103ನೇ ಜನ್ಮದಿನಾಚರಣೆ ಹಲವೆಡೆ ಆಚರಣೆ
ನವದೆಹಲಿ: ಭಾರತದ ಶ್ವೇತಕ್ರಾಂತಿಯ ಹರಿಕಾರ, ಹಾಲಿನ ಮನುಷ್ಯ ಎಂಬ ಖ್ಯಾತಿಯ ವರ್ಗೀಸ್ ಕುರಿಯನ್ ಅವರ ೧೦೩ನೇ ಜನ್ಮದಿನಾಚರಣೆ ಅಂಗವಾಗಿ ದೇಶಾದ್ಯಂತ ಹಲವೆಡೆ ಮಂಗಳವಾರ ಕಾರ್ಯಕ್ರಮಗಳು ನಡೆದಿದ್ದು ಅವರಿಗೆ ಗೌರವ ಸಲ್ಲಿಸಲಾಯಿತು. ಮೀನುಗಾರಿಕಾ, ಪಶುಸಂಗೋಪನಾ ಮತ್ತು ಹೈನುಗಾರಿಕೆ ಸಚಿವಾಲಯದ ವತಿಯಿಂದ ವರ್ಗೀಸ್ ಕುರಿಯನ್ ಸ್ಮರಣಾರ್ಥ ಕಾರ್ಯಕ್ರಮ ನಡೆದಿದ್ದು ರಾಜಕಾರಣಿಗಳು, ರೈತರು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಕುರಿಯನ್‌ಗೆ ನುಡಿನಮನ ಸಲ್ಲಿಸಿದರು.
https://chat.whatsapp.com/Ge11n7QCiMj5QyPvCc0H19
ವರ್ಗೀಸ್ ಕುರಿಯನ್ ಜನ್ಮದಿನ ಅಂಗವಾಗಿ ದೆಹಲಿಯ ಮಾಣೆಕ್ ಶಾ ಕೇಂದ್ರದಲ್ಲಿ ಅಮುಲ್ ಕ್ಲೀನ್ ಫ್ಯುಯೆಲ್ ರ್ಯಾಲಿ ನಡೆಯಿತು. ದೇಶಾದ್ಯಂತದ ಅಮುಲ್ ಕಂಪನಿಯ ಸದಸ್ಯರು, ನೌಕರರು ಪಾಲ್ಗೊಂಡು ದೇಶದ ಹಾಲಿನ ಡೇರಿ ಇತಿಹಾಸದ ಸಾಧನೆಗಳನ್ನು ಮೆಲುಕು ಹಾಕಿದರು. ಹಾಲು ಮತ್ತು ಹಾಲಿನ ಉತ್ಪನ್ನಗಳ ಉನ್ನತಿಗಾಗಿ ರೈತರು ಮತ್ತು ಪಶುಸಂಗೋಪನಾ ಇಲಾಖೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಮೆಲುಕು ಹಾಕಲಾಯಿತು.
ಮಹಿಳೆಯರ ನೇತೃತ್ವದಲ್ಲಿ ಜಾನುವಾರು ಮತ್ತು ಡೇರಿ ವಲಯ ಹಾಗೂ ಸ್ಥಳೀಯ ಪಶುವೈದ್ಯಕೀಯ ನೆರವಿನಿಂದ ರೈತರ ಸಬಲೀಕರಣ ಎಂಬ ವಿಷಯದಲ್ಲಿ ಚರ್ಚೆಗಳು ನಡೆಯಿತು. ಕೇಂದ್ರ ಸಚಿವರಾದ ರಾಜೀವ್ ರಂಜನ್ ಸಿಂಗ್, ರಾಜ್ಯ ಖಾತೆಯ ಸಚಿವ ಎಸ್.ಪಿ.ಸಿಂಗ್ ಬಾಘೇಲ್ ಮತ್ತು ಜಾರ್ಜ್ ಕುರಿಯನ್ ಭಾಗವಹಿಸಿದ್ದರು.
ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಗೋಪಾಲ ರತ್ನ ಪುರಸ್ಕಾರ ಪ್ರದಾನ ಮಾಡಲಾಯಿತು. ಅತ್ಯುತ್ತಮ ಹೈನುಗಾರ ರೈತ, ಅತ್ಯುತ್ತಮ ಕೃತಕ ಗರ್ಭಧಾರಣೆ ತಂತ್ರಜ್ಞ ಮತ್ತು ಅತ್ಯುತ್ತಮ ಹಾಲು ಉತ್ಪಾದಕ ಸಹಕಾರಿ ಸಂಘ ಈ ವಿಭಾಗದಲ್ಲಿ ಪುರಸ್ಕಾರ ನೀಡಲಾಯಿತು. ಈಶಾನ್ಯ ಭಾಗದ ರೈತರು ಹೈನುಗಾರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಪುರಸ್ಕಾರಗಳನ್ನು ನೀಡಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com