ಮಂಗಳೂರು: ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಆ.24ರಂದು ಬೆಳಗ್ಗೆ 11ರಿಂದ ಉರ್ವಾಸ್ಟೋರ್ ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಇದೇ ಕಾರ್ಯಕ್ರಮದಲ್ಲಿ ಐದು ಸಾಧಕರಿಗೆ ಎಸ್.ಕೆ.ಜಿ.ಐ ಪುರಸ್ಕಾರ ಪ್ರದಾನ ಮಾಡಲಾಗುವುದು.
https://chat.whatsapp.com/EbVKVnWB6rlHT1mWtsgbch
ಪಂಚ ಕಸುಬುಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಗೌರವ ಸನ್ಮಾನ ನಡೆಸಲಾಗುವುದು. ಸ್ವರ್ಣ ಶಿಲ್ಪಿ ಎನ್.ರಾಮಚಂದ್ರ ಆಚಾರ್ಯ ಕಾರ್ಕಳ, ಕಾಷ್ಠ ಶಿಲ್ಪಿ ಬಳ್ಕೂರು ಗೋಪಾಲ ಆಚಾರ್ಯ ಮಣಿಪಾಲ, ಅಯಸ್ ಶಿಲ್ಪಿ ಲೀಲಾವತಿ ಆಚಾರ್ಯ ಸುಳ್ಯ, ಎರಕ ಶಿಲ್ಪಿ ಹರೀಶ್ಚಂದ್ರ ಆಚಾರ್ಯ ಬೆಳ್ತಂಗಡಿ, ಶಿಲಾ ಶಿಲ್ಪಿ ಜನಾರ್ಧನ ಆಚಾರ್ಯ ಕಾರ್ಕಳ ಇವರಿಗೆ ಎಸ್.ಕೆ.ಜಿ.ಐ ಪುರಸ್ಕಾರ ಪ್ರದಾನ ಮಾಡಲಾಗುವುದು.
ಸಂಗೀತ ಕ್ಷೇತ್ರದ ಸಾಧಕ ಯಶವಂತ ಎಸ್.ಟಿ ಮೂಡುಬಿದಿರೆ, ವಾಗ್ಮಿ ಎಸ್.ಆರ್ ದಾಮೋದರ ಶರ್ಮ ಬಾರಕೂರ್, ಕಲಾ ಕ್ಷೇತ್ರದ ಸಾಧಕ ಎ.ಟಿ ಸದಾಶಿವ ಮಂಗಳಾದೇವಿ, ವೈದಿಕ ಕ್ಷೇತ್ರದ ಸಾಧಕ ಬ್ರಹ್ಮಶ್ರೀ ಉಮೇಶ್ ತಂತ್ರಿ ಮಂಗಳೂರು, ಯಕ್ಷಗಾನ ಕ್ಷೇತ್ರದ ಕೆ.ಜೆ ಗಣೇಶ್ ಆಚಾರ್ಯ, ಉಡುಪಿ, ಚಿತ್ರಕಲಾ ಕ್ಷೇತ್ರದ ಲಕ್ಷ್ಮೀನಾರಾಯಣ ಬಂಟ್ವಾಳ ಇವರನ್ನು ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

