Author: admin
2025ನೇ ಸಾಲಿನ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ಬೆಂಗಳೂರು: ರಾಜ್ಯದ ಸಹಕಾರಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಸರ್ಕಾರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸುವುದು ಹಾಗೂ ನಾಮನಿರ್ದೇಶನ ಮಾಡುವಂತಹ ಅವಕಾಶ ಹೊಂದಿರುವ ಕಾನೂನನ್ನು ರೂಪಿಸಿದೆ. 2025ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿದೆ. ಪ್ರತಿಪಕ್ಷ ಸದಸ್ಯರ ಆಕ್ಷೇಪ, ಆಗ್ರಹಗಳ ನಡುವೆಯೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಧ್ವನಿಮತದಿಂದ ಈ ವಿಧೇಯಕಕ್ಕೆ ಒಪ್ಪಿಗೆ ಪಡೆದುಕೊಂಡಿದೆ. https://chat.whatsapp.com/EbVKVnWB6rlHT1mWtsgbch 2024ರಲ್ಲಿ ತಿರಸ್ಕೃತಗೊಂಡಿದ್ದ ವಿಧೇಯಕಕ್ಕೆ ತಿದ್ದುಪಡಿ ತಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿ ಪರ್ಯಾಲೋಚನೆ ಪ್ರಕ್ರಿಯೆ ನಡೆಸಿದರು. ಪ್ರಾಥಮಿಕ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಇತರ ಪ್ರಾಥಮಿಕ ನೆರವು ಪಡೆವ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್‌ಸಿ/ಎಸ್‌ಟಿ ಇತರ ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗುತ್ತಿದೆ. ಈ ಮೂಲಕ ಸಹಕಾರ ಸಂಸ್ಥೆಗಳಲ್ಲಿಯೂ ಸಾಮಾಜಿಕ ನ್ಯಾಯ…
ಸುರತ್ಕಲ್: ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಹಕಾರಿ ಸಂಘದ ಅಧ್ಯಕ್ಷರಾದ ನಾಗೇಶ್ ಕುಲಾಲ್ ಅಧ್ಯಕ್ಷತೆಯಲ್ಲಿ ಸುರತ್ಕಲ್ ಸಿಟಿ ಸ್ಕ್ವೇರ್ ಕಟ್ಟಡದಲ್ಲಿ ಶನಿವಾರ ನಡೆಯಿತು. https://chat.whatsapp.com/EbVKVnWB6rlHT1mWtsgbch ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಂಘದ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಮೂಲ್ಯ ಇವರು ಮಂಡಿಸಿದರು. ಸಂಘವು ವಾರ್ಷಿಕ 281 ಕೋಟಿ ರೂ. ಒಟ್ಟು ವ್ಯವಹಾರ ನಡೆಸಿ ರೂ. 48,68,689.60 ನಿವ್ವಳ ಲಾಭ ಗಳಿಸಿದೆ. ಸಂಘವು ೧೮ ವರ್ಷಗಳಿಂದ ನಿರಂತರ \18 ಲಾಭ ಗಳಿಸುತ್ತಿದ್ದು, ಲೆಕ್ಕ \ಪರಿಶೋಧನೆಯಲ್ಲಿ ಎ ಶ್ರೇಣಿಯಲ್ಲಿ ವರ್ಗೀಕರಣಗೊಂಡಿದೆ. ಸಂಘವು ಕ್ಲೌಡ್ ತಂತ್ರಾಂಶವನ್ನು ಹಾಗೂ ಆರ್‌ಟಿಜಿಎಸ್ / ನೆಫ್ಟ್ ಸೇವೆ, ವಾಹನ ವಿಮಾ ಸೌಲಭ್ಯ ಹಾಗೂ ಇ-ಸ್ಟಾಂಪಿಂಗ್ ಸೇವೆಯನ್ನು ಹೊಂದಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಘದ ಅಧ್ಯಕ್ಷರು ತಿಳಿಸಿದರು. ಪ್ರಸ್ತುತ ಸಾಲಿನಲ್ಲಿ ಸಂಘದ ವತಿಯಿಂದ ತನ್ನ ಲಾಭದಲ್ಲಿ ಸದಸ್ಯರಿಗೆ ಶೇಕಡಾ 18ರಷ್ಟು ಡಿವಿಡೆಂಡ್ ನೀಡುವುದಾಗಿ ತೀರ್ಮಾನಿಸಲಾಯಿತು. ಸಹಕಾರಿ ಸಂಘವು ತನ್ನ ಕ್ಷಿಪ್ರ ಹಾಗೂ ಪಾರದರ್ಶಕ ಬೆಳವಣಿಗೆಯ…
ಮಂಗಳೂರು: ಮಂಗಳೂರಿನ ಜೆಪ್ಪು ಮಾರ್ಗನ್ಸ್‌ಗೇಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ 49ನೇ ವಾರ್ಷಿಕ ಮಹಾಸಭೆಯು ಆಗಸ್ಟ್ 24ರಂದು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಆಡಿಟೋರಿಯಂನಲ್ಲಿ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಬೆಳಗ್ಗೆ 10.30ಕ್ಕೆ ಸಭೆ ನಿಗದಿಯಾಗಿದ್ದು, ಬ್ಯಾಂಕಿನ ಅಧ್ಯಕ್ಷ ಮಾಧವ ಬಿ.ಎಂ ಅಧ್ಯಕ್ಷತೆ ವಹಿಸಲಿದ್ದಾರೆ. ಸದಸ್ಯರು ಈ ಸಭೆಯಲ್ಲಿ ಭಾಗವಹಿಸಬೇಕೆಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಸಹಕಾರ ಕ್ಷೇತ್ರದಲ್ಲಿ ಜನಸಾಮಾನ್ಯರನ್ನು ತೊಡಗಿಸಿಕೊಳ್ಳಲು ಸಹಕಾರ್ ಟ್ಯಾಕ್ಸಿ ಕೋ-ಆಪ್ ಲಿಮಿಟೆಡ್‌ನಿಂದ ಆಯೋಜನೆ ನವದೆಹಲಿ: ಜನಸಾಮಾನ್ಯರನ್ನು ಸಹಕಾರ ಕ್ಷೇತ್ರದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಉಪಕ್ರಮವಾಗಿ ದೇಶದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆ, ಭಾರತ್ ಟ್ಯಾಕ್ಸಿಯ ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ವಿನ್ಯಾಸಗೊಳಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಗೃಹ ವ್ಯವಹಾರ ಮತ್ತು ಸಹಕಾರ ಸಚಿವಾಲಯದ ಮಾರ್ಗದರ್ಶನದಲ್ಲಿ ಸಹಕಾರ ಟ್ಯಾಕ್ಸಿಯ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮುನ್ನಡೆಸುತ್ತಿರುವ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಹಯೋಗದೊಂದಿಗೆ ಮೈಗವ್(MyGov) ಪ್ಲಾಟ್‌ಫಾರ್ಮ್ ಮೂಲಕ ಈ ಸ್ಪರ್ಧೆಯನ್ನು ಪ್ರಾರಂಭಿಸಲಾಗಿದೆ. MyGovನ ಅಧಿಕೃತ ಎಕ್ಸ್ ಖಾತೆಯ ಮೂಲಕ ಈ ಸ್ಪರ್ಧೆಯ ವಿವರಗಳನ್ನು ಘೋಷಿಸಲಾಗಿದ್ದು, ಸ್ಪರ್ಧೆಗೆ ಲೋಗೋ ಮತ್ತು ಟ್ಯಾಗ್‌ಲೈನ್ ಕಳುಹಿಸಲು ಆಗಸ್ಟ್ 20 ರಾತ್ರಿ 8.45ರವರೆಗೆ ಅವಕಾಶವಿದೆ. ವಿಜೇತರಿಗೆ ಮುಂದಿನ ಡಿಸೆಂಬರ್‌ನಲ್ಲಿ ನಿಗದಿಯಾಗಿರುವ ಸಹಕಾರ್ ಟ್ಯಾಕ್ಸಿಯ ಅಧಿಕೃತ ಉದ್ಘಾಟನಾ ಕಾರ್ಯಕ್ರಮದಲ್ಲಿ 30,000 ರೂ.ಗಳ ನಗದು ಬಹುಮಾನ ನೀಡಲಾಗುವುದು. ಭಾರತ್ ಟ್ಯಾಕ್ಸಿಯನ್ನು ನ್ಯಾಯಯುತ ಮತ್ತು ಹೆಚ್ಚು ಪಾರದರ್ಶಕ ಪರಿಸರಸ್ನೇಹಿ ವ್ಯವಸ್ಥೆಯೊಂದಿಗೆ, ಓಲಾ ಮತ್ತು ಉಬರ್‌ನಂತಹ ಖಾಸಗಿ ಕಂಪನಿಗೆ ಪರ್ಯಾಯವಾಗಿ…
ಎಂಸಿಸಿ ಬ್ಯಾಂಕ್ ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಅನಿಲ್ ಲೋಬೊ ಹೇಳಿಕೆ ಮಂಗಳೂರು: ಗ್ರಾಹಕರು ನೀಡಿದ ಅಚಲ ಬೆಂಬಲ ಮತ್ತು ಸಹಕಾರದಿಂದ ಎಂಸಿಸಿ ಬ್ಯಾಂಕ್ ಉನ್ನತ ಪ್ರಗತಿ ಸಾಧಿಸಿದೆ. 113 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕ್ ಅನ್ನು ಬೆಂಬಲಿಸುವುದನ್ನು ಗ್ರಾಹಕರು ಮುಂದುವರಿಸಬೇಕು. ಬ್ಯಾಂಕಿನ ಪ್ರಗತಿಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಸಂತೆಕಟ್ಟೆ ಮತ್ತು ದೇರಳಕಟ್ಟೆಯಲ್ಲಿ ಶೀಘ್ರ ಹೊಸ ಶಾಖೆಗಳನ್ನು ತೆರೆಯಲಾಗುವುದು ಎಂದು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳಿದರು. https://chat.whatsapp.com/EbVKVnWB6rlHT1mWtsgbch ಗ್ರಾಹಕರ ಅನುಕೂಲಕ್ಕಾಗಿ ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ಭಾನುವಾರ ಮಂಗಳೂರಿನ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬಿಸಿನೆಸ್ ಸೆಂಟರ್‌ನ ಕೆಳ ಮಹಡಿಯಲ್ಲಿರುವ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರು, ಗ್ರಾಹಕರು ಮತ್ತು ನಿರ್ದೇಶಕರ ಮಂಡಳಿಯ ಬೆಂಬಲ, ವಿಶ್ವಾಸ ಹಾಗೂ ಸಿಬ್ಬಂದಿಯ ಕಠಿಣ ಪರಿಶ್ರಮವು ಬ್ಯಾಂಕನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿದೆ. ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ…
ನವದೆಹಲಿ: ಭಾರತದ ಜಾನುವಾರು ಮತ್ತು ಡೈರಿ ವಲಯದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಷ್ಟ್ರೀಯ ಗೋಪಾಲರತ್ನ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಎಚ್‌ಡಿ) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 15ರಿಂದ ಸೆಪ್ಟೆಂಬರ್ 15ರ ತನಕ ಸಾಧಕರ ಹೆಸರುಗಳನ್ನು ಶಿಫಾರಸು ಮಾಡಲು ಸೂಚಿಸಿದೆ. ನವಂಬರ್ 26ರಂದು ರಾಷ್ಟ್ರೀಯ ಹಾಲು ದಿನದಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. https://chat.whatsapp.com/EbVKVnWB6rlHT1mWtsgbch 2021ರಲ್ಲಿ ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳು ದೇಶೀಯ ದನ ಮತ್ತು ಎಮ್ಮೆ ತಳಿಗಳನ್ನು ಉತ್ತೇಜಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ ನೀಡಲಾಗುತ್ತಿದ್ದು, ಡೈರಿ ರೈತರು, ಸಹಕಾರಿಗಳು, ಹಾಲು ಉತ್ಪಾದಕ ಕಂಪನಿಗಳು, ಡೈರಿ ರೈತ ಉತ್ಪಾದಕ ಸಂಸ್ಥೆಗಳು ಮತ್ತು ಕೃತಕ ಗರ್ಭಧಾರಣೆಯ ತಂತ್ರಜ್ಞರನ್ನು ಈ ಪ್ರಶಸ್ತಿಗೆ ಪುರಸ್ಕರಿಸಲಾಗುತ್ತದೆ. ಅತ್ಯುತ್ತಮ ಹೈನುಗಾರ, ಅತ್ಯುತ್ತಮ ಡೈರಿ ಸಹಕಾರಿ ಮತ್ತು ಅತ್ಯುತ್ತಮ ಎಐಟಿ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜೊತೆಗೆ ಈಶಾನ್ಯ ಭಾರತದ ಪ್ರದೇಶ ಮತ್ತು ಹಿಮಾಲಯನ್ ರಾಜ್ಯಗಳಿಗೆ ಹೆಚ್ಚುವರಿ ವಿಶೇಷ ಪ್ರಶಸ್ತಿಗಳನ್ನು…
ವಿ.ಕೆ ಸಲಗರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಉಮಾಕಾಂತ ರಾಜಗಿರಿ, ಉಪಾಧ್ಯಕ್ಷರಾಗಿ ಶಂಭುಲಿಂಗ ರಾಮಶೆಟ್ಟಿ ಆಯ್ಕೆ
ಕಲಬುರಗಿ: ಇಲ್ಲಿನ ಕಮಲಾಪುರದ ವಿ.ಕೆ.ಸಲಗರ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಉಮಾಕಾಂತ ರಾಜಗಿರಿ, ಉಪಾಧ್ಯಕ್ಷರಾಗಿ ಶಂಭುಲಿಂಗ ರಾಮಶೆಟ್ಟಿ ಆಯ್ಕೆಯಾಗಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಂಘದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಉಮಾಕಾಂತ ರಾಜಗಿರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಂಭುಲಿಂಗ ಎದುರಾಳಿಗಳನ್ನು ಪರಾಭವಗೊಳಿಸಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಚುನಾಯಿತರಾದರು. ರಾಜಕುಮಾರ ರಾಠೋಡ್ ಚುನಾವಣಾಧಿಕಾರಿಯಾಗಿದ್ದರು. ಚುನಾವಣಾ ಪ್ರಕ್ರಿಯೆ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ರಾಜಗಿರೆ, ಸಂಜು ಪಾಟೀಲ್, ಹಾಲಪ್ಪ ಸಿರಗಾಪುರ, ನಾಗರಾಜ ಮೂಲಗೆ, ಬಸವರಾಜ ಅಕ್ಕಲಕೋಟ, ಸಿದ್ದಣ್ಣ ಸೌಳ್ಸೆ, ಪಂಚಾಕ್ಷರಿ ಮಠ, ಸತೀಶ ಪಾಟೀಲ, ಶಿವರಾಜ ಬಿರಬಿಟ್ಟಿ, ಸಂಗಶೆಟ್ಟಿ ಮೂಲಗೆ, ಮಲ್ಲಿಕಾರ್ಜುನ ಸೊರಡೆ, ಶಿವಾನಂದ ರಾಮಶೆಟ್ಟಿ, ಶಿವಾನಂದ ರಾಜಗಿರೆ, ಅಕ್ಷರಬಾಯಿ ಕಾಂಬ್ಳೆ, ಕುಪೇಂದ್ರ ಲೇಂಗಟಿ, ವೀರೇಶ ಒಂಟೆ, ಶಿವಾನಂದ ದಂಡೆ, ಗಣಪತರಾವ ಪಾಟೀಲ, ಶಿವಾನಂದ ಟೇಂಗಳಿ, ಲಕ್ಷ್ಮಣ ಭಂಡಾರಿ, ಜಗನ್ನಾಥ ಕಾಂಬ್ಳೆ, ಪುಂಡಲೀಕ ಪೂಜಾರಿ, ಕಾಂತಣ್ಣ ಕಣ್ಣಿ ಮೊದಲಾದವರು ಉಪಸ್ಥಿತರಿದ್ದರು. ನಿಮ್ಮ…
ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ ಮಂಗಳೂರು: ದೇಶದ ಸಂವಿಧಾನ ಪ್ರತಿಯೋರ್ವ ನಾಗರಿಕನಿಗೂ ಅವರದ್ದೇ ಆದ ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ಹಕ್ಕುಗಳನ್ನು ಅನುಭವಿಸುವ ಜೊತೆಗೆ ಅವರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಕೂಡಾ ನಿಭಾಯಿಸುವುದು ಅಗತ್ಯವಾಗಿದೆ. ಹಕ್ಕು ಮತ್ತು ಜವಾಬ್ದಾರಿಯಿಂದ ಕೂಡಿದ ಕರ್ತವ್ಯಗಳು ನಾಣ್ಯದ ಎರಡು ಮುಖಗಳು ಇದ್ದಂತೆ. ಇದನ್ನು ದೇಶದ ನಾಗರಿಕರು ಅರಿತರೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಮಂಗಳೂರು ಇದರ ಪ್ರಧಾನ ಕಚೇರಿಯಲ್ಲಿ ನಡೆದ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. https://chat.whatsapp.com/EbVKVnWB6rlHT1mWtsgbch ಮುಂದುವರಿದು ಮಾತನಾಡಿದ ಅವರು ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ದೀರ್ಘ ಸಮಯದ ಹೋರಾಟದ ಬಳಿಕ ನಮಗೆ ಸ್ವಾತಂತ್ರ್ಯ ಲಭಿಸಿದೆ. ನಮಗೆ ಲಭಿಸಿದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸದೆ ದೇಶ…
ಮಂಗಳೂರು: ಪ್ರತಿಷ್ಠಿತ ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಚೇರಿಯಲ್ಲಿ 79ನೇ ಸ್ವಾತಂತ್ರ‍್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿ, ಗಣ್ಯರು ಮತ್ತು ಹಿತೈಷಿಗಳು ಹಾಜರಿದ್ದರು. https://chat.whatsapp.com/EbVKVnWB6rlHT1mWtsgbch ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಟ್ರಸ್ಟ್‌ನ ಖಜಾಂಚಿ, ವಕೀಲ ಪದ್ಮರಾಜ್ ಆರ್. ಪೂಜಾರಿ, ನಿಕಟಪೂರ್ವ ಕಾರ್ಪೊರೇಟರ್, ವಕೀಲ ಎ.ಸಿ.ವಿನಯರಾಜ್ ಮುಖ್ಯ ಅತಿಥಿಗಳಾಗಿದ್ದರು. ಎಂಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಪ್ರೊ.ಎಡ್ಮಂಡ್ ಫ್ರಾಂಕ್ ಮತ್ತು ಮಾಜಿ ವೃತ್ತಿಪರ ನಿರ್ದೇಶಕ ಮೈಕೆಲ್ ಡಿಸೋಜ ಗೌರವ ಅತಿಥಿಗಳಾಗಿದ್ದರು. ಪದ್ಮರಾಜ್ ಆರ್.ಪೂಜಾರಿ ಧ್ವಜಾರೋಹಣ ಮಾಡಿದರು. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರು. ಪದ್ಮರಾಜ್ ಪೂಜಾರಿ ಮಾತನಾಡಿ, ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗಗಳನ್ನು ಸ್ಮರಿಸಿ, ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು, ಈ ಮೌಲ್ಯವನ್ನು ಅಳವಡಿಸಿಕೊಳ್ಳುವಾಗ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿ, ಎಂ.ಸಿ.ಸಿ. ಬ್ಯಾಂಕಿನ ಪ್ರಗತಿ ಮತ್ತು ಬ್ಯಾಂಕ್ ಇಡೀ ಕರ್ನಾಟಕದಲ್ಲಿ ಉತ್ತಮ ಸೇವೆ ನೀಡುತಿರುವ…
ವಿಟ್ಲ: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು. https://chat.whatsapp.com/EbVKVnWB6rlHT1mWtsgbch ನಿವೃತ್ತ ಯೋಧ ಪ್ರಕಾಶ್ ಕುಕ್ಕಿಲ ಧ್ವಜಾರೋಹಣ ನೆರವೇರಿಸಿ, ದೇಶಾಭಿಮಾನ ಮತ್ತು ಆರ್ಥಿಕ ಸ್ವಾತಂತ್ರ್ಯ ಬಗ್ಗೆ ಮಾತನಾಡಿ ಸ್ಫೂರ್ತಿ ತುಂಬಿದರು. ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ ಸಾಲಿಯಾನ್ ಎಚ್, ಉಪಾಧ್ಯಕ್ಷರಾದ ಮನೋರಂಜನ್ ಕೆ.ಆರ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಜಯಂತಿ ಎಚ್ ರಾವ್, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ, ಪೂವಪ್ಪ ಎಸ್, ದಿವಾಕರ ವಿ, ಕೇಶವ ಎ, ಗೋವರ್ಧನ್ ಕುಮಾರ್ ಐ, ಭಾಸ್ಕರ್ ಶೆಟ್ಟಿ, ರಾಮದಾಸ ಶೆಣೈ, ಮೋಹನ್ ಕೆ.ಎಸ್, ಸತೀಶ್ ಪಿ ಹಾಗೂ ಅತಿಥಿಗಳಾಗಿ ಶ್ರೀ ತುಳಸಿದಾಸ್ ಶೆಣೈ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕೃಷ್ಣ ಮುರಳಿ ಶ್ಯಾಮ್ ಕೆ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿವೃತ್ತ ಯೋಧರಾದ ಪ್ರಕಾಶ್ ಕುಕ್ಕಿಲ ಹಾಗೂ ತುಳಸಿದಾಸ್ ಶೆಣೈ ಇವರನ್ನು ಬ್ಯಾಂಕಿನ ವತಿಯಿಂದ ಗೌರವಿಸಲಾಯಿತು. ಬ್ಯಾಂಕಿನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ ರಾಣ್ಯ ಡಿ ಕಾರ್ಯಕ್ರಮ…
