ಮಂಗಳೂರು: ಪ್ರತಿಷ್ಠಿತ ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಚೇರಿಯಲ್ಲಿ 79ನೇ ಸ್ವಾತಂತ್ರ‍್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿ, ಗಣ್ಯರು ಮತ್ತು ಹಿತೈಷಿಗಳು ಹಾಜರಿದ್ದರು.
https://chat.whatsapp.com/EbVKVnWB6rlHT1mWtsgbch
ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಟ್ರಸ್ಟ್‌ನ ಖಜಾಂಚಿ, ವಕೀಲ ಪದ್ಮರಾಜ್ ಆರ್. ಪೂಜಾರಿ, ನಿಕಟಪೂರ್ವ ಕಾರ್ಪೊರೇಟರ್, ವಕೀಲ ಎ.ಸಿ.ವಿನಯರಾಜ್ ಮುಖ್ಯ ಅತಿಥಿಗಳಾಗಿದ್ದರು. ಎಂಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಪ್ರೊ.ಎಡ್ಮಂಡ್ ಫ್ರಾಂಕ್ ಮತ್ತು ಮಾಜಿ ವೃತ್ತಿಪರ ನಿರ್ದೇಶಕ ಮೈಕೆಲ್ ಡಿಸೋಜ ಗೌರವ ಅತಿಥಿಗಳಾಗಿದ್ದರು. ಪದ್ಮರಾಜ್ ಆರ್.ಪೂಜಾರಿ ಧ್ವಜಾರೋಹಣ ಮಾಡಿದರು. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರು.


ಪದ್ಮರಾಜ್ ಪೂಜಾರಿ ಮಾತನಾಡಿ, ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗಗಳನ್ನು ಸ್ಮರಿಸಿ, ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು, ಈ ಮೌಲ್ಯವನ್ನು ಅಳವಡಿಸಿಕೊಳ್ಳುವಾಗ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿ, ಎಂ.ಸಿ.ಸಿ. ಬ್ಯಾಂಕಿನ ಪ್ರಗತಿ ಮತ್ತು ಬ್ಯಾಂಕ್ ಇಡೀ ಕರ್ನಾಟಕದಲ್ಲಿ ಉತ್ತಮ ಸೇವೆ ನೀಡುತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಎ.ಸಿ. ವಿನಯರಾಜ್ ಮಾತನಾಡಿ, ಮಹಾತ್ಮ ಗಾಂಧಿಯವರ ಅಹಿಂಸೆಯ ತತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ವಿವರಿಸಿದರು.

ನಗರ ಸಂಚಾರ ನಿರ್ವಹಣೆಗೆ ನಿಸ್ವಾರ್ಥ ಕೊಡುಗೆ ನೀಡಿದ ಮಂಗಳೂರು ನಗರದ ಸಮರ್ಪಿತ ಸಂಚಾರ ವಾರ್ಡನ್‌ಗಳಾದ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್, ಸುನಿಲ್ ಜಾನ್ ಡಿಸೋಜ, ಜಯಂತಿ ಮತ್ತು ಮಾರ್ಸೆಲ್ ಜಾನ್ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ವೃತ್ತಿಪರ ನಿರ್ದೇಶಕ ಸುಶಾಂತ್ ಸಲ್ಡಾನಾ ಅವರು ಮಂಗಳೂರು ಡಯಾಸಿಸ್ ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕಾಗಿ ಗೌರವಿಸಲಾಯಿತು. ಬ್ಯಾಂಕಿನ ನಿರ್ದೇಶಕ ರೋಶನ್ ಡಿಸೋಜ ವಕೀಲರಾಗಿ 25 ವರ್ಷಗಳನ್ನು ಪೂರೈಸಿದಕ್ಕಾಗಿ ಗೌರವಿಸಲಾಯಿತು.
ಆಲ್ವಿನ್ ಡಿಸೋಜ ಮತ್ತು ತಂಡ ಪ್ರಾರ್ಥನಾ ಗೀತೆ ಹಾಡಿದರು. ನಂತರ ದೇಶಭಕ್ತಿ ಗೀತೆಗಳು ಮೊಳಗಿದವು. ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಅನಿಲ್ ಪತ್ರಾವೊ, ರೋಶನ್ ಡಿಸೋಜ, ಐರೀನ್ ರೆಬೆಲ್ಲೊ, ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೇರೊ, ಡಾ| ಜೆರಾಲ್ಡ್ ಪಿಂಟೊ, ಮೆಲ್ವಿನ್ ವಾಸ್, ಎಲ್ರಾಯ್ ಕ್ರಾಸ್ಟೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನಾ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೆಜಸ್, ಆಲ್ವಿನ್ ಪಿ. ಮೊಂತೇರೊ ಮತ್ತು ಎಂಸಿಸಿ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜೈಸನ್ ಶಿರ್ತಾಡಿ ನಿರೂಪಿಸಿ, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಧನ್ಯವಾದ ಅರ್ಪಿಸಿದರು.

