ಕಾರ್ಕಳ: ಇಲ್ಲಿನ ಕೊಂಕಣ್ ಕ್ಯಾಥೋಲಿಕ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಕಾರ್ಕಳ ಕ್ರಿಸ್ಟ್ ಕಿಂಗ್ ಚರ್ಚ್ ಸಭಾಭವನದಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸಹಕಾರಿಯ ಅಧ್ಯಕ್ಷರಾದ ಡಾ|ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ರೋಶನ್ ಡಿಸೋಜ ವರ್ಷದ ವರದಿ ಮಂಡಿಸಿದರು. ಅಧ್ಯಕ್ಷ ಡಾ. ಪೀಟರ್ ಫರ್ನಾಂಡಿಸ್ ಮಾತನಾಡಿ, ಸಹಕಾರಿಯು ಹಿಂದಿನ ವರ್ಷ ರೂ. 81 ಕೋಟಿ ವ್ಯವಹಾರ ಮಾಡಿದ್ದು, ಮುಂದಿನ ವರ್ಷ 100 ಕೋಟಿ ರೂ. ವ್ಯವಹಾರ ಮಾಡುವ ಯೋಜನೆ ಮಾಡಲಾಗಿದೆ. ಅಲ್ಲದೆ ವರ್ಷದ ಠೇವಣಿ ಹಿಂದಿನ ವರ್ಷದಿಂದ 12% ವೃದ್ದಿಯಾಗಿರುತ್ತದೆ. ಸದಸ್ಯರಿಗೆ 10% ಡಿವಿಡೆಂಡ್ ನೀಡುವುದರ ಕುರಿತು ಘೋಷಿಸಿದರು.

ನಂತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಾರ್ಕಳ ವಲಯದ 33 ಕ್ರೈಸ್ತ ವಿದ್ಯಾರ್ಥಿಗಳನ್ನು ಸನ್ಮಾನಿಲಾಯಿತು. ಮುಖ್ಯ ಅತಿಥಿಯಾಗಿ ಮಿಯಾರು ಚರ್ಚ್ ಧರ್ಮಗುರುಗಳಾದ ಅ|ವಂ| ಕ್ಯಾನೂಟ್ ಬರ್ಬೋಜ, ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳ ಪಾಲನಾ ಸಮಿತಿ ಉಪಾಧ್ಯಕ್ಷರಾದ ನೋವೆಲ್ ಡಿಸಿಲ್ವ ಮತ್ತು ಸಹಕಾರಿಯ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com








