Author: admin
ಡಿಜಿಟಲ್ ಫೈನಾನ್ಸ್ ಮೋಸದ ಬಗ್ಗೆ ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಆತಂಕ ನವದೆಹಲಿ: ಡಿಜಿಟಲ್ ಫೈನಾನ್ಸ್ ವ್ಯವಸ್ಥೆಯಿಂದ ಉಂಟಾಗುತ್ತಿರುವ ಸೈಬರ್ ವಂಚನೆ ಹಾಗೂ ಹಣಕಾಸಿನ ಮೋಸಗಳ ಬಗ್ಗೆ ಕೇಂದ್ರ ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಆತಂಕ ವ್ಯಕ್ತಪಡಿಸಿದೆ. ಸೈಬರ್ ಕ್ರೈಂನಿಂದ ಕೋ ಆಪರೇಟಿವ್ ಸೊಸೈಟಿಗಳು, ವ್ಯಾಪಾರಿಗಳು, ಮಾರಾಟಗಾರರು, ಸಣ್ಣ ಪ್ರಮಾಣದ ಹಣಕಾಸು ಸಂಸ್ಥೆಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ ಎಂದು ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರದ ಗಮನ ಸೆಳೆದಿದೆ. https://chat.whatsapp.com/Ge11n7QCiMj5QyPvCc0H19 ಸ್ಥಾಯಿ ಸಮಿತಿ ಅಧ್ಯಕ್ಷ ಭತೃಹರಿ ಮಹ್ತಾಬ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳಾಗಿದ್ದು, ಸೈಬರ್ ಕ್ರೈಂನಿಂದ ಕೋ ಆಪರೇಟಿವ್ ಸೊಸೈಟಿಗಳು ಹೆಚ್ಚಿನ ಆತಂಕ ಎದುರಿಸುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಸಂಘಗಳೇ ಸೈಬರ್ ವಂಚನೆಯ ಜಾಲಕ್ಕೆ ಹೆಚ್ಚಾಗಿ ಸಿಲುಕುತ್ತಿವೆ, ದುರ್ಬಲ ಸೈಬರ್ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ನಿಧಾನಗತಿಯ ಅನುಷ್ಠಾನಗಳಿಂದಾಗಿ ಕೋ ಆಪರೇಟಿವ್ ಸೊಸೈಟಿಗಳು ಈ ವಂಚನಾ ಜಾಲಕ್ಕೆ ಸಿಲುಕುತ್ತಿವೆ ಎಂದೂ…
ಮಂಗಳೂರು: ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಮುಂದಿನ ಐದು ವರ್ಷಗಳ ಅವಧಿಗೆ ಜಿ.ಆರ್ ಪ್ರಸಾದ್ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. https://chat.whatsapp.com/Ge11n7QCiMj5QyPvCc0H19 ಪ್ರಣವ ಸೌಹಾರ್ದ ಸಹಕಾರಿಯ ಸ್ಥಾಪಕ ಅಧ್ಯಕ್ಷರೂ ಆಗಿರುವ ಜಿ.ಆರ್ ಪ್ರಸಾದ್ ಅವರು ಕಳೆದೊಂದು ದಶಕದಲ್ಲಿ ಪ್ರಣವ ಸಂಸ್ಥೆಯ ಉತ್ತಮ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದರು. ಪ್ರಸಕ್ತ ಸಹಕಾರ ಭಾರತಿ ಮಂಗಳೂರು ಮಹಾನಗರದ ಅಧ್ಯಕ್ಷರೂ ಆಗಿದ್ದು ಸಾವಯವ ಕೃಷಿಕ ಗ್ರಾಹಕರ ಬಳಗ ಮಂಗಳೂರು ಇದರ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿ ಜಿ.ಪ್ರಶಾಂತ್ ಪೈ ಮತ್ತು ನಿರ್ದೇಶಕರಾಗಿ ಸೋಮಪ್ಪ ನಾಯ್ಕ್ , ದಯಾಸಾಗರ ಪೂಂಜಾ, ರವೀಂದ್ರನಾಥ್ ಪಿ., ಎಚ್.ಸುಬ್ರಹ್ಮಣ್ಯ ಭಟ್, ರವಿಶಂಕರ್ ಪಿ.ಎನ್, ಪದ್ಮರಾಜ್ ಬಲ್ಲಾಳ್, ಜಯಲಕ್ಷ್ಮಿ ಚಂದ್ರಹಾಸ್, ಮೀರಾ ಕರ್ಕೇರ , ಭಗವಾನ್‌ದಾಸ್ ಅಡ್ಯಂತಾಯ, ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ, ಪ್ರೊಫೆಸರ್ ವೆಂಕಟೇಶ್ವರ, ಜಗದೀಶ್ ಶೆಟ್ಟಿ ಬಿಜೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೃತ್ತಿಪರ ನಿರ್ದೇಶಕರಾಗಿ ಸಿಎ ಮಮತಾ ರಾವ್, ಅಡ್ವೊಕೇಟ್ ಸತೀಶ್ ಕುಮಾರ್ ಭಟ್ ಮತ್ತು ಕ್ರಿಯಾತ್ಮಕ ನಿರ್ದೇಶಕರಾಗಿ…
ದೇಶದಲ್ಲಿದೆ 6.21 ಲಕ್ಷ ಸಹಕಾರ ಸಂಘಗಳು, 28 ಕೋಟಿ ಸದಸ್ಯರು ನವದೆಹಲಿ: ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಅನ್ವಯ ದೇಶದ ಜನಸಂಖ್ಯೆಯ ಶೇ.20ರಷ್ಟು ಜನ ಸಹಕಾರಿ ಸಂಸ್ಥೆಗಳ ಸದಸ್ಯರಾಗಿದ್ದಾರೆ. ರಾಜ್ಯಸಭೆಯಲ್ಲಿ ಅಂಕಿ -ಅಂಶಗಳ ದಾಖಲೆ ಪ್ರಸ್ತುತಪಡಿಸಿ ಮಾತನಾಡಿದ ಸಹಕಾರ ಸಚಿವ ಅಮಿತ್ ಷಾ, ದೇಶದಲ್ಲಿ 6,21,514 ಕೋ ಆಪರೇಟಿವ್ ಸೊಸೈಟಿಗಳು ಕಾರ್ಯನಿರ್ವಹಿಸುತ್ತಿದ್ದು, 28,69,74,425 ಸಕ್ರಿಯ ಸದಸ್ಯರು ಇದ್ದಾರೆ ಎಂದು ಮಾಹಿತಿ ನೀಡಿದರು. https://chat.whatsapp.com/Ge11n7QCiMj5QyPvCc0H19 ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಹಕಾರ ಸಂಘಗಳಿದ್ದು ಅಲ್ಲಿ ಪ್ರಸಕ್ತ 2,15,316 ಸೊಸೈಟಿಗಳು ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರದಲ್ಲಿ 7,96,65,337 ಜನ ಕೋ ಆಪರೇಟಿವ್ ಸೊಸೈಟಿಯ ಸದಸ್ಯರಿದ್ದು ಇದು ದೇಶದಲ್ಲೇ ರಾಜ್ಯವೊಂದರಲ್ಲಿ ಕೋ ಆಪರೇಟಿವ್ ಸದಸ್ಯತ್ವದ ಅತಿ ಹೆಚ್ಚು ಸಂಖ್ಯೆ. ಮಹಾರಾಷ್ಟ್ರದ ಈ ಅಂಕಿ ಅಂಶಗಳು ಅಲ್ಲಿನ ಸಹಕಾರ ಕ್ಷೇತ್ರದ ಶ್ರೀಮಂತ ಇತಿಹಾಸ ಮತ್ತು ಸಹಕಾರಿ ಚಳುವಳಿಗಳಲ್ಲಿ, ವಿಶೇಷವಾಗಿ ಕೃಷಿ, ಡೈರಿ ಮತ್ತು ಗ್ರಾಮೀಣ ಬ್ಯಾಂಕಿಂಗ್‌ನಂತಹ ಕ್ಷೇತ್ರಗಳಲ್ಲಿ ಬಲವಾದ ಸಾಂಸ್ಥಿಕ ಚೌಕಟ್ಟನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಸಹಕಾರ ಕ್ಷೇತ್ರದ ಬೇರು…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಜರುಗಿತು. https://chat.whatsapp.com/Ge11n7QCiMj5QyPvCc0H19 ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಗೌರವ ಉಪಸ್ಥಿತಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ ಅವರು 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಕ್ಷೇತ್ರದ ಮ್ಯಾನೇಜರ್ ಜೆ.ಕಿಶೋರ್ ಮಜಿಲ, ಟ್ರಸ್ಟಿಗಳಾದ ವಾಮನ್ ಪೂಜಾರಿ, ವಿಠ್ಠಲ ಪೂಜಾರಿ , ದಿವರಾಜ್ , ದಿನೇಶ್ ಅಂಚನ್ , ಜಗದೀಪ್ ಸುವರ್ಣ, ಚಂದ್ರನಾಥ್ ಅತ್ತಾವರ್ ಹಾಗೂ ಮಾಜಿ ಟ್ರಸ್ಟಿ ಮೋಹನ್ ನೆಕ್ಕರೆಮಾರ್, ಮ.ನ.ಪಾ ಸದಸ್ಯ ಸಂದೀಪ್ ಗರೋಡಿ, ಮತ್ತು ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ಸಂಘದ ನಿರ್ದೆಶಕರಾದ ದಿವಾಕರ್ ಬಿ.ಪಿ., ಗೋಪಾಲ್ ಎಂ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಕ್ರೆಡಿಟ್ ಸೌಹಾರ್ದ ಕೋ ನಿಯಮಿತ ಅಧ್ಯಕ್ಷರಾಗಿ ರವೀಂದ್ರನಾಥ್ ಶೆಟ್ಟಿ, ಉಪಾಧ್ಯಕ್ಷರಾಗಿ ದಿನಕರ ಪೂಂಜ ಆಯ್ಕೆ
ಮಂಗಳೂರು: ನಿವೃತ್ತ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಕ್ರೆಡಿಟ್ ಸೌಹಾರ್ದ ಕೋ ನಿಯಮಿತ, ಶೇಡಿಗುರಿ, ಮಂಗಳೂರು ಇದರ ಆಡಳಿತ ಮಂಡಳಿಯ 2024-2029ರ ಅವಧಿಗೆ ಚುನಾವಣೆ ನಡೆದು 13 ಸದಸ್ಯರು ಅವಿರೋಧವಾಗಿ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. https://chat.whatsapp.com/Ge11n7QCiMj5QyPvCc0H19 ಈ ಪೈಕಿ ಗುರುವಾರ ನಡೆದ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ರವೀಂದ್ರನಾಥ್ ಶೆಟ್ಟಿ ಅಧ್ಯಕ್ಷರಾಗಿ, ದಿನಕರ ಪೂಂಜ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರವೀಂದ್ರನಾಥ್ ಶೆಟ್ಟಿ, ದಿನಕರ ಪೂಂಜ ಜೊತೆಗೆ, ಕೆ.ಟಿ. ರೈ, ಉದಯ ಕುಮಾರ, ಟಿ.ವಿ. ರೈ, ಕೆ.ನರೇಂದ್ರನಾಥ ಕಾಮತ್, ಶಾಲಿನಿ ಶೆಟ್ಟಿ, ಪ್ರೇಮನಾಥ ಜಿ, ಶಾಮಸುಂದರ ರಾವ್, ಶೋಭಾ ರಾವ್, ಜೆ.ವಿ ಶೆಟ್ಟಿ, ಸದಾಶಿವ ವಿ.ಎಸ್, ದಿನಕರ್ ರೈ ನಿರ್ದೇಶಕರಾಗಿ ಇರಲಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಕಾರ್ಕಳ: ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ ಕುಕ್ಕುಂದೂರು ಕಾರ್ಕಳ ಇದರ 2025ರ ಕ್ಯಾಲೆಂಡರ್ ಅನ್ನು ಸಂಘದ ಪ್ರಧಾನ ಕಛೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. https://chat.whatsapp.com/Ge11n7QCiMj5QyPvCc0H19 ಸಂಘದ ಅಧ್ಯಕ್ಷ ಸಂತೋಷ್ ರಾವ್. ಉಪಾಧ್ಯಕ್ಷ ವೃಷಭರಾಜ್ ಕಡಂಬ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಶ್ರೀ, ನಿರ್ದೇಶಕರಾದ ತ್ರಿವಿಕ್ರಮ ಕಿಣಿ, ಯೋಗೀಶ್ ಸಾಲಿಯಾನ್, ಸಂದೀಪ್ ನಾಯಕ್, ದಿನೇಶ್ ಕುಮಾರ್ ವೈ, ಪಾಂಡುರಂಗ ನಾಯಕ್, ಸಂಜೀವ ನಾಯ್ಕ ಹಾಗೂ ಅನಿಲ್ ಕುಮಾರ್ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
25 ರಾಜ್ಯಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅರ್ಜಿ ನವದೆಹಲಿ: ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 286 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತೈಲ ಮಾರುಕಟ್ಟೆ ಕಂಪನಿ(ಒಎಂಸಿ)ಗಳ ಸಹಯೋಗದೊಂದಿಗೆ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಔಟ್‌ಲೆಟ್‌ಗಳನ್ನು ಸ್ಥಾಪಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ. https://chat.whatsapp.com/Ge11n7QCiMj5QyPvCc0H19 ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮಿತ್ ಷಾ, ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಔಟ್‌ಲೆಟ್‌ಗಳನ್ನು ಸ್ಥಾಪಿಸಲು ನಾಲ್ಕು ರಾಜ್ಯಗಳ 109 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅರ್ಜಿ ಸಲ್ಲಿಸಿದ ಬಳಿಕದ ಕೆಲವೊಂದು ವಿಧಿವಿಧಾನಗಳನ್ನೂ ಪೂರೈಸಿದ್ದು 45 ಸೊಸೈಟಿಗಳಿಗೆ ಈಗಾಗಲೇ ಉದ್ದೇಶ ಪತ್ರಗಳನ್ನೂ ವಿತರಿಸಲಾಗಿದೆ ಎಂದು ಹೇಳಿದರು. ಸಹಕಾರ ಸಂಘಗಳನ್ನು ಇನ್ನಷ್ಟು ಬಲಪಡಿಸುವ, ಗ್ರಾಮೀಣ ಜೀವನಮಟ್ಟವನ್ನು ಸುಧಾರಿಸುವ ಮತ್ತು ಅಗತ್ಯ ಸೇವೆಗಳಿಗೆ ಸೊಸೈಟಿಗಳ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಮಹತ್ವದ ಉಪಕ್ರಮಗಳ ಬಗ್ಗೆ ಅಮಿತ್ ಷಾ ಮಾಹಿತಿ…
ಲೋಕಸಭೆಯಲ್ಲಿ ಸಹಕಾರ ಸಚಿವ ಅಮಿತ್ ಷಾ ಮಾಹಿತಿ ನವದೆಹಲಿ: ಸಹಕಾರಿ ಉದ್ಯಮ ಬೆಂಬಲ ಮತ್ತು ನಾವೀನ್ಯತಾ ಯೋಜನೆಯ ಯುವ -ಸಹಕಾರ ಸ್ಕೀಮ್‌ನಡಿ ವಿವಿಧ ಸಹಕಾರ ಸಂಘಗಳ 19 ಸಾವಿರ ಸದಸ್ಯರಿಗೆ ಉಪಯೋಗವಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. https://chat.whatsapp.com/Ge11n7QCiMj5QyPvCc0H19 ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, 2024ರ ನವೆಂಬರ್ 30ರ ಅಂಕಿ ಅಂಶಗಳ ಪ್ರಕಾರ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ(ಎನ್‌ಸಿಡಿಸಿ)ವು 4,734.97 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಯುವ ಸಹಕಾರ ಯೋಜನೆಯಡಿ ಮಂಜೂರು ಮಾಡಿದೆ. ಇದರಿಂದ 18,915 ಸಹಕಾರಿ ಸದಸ್ಯರಿಗೆ ಪ್ರಯೋಜನವಾಗಿದೆ, 294.44 ಲಕ್ಷ ರೂಪಾಯಿಗಳನ್ನು ಈಗಾಗಲೇ ವಿತರಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ 230.61 ಲಕ್ಷ ರೂ. ಮಂಜೂರಾಗಿದ್ದು, 89.88 ಲಕ್ಷ ರೂ. ವಿತರಿಸಲಾಗಿದೆ ಎಂದು ಹೇಳಿದರು. ಆದರೂ ಹಿಮಾಚಲ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಯುವ ಸಹಕಾರ ಯೋಜನೆಯ ಕುರಿತು ಯಾವುದೇ ಪ್ರಸ್ತಾವನೆಗಳು ಬಂದಿಲ್ಲ. ಇದು ಈ ರಾಜ್ಯಗಳಲ್ಲಿ ಈ ಯೋಜನೆಯ ಅರಿವಿನ…
ಮಂಗಳೂರು: ಅಡಿಕೆ ಉತ್ಪನ್ನಗಳ ನ್ಯಾಯಯುತ ನಿಯಂತ್ರಣಕ್ಕಾಗಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಪತ್ರ ಬರೆದಿರುವ ಕ್ಯಾಂಪ್ಕೊ ಅಧ್ಯಕ್ಷರು, ನೂತನವಾಗಿ ಅಧಿಕಾರ ವಹಿಸಿಕೊಂಡ ಮುಖ್ಯಮಂತ್ರಿ ಅವರನ್ನು ಅಭಿನಂದಿಸಿದ್ದು, ಮಹಾರಾಷ್ಟ್ರದಲ್ಲಿ ದೀರ್ಘಕಾಲೀನ ನಿಷೇಧದಲ್ಲಿರುವ ಸುವಾಸನೆಯ ಸುಪಾರಿ ಉತ್ಪನ್ನಗಳ ಮೇಲಿನ ನಿಷೇಧ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. 2013ರಿಂದ ಮಹಾರಾಷ್ಟ್ರದಲ್ಲಿ ಸುವಾಸನೆಯ ಸುಪಾರಿ ಉತ್ಪನ್ನಗಳ ವಾರ್ಷಿಕ ನಿಷೇಧ ಮಾಡಲಾಗಿದ್ದು, ಈ ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲು ಒತ್ತಾಯಿಸಿದ್ದಾರೆ. ಈ ನಿಷೇಧವು ರೈತರು, ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನಗತ್ಯ ತೊಂದರೆಗಳನ್ನು ಉಂಟುಮಾಡುತ್ತಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷರು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದ್ದಾರೆ. https://chat.whatsapp.com/Ge11n7QCiMj5QyPvCc0H19 ಕ್ಯಾಂಪ್ಕೊದ ಸುವಾಸನೆಯ ಸುಪಾರಿ ಉತ್ಪನ್ನಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯನ್ನು ಸಂಪೂರ್ಣವಾಗಿ ಅನುಸರಿಸುತ್ತವೆ ಮತ್ತು ತಂಬಾಕು, ಗುಟ್ಕಾ ಅಥವಾ ಪಾನ್ ಮಸಾಲಾಗಳಂತಹ ಹಾನಿಕಾರಕ ಉತ್ಪನ್ನಗಳಿಂದ ಭಿನ್ನವಾಗಿವೆ ಎಂದು ಕಿಶೋರ್ ಕುಮಾರ್ ಕೊಡ್ಗಿಯವರು ಮನವಿಯಲ್ಲಿ ಒತ್ತಿ…
ಮಂಗಳೂರು: ಎಸ್.ಕೆ. ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 2025ನೇ ಸಾಲಿನ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಎಸ್.ಕೆ. ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಆಡಳಿತ ಕಚೇರಿ “ವಿಶ್ವ ಸೌಧ”ದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ, ಉಪಾಧ್ಯಕ್ಷ ಎ.ಆನಂದ ಆಚಾರ್ಯ, ನಿರದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ಜಯ ವಿ.ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಹಾಗೂ ಪುತ್ತೂರು ಶಾಖಾ ಪ್ರಭಾರ ವ್ಯವಸ್ಥಾಪಕ ಕಿರಣ್ ಬಿ.ವಿ. ಉಪಸ್ಥಿತಿಯಲ್ಲಿ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆಗೊಳಿಸಲಾಯಿತು. https://chat.whatsapp.com/Ge11n7QCiMj5QyPvCc0H19
