ನವದೆಹಲಿ: ಸಂಸತ್‌ನಲ್ಲಿ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಮಧ್ಯಮ ವರ್ಗದ ಜನರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಮಧ್ಯಮ ವರ್ಗದ ಜನರ ನಿರೀಕ್ಷೆ ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
https://chat.whatsapp.com/Ge11n7QCiMj5QyPvCc0H19
ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷದವರೆಗಿನ ಆದಾಯ ತೆರಿಗೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಪರಿಚಯಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಪ್ರಸ್ತುತ ದ್ವಿ ತೆರಿಗೆ ಪದ್ಧತಿ -ಹಳೆಯ ತೆರಿಗೆ ಪದ್ಧತಿ (OTR) ಮತ್ತು ಹೊಸ ತೆರಿಗೆ ಪದ್ಧತಿ (NTR) ಒಂದೇ ರೀತಿಯಾಗಿಲ್ಲ. ಹೊಸ ಪದ್ಧತಿಯು ಕಡಿಮೆ ದರ ಮತ್ತು ಸರಳ ರಚನೆಯನ್ನು ಹೊಂದಿದ್ದರೂ, ತೆರಿಗೆ ವಿಧಿಸಬಹುದಾದ ಆದಾಯ ಕಡಿಮೆ ಮಾಡಲು ಅನೇಕರು ಅವಲಂಬಿಸಿರುವ ಕಡಿತಗಳನ್ನು ಇದು ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಹೊಸ ಆದಾಯ ತೆರಿಗೆ ಪದ್ಧತಿಯಡಿಯಲ್ಲಿ, ಶೂನ್ಯ ತೆರಿಗೆ ಸ್ಲ್ಯಾಬ್ ಅನ್ನು ₹7 ಲಕ್ಷ ರೂಪಾಯಿಗಳಿಂದ ₹12 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬಾಡಿಗೆಯ ಮೇಲಿನ TDS ಮಿತಿಯನ್ನು ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ.