2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಪನ್ನ: ರೂ. 306.32 ಲಕ್ಷ ನಿವ್ವಳ ಲಾಭ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 2024-25ನೇ ಸಾಲಿನ 14ನೇ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ಪಡೀಲಿನ ಬೈರಾಡಿಕೆರೆ ಹತ್ತಿರದ ಸಂಘದ ಪ್ರಧಾನ ಕಚೇರಿ ಆತ್ಮಶಕ್ತಿ ಸೌಧದಲ್ಲಿ ಜರುಗಿತು. ಆತ್ಮಶಕ್ತಿ ಸಹಕಾರಿಯು ಅತ್ಯಲ್ಪ ಅವಧಿಯಲ್ಲಿ ಸಾಧಿಸಿದ ಉನ್ನತ ಪ್ರಗತಿಯನ್ನು ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರಶಂಸಿಸಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಂಘದ 2024-25ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮಂಡಿಸಿದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘವು ಪ್ರಸ್ತುತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 33 ಶಾಖೆಗಳನ್ನು ಹೊಂದಿದ್ದು, 2025-26ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆದು, ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸಿ ಪಾಲು ಬಂಡವಾಳವನ್ನು ರೂ. 2.5 ಕೋಟಿಗೆ ಹೆಚ್ಚಿಸಿ, ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ ರೂ.300 ಕೋಟಿಗೂ ಮಿಕ್ಕಿ ಠೇವಣಿಗಳನ್ನು ಸಂಗ್ರಹಿಸಿ, ರೂ.240 ಕೋಟಿಗೂ ಮಿಕ್ಕಿ ಸಾಲ ನೀಡುವ ಗುರಿಯನ್ನು ಹೊಂದಿದೆ ಎಂದರು. ಸಂಘದ ಪ್ರಗತಿಗೆ ಸದಸ್ಯರು ಕಾರಣರಾಗಿದ್ದು, ಈ ಸಹಕಾರಕ್ಕೆ ನಾವು ಸದಾ ಋಣಿಯಾಗಿರುತ್ತೇವೆ. ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಎಲ್ಲಾ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅಧ್ಯಕ್ಷರು, ಮುಂದಕ್ಕೆ ಸಂಘವು ಹಾಕಿಕೊಂಡಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲಾ ಸದಸ್ಯರ ಸಹಕಾರ ಕೋರಿದರು.


ಸಂಘವು ವರದಿ ಸಾಲಿನಲ್ಲಿ ಸದಸ್ಯರಿಂದ ಒಟ್ಟು ರೂ. 158.06 ಲಕ್ಷ ಷೇರು ಬಂಡವಾಳ, ರೂ. 24,635.16 ಲಕ್ಷ ಠೇವಣಿ ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ ರೂ. 21,525.69 ಲಕ್ಷ ಸಾಲ ನೀಡಲಾಗಿದೆ. ಸಂಘದ ದುಡಿಯುವ ಬಂಡವಾಳ ರೂ. 26,108.84 ಲಕ್ಷ ಇದೆ. ವರದಿ ವರ್ಷಕ್ಕೆ ಸಂಘವು ರೂ. 306.32 ಲಕ್ಷ ನಿವ್ವಳ ಲಾಭ ಗಳಿಸಿರುವುದು ಸಂಘದ ಹೆಗ್ಗಳಿಕೆಯಾಗಿದೆ. ಸಂಘದ ಸದಸ್ಯರಿಗೆ ವರದಿ ಸಾಲಿನಲ್ಲಿ ಶೇ.15 ಡಿವಿಡೆಂಡ್ ಘೋಷಿಸಲಾಯಿತು.


ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇವರಿಂದ ಅತೀ ಹೆಚ್ಚು ಮೊತ್ತದ ಇ-ಸ್ಟಾಂಪಿಂಗ್ ಮುದ್ರಿಸುವ ಪ್ರಶಸ್ತಿಯನ್ನು ಸಂಘ ಪಡೆದಿದೆ. 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ “ಉತ್ತಮ ಸಹಕಾರಿ ಸಂಘ” ಪ್ರಶಸ್ತಿ ಹಾಗೂ ಸದಸ್ಯರ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವುದರ ಜೊತೆಗೆ ಸಂಘದ ಕಾರ್ಯವೈಖರಿಯನ್ನು ಗುರುತಿಸಿ ಸತತ 10 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಕ್ಕೆ, ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಘದ ಸದಸ್ಯರ ಆರೋಗ್ಯದ ಕಾಳಜಿಯಿಂದ ಸತತವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುಕ್ಕೆ ಹಾಗೂ ಸಿಬ್ಬಂದಿಗಳ ನಗುಮೊಗದ ಗುಣಮಟ್ಟದ ಸೇವೆಗಳಿಗೆ ಸಭೆಯಲ್ಲಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಆನಂದ್ ಎಸ್.ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ಮುದ್ದು ಮೂಡುಬೆಳ್ಳೆ, ಬಿ.ಪಿ. ದಿವಾಕರ್, ಗೋಪಾಲ್ ಎಂ., ಚಂದ್ರಾವತಿ, ಉಮಾವತಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಸ್ವಾಗತಿಸಿ, ಉಪಾಧ್ಯಕ್ಷರಾದ ನೇಮಿರಾಜ್ ಪಿ. ವಂದಿಸಿದರು. ಅಭಿನಂದನಾ ಪುರಸ್ಕಾರ ಕಾರ್ಯಕ್ರಮವನ್ನು ಸಹಾಯಕ ಪ್ರಬಂದಕರಾದ ವಿಶ್ವನಾಥ ನಿರೂಪಿಸಿದರು.

ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಗೌರವಾನ್ವಿತ ಸ್ಥಾನ ಅಲಂಕರಿಸಿದ ಸಂಘದ ಸದಸ್ಯರಾದ ಡಾ.ಜಿ.ಆರ್. ರಾಧಾಕೃಷ್ಣ ಮೂರ್ತಿ, ಗೀತಾಂಜಲಿ ಎಂ.ಸುವರ್ಣ, ಕೃಷ್ಣಪ್ಪ ಗೌಡ ಪಡ್ಡಂಬೈಲು, ಚಂದ್ರಶೇಖರ್ ಕುಮಾರ್, ದಯಾನಂದ ಅಡ್ಯಾರ್, ಜನಾರ್ಧನ್ ಅತ್ತಾವರ್, ಸತೀಶ್ ಕುಮಾರ್, ಗೋಪಾಲ ಪೂಜಾರಿ, ರವಿ ಪೂಜಾರಿ, ಉಮ್ಮಪ್ಪ ಪೂಜಾರಿ, ಭಗವಾನ್ ದಾಸ್, ಪ್ರಮೀಳಾ, ನವೀನ್ ಕುಮಾರ್, ಸೋಹನ್ ಅತಿಕಾರಿ, ವಿವೇಕ್ ಪೂಂಜ, ಪ್ರಭಾಕರ್ ಅಮೀನ್, ಗೋಪಾಲ್ ಕೊಂಡಾಣ, ನಾಗೇಶ್ ಪೂಜಾರಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಬಹುಮುಖ ಪ್ರತಿಭೆ, ಸಂಘದ ಸದಸ್ಯರ ಮಕ್ಕಳಾದ ವೃಷಿಕಾ ಸಿ.ಬೋಳಾರ್, ಅನ್ವಿಕ್ಷಾ, ಶ್ರೀರಕ್ಷಾ ಎಸ್.ಎಚ್ ಪೂಜಾರಿ, ಹರ್ಷಿತಾ, ಯಾನ ಪಿ.ಬಂಗೇರ, ಟಿಶಾ ಪ್ರಶಾಂತ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಶ್ರೀಲತಾ, ಮಾನ್ಯ, ನಿಶ್ಮಾ ಕೆ.ಎಂ., ದಿಯಾ ಮೆಲಿಟಾ ಪಿಂಟೋ, ದೃವ್ ಪಿ.ಕರ್ಕೇರ, ಲಹರಿ ಎಂ.ಆರ್, ಚರಣ್ಯ, ಸಾಹಿತ್ಯ ಯು.ಕೆ, ಸಾನ್ವಿ ಕೆ.ಸುವರ್ಣ, ನವನೀತ್ ಆರ್, ಸೌಜನ್ಯ, ಓಂಕಾರ್ ಎನ್.ಪೂಜಾರಿ, ಡಿಯೋನ ರೆಜಿನ ಡಿಸೋಜ, ಚಾರ್ವಿ ಆರ್, ಆದಿತ್ಯ ಆರಿಗ, ಕೆ.ಎಂ.ಅಸೀಮ ತನ್ಸೀಮ್ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಆತ್ಮಿ ಕೆ, ಪ್ರಣಮ್ಯ, ಹಿಮಾಂಶ್ ಕೆ.ಅಮೀನ್, ಕನೀಕ್ಷ ಆರ್ ಶೆಟ್ಟಿ, ವಿಭಾ ವಿ.ಭಟ್ನಗರ್, ಸಂಜನಾ ಶೆಟ್ಟಿ, ಮೇಘನಾ ಎಸ್, ನಿಕಿತಾ ಶೇಟ್, ಪೂರ್ವಿ ಪುರುಷೋತ್ತಮ್, ನಿಶಾಂತ್ ರೈ, ಪ್ರಖ್ಯಾತ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com





