ಕಲಬುರಗಿ: ಇಲ್ಲಿನ ಕಮಲಾಪುರದ ವಿ.ಕೆ.ಸಲಗರ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಉಮಾಕಾಂತ ರಾಜಗಿರಿ, ಉಪಾಧ್ಯಕ್ಷರಾಗಿ ಶಂಭುಲಿಂಗ ರಾಮಶೆಟ್ಟಿ ಆಯ್ಕೆಯಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಂಘದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಉಮಾಕಾಂತ ರಾಜಗಿರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಂಭುಲಿಂಗ ಎದುರಾಳಿಗಳನ್ನು ಪರಾಭವಗೊಳಿಸಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಚುನಾಯಿತರಾದರು. ರಾಜಕುಮಾರ ರಾಠೋಡ್ ಚುನಾವಣಾಧಿಕಾರಿಯಾಗಿದ್ದರು. ಚುನಾವಣಾ ಪ್ರಕ್ರಿಯೆ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ರಾಜಗಿರೆ, ಸಂಜು ಪಾಟೀಲ್, ಹಾಲಪ್ಪ ಸಿರಗಾಪುರ, ನಾಗರಾಜ ಮೂಲಗೆ, ಬಸವರಾಜ ಅಕ್ಕಲಕೋಟ, ಸಿದ್ದಣ್ಣ ಸೌಳ್ಸೆ, ಪಂಚಾಕ್ಷರಿ ಮಠ, ಸತೀಶ ಪಾಟೀಲ, ಶಿವರಾಜ ಬಿರಬಿಟ್ಟಿ, ಸಂಗಶೆಟ್ಟಿ ಮೂಲಗೆ, ಮಲ್ಲಿಕಾರ್ಜುನ ಸೊರಡೆ, ಶಿವಾನಂದ ರಾಮಶೆಟ್ಟಿ, ಶಿವಾನಂದ ರಾಜಗಿರೆ, ಅಕ್ಷರಬಾಯಿ ಕಾಂಬ್ಳೆ, ಕುಪೇಂದ್ರ ಲೇಂಗಟಿ, ವೀರೇಶ ಒಂಟೆ, ಶಿವಾನಂದ ದಂಡೆ, ಗಣಪತರಾವ ಪಾಟೀಲ, ಶಿವಾನಂದ ಟೇಂಗಳಿ, ಲಕ್ಷ್ಮಣ ಭಂಡಾರಿ, ಜಗನ್ನಾಥ ಕಾಂಬ್ಳೆ, ಪುಂಡಲೀಕ ಪೂಜಾರಿ, ಕಾಂತಣ್ಣ ಕಣ್ಣಿ ಮೊದಲಾದವರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com










