Author: admin

ನವದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ)ದ ನೂತನ ಗವರ್ನರ್‌ ಆಗಿ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಇವರು ಆರ್‌ಬಿಐ ಗವರ್ನರ್‌ ಆಗಿರುವ ಶಕ್ತಿಕಾಂತ್‌ ದಾಸ್‌ ಅವರ ಸ್ಥಾನ ತುಂಬಲಿದ್ದಾರೆ. ಶಕ್ತಿಕಾಂತ್‌ ದಾಸ್‌ ಅವರ ಅವಧಿ ಇಂದು ಸಂಜೆಗೆ ಕೊನೆಗೊಳ್ಳಲಿದ್ದು ಮಲ್ಹೋತ್ರಾ ಡಿಸೆಂಬರ್‌ 11ರಿಂದಲೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಸಂಜಯ್‌ ಮಲ್ಹೋತ್ರಾ ಅಧಿಕಾರಾವಧಿ ಇರಲಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ 26ನೇ ಗವರ್ನರ್‌ ಆಗಲಿರುವ ಮಲ್ಹೋತ್ರಾ 1990ರ ಬ್ಯಾಚ್ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದರು. ಆರ್‌ಬಿಐನ ಕಾರ್ಯನಿರ್ವಹಣೆಯನ್ನು ಸಾಮಾನ್ಯವಾಗಿ ಕೇಂದ್ರೀಯ ನಿರ್ದೇಶಕರ ಮಂಡಳಿಯು ನೋಡಿಕೊಳ್ಳುತ್ತಿದ್ದು, ಸಂಜಯ್‌ ಮಲ್ಹೋತ್ರಾ ಈ ಕೆಲಸದಲ್ಲಿ ಮುಂಚೂಣಿಯಲಿದ್ದರಿಂದ ಅವರ ಹೆಸರೇ ಆರ್‌ಬಿಐ ಗವರ್ನರ್‌ ಹುದ್ದೆಗೆ ಪ್ರಧಾನವಾಗಿ ಕೇಳಿಬರುತ್ತಿತ್ತು. ಸಂಜಯ್‌ ಮಲ್ಹೋತ್ರಾ ಅವರು ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್‌ ಸೈನ್ಸ್‌ ಇಂಜಿನಿಯರಿಂಗ್‌ ಪದವಿ ಪಡೆದಿದ್ದು, ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 33  ವರ್ಷಗಳ ವ್ಯಾಪಕ…

Read More

ನವದೆಹಲಿ: ಸಹಕಾರ ಭಾರತಿ ರಾಷ್ಟ್ರಾಧ್ಯಕ್ಷರಾಗಿ ಡಾ.ಉದಯ ಜೋಶಿ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್‌ ಚೌರಾಸಿಯ ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಅಮೃತ್‌ಸರ್‌ನಲ್ಲಿ ನಡೆಯುತ್ತಿರುವ ಸಹಕಾರ ಭಾರತಿಯ ರಾಷ್ಟ್ರೀಯ ಅಧಿವೇಶನದಲ್ಲಿ ಈ ಘೋಷಣೆ ಮಾಡಲಾಗಿದೆ. ಡಾ.ಉದಯ ಜೋಶಿ ರಾಷ್ಟ್ರಾಧ್ಯಕ್ಷರಾಗಿ ಡಿ.ಎನ್‌.ಠಾಕೂರ್‌ ಅವರ ಸ್ಥಾನ ತುಂಬಲಿದ್ದಾರೆ. ಸಹಕಾರ ಭಾರತಿಯ ದೀಘರ್ಕಾಲೀನ ಸಕ್ರಿಯ ಕಾರ್ಯಕರ್ತರಾಗಿದ್ದ ಬಿಹಾರದ ದೀಪಕ್‌ ಚೌರಾಸಿಯ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಉದಯ ಜೋಶಿ ಅವರ ಸ್ಥಾನ ತುಂಬಲಿದ್ದಾರೆ. 1957ರ ಸೆಪ್ಟೆಂಬರ್‌ 17ರಂದು ಜನಿಸಿದ್ದ ಡಾ.ಜೋಶಿ ಅಲಿಬಾಘ್‌ನ ಜೆಎಸ್‌ಎಂ ಕಾಲೇಜಿನಲ್ಲಿ 35 ವರ್ಷ ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ಉಪಪ್ರಾಂಶುಪಾಲರರಾಗಿ ಭಡ್ತಿ ಪಡೆದಿದ್ದರು. ಮುಂಬೈ ವಿಶ್ವವಿದ್ಯಾಲಯದ ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ, 37 ವರ್ಷಗಳಷ್ಟು ಕಾಲ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಎನ್‌ಸಿಯುಐ (ಭಾರತೀಯ ರಾಷ್ಟ್ರೀಯ ಸಹಕಾರ ಒಕ್ಕೂಟ)ನ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಹಣಕಾಸು ಸಚಿವರ ಜೊತೆ…

Read More

ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟ, ಸಾಲದ ಇಎಂಐ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ಸತತ 11ನೇ ಬಾರಿ ರೆಪೊ ದರವನ್ನು ಬದಲಿಸದೆ ಶೇಕಡಾ 6.5ರಷ್ಟು ಯಥಾಸ್ಥಿತಿಯಲ್ಲೇ ಕಾಯ್ದಿರಿಸಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 7.2 ರ ಬದಲು ಶೇಕಡಾ 6.6ಕ್ಕೆ ತಗ್ಗಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು 7 ತ್ರೈಮಾಸಿಕ ಕನಿಷ್ಠ 5.4 ಶೇಕಡಾಕ್ಕೆ ಕುಸಿದಿದ್ದರೂ ಬಡ್ಡಿದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಶೇಕಡಾ 6.5ದಲ್ಲಿ ಇರಿಸಲು ನಿರ್ಧರಿಸಿದೆ ಮತ್ತು ನೀತಿ ನಿಲುವನ್ನು ತಟಸ್ಥವಾಗಿ ಇರಿಸಿದೆ ಎಂದು ಹೇಳಿದರು. https://chat.whatsapp.com/Ge11n7QCiMj5QyPvCc0H19 ಆರ್‌ಬಿಐ, ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಹಿಂದಿನ ಶೇಕಡಾ 7.2ರಿಂದ ಶೇಕಡಾ 6.6ಕ್ಕೆ ಕಡಿತಗೊಳಿಸಿದ್ದು, ಪ್ರಸಕ್ತ…

Read More

ತುಮಕೂರು: ಶ್ರೀ ಗುರುಕುಲ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ತುಮಕೂರು ಇದರ ಗುರುಕುಲ ಕ್ಲಿನಿಕ್ ಮತ್ತು ಡಯಾಗ್ನಾಸ್ಟಿಕ್ಸ್‌ ಸೆಂಟರ್ ಅನ್ನು ಗುರುವಾರ ತುಮಕೂರಿನ ಸಿದ್ಧಗಂಗಾ ಬಡಾವಣೆಯ ಗುರುಕುಲ ಆರ್ಕೇಡ್‌ನಲ್ಲಿ ಪ್ರಾರಂಭಿಸಲಾಗಿದೆ. ಗುರುಕುಲ ಕ್ಲಿನಿಕ್ ಆಂಡ್ ಡಯಾಗ್ನಾಸ್ಟಿಕ್ಸ್‌ ಸೆಂಟರ್ ಅನ್ನು ತಮಕೂರು ನಗರದ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಉದ್ಘಾಟಿಸಿದರು. ಶ್ರೀ ಗುರುಕುಲ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. https://chat.whatsapp.com/Ge11n7QCiMj5QyPvCc0H19 ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಸಿ.ಪಿ ವಿಜಯ್, ಸ್ನೇಹ ಸಂಗಮ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಲಿಮಿಟೆಡ್‌ನ ಅಧ್ಯಕ್ಷ ಬಿ.ಎಸ್ ಮಂಜುನಾಥ್, ಶ್ರೀ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ.ಎನ್ ಬಸವರಾಜಪ್ಪ, ಸಿದ್ದರಾಮೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಎಸ್ ರವಿಶಂಕರ್, ತುಮಕೂರು ಬಸವೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಟಿ.ಸಿ ಓಹಿಲೇಶ್ವರ್, ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ.ಮೂರ್ತಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮ ಗುರುಕುಲ ಸುವರ್ಣ…

Read More

ನವದೆಹಲಿ: ಸಹಕಾರ ಕ್ಷೇತ್ರದ ವೃತ್ತಿಪರ ಸಾಧಕರಾದ ಡಾ.ಮಂಗಳಾ ರೈ ಹಾಗೂ ಡಾ.ಅಶೋಕ್‌ ಗುಲಾಟಿ ಅವರಿಗೆ 2023-24ನೇ ಸಾಲಿನ ಯು.ಎಸ್‌.ಅವಸ್ಥಿ ಇಫ್ಕೋ ಜೀವಮಾನ ಸಾಧಕ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. https://chat.whatsapp.com/Ge11n7QCiMj5QyPvCc0H19 ಗುರುವಾರ ಭಾರತೀಯ ರಸಗೊಬ್ಬರ ಸಂಘ(ಎಫ್‌ಎಐ- ಫರ್ಟಿಲೈಸರ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ)ದ 60ನೇ ವಾರ್ಷಿಕ ಸೆಮಿನಾರ್‌ನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೃಷಿ ಮತ್ತು ರಸಗೊಬ್ಬರ ಕ್ಷೇತ್ರದಲ್ಲಿ ಮಾಡಿರುವ ಅದ್ವಿತೀಯ ಸಾಧನೆಗಾಗಿ ಈ ಇಬ್ಬರಿಗೆ ಈ ಪ್ರಶಸ್ತಿ ನೀಡಲಾಗಿದೆ. ಡಾ.ಮಂಗಳಾ ರೈ ಅವರಿಗೆ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಈ ಪುರಸ್ಕಾರ ಪ್ರದಾನ ಮಾಡಲಾಗಿದ್ದರೆ, ಡಾ.ಅಶೋಕ್‌ ಗುಲಾಟಿ ರಸಗೊಬ್ಬರ ಕ್ಷೇತ್ರದಲ್ಲಿ ಮಾಡಿರುವ ಉನ್ನತ ಸಾಧನೆಗಾಗಿ ಈ ಪುರಸ್ಕಾರ ಪ್ರದಾನ ಮಾಡಲಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರಾದ ಅನುಪ್ರಿಯಾ ಎಸ್‌.ಪಟೇಲ್‌ ಈ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 2.5 ಮಿಲಿಯ ರೂ., ಚಿನ್ನದ ಪದಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 2017ರಲ್ಲಿ…

Read More

ನವದೆಹಲಿ: ಬಹು-ರಾಜ್ಯ ಸಹಕಾರ ಸಂಘಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ, ಹಣಕಾಸಿನ ಅಕ್ರಮಗಳನ್ನು ತಡೆಗಟ್ಟುವ ಮತ್ತು ಹೊಣೆಗಾರಿಕೆಯ ಕುರಿತು ಮಾಡಲಾಗಿರುವ ತಿದ್ದುಪಡಿಗಳ ಬಗ್ಗೆ ಕೇಂದ್ರ ಗೃಹ ಸಚಿವರೂ ಆಗಿರುವ ಸಹಕಾರ ಸಚಿವ ಅಮಿತ್‌ ಷಾ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಮೀನುಗಾರಿಕಾ ಸಹಕಾರ ಸಂಘಗಳ ಬಗ್ಗೆಯೂ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್‌ ಷಾ, ಆರ್ಥಿಕ ಸ್ಥಿರತೆ ಮತ್ತು ಸಹಕಾರ ಸಂಘಗಳ ಸದಸ್ಯರ ಹಿತಾಸಕ್ತಿಗಳನ್ನು ಕಾಪಾಡಲು ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ವಿವೇಕದ ಮಾನದಂಡಗಳನ್ನು ವಿಧಿಸಲಿದೆ ಎಂದು ಹೇಳಿದರು. https://chat.whatsapp.com/Ge11n7QCiMj5QyPvCc0H19 ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮಹತ್ವದ ಹೆಜ್ಜೆ ಇಡಲಾಗಿದ್ದು, ಇದರ ಭಾಗವಾಗಿ ಸಂಸತ್‌ನಲ್ಲಿ ಬಹರಾಜ್ಯ ಅಪೆಕ್ಸ್‌ ಸಹಕಾರಿ ಸಂಘಗಳ ಆಡಿಟ್‌ ವರದಿಗಳನ್ನು ಸಂಸತ್‌ನಲ್ಲಿ ಮಂಡಿಸುವ ಪ್ರಸ್ತಾಪ ಇಡಲಾಗಿದೆ. ಸ್ವಜನಪಕ್ಷಪಾತ ಮತ್ತು ಪಕ್ಷಪಾತದ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರ ಸಂಘಗಳ ನಿರ್ದೇಶಕರು ಅವರು ಅಥವಾ ಅವರ…

Read More

ಅಡಿಕೆಯ ಸಮಗ್ರ ಸಂಶೋಧನೆಗೆ ಕೇಂದ್ರ ಕೃಷಿ ಸಚಿವಾಲಯ ನಿರ್ಧಾರ ಮಂಗಳೂರು: ಅಡಿಕೆ ಕ್ಯಾನ್ಸರ್‌ಕಾರಕವೆಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾದವನ್ನು ಪುರಾವೆ ಸಮೇತ ಸಂಸದರಿಗೆ ಮನವರಿಕೆ ಮಾಡಿಸಿದ ಕ್ಯಾಂಪ್ಕೊ ಸಂಸ್ಥೆಯ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ. ಸಂಸತ್ ಅಧಿವೇಶನದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಪ್ರಯತ್ನದಿಂದಾಗಿ, “ಅಡಿಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ” ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಶ್ಲಾಘಿಸಿದೆ. ಇದಕ್ಕೆ ಶ್ರಮಿಸಿದ ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಸಂಸದರಿಗೆ ಹಾಗೂ ಭಾರತೀಯ ಜೀವನಕ್ರಮದಲ್ಲಿ ಅಡಿಕೆಯ ಪಾತ್ರವನ್ನು ಗುರುತಿಸಿರುವ ಕೇಂದ್ರ ಕೃಷಿ ಸಚಿವರಿಗೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿಯವರು, ಅಡಿಕೆ ಬೆಳೆಗಾರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. https://chat.whatsapp.com/Ge11n7QCiMj5QyPvCc0H19 ವಿಶ್ವ ಆರೋಗ್ಯ ಸಂಸ್ಥೆ , ತಪ್ಪು ಗ್ರಹಿಕೆಯಿಂದ ಅಡಿಕೆಯನ್ನು ಕ್ಯಾನ್ಸರ್‌ಕಾರಕವೆಂದು ವರ್ಗೀಕರಿಸಿರುವ ಕ್ರಮದ ವಿರುದ್ಧ ಕ್ಯಾಂಪ್ಕೊ ಮಾಧ್ಯಮಗಳು ಮತ್ತು ಜನಪ್ರತಿನಿಧಿಗಳ ಮೂಲಕ ನಿರಂತರ ಅಭಿಯಾನ ಮಾಡುತ್ತಲೇ ಬಂದಿದ್ದು, ಕೊನೆಗೂ ಸರಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಎಐಐಎಂಎಸ್,…

Read More

ಖಾತೆದಾರರಿಗೆ 4 ನಾಮಿನಿ ಅವಕಾಶ ನವದೆಹಲಿ: ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) 2024 ಮಸೂದೆಯು ಸೋಮವಾರ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರವಾಗಿದೆ. ಇದರಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳು ಬ್ಯಾಂಕಿಂಗ್ ವಲಯದ ಆಡಳಿತವನ್ನು ಬಲಪಡಿಸಲಿದೆ ಮತ್ತು ಗ್ರಾಹಕರ ಅನುಕೂಲತೆಗಳನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. https://chat.whatsapp.com/Ge11n7QCiMj5QyPvCc0H19 ಲೋಕಸಭೆಯ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಸೂದೆ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್‌, ಭಾರತೀಯ ರಿಸರ್ವ್ ಬ್ಯಾಂಕ್‌ ಕಾಯ್ದೆ -1934, ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ -1949, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970 ಮತ್ತು ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1980ರಲ್ಲಿ ಬದಲಾವಣೆಗಳನ್ನು ತರಲು ಒಟ್ಟು 19 ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು. ಬ್ಯಾಂಕ್ ಖಾತೆದಾರರು ತಮ್ಮ ಖಾತೆಯಲ್ಲಿ ನಾಲ್ಕು ನಾಮಿನಿಗಳನ್ನು ಹೊಂದಲು ಈ ಮಸೂದೆ ಪ್ರಸ್ತಾಪಿಸುತ್ತದೆ. ಒಟ್ಟಾರೆ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವ ಹಲವು ಅಂಶಗಳು ಈ ಮಸೂದೆಯಲ್ಲಿವೆ. ಬ್ಯಾಂಕಿಂಗ್ ಕ್ಷೇತ್ರವು ವಿಕಸನಗೊಂಡಿರುವುದರಿಂದ ಮತ್ತು ಬ್ಯಾಂಕ್‌…

Read More

ವೈದ್ಯಕೀಯ, ದಂತ, ನೇತ್ರ ತಪಾಸಣಾ, ಚಿಕಿತ್ಸಾ ರಕ್ತದಾನ ಶಿಬಿರದಲ್ಲಿ ಎಂ.ಎಸ್‌.ಗುರುರಾಜ್‌ ಹೇಳಿಕೆ ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಭಾನುವಾರ ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಇವುಗಳ ಸಹಯೋಗದೊಂದಿಗೆ ಮಂಗಳೂರಿನ ಪಾಂಡೇಶ್ವರದಲ್ಲಿನ  ಶ್ರೀ ಗುರುನರಸಿಂಹ ಸಭಾಭವನದಲ್ಲಿ ಬೃಹತ್ ಉಚಿತ ಆರೋಗ್ಯ -ದಂತ -ಕಣ್ಣಿನ -ತಪಾಸಣಾ -ಚಿಕಿತ್ಸಾ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. https://chat.whatsapp.com/Ge11n7QCiMj5QyPvCc0H19 ಮಂಗಳೂರಿನ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆ ಹಾಗೂ ದೇರಳಕಟ್ಟೆ ಯೇನಪೊಯ ದಂತ ಕಾಲೇಜಿನ ನುರಿತ, ಅನುಭವಿ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. 485 ರೋಗಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಕಣ್ಣಿನ ಸಮಸ್ಯೆ ಇದ್ದ 85 ಜನರಿಗೆ  ಸ್ಥಳದಲ್ಲೇ ಉಚಿತವಾಗಿ ಕನ್ನಡಕ ಹಾಗೂ ಎಲ್ಲಾ ಖಾಯಿಲೆಗಳಿಗೆ ಔಷಧಗಳನ್ನು ಉಚಿತವಾಗಿ ನೀಡಲಾಯಿತು. 48 ಜನರಿಗೆ ಇಸಿಜಿ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಆವಶ್ಯಕತೆಯುಳ್ಳವರನ್ನು ಗುರುವಾರ ಕೆಎಂಸಿ ಅತ್ತಾವರ ಆಸ್ಪತ್ರೆಗೆ ಹಾಗೂ ಹಲ್ಲಿನ ಸಮಸ್ಯೆಯುಳ್ಳವರಿಗೆ ದೇರಳಕಟ್ಟೆ ಯೆನೆಪೋಯ ದಂತ ಆಸ್ಪತ್ರೆಗೆ ಬರಲು ಸೂಚಿಸಲಾಗಿದೆ. ಅನೇಕರಿಗೆ …

Read More

ಮಂಗಳೂರು: ಅಡಿಕೆಯ ಸುರಕ್ಷತೆ ಮತ್ತು ಕ್ಯಾನ್ಸರ್ ರೋಗ ಶಮನಗೊಳಿಸುವ ಅದರ ಆಯುರ್ವೇದೀಯ ಗುಣಗಳ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು, ಇದಕ್ಕಾಗಿ ಮುಂಬರುವ ಬಜೆಟಟ್‌ನಲ್ಲಿ ನಿಧಿ ಹಂಚಿಕೆ ಮಾಡಬೇಕು ಎಂದು  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪತ್ರ ಬರೆದು ಮನವಿ ಮಾಡಿದ್ದಾರೆ. ಅಡಿಕೆ ಕೃಷಿ ಲಕ್ಷಾಂತರ ಬೆಳೆಗಾರರಿಗೆ ಜೀವನಾಧಾರವಾಗಿದೆ. ಭಾರತದ  ಸಾಂಸ್ಕೃತಿಕ ಜನಜೀವನದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಡಿಕೆಯು ಮಹತ್ತರ ಪಾತ್ರ ವಹಿಸಿರುವುದರ ಕುರಿತು ಹಣಕಾಸು ಸಚಿವರಿಗೆ ಬರೆದ  ಪತ್ರದಲ್ಲಿ ಉಲ್ಲೇಖಿಸಲಾಗಿದೆ.  ಭಾರತದಲ್ಲಿ ಸುಮಾರು ೯.೫೫ ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಅಡಿಕೆ ಕೃಷಿ ವಿಸ್ತರಿಸಿದ್ದು, ವಾರ್ಷಿಕ ೧೪ರಿಂದ ೧೮ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಡಿಕೆ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರಕಾರ ಜಿಎಸ್‌ಟಿ ಪದ್ಧತಿ ಜಾರಿಗೊಳಿಸಿದಂದಿನಿಂದ ಈವರೆಗೆ ಬರೇ ಕ್ಯಾಂಪ್ಕೊ ಒಂದೇ ಸಂಸ್ಥೆ  ಸುಮಾರು ೬೫೦ ಕೋಟಿ ರೂ. ತೆರಿಗೆ ಪಾವತಿ ಮಾಡಿರುವುದರ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. https://chat.whatsapp.com/Ge11n7QCiMj5QyPvCc0H19 ವಿಶ್ವ ಆರೋಗ್ಯ ಸಂಸ್ಥೆಯು…

Read More