ವಿಶ್ವಕರ್ಮ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಪಡುಪಣಂಬೂರು ಅಭಿಪ್ರಾಯ
ಉಡುಪಿ: ಸ್ವಚ್ಛ ಹಾಗೂ ಅರೋಗ್ಯಕರ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಸ್ವಚ್ಛತೆಯ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಕರ್ಮ ಬ್ಯಾಂಕ್ ನಿರಂತರವಾಗಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಕ್ಕೆ ಮುಖ್ಯ ಪ್ರೇರಣೆ ಎಂದರೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ನಮಗೆ ದೊರೆತ ಉತ್ತಮ ಸ್ಪಂದನೆ ಕಾರಣ. ಈ ಜನಸ್ಪಂದನೆಯು ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮಾಡಿದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಜಗದೀಶ್ ಪಡುಪಣಂಬೂರು ಹೇಳಿದರು.
https://chat.whatsapp.com/FCEnlTkAKCC0MGPhXtX4i4
ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದೊಂದಿಗೆ ಉಡುಪಿಯಲ್ಲಿ ನಡೆದ 37ನೇ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತೆಂಕನಿಡಿಯೂರು ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ದಯಾನಂದ ಆಚಾರ್ಯ ಹಾಗೂ ಗೆಳೆಯರ ಬಳಗ, ವಿಷ್ಣುನಗರ ಅಧ್ಯಕ್ಷ ಚರಣ್ ರಾಜ್ ಹಸಿರು ನಿಶಾನೆ ತೋರಿಸಿ ಶ್ರಮದಾನಕ್ಕೆ ಚಾಲನೆ ನೀಡಿದರು. ಉಡುಪಿಯ ಕೆಳಾರ್ಕಳಬೆಟ್ಟು, ತೆಂಕನಿಡಿಯೂರು ಪರಿಸರಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.

ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಹಿಂದೂ ಹಿತರಕ್ಷಣಾ ಸಮಿತಿ, ತೆಂಕನಿಡಿಯೂರು ಇದರ ಸದಸ್ಯರು, ಶ್ರೀ ಆನೆಗುಂದಿ ಗುರುಸೇವಾ ಪರಿಷತ್, ತೆಂಕನಿಡಿಯೂರು ಮಂಡಲದ ಸದಸ್ಯರು, ಗೆಳೆಯರ ಬಳಗ ವಿಷ್ಣುಮೂರ್ತಿ ನಗರ ಇದರ ಸದಸ್ಯರು, ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ವಿಷ್ಣುಮೂರ್ತಿ ನಗರ ಇದರ ಸದಸ್ಯರು, ಶ್ರೀ ದೇವಿ ಭೂದೇವಿ ಮಹಿಳಾ ಮಂಡಳಿ ತೆಂಕನಿಡಿಯೂರು ಇದರ ಸದಸ್ಯರು, ಇಲೆವೆನ್ ಸ್ಟಾರ್ ಕ್ರಿಕೆಟರ್ಸ್ ಇದರ ಸದಸ್ಯರು, ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆಯ ಶಾಖಾಧಿಕಾರಿ ಸುದೇಶ್ ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು, ಹೆತೈಷಿಗಳು ಹಾಗೂ ಸ್ಥಳೀಯರು ಸ್ವಯಂ ಸೇವಕರಾಗಿ ಶ್ರಮದಾನದಲ್ಲಿ ಕೈ ಜೋಡಿಸಿದರು.

