ಉಪ್ಪಿನಂಗಡಿ: ಇಲ್ಲಿನ ಪೃಥ್ವಿ ಶಾಪಿಂಗ್ ಮಹಲ್ 1ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಉಪ್ಪಿನಂಗಡಿ ದೀನರ ಕನ್ಯಾಮಾತ ದೇವಾಲಯದ ಮಿನಿ ಹಾಲ್ ನಲ್ಲಿ ಭಾನುವಾರ ಅಧ್ಯಕ್ಷ ರಾಬರ್ಟ್ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ಜರಗಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಬರ್ಟ್ ಡಿಸೋಜ ಅವರು ಸಂಘದಲ್ಲಿ ವರದಿ ವರ್ಷಾಂತ್ಯಕ್ಕೆ 483 ಸದಸ್ಯರಿದ್ದು ರೂ. 43.21 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದ್ದು ವಿವಿಧ ಠೇವಣಿ ಮೊತ್ತವು ರೂ.9.33 ಕೋಟಿ ಆಗಿದ್ದು ವಿವಿಧ ರೂಪದಲ್ಲಿ ಸಂಘದ ಸದಸ್ಯರಿಗೆ ರೂ.3,07,48,461.00 ಸಾಲ ನೀಡಿ 31.03.2025 ಕ್ಕೆ ರೂ. 3,12,06,860.00 ಮರುಪಾವತಿ ಆಗಿ ರೂ. 8,38,47,381.00 ಹೊರ ಬಾಕಿ ಇರುತ್ತದೆ. ವರದಿ ವರ್ಷದಲ್ಲಿ ರೂ. 30,06,89,399.98 ವ್ಯವಹಾರ ನಡೆಸಿದ್ದು, 31.03.2025ಕ್ಕೆ ರೂ. 2,04,873.38 ಲಾಭ ಗಳಿಸಿದೆ. ಶೇರು ಬಂಡವಾಳ ಹೊಂದಿದ ಸದಸ್ಯರಿಗೆ 4% ಡಿವಿಡೆಂಡ್ ವಿಂಗಡಿಸಲಾಗುವುದು ಎಂದು ಘೋಷಣೆ ಮಾಡಿದರು.

ಹಿಂದಿನ ಸಭೆಯ ವರದಿಯನ್ನು ಕಡಬ ಶಾಖಾ ಪ್ರಬಂಧಕರಾದ ಭವ್ಯ ನಿತ್ಯ ಲೋಬೋ ಮಂಡಿಸಿದರು, ಲೆಕ್ಕಪತ್ರಗಳನ್ನು ಕಾರ್ಯನಿರ್ವಾಹಕರಾದ ವಿಲ್ಫ್ರೆಡ್ ವಿನ್ಸೆಂಟ್ ಡಿಸೋಜ ಸಭೆಯ ಮುಂದಿರಿಸಿದರು. ಸಂಘದ ಲಾಭಾಂಶದಲ್ಲಿ ಉಪ್ಪಿನಂಗಡಿ ದೀನರ ಕನ್ಯಾಮಾತ ದೇವಾಲಯಕ್ಕೆ ಏರ್ ಕೂಲರ್ ಹಸ್ತಾಂತರಿಸಲಾಯಿತು. ಮಹಮ್ಮದ್ ಅನಾನ್ ಎಂಬುವವರಿಗೆ ಸಹಾಯಧನವನ್ನು ಉಪ್ಪಿನಂಗಡಿ ರೋಟರಿ ಅಧ್ಯಕ್ಷ ಹಾಗೂ ಸದಸ್ಯರಾದ ಜೋನ್ ಕೆನ್ಯೂಟ್ ಅವರ ಮೂಲಕ ಹಸ್ತಾಂತರಿಸಲಾಯಿತು. ಸಂಘದ ನಿರ್ದೇಶಕರಾದ ಮ್ಯಾಕ್ಸಿಂ ಲೋಬೋ ಅವರಿಗೆ ಮತ್ತು ಸದಸ್ಯ ಗ್ರಾಹಕರಾದ ಪ್ರಶಾಂತ್ ಡಿಕೋಸ್ಟ ಅವರನ್ನು ಗೌರವಿಸಲಾಯಿತು.

ಸೊಸೈಟಿಯ ನಿರ್ದೇಶಕರಾದ ಗ್ರೆಗರಿ ಲೋಬೋ, ಹೆನ್ರಿ ಲೋಬೋ, ಸೆಬೆಸ್ಟಿಯನ್ ಲೋಬೋ, ಸಿಲ್ವೆಸ್ಟರ್ ವೇಗಸ್, ವಿನ್ಸೆಂಟ್ ಕೆನ್ಯೂಟ್ ಮಿನೇಜಸ್, ಮ್ಯಾಕ್ಸಿಂ ಲೋಬೋ, ಐರಿನ್ ಲೋಬೋ, ವಿನ್ಸೆಂಟ್ ವೇಗಸ್, ಯೋಹನ್ನಾನ್ ಎ ಯು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳನ್ನು ಹಾಗೂ ಪಿಗ್ಮಿ ಸಂಗ್ರಾಹಕರನ್ನು ಸನ್ಮಾನಿಸಲಾಯಿತು. ಸಿಬ್ಬಂದಿಗಳಾದ ಸಂತೋಷ್ ಪಿಂಟೋ, ಶ್ರೇಯಸ್ ಶೆಟ್ಟಿ ಕೊಕ್ಕಡ, ಜೋನ್ಸಿ ಡಿಸೋಜ, ಭವ್ಯ ನಿತ್ಯ ಲೋಬೋ, ತನುಶ್ರೀ ಸಹಕರಿಸಿದರು. ಸಂಘದ ನಿರ್ದೇಶಕರಾದ ವಿನ್ಸೆಂಟ್ ಕೆನ್ಯೂಟ್ ಮಿನೇಜಸ್ ವಂದಿಸಿದರು.

