Author: admin

ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬೆಂದೂರಿನ ಸೇಂಟ್‌ ಸೆಬಾಸ್ಟಿಯನ್‌ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಂಘದ ಅಧ್ಯಕ್ಷ ಚಂದ್ರಶೇಖರ್‌ ಕೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ 2024-25 ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರ, ಬಜೆಟ್ ಮಂಡಿಸಿದರು. ಸೊಸೈಟಿಯ ಲಾಭದಲ್ಲಿ ಶೇ.20 ಡಿವಿಡೆಂಡ್ ಘೋಷಿಸಲಾಯಿತು. ಹಾಲಿ ಸಾಲಿನಲ್ಲಿ ಗರಿಷ್ಠ ಲಾಭ ಗಳಿಕೆ, ಠೇವಣೆ, ಸಾಲ ಸೌಲಭ್ಯ ಕಳೆದ ಸಾಲಿಗೆ ಹೋಲಿಸಿದಾಗ ಶೇ.29 ವೃದ್ಧಿಯಾಗಿದ್ದು, ವಾರ್ಷಿಕ ವಹಿವಾಟಿನಲ್ಲಿ ಗರಿಷ್ಠ ವೃದ್ಧಿಯ ದಾಖಲೆ ಮಾಡಿರುವುದನ್ನು ಸಭೆಯಲ್ಲಿ ಪ್ರಶಂಶಿಸಲಾಯಿತು. ಸೊಸೈಟಿಯು ಹಾಲಿ ನಾಲ್ಕು ಶಾಖೆಗಳನ್ನು ಹೊಂದಿದ್ದು ಮಂಗಳೂರು, ಸುರತ್ಕಲ್, ಉಡುಪಿ, ಬಂಟ್ವಾಳದ ಎಲ್ಲ ಶಾಖೆಗಳೂ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿವೆ. ಐದನೇ ಶಾಖೆಯನ್ನು ಬೆಳ್ತಂಗಡಿಯಲ್ಲಿ ತೆರೆದು ವ್ಯವಹಾರ ಆರಂಭಗೊಂಡಿದ್ದು ಅಧಿಕೃತ ಉದ್ಘಾಟನೆ ಅಕ್ಟೋಬರ್‌ ಒಂದರಂದು ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಸಂಸ್ಥೆಯು ಸತತ ಲಾಭ ಗಳಿಸುತ್ತ ಆಡಿಟ್‌…

Read More

ಸಮಾಜಕ್ಕಾಗಿ ದುಡಿಯುವ, ದೇಶಸೇವೆ ಮಾಡುವ ಮನೋಭಾವವಿದ್ದರೆ ಅದುವೇ ಮಹಾನ್ ಸೇವೆ: ಪ್ರಾಂಜಲ್ ತಂದೆ ಎಂ ವೆಂಕಟೇಶ್ ಅಭಿಪ್ರಾಯ ಮಂಗಳೂರು: ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಯಾಗಿ 25 ವರ್ಷಗಳು ಆಗಿರುವ ಶುಭ ಸಂದರ್ಭದಲ್ಲಿ ಮಂಗಳೂರಿನ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ವಿಭಿನ್ನ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಮಂಗಳಾದೇವಿಯ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಯಿತು. ವಿಶೇಷ ಕಾರ್ಯಕ್ರಮದ ಅಂಗವಾಗಿ ದೇಶಸೇವೆಯ ಕೈಂಕರ್ಯದಲ್ಲಿ ವೀರಮರಣವನ್ನಪ್ಪಿದ ಕ್ಯಾ.ಪ್ರಾಂಜಲ್ ಅವರ ಸ್ಮರಣೆಗಾಗಿ ಪ್ರಾಂಜಲ್ ಸ್ಮರಣಾoಜಲಿ ಹಮ್ಮಿಕೊಳ್ಳಲಾಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಇದೇ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ 25 ಜನರಿಗೆ ವೀಲ್ ಚೇರ್‌ಗಳನ್ನು, 25 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ 25 ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ಗ್ರಂಥಾಲಯಗಳಿಗೆ ತಲಾ 100 ಪುಸ್ತಕಗಳ ವಿತರಣೆಯೂ ನಡೆಯಿತು. ಪ್ರಾಂಜಲ್ ಅವರ ತಂದೆ ಎಂಆರ್‌ಪಿಎಲ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಮಾತನಾಡಿ, ನಮ್ಮ ಮಗನ ಮೂಲಕ ಸೈನ್ಯದ ಸೇವೆಯ ಕಾರ್ಯ ಮಾಡುವ ನಮ್ಮ ಕನಸುಗಳು ನೆರವೇರಿದೆ. ಬಹುಮುಖ್ಯವಾಗಿ ನಾವು ಸೈನಿಕರಲ್ಲವಾದರೂ ಸಮಾಜಕ್ಕಾಗಿ…

Read More

ಮಂಗಳೂರು: ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಬ್ಯಾಂಕಿನ ಅಧ್ಯಕ್ಷ ಎ.ಲೋಕೇಶ್‌ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್ ವರದಿ ಸಾಲಿನಲ್ಲಿ 1010 ಕೋಟಿ ರೂ. ವ್ಯವಹಾರ ನಡೆಸಿದೆ. ಪಾಲು ಬಂಡವಾಳ 4.47 ಕೋಟಿ ರೂ. ಠೇವಣಿ 191 ಕೋಟಿ ರೂ. ಹೊಂದಿದೆ. 157 ಕೋಟಿ ರೂ. ಸಾಲ ನೀಡಿದ್ದು, 2,63,56,187.61 ರೂ. ಲಾಭ ಗಳಿಸಿದೆ ಎಂದು ಹೇಳಿ ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರನೀಡಿ ಗೌರವಿಸಲಾಯಿತು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರೀತಮ್ ಪಿ.ಪೂಜಾರಿ ಅವರು ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಬ್ಯಾಂಕಿನ ಉಪಾಧ್ಯಕ್ಷ ಎಸ್.ಧನಂಜಯ ಬಂಗೇರ, ನಿರ್ದೇಶಕರಾದ ಪ್ರೇಮಾ, ಸುಮಂತ್ ರಾವ್, ನೇಮಿರಾಜ್ ಶೆಟ್ಟಿ, ಶ್ರೀರಂಜಿನಿ ಬಿ.ವಿಟ್ಠಲ ಶೆಟ್ಟಿ, ಗಣೇಶ್ ಶೆಟ್ಟಿ, ಸಿತೇಶ್‌ ಕೊಂಡೆ, ಶರ್ಮಿಳಾ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ಸುಮಂತ್ ರಾವ್‌ ವಂದಿಸಿದರು. ನಿಮ್ಮ ಸಂಸ್ಥೆಗಳ…

Read More

ಬೆಳ್ತಂಗಡಿ; ವಿಧಾನ ಪರಿಷತ್‌ ಮಾಜಿ ಸದಸ್ಯರೂ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಬೆಳ್ತಂಗಡಿ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಇವರನ್ನು ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಖಾಲಿ ಇದ್ದ ೩೯ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರ ಮೆಸ್ಕಾಂಗೆ ಹರೀಶ್‌ ಕುಮಾರ್‌ ಅವರನ್ನು ನೇಮಕ ಮಾಡಿದೆ. 1978ರಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಹರೀಶ್‌ ಕುಮಾರ್‌ ಅವರು, 1978 ರಲ್ಲಿ ನಡೆದ ಐತಿಹಾಸಿಕ ಚಿಕ್ಕಮಗಳೂರು ಉಪಚುನಾವಣೆಯಲ್ಲಿ (ಇಂದಿರಾ ಗಾಂಧಿ ಸ್ಪರ್ಧಿಸಿದ್ದರು) ಕೆಲಸ ಮಾಡಿದ್ದರು. ಬಳಿಕ ಬೆಳ್ತಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ (1980-1984), ಬೆಳ್ತಂಗಡಿ ಭೂ ನ್ಯಾಯಮಂಡಳಿ ಸದಸ್ಯರಾಗಿ (1981-1983) ನೇಮಕಗೊಂಡಿದ್ದರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡು ಅವಧಿಗೆ (1984-1986 ಮತ್ತು 2004-2017) ಕಾರ್ಯನಿರ್ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, (1986-1990), ಜಿಲ್ಲಾ ಪರಿಷತ್ ಸದಸ್ಯರಾಗಿ (1987-1992)…

Read More

ಸಿದ್ದಕಟ್ಟೆ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದ ಸಿಬ್ಬಂದಿ ಯಶೋಧರ ಶೆಟ್ಟಿಗಾರ್ ನಿವೃತ್ತರಾಗಿದ್ದು, ಅವರನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗೌರವಿಸಲಾಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಇವರು ಯಶೋಧರ ಶೆಟ್ಟಿಗಾರ್ ಾವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸಂದೇಶ ಶೆಟ್ಟಿ, ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ, ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಶಿವ ಗೌಡ, ವಿಶ್ವನಾಥ ಶೆಟ್ಟಿಗಾರ್, ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ , ನವೀನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಬಂಟ್ವಾಳ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶೇಷ ತರಬೇತಿ ಶಿಬಿರ ಬಂಟ್ವಾಳ: ಸಹಕಾರ ಕ್ಷೇತ್ರ ಪವಿತ್ರವಾದ ಕ್ಷೇತ್ರ. ರಾಸುಗಳ ಖರೀದಿಗೆ ಒಂದು ಎಕರೆ ಭೂಮಿ ಇರುವವರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಮೂರು ಲಕ್ಷ ರೂ.ವರೆಗೂ ಬಡ್ಡಿ ರಹಿತ ನೀಡುತ್ತಿದೆ. ಇದರ ಸದುಪಯೋಗದ ಬಗ್ಗೆ ಹೈನುಗಾರ ಸದಸ್ಯರಿಗೆ ತಿಳಿಯಪಡಿಸಬೇಕು. ರೈತ ಬೆಳಗಿದರೆ ಭಾರತ ವಿಕಾಸವಾಗುತ್ತದೆ ಎಂದು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರೂ ಆಗಿರುವ ಶಶಿಕುಮಾರ್‌ ರೈ ಬಾಲ್ಯೊಟ್ಟು ಅಭಿಪ್ರಾಯಪಟ್ಟರು. https://chat.whatsapp.com/JVAtKKe2M19AFO3W5629ZS?mode=ems_copy_t ಬಂಟ್ವಾಳ ವ್ಯವಸಾಯ ಸೇವಾ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಹಾಲು ಒಕ್ಕೂಟ ನಿಯಮಿತ ಮಂಗಳೂರು ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ…

Read More

ನವದೆಹಲಿ: ಭಾರತದ ಪ್ರಮುಖ ರಸಗೊಬ್ಬರ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಭ್ಕೋ)ದ 45ನೇ ವಾರ್ಷಿಕ ಸಾಮಾನ್ಯ ಸಭೆ ಗುರುವಾರ ನವದೆಹಲಿಯಲ್ಲಿ ನಡೆದಿದ್ದು, ಪ್ರತಿಷ್ಠಿತ ಸಹಕಾರಿ ಶಿರೋಮಣಿ ಪ್ರಶಸ್ತಿ ಮತ್ತು ಸಹಕಾರಿ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಗುಜರಾತ್‌ನ ಸಹಕಾರಿ ಚಳವಳಿಯ ವಿಶಿಷ್ಟ ನಾಯಕ ಅರವಿಂದಭಾಯಿ ತಗಾಡಿಯಾ ಅವರಿಗೆ ಸಹಕಾರಿ ಶಿರೋಮಣಿ ಪ್ರಶಸ್ತಿ ನೀಡಲಾಯಿತು. ಗುಜರಾತ್‌ನಾದ್ಯಂತ ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಅರವಿಂದ ತಗಾಡಿಯಾ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಹಲವಾರು ಪ್ರಮುಖ ಸಹಕಾರಿ ಸಂಸ್ಥೆಗಳ ಮಂಡಳಿಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರಿ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ತಳಮಟ್ಟದ ಸಬಲೀಕರಣ ಮತ್ತು ನಾಯಕತ್ವಕ್ಕಾಗಿ ಅವರ ಸಮರ್ಪಣಾ ಮನೋಭಾವ ಸಹಕಾರಿ ವಲಯದ ಅವರಿಗೆ ಹೆಚ್ಚಿನ ಗೌರವ ತಂದಿದೆ. ಇದೇ ಕಾರ್ಯಕ್ರಮದಲ್ಲಿ ಸಹಕಾರಿ ವಿಭೂಷಣ ಪ್ರಶಸ್ತಿಯನ್ನು ಮಹಾರಾಷ್ಟ್ರದ ಶೈಲಜಾದೇವಿ ಡಿ.ನಿಕಮ್ ಅವರಿಗೆ ಪ್ರದಾನ ಮಾಡಲಾಯಿತು. ದಶಕಗಳಿಂದ ಕ್ರಿಭ್ಕೋ ಜೊತೆ ಸಂಬಂಧ ಹೊಂದಿರುವ ಶೈಲಜಾದೇವಿಯವರು, ಕ್ರಿಭ್ಕೋ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವುದು ಸೇರಿದಂತೆ 40 ವರ್ಷಗಳಿಗೂ ಹೆಚ್ಚು ಕಾಲ…

Read More

ಸಿದ್ದಕಟ್ಟೆ: ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸತತ 33 ವರ್ಷ ಕಾಲ ಸೇವೆ ಸಲ್ಲಿಸಿ ಪದೋನ್ನತಿಗೊಂಡು ಪ್ರಾಂಶುಪಾಲರಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸನಗರ, ಶಿವಮೊಗ್ಗ ಜೆಲ್ಲೆಗೆ ವರ್ಗಾವಣೆಗೊಂಡಿರುವ ಶ್ರೀನಿವಾಸ ನಾಯ್ಕ ಅವರನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗೌರವಿಸಲಾಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಧ್ಯಕ್ಷರಾದ ಪ್ರಭಾಕರ ಪ್ರಭು ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸಂದೇಶ ಶೆಟ್ಟಿ, ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ, ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಶಿವ ಗೌಡ, ವಿಶ್ವನಾಥ ಶೆಟ್ಟಿಗಾರ್, ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ , ನವೀನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಮಂಗಳೂರು: ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಸಹಕಾರ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಉತ್ತಮ ಆಡಳಿತ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ ಶಿಬಿರವು ಸೆ.26ರಂದು ಬೆಳಗ್ಗೆ 10ರಿಂದ ಬಿ.ಸಿ.ರೋಡ್‌ ಕೈಕಂಬದ ಪೊಳಲಿ ದ್ವಾರದ ಬಳಿಯ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ‘ಅಕ್ಷಯ ಸೌಧ’ದಲ್ಲಿ ಆಯೋಜಿಸಲಾಗಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ದ.ಕ. ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಉದಯ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷರಾದ ಶಶಿಕುಮಾ‌ರ್ ರೈ ಬಾಲ್ಗೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ದ.ಕ. ಸಹಕಾರಿ ಹಾಲು ಒಕ್ಕೂಟ ಮತ್ತು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಸವಿತಾ ಎನ್.ಶೆಟ್ಟಿ, ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಬಿ.ಸುಧಾಕರ…

Read More

ನವದೆಹಲಿ: ಭಾರತದ ಎರಡನೇ ಅತಿದೊಡ್ಡ ಸಹಕಾರಿ ಸಂಸ್ಥೆ ಎನಿಸಿರುವ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಭ್ಕೋ)ದ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಎಸ್‌.ಎಸ್‌ ಯಾದವ್‌(ಸುಂದರ್ ಸಿಂಗ್ ಯಾದವ್) ಅವರನ್ನು ನೇಮಕ ಮಾಡಲಾಗಿದೆ. 2019ರ ಡಿಸೆಂಬರ್‌ನಿಂದ ಎಸ್‌.ಎಸ್‌ ಯಾದವ್‌ ಹೆಚ್‌ಆರ್‌ ನಿರ್ದೇಶಕರಾಗಿದ್ದು ಪ್ರಸಕ್ತ ಭಡ್ತಿ ನೀಡಿ ಎಂ.ಆರ್. ಶರ್ಮಾ ಅವರ ಬದಲಿಗೆ ನೇಮಿಸಲಾಗಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಕ್ರಿಭ್ಕೋದ 45ನೇ ವಾರ್ಷಿಕ ಮಹಾಸಭೆಯ ಒಂದು ದಿನ ಮೊದಲಷ್ಟೇ ಈ ನೇಮಕಾತಿ ಪ್ರಕಟಣೆ ಘೋಷಣೆಯಾಗಿದೆ. ಇತ್ತೀಚೆಗಷ್ಟೇ ಕ್ರಿಭ್ಕೋದ ಅಧ್ಯಕ್ಷರಾಗಿ ಸುಧಾಕರ್ ಚೌಧರಿ ಆಯ್ಕೆಯಾಗಿದ್ದರು. ತಮ್ಮ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌.ಎಸ್‌ ಯಾದವ್, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು ಹೆಚ್ಚಿನ ಉನ್ನತಿ ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ಸಹಕಾರಿ ಮಾದರಿಯು ಅಪಾರವಾದ ಸಾಮರ್ಥ್ಯವನ್ನು ಹೊಂದಿದ್ದು, ರೈತರಿಗೆ ನಮ್ಮಿಂದೇನು ಪ್ರಯೋಜನ ಸಿಗಬೇಕೋ ಅದನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಎಸ್.ಎಸ್. ಯಾದವ್ ಸಾರ್ವಜನಿಕ ಸೇವೆ ಮತ್ತು ಸಾಂಸ್ಥಿಕ ನಿರ್ವಹಣೆಯಲ್ಲಿ 30 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಉತ್ತರಾಖಂಡದ ಜಿ.ಬಿ.…

Read More