Author: admin

ಸಹಕಾರ ರತ್ನ ಡಾ.ಹರೀಶ್ ಆಚಾರ್ಯರಿಗೆ ಅಭಿನಂದಿಸಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ಮಂಗಳೂರು: ರಾಜ್ಯ ಸರಕಾರದಿಂದ ಇತ್ತೀಚೆಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಆರ್. ಹರೀಶ್ ಆಚಾರ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಸಹಕಾರ ಬ್ಯಾಂಕ್ ಹಿತೈಷಿಗಳ ಬಳಗ ಮತ್ತು ಸಹಕಾರಿ ಮಿತ್ರರು ಆಶ್ರಯದಲ್ಲಿ ರಥಬೀದಿಯ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು. ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರಿನ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. https://chat.whatsapp.com/Ge11n7QCiMj5QyPvCc0H19 ಪಡುಕುತ್ಯಾರಿನ ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಬದುಕು ಒಳ್ಳೆಯತನದಲ್ಲಿ ಇನ್ನೊಬ್ಬರಿಗೆ ಆದರ್ಶವಾಗಿರಬೇಕು. ನಮ್ಮ ನಡೆ -ನುಡಿಗಳು, ಬದುಕಿನ ರೀತಿ ದೇವರು ಮೆಚ್ಚುವಂತಿರಬೇಕು ಎಂದು ಹೇಳಿದರು. ಸಹಕಾರ ಕ್ಷೇತ್ರದಲ್ಲಿ ಮಾಡಿರುವ…

Read More

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ, ವಿಶ್ವಕರ್ಮ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯ ಅವರಿಗೆ ಡಿಸೆಂಬರ್‌ 1ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. https://chat.whatsapp.com/Ge11n7QCiMj5QyPvCc0H19 ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಸಹಕಾರ ಬ್ಯಾಂಕ್‌ ಹಿತೈಷಿಗಳ ಬಳಗ ಮತ್ತು ಸಹಕಾರಿ ಮಿತ್ರರು ಕಾರ್ಯಕ್ರಮ ಹಮ್ಮಿಕೊಂಡಿದ್ದು ಡಿಸೆಂಬರ್‌ 1ರಂದು ಸಂಜೆ 5 ಗಂಟೆಗೆ ಕಾರ್‌ಸ್ಟ್ರೀಟ್‌ ಪಟ್ಟೆ ಲಿಂಗಪ್ಪಾಚಾರ್ಯ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 5ರಿಂದ ವಿಶ್ವಾಸ್‌ ಕೃಷ್ಣ ಮತ್ತು ಬಳಗದವರಿಂದ ಪಿಟೀಲು ವಾದನ -ಸಂವಾದನ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಡುಕುತ್ಯಾರು ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಹಕಾರಿ ಮಿತ್ರರು ಹಾಗೂ ಗಣ್ಯರು ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯ ಅವರನ್ನು ಅಭಿನಂದಿಸಲಿದ್ದಾರೆ. ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರೂ…

Read More

ಸಹಕಾರಿ ಕ್ಷೇತ್ರದ ಅಧ್ಯಯನ ಹಾಗೂ ಉದ್ಯೋಗ ಬಯಸುವವರಿಗೆ ಪೂರಕವಾಗುವಂತೆ ವಿವಿ ಸ್ಥಾಪನೆಯ ನಿರೀಕ್ಷೆ ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಬಾರಿಯ ಅಧಿವೇಶನದಲ್ಲೇ ಬಹುನಿರೀಕ್ಷಿತ ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಮಸೂದೆಯನ್ನು ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಸಹಕಾರಿ ಕ್ಷೇತ್ರದ ಅಧ್ಯಯನ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗೆ ಪೂರಕವಾಗುವಂತೆ ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಅಗತ್ಯ ಮಸೂದೆಯನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಲಾಗುವುದು. ಸಹಕಾರ ನಿರ್ವಹಣೆಯ ಕೋರ್ಸುಗಳಿಗಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪಿಸಲಿದೆ. ದೇಶದಲ್ಲಿ ಸಹಕಾರಿ ಚಳವಳಿಯ ತಳಹದಿಯನ್ನು ಗಟ್ಟಿ ಮಾಡಲು ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಷಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು. https://chat.whatsapp.com/Ge11n7QCiMj5QyPvCc0H19 ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿ ಹೊರಬರುವ ವಿದ್ಯಾರ್ಥಿಗಳಿಗೆ ಸಹಕಾರಿ ವಲಯದಲ್ಲಿ ವಿಪುಲ ಅವಕಾಶಗಳು ಸೃಷ್ಟಿಯಾಗಲಿವೆ. ಸಹಕಾರ ನಿರ್ವಹಣೆಯ…

Read More

ವರ್ಗೀಸ್‌ ಕುರಿಯನ್‌ ಬಳಿಕ ಈ ಪ್ರಶಸ್ತಿ ಪಡೆದ ಎರಡನೇ ಭಾರತೀಯನೆಂಬ ಹೆಗ್ಗಳಿಕೆ ನವದೆಹಲಿ: ಭಾರತೀಯ ರೈತರ ರಸಗೊಬ್ಬರ ಸಹಕಾರಿ ಲಿಮಿಟೆಡ್ನ (ಇಫ್ಕೋ) ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ.ಯು.ಎಸ್‌.ಅವಸ್ಥಿ ಅವರಿಗೆ ಮಂಗಳವಾರ ಪ್ರಸಕ್ತ ಸಾಲಿನ ಐಸಿಎ(ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ)ದ ಪ್ರತಿಷ್ಠಿತ ರಾಕ್‌ಡೇಲ್‌ ಪಯೋನಿಯರ್ಸ್‌ ಪುರಸ್ಕಾರ ಪ್ರದಾನ ಮಾಡಲಾಯಿತು. https://chat.whatsapp.com/Ge11n7QCiMj5QyPvCc0H19 ದೆಹಲಿಯಲ್ಲಿ ನಡೆಯುತ್ತಿರುವ ಐಸಿಎ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಯಿತು. 2000ನೇ ಇಸವಿಯಲ್ಲಿ ಈ ಪುರಸ್ಕಾರ ನೀಡುವುದನ್ನು ಆರಂಭಿಸಲಾಗಿದ್ದು, ಇದು ಸಹಕಾರಿ ವಲಯದಲ್ಲಿ ನೀಡುತ್ತಿರುವ ಉತ್ಕೃಷ್ಟ ಸೇವೆಗೆ ಸಹಕಾರಿ ಸಾಧಕ ವ್ಯಕ್ತಿ ಅಥವಾ ಸಂಸ್ಥೆಗೆ ಐಸಿಎ ನೀಡುತ್ತಿರುವ ಅತ್ಯುನ್ನತ ಪುರಸ್ಕಾರವಾಗಿದೆ. ಡಾ.ಅವಸ್ಥಿ ಈ ಪುರಸ್ಕಾರ ಪಡೆಯುತ್ತಿರುವ ಎರಡನೇ ಭಾರತೀಯರಾಗಿದ್ದು, 2001ರಲ್ಲಿ ಡಾ.ವರ್ಗೀಸ್‌ ಕುರಿಯನ್‌ ಈ ಪುರಸ್ಕಾರ ಪಡೆದಿದ್ದ ಮೊದಲ ಭಾರತೀಯ ಎನಿಸಿದ್ದರು. ಐಸಿಎ ಅಧ್ಯಕ್ಷ ಆರಿಯಲ್‌ ಗ್ವಾರ್ಕೋ ಡಾ.ಅವಸ್ಥಿ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು. ಇಫ್ಕೋ ಆಶ್ರಯದಲ್ಲಿ ನವದೆಹಲಿಯಲ್ಲಿ ಐಸಿಎಯ ಸಾಮಾನ್ಯ ಸಭೆ ಮತ್ತು ಜಾಗತಿಕ ಸಹಕಾರ ಅಧಿವೇಶನ ನಡೆಯುತ್ತಿದ್ದು ನ.30ರಂದು ಕೊನೆಗೊಳ್ಳಲಿದೆ. ಡಾ.ಅವಸ್ಥಿ…

Read More

ಭಾರತದ ಡೈರಿ ಚಳವಳಿಯ ನೈಜ ಕಥೆಯಾಧರಿಸಿದ ಸಿನಿಮಾ 1976ರಲ್ಲಿ ಬಿಡುಗಡೆ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು ಅನಂತ್‌ನಾಗ್‌, ಗಿರೀಶ್‌ ಕಾರ್ನಾಡ್‌ ದೇಶದ ಡೈರಿ ಚಳವಳಿಯ ದಿಕ್ಕನ್ನೇ ಬದಲಿಸಿತ್ತು ಹಾಲಿನ ಮನುಷ್ಯ ವರ್ಗೀಸ್‌ ಕುರಿಯನ್‌ ಪ್ರಯತ್ನ ಸಹಕಾರ ಕ್ಷೇತ್ರ ಇಂದು ಎಲ್ಲ ವಲಯಗಳಲ್ಲೂ ಮುಂಚೂಣಿಯಲ್ಲಿದೆ. ಹಣಕಾಸು, ಆರ್ಥಿಕ ವ್ಯವಹಾರ, ಕೃಷಿ, ಮೀನುಗಾರಿಕೆ, ಉದ್ಯಮ, ಹೈನುಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಸಹಕಾರಿಗಳು ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು ಎಂಬ ವಿಷಯ ಅನೇಕರಿಗೆ ತಿಳಿದಿಲ್ಲ. https://chat.whatsapp.com/Ge11n7QCiMj5QyPvCc0H19 ಇಂದು ಆರೋಗ್ಯ, ವಿದ್ಯಾಭ್ಯಾಸ, ಬಡವರ ಮನೆ ನಿರ್ಮಾಣಗಳಿಗೆ ಕ್ರೌಡ್‌ಫಂಡಿಂಗ್‌ ಸಾಮಾನ್ಯವಾಗಿದೆ. ಸಿನಿಮಾಕ್ಕೂ ಕ್ರೌಡ್‌ಫಂಡಿಂಗ್‌ ಮಾಡಲಾಗಿತ್ತು ಎಂಬುದು ಬಹಳ ಹಿಂದಿನ ಅಂದರೆ 48 ವರ್ಷಗಳ ಹಿಂದಿನ ಮಾತು. ದೇಶದ ಮೊದಲ ಕ್ರೌಡ್‌ಫಂಡಿಂಗ್‌ ಸಿನಿಮಾ ಎನಿಸಿರುವ ಶ್ಯಾಮ್‌ ಬೆನಗಲ್‌ ನಿರ್ದೇಶನದ “ಮಂಥನ್ʼʼ ಸಿನಿಮಾವನ್ನು ಕ್ರೌಡ್‌ಫಂಡಿಂಗ್‌ ಮೂಲಕವೇ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಐದು ಲಕ್ಷ ರೈತರು ಹಣ ತೊಡಗಿಸಿದ್ದು ಅವರೆಲ್ಲರೂ ಸಹಕಾರ ಕ್ಷೇತ್ರಕ್ಕೆ ಸೇರಿದವರು ಎಂಬುದು ಕುತೂಹಲಕಾರಿ ವಿಷಯ. 1976ರಲ್ಲಿ…

Read More

103ನೇ ಜನ್ಮದಿನಾಚರಣೆ ಹಲವೆಡೆ ಆಚರಣೆ ನವದೆಹಲಿ: ಭಾರತದ ಶ್ವೇತಕ್ರಾಂತಿಯ ಹರಿಕಾರ, ಹಾಲಿನ ಮನುಷ್ಯ ಎಂಬ ಖ್ಯಾತಿಯ ವರ್ಗೀಸ್‌ ಕುರಿಯನ್‌ ಅವರ ೧೦೩ನೇ ಜನ್ಮದಿನಾಚರಣೆ ಅಂಗವಾಗಿ ದೇಶಾದ್ಯಂತ ಹಲವೆಡೆ ಮಂಗಳವಾರ ಕಾರ್ಯಕ್ರಮಗಳು ನಡೆದಿದ್ದು ಅವರಿಗೆ ಗೌರವ ಸಲ್ಲಿಸಲಾಯಿತು. ಮೀನುಗಾರಿಕಾ, ಪಶುಸಂಗೋಪನಾ ಮತ್ತು ಹೈನುಗಾರಿಕೆ ಸಚಿವಾಲಯದ ವತಿಯಿಂದ ವರ್ಗೀಸ್‌ ಕುರಿಯನ್‌ ಸ್ಮರಣಾರ್ಥ ಕಾರ್ಯಕ್ರಮ ನಡೆದಿದ್ದು ರಾಜಕಾರಣಿಗಳು, ರೈತರು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಕುರಿಯನ್‌ಗೆ ನುಡಿನಮನ ಸಲ್ಲಿಸಿದರು. https://chat.whatsapp.com/Ge11n7QCiMj5QyPvCc0H19 ವರ್ಗೀಸ್‌ ಕುರಿಯನ್‌ ಜನ್ಮದಿನ ಅಂಗವಾಗಿ ದೆಹಲಿಯ ಮಾಣೆಕ್‌ ಶಾ ಕೇಂದ್ರದಲ್ಲಿ ಅಮುಲ್‌ ಕ್ಲೀನ್‌ ಫ್ಯುಯೆಲ್‌ ರ್ಯಾಲಿ ನಡೆಯಿತು. ದೇಶಾದ್ಯಂತದ ಅಮುಲ್‌ ಕಂಪನಿಯ ಸದಸ್ಯರು, ನೌಕರರು ಪಾಲ್ಗೊಂಡು ದೇಶದ ಹಾಲಿನ ಡೇರಿ ಇತಿಹಾಸದ ಸಾಧನೆಗಳನ್ನು ಮೆಲುಕು ಹಾಕಿದರು. ಹಾಲು ಮತ್ತು ಹಾಲಿನ ಉತ್ಪನ್ನಗಳ ಉನ್ನತಿಗಾಗಿ ರೈತರು ಮತ್ತು ಪಶುಸಂಗೋಪನಾ ಇಲಾಖೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಮೆಲುಕು ಹಾಕಲಾಯಿತು. ಮಹಿಳೆಯರ ನೇತೃತ್ವದಲ್ಲಿ ಜಾನುವಾರು ಮತ್ತು ಡೇರಿ ವಲಯ ಹಾಗೂ ಸ್ಥಳೀಯ ಪಶುವೈದ್ಯಕೀಯ ನೆರವಿನಿಂದ ರೈತರ ಸಬಲೀಕರಣ…

Read More

ಜನಸಂಖ್ಯೆಯ 30 ಶೇಕಡಾ ಪ್ರಮಾಣ ಸಹಕಾರ ಸಂಘಗಳ ಸದಸ್ಯರು! ದೇಶ ಪುಟ್ಟದಾದರೂ ಸಹಕಾರ ಕ್ಷೇತ್ರದ ಬೆಳವಣಿಗೆ ಮಾದರಿ ಮಂಗಳೂರು: ವಿಶ್ವ ಭೂಪಟದಲ್ಲಿ ಆ ದೇಶ ಪುಟ್ಟದಾಗಿದ್ದು ಕರ್ನಾಟಕದಷ್ಟೂ ಜನಸಂಖ್ಯೆಯನ್ನು ಹೊಂದಿಲ್ಲ. ಆದರೆ ಸಹಕಾರ ಕ್ಷೇತ್ರಕ್ಕೆ ಆ ದೇಶದ ಕೊಡುಗೆ ಅದ್ವಿತೀಯವಾದುದು. ಕೇವಲ 52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಆ ದೇಶದ ಜನ ತಮ್ಮ ದೇಶದ ಜಿಡಿಪಿಗೆ ಕೊಡುವ ಕೊಡುಗೆ ಆ ದೇಶದ ಒಟ್ಟು ಜಿಡಿಪಿಯ ಐದನೇ ಒಂದು ಪಾಲು. ಅಂದರೆ ಶೇ.20ರಷ್ಟು. ಯಾವುದು ಆ ದೇಶ ಎಂಬ ಕುತೂಹಲ ಸಹಜ. ಉತ್ತರ ನ್ಯೂಜಿಲೆಂಡ್‌. ಒಂದು ಸಂಶೋಧನೆಯ ಪ್ರಕಾರ ನ್ಯೂಜಿಲೆಂಡ್‌ಗೆ ಆ ದೇಶದ ಸಹಕಾರ ಕ್ಷೇತ್ರದಿಂದ ಶೇ.18-20ರಷ್ಟು ಕೊಡುಗೆ ಲಭಿಸುತ್ತಿದ್ದು ಇದು ವಿಶ್ವದಲ್ಲೇ ಅತಿ ಹೆಚ್ಚು. ನ್ಯೂಜಿಲೆಂಡ್‌ನ ಒಟ್ಟು ಜನಸಂಖ್ಯೆಯ ಶೇ.30ರಷ್ಟು (ಸರಿಸುಮಾರು 1.50 ಮಿಲಿಯ) ಜನ ಸಹಕಾರಿ ಕ್ಷೇತ್ರದ ಸದಸ್ಯರಾಗಿದ್ದು, ಸುಮಾರು 50,000 ಉದ್ಯೋಗಿಗಳು ಇಲ್ಲಿನ ಸಹಕಾರಿ ಕ್ಷೇತ್ರದ ಉದ್ಯೋಗಿಗಳಿದ್ದಾರೆ. https://chat.whatsapp.com/Ge11n7QCiMj5QyPvCc0H19 ಒಂದು ಅಂಕಿ ಆಂಶದ ಪ್ರಕಾರ  ನ್ಯೂಜಿಲೆಂಡ್‌ನ ಅಗ್ರ 30…

Read More

ಮಂಗಳೂರು: ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್‌ ಆಯ್ಕೆಯಾಗಿದ್ದಾರೆ. ದಾವಣಗೆರೆಯ ಶ್ರೀ ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ನವೆಂಬರ್ 22ರದು ಜರುಗಿದ ಸಹಕಾರ ಭಾರತಿಯ 7ನೇ ರಾಜ್ಯ ಅಧಿವೇಶನದಲ್ಲಿ ಸಾಣೂರು ನರಸಿಂಹ ಕಾಮತ್ ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆರಿಸಲಾಯಿತು. ಚುನಾವಣಾ ಅಧಿಕಾರಿಯಾಗಿದ್ದ ಹಿರಿಯ ಸಹಕಾರಿ ಬಾಗಲಕೋಟೆಯ ಜಿ.ಎನ್ ಪಾಟೀಲ್ ಈ ಆಯ್ಕೆಯನ್ನು ಘೋಷಿಸಿದರು. https://chat.whatsapp.com/Ge11n7QCiMj5QyPvCc0H19 ನಿರ್ಗಮನ ಪ್ರಧಾನ ಕಾರ್ಯದರ್ಶಿ ಉತ್ತರ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ್‌ದಾಸ್ ನಾಯಕ್‌ ಸಹಕಾರಿ ಧ್ವಜ ಹಸ್ತಾಂತರಿಸುವುದರ ಮೂಲಕ ಜವಾಬ್ದಾರಿಯ ವರ್ಗಾವಣೆ ಮಾಡಿದರು. ಈ ಸಂದರ್ಭ ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪುರೆ, ರಾಷ್ಟ್ರೀಯ ಸಂರಕ್ಷಕ ಕೊಪ್ಪಳದ ರಮೇಶ್ ವೈದ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ಪಟ್ಟಾಭಿರಾಮ ಮತ್ತೂರು, ಉತ್ತರ ಪ್ರಾಂತ ಸಂಘದ ಹಿರಿಯರಾದ ಅರವಿಂದ ದೇಶಪಾಂಡೆ ಹುಬ್ಬಳ್ಳಿ ನಿರ್ಗಮನ ಅಧ್ಯಕ್ಷ ಬಾಗಲಕೋಟೆಯ ರಾಜಶೇಖರ ಶೀಲವಂತ, ನೂತನ…

Read More

ಬೆಳ್ತಂಗಡಿ: ಎಂ.ಸಿ.ಸಿ. ಬ್ಯಾಂಕಿನ 18 ಶಾಖೆಯು ಬೆಳ್ತಂಗಡಿ ಚರ್ಚ್ ರಸ್ತೆಯ ಹತ್ತಿರ, ವೈಭವ್ ಆರ್ಕೇಡ್‌ನ ನೆಲಮಹಡಿಯಲ್ಲಿ ಭಾನುವಾರ ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು. ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್‌ ಧರ್ಮಗುರು ಫಾ| ವಾಲ್ಟರ್ ಡಿಮೆಲ್ಲೊ ಆಶೀರ್ವಚಿಸಿದರು. https://chat.whatsapp.com/Ge11n7QCiMj5QyPvCc0H19 ಭದ್ರತಾ ಕೊಠಡಿಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೊಕ್ಯೂರೇಟರ್ ಅಬ್ರಹಾಂ ಪಟ್ಟೆರಿಲ್ ಉದ್ಘಾಟಿಸಿದರು. ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹೆನ್ರಿ ಲೋಬೊ ಉದ್ಘಾಟಿಸಿದರು. ಸಿರಿಯನ್ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಅಧ್ಯಕ್ಷ ಅನಿಲ್ ಎ.ಜೆ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ರತ್ನ ಅನಿಲ್ ಲೋಬೊ, ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಪರಿಚಯಿಸಲು ಬೆಳ್ತಂಗಡಿ ಪರಿಸರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಭೇಟಿ ಮಾಡಿದ ಸಂದರ್ಭದಲ್ಲಿ ಬೆಳ್ತಂಗಡಿ ಪರಿಸರದ ಜನರು ನೀಡಿದ ಸಹಕಾರ ಮತ್ತು ಬೆಂಬಲಕ್ಕಾಗಿ ವಂದನೆ ಸಲ್ಲಿಸಿದರು. ಶಾಖೆ ಪ್ರಾರಂಭವಾದ ಒಂದು ವರ್ಷದೊಳಗೆ ಲಾಭ ಗಳಿಸಲು ಮತ್ತು ಸಮಾಜಕ್ಕೆ ಸೇವೆ…

Read More

ಮಂಗಳೂರು: ಸಹಕಾರ ಭಾರತಿಯ ರಾಜ್ಯ ಸಹಕಾರಿ ಸಮಾವೇಶ ನವೆಂಬರ್ 22ನೇ ಶುಕ್ರವಾರ ದಾವಣಗೆರೆಯ ಮಾಗನೂರು ಬಸಪ್ಪ ರಸ್ತೆ (ಹದಡಿ ರಸ್ತೆ) ರಸ್ತೆಯಲ್ಲಿರುವ ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11ರಿಂದ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ಹಾಸನ ಜಿಲ್ಲೆಯ ಬೇಲೂರು ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸಹಕಾರಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ದಿನನಾಥ ಠಾಕೂರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ, ಡಾಕ್ಟರ್ ಉದಯ್ ವಾಸುದೇವ ಜೋಶಿ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನ ಗೌಡ ಪಾಲ್ಗೊಳ್ಳಲಿದ್ದಾರೆ. ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ್ ಶೀಲವಂತ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಯುವಕರ ಪಾತ್ರ, ಪಂಚ ಪರಿವರ್ತನೆ, ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿ ಜವಾಬ್ದಾರಿ ಸೇರಿದಂತೆ ಅನೇಕ ವಿಚಾರಗೋಷ್ಠಿಗಳು…

Read More