Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಭಾರತ್ ಟ್ಯಾಕ್ಸಿ ಲೋಗೋ, ಟ್ಯಾಗ್‌ಲೈನ್ ಸ್ಪರ್ಧೆ: ವಿಜೇತರಿಗೆ 30,000 ರೂ. ನಗದು ಬಹುಮಾನ
    News

    ಭಾರತ್ ಟ್ಯಾಕ್ಸಿ ಲೋಗೋ, ಟ್ಯಾಗ್‌ಲೈನ್ ಸ್ಪರ್ಧೆ: ವಿಜೇತರಿಗೆ 30,000 ರೂ. ನಗದು ಬಹುಮಾನ

    adminBy adminAugust 18, 2025

    ಸಹಕಾರ ಕ್ಷೇತ್ರದಲ್ಲಿ ಜನಸಾಮಾನ್ಯರನ್ನು ತೊಡಗಿಸಿಕೊಳ್ಳಲು ಸಹಕಾರ್ ಟ್ಯಾಕ್ಸಿ ಕೋ-ಆಪ್ ಲಿಮಿಟೆಡ್‌ನಿಂದ ಆಯೋಜನೆ

    ನವದೆಹಲಿ: ಜನಸಾಮಾನ್ಯರನ್ನು ಸಹಕಾರ ಕ್ಷೇತ್ರದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಉಪಕ್ರಮವಾಗಿ ದೇಶದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆ, ಭಾರತ್ ಟ್ಯಾಕ್ಸಿಯ ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ವಿನ್ಯಾಸಗೊಳಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

    https://chat.whatsapp.com/EbVKVnWB6rlHT1mWtsgbch
    ಗೃಹ ವ್ಯವಹಾರ ಮತ್ತು ಸಹಕಾರ ಸಚಿವಾಲಯದ ಮಾರ್ಗದರ್ಶನದಲ್ಲಿ ಸಹಕಾರ ಟ್ಯಾಕ್ಸಿಯ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮುನ್ನಡೆಸುತ್ತಿರುವ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಹಯೋಗದೊಂದಿಗೆ ಮೈಗವ್(MyGov) ಪ್ಲಾಟ್‌ಫಾರ್ಮ್ ಮೂಲಕ ಈ ಸ್ಪರ್ಧೆಯನ್ನು ಪ್ರಾರಂಭಿಸಲಾಗಿದೆ. MyGovನ ಅಧಿಕೃತ ಎಕ್ಸ್ ಖಾತೆಯ ಮೂಲಕ ಈ ಸ್ಪರ್ಧೆಯ ವಿವರಗಳನ್ನು ಘೋಷಿಸಲಾಗಿದ್ದು, ಸ್ಪರ್ಧೆಗೆ ಲೋಗೋ ಮತ್ತು ಟ್ಯಾಗ್‌ಲೈನ್‌ ಕಳುಹಿಸಲು ಆಗಸ್ಟ್ 20 ರಾತ್ರಿ 8.45ರವರೆಗೆ ಅವಕಾಶವಿದೆ. ವಿಜೇತರಿಗೆ ಮುಂದಿನ ಡಿಸೆಂಬರ್‌ನಲ್ಲಿ ನಿಗದಿಯಾಗಿರುವ ಸಹಕಾರ್‌ ಟ್ಯಾಕ್ಸಿಯ ಅಧಿಕೃತ ಉದ್ಘಾಟನಾ ಕಾರ್ಯಕ್ರಮದಲ್ಲಿ 30,000 ರೂ.ಗಳ ನಗದು ಬಹುಮಾನ ನೀಡಲಾಗುವುದು.
    ಭಾರತ್ ಟ್ಯಾಕ್ಸಿಯನ್ನು ನ್ಯಾಯಯುತ ಮತ್ತು ಹೆಚ್ಚು ಪಾರದರ್ಶಕ ಪರಿಸರಸ್ನೇಹಿ ವ್ಯವಸ್ಥೆಯೊಂದಿಗೆ, ಓಲಾ ಮತ್ತು ಉಬರ್‌ನಂತಹ ಖಾಸಗಿ ಕಂಪನಿಗೆ ಪರ್ಯಾಯವಾಗಿ ಸಹಕಾರಿ ವ್ಯವಸ್ಥೆಯೊಂದಿಗೆ ಪರಿಚಯಿಸಲಾಗುತ್ತಿದೆ. ಖಾಸಗಿಗಿಂತ ಭಿನ್ನವಾಗಿ, ಭಾರತ್ ಟ್ಯಾಕ್ಸಿಯು ಮಾಲೀಕತ್ವ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ತತ್ವಗಳ ಮೇಲೆ ಕಾರ್ಯನಿರ್ವಹಿಸಲಿದ್ದು, ಚಾಲಕರು ಕೂಡ ಈ ಉದ್ಯಮದಲ್ಲಿ ಪಾಲುದಾರರಾಗಿರಲಿದ್ದಾರೆ.
    ಸಹಕಾರಿ ಟ್ಯಾಕ್ಸಿ ಉದ್ಯಮವು 300 ಕೋಟಿ ರೂ.ಗಳ ಅಧಿಕೃತ ಬಂಡವಾಳದೊಂದಿಗೆ ಆರಂಭವಾಗಲಿದ್ದು, ಭಾರತದ ಸಹಕಾರಿ ತತ್ವದ ಮನೋಭಾವದೊಂದಿಗೆ ಮುನ್ನಡೆಯಲಿದೆ. ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶದ ಸುಮಾರು 200 ಚಾಲಕರನ್ನು ಆರಂಭಿಕ ಹಂತದ ಸಿದ್ಧತೆಯ ಭಾಗವಾಗಿ ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ವಿಶೇಷವಾಗಿ ಗುಜರಾತ್‌ನಲ್ಲಿ ಟ್ರೇಡ್ ಯೂನಿಯನ್‌ಗಳು ಮತ್ತು ಗಿಗ್ ವರ್ಕರ್ ಸಂಘಗಳು ಸಹಕಾರ ಸಚಿವಾಲಯದ ಈ ಕ್ರಮವನ್ನು ಬೆಂಬಲಿಸಿವೆ. ಡಿಸೆಂಬರ್‌ನಲ್ಲಿ ಅಪ್ಲಿಕೇಶನ್ ಬಿಡುಗಡೆಗೆ ಯೋಜಿಸಲಾಗಿದ್ದು, ಲೋಗೋ ಮತ್ತು ಟ್ಯಾಗ್‌ಲೈನ್ ವಿನ್ಯಾಸಕ್ಕಾಗಿ ಸ್ಪರ್ಧೆ ಏರ್ಪಡಿಸಲಾಗಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Bharat Taxi Logo Logo and Tagline Contest Ministry of Home Affairs and Cooperation MyGov platform Sahakar Taxi Cooperative Limited
    Previous Articleಸಂತೆಕಟ್ಟೆ, ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕಿನ ಹೊಸ ಶಾಖೆಗಳು ಆರಂಭ
    Next Article ಆಗಸ್ಟ್‌ 24ರಂದು ಭಗವತೀ ಸಹಕಾರ ಬ್ಯಾಂಕ್‌ ಮಹಾಸಭೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.