾಗಿಸಲಾಯಿತು. ಈ ಸಂಗ್ರಹಣಾ ಕೇಂದ್ರಗಳಿಂದ ಪ್ರತಿ ರೈತರಿಗೆ ನೀಡುವ ಹಣದಲ್ಲಿ ಎರಡು ರೂಪಾಯಿ ಕಡಿತ ಮಾಡುವಂತೆ ವರ್ಗೀಸ್‌ ಕುರಿಯನ್‌ ಸೂಚಿಸಿದರು. ತಮ್ಮದೇ ಚಲನಚಿತ್ರ ಎಂಬ ಕಾರಣಕ್ಕಾಗಿ ರೈತರು ಕೂಡ ಅದಕ್ಕೆ ಒಪ್ಪಿಕೊಂಡರು. ಅಂದರೆ ಆ ರೈತರೆಲ್ಲರೂ ಚಲನಚಿತ್ರದಲ್ಲಿ ನಿರ್ಮಾಪಕರೆನಿಸಿದರು. ರೈತರ ಈ ಸಂಖ್ಯೆ ಐದು ಲಕ್ಷ.! ಗುಜರಾತ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾಕ್ಕೆ ಅದ್ಭುತ ಬೆಂಬಲ ಲಭಿಸಿತು. ಏಕೆಂದರೆ ಹೆಚ್ಚಿನ ಪ್ರೇಕ್ಷಕರು ರೈತರು ಅಂದರೆ ಈ ಸಿನಿಮಾದ ನಿರ್ಮಾಪಕರೇ ಆಗಿದ್ದರು. ಸಿನಿಮಾದ ಯಶಸ್ಸು ಹೇಗಿತ್ತೆಂದರೆ ಈ ಚಿತ್ರ ನೋಡಲು ಟ್ರಕ್‌ ಲೋಡ್‌ಗಳಲ್ಲಿ ಜನ ಬರುತ್ತಿದ್ದರಂತೆ!


    ಮಂಥನ್‌ ಚಿತ್ರ ಮಾಡಿದ ಸಂದರ್ಭ ನಾಸಿರುದ್ದೀನ್ ಶಾ ಸಿನಿಮಾ ಜಗತ್ತಿಗೆ ಹೊಸಬರು. ಗಿರೀಶ್ ಕಾರ್ನಾಡ್ ಉನ್ನತ ನಟರಾಗಿದ್ದರು. ಅನಂತ್‌ನಾಗ್‌ ಕನ್ನಡ ಚಿತ್ರರಂಗದಲ್ಲಿ ಮೇರುನಟನಾಗಿ ಬೆಳೆಯುತ್ತಿದ್ದರು. ಅಮರೀಶ್ ಪುರಿ ನೆಗೆಟಿವ್ ಪಾತ್ರದಲ್ಲಿ ಹೆಸರು ಮಾಡುತ್ತಿದ್ದರು. ಹಳ್ಳಿಯ ಮಹಿಳೆಯರನ್ನು ಪ್ರತಿನಿಧಿಸುವ ಪಾತ್ರದಲ್ಲಿ ಸ್ಮಿತಾ ಪಾಟೀಲ್ ಕಾಣಿಸಿಕೊಂಡಿದ್ದರು. ಚಿತ್ರದ ಸಂಭಾಷಣೆ ಕೈಫಿ ಅಜ್ಮಿ, ಚಿತ್ರಕಥೆ ವರ್ಗೀಸ್ ಕುರಿಯನ್ ಮತ್ತು ಶ್ಯಾಮ್ ಬೆನಗಲ್ ಬರೆದಿದ್ದರು. ಗುಜರಾತ್‌ ಕೋ ಆಪರೇಟಿವ್‌ ಮಿಲ್ಕ್‌ ಮಾರ್ಕೆಟಿಂಗ್‌ ಕಂಪೆನಿ ಹೆಸರಲ್ಲಿ ಚಿತ್ರ ನಿರ್ಮಾಣವಾಗಿದ್ದು, ವನರಾಜ್‌ ಭಾಟಿಯಾ ಸಂಗೀತ ನಿರ್ದೇಶಿಸಿದ್ದರು. ಫಿಲ್ಮ್‌ ಫೇರ್‌ ಇದರ ಶೀಷೀಕೆ ಗೀತೆಗೆ ಪ್ರೀತಿ ಸಾಗರ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ನೀಡಿ ಗೌರವಿಸಿತ್ತು.
    ಎರಡು ಗಂಟೆ 14 ನಿಮಿಷಗಳ ಸಿನಿಮಾವು ಡೈರಿ ಸಹಕಾರ ಚಳವಳಿಯ ಮೇಲೆ ಬೆಳಕು ಚೆಲ್ಲಿತ್ತು. ಈ ಆಂದೋಲನವು ಭಾರತವನ್ನು ಹಾಲಿನ ಕೊರತೆಯ ದೇಶದಿಂದ ವಿಶ್ವದ ಅಗ್ರ ಹಾಲು ಉತ್ಪಾದಕ ರಾಷ್ಟ್ರವಾಗಿ ಪರಿವರ್ತಿಸಿತು.

     

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Ananthnag Banking Co Operative ministry Cooperative Cooperative Department Cooperative Registrar CrowdFunding Girish Karnad Gujarath Co Operative Milk Marketing Company Manthan Film Nasiruddien Shah Sahakara Spandana Shyam Benegal Souharda Sahakari Spandana Spandana Cooperative Spandana Trust vargies kurien
    Previous Articleಶ್ವೇತ ಕ್ರಾಂತಿಯ ಹರಿಕಾರ ವರ್ಗೀಸ್‌ ಕುರಿಯನ್‌ ಸಂಸ್ಮರಣೆ
    Next Article ಡಾ.ಅವಸ್ಥಿಗೆ ರಾಕ್‌ಡೇಲ್‌ ಪಯೋನಿಯರ್‌ ಪುರಸ್ಕಾರ ಪ್ರದಾನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.