ಮಾನ್ವಿ: ರಾಯಚೂರು ಜಿಲ್ಲೆಯ ಪೋತ್ನಾಳ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪೋತ್ನಾಳ ಇದರ 12ನೇ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಮಹಾಸಭೆಯನ್ನು ಸಹಕಾರಿಯ ಅಧ್ಯಕ್ಷರಾದ ಮೂರ್ತಯ್ಯ ಶೆಟ್ಟಿ ಕೆ ಮತ್ತು ಉಪಾಧ್ಯಕ್ಷರಾದ ಬಸವರಾಜ್ ಎಂ ದೀಪ ಬೆಳಗಿಸಿ ಉದ್ಘಾಟಿಸಿದರು. ಸಹಕಾರಿಯು 2024- 25ನೇ ಸಾಲಿನಲ್ಲಿ 43.76 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರ ಷೇರಿಗೆ ಶೇ.16 ಲಾಭಾಂಶ ಘೋಷಣೆ ಮಾಡಲಾಯಿತು. ಸಹಕಾರಿಯು ಕಳೆದ 2024-25ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಒಟ್ಟು 10 ಕೋಟಿ 44 ಲಕ್ಷ ರೂ. ಠೇವಣಿ ಹೊಂದಿದ್ದು, ಸದಸ್ಯರಿಗೆ ಒಟ್ಟು ರೂ. 9 ಕೋಟಿ 86 ಲಕ್ಷ ವಿವಿಧ ರೀತಿಯ ಸಾಲ ನೀಡಲಾಗಿದೆ.

ಈ ವಾರ್ಷಿಕ ಮಹಾಸಭೆಗೆ ಸಹಕಾರಿಯ ನಿರ್ದೇಶಕರು.ಸಹಕಾರಿಯ ಕಾನೂನು ಸಲಹೆಗಾರರು, ಸಹಕಾರಿಯ ಲೆಕ್ಕಪರಿಶೋಧಕರು, ಸಹಕಾರಿಯ ಸಿಬ್ಬಂದಿ, ಪಿಗ್ಮಿ ಏಜೆಂಟರು ಮತ್ತು ಸಹಕಾರಿಯ ಸದಸ್ಯರು ಹಾಜರಿದ್ದರು. ಈ ಸಭೆಯ ಸಹಕಾರಿಯ ವಾರ್ಷಿಕ ವರದಿಯನ್ನು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರಾದ ಸುಧಾಕರ್ ಆರ್ ಮಂಡಿಸಿದರು. ಸಹಕಾರಿ ಅಧಿಕಾರಿ ಶಿವರಾಜ್ ವಂದಿಸಿದರು. ಸಹಕಾರಿಯ ಸಿಬ್ಬಂದಿ ಬಸವರಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು.

