ಹಳೆಯಂಗಡಿ: ಸದಸ್ಯರ ಪ್ರೋತ್ಸಾಹ, ಗ್ರಾಹಕರ ಸಹಕಾರ, ಆಡಳಿತ ವರ್ಗದವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯಶ್ರಮತೆಯಿಂದಾಗಿ 2025-26ನೇ ಸಾಲಿನಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ 483 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾರ್ಡ್ ತಿಳಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಶನಿವಾರ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ನಡೆದ ಅವಲೋಕನ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್ ಅವರ ಮಾರ್ಗದರ್ಶನ ಹಾಗೂ ಸಹಕಾರಿ ಭೀಷ್ಮ ದಿ.ಎಚ್. ನಾರಾಯಣ ಸನಿಲ್ ಮತ್ತು ದಿ.ಪಂಜದಗುತ್ತು ಶಾಂತಾರಾಮ ಶೆಟ್ಟಿ ಅವರ ಪ್ರೇರಣಾ ಶಕ್ತಿಯಿಂದ 2021ರಲ್ಲಿ ಪ್ರಾರಂಭವಾದ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯು, ವರದಿ ಸಾಲಿನಲ್ಲಿ 483 ಕೋಟಿ ರೂ. ವ್ಯವಹಾರ ದಾಖಲಿಸಿದೆ. ಕಳೆದ ಸಾಲಿನ ವ್ಯವಹಾರವನ್ನು ತುಲನೆ ಮಾಡಿದರೇ ಶೇ.72.86 ಏರಿಕೆ ದಾಖಲಿಸಿದೆ. ಪ್ರಸ್ತುತ 38.32 ಕೋಟಿ ರೂ. ಠೇವಣಿ, 32.48 ಕೋಟಿ ರೂ. ಸಾಲ ಮತ್ತು ಮುಂಗಡಗಳೊಂದಿಗೆ, ರೂ.76.57 ಲಕ್ಷ ಪಾಲು ಬಂಡವಾಳ, ರೂ.90.50 ಲಕ್ಷ ನಿಧಿಗಳು, ರೂ.40 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದರು. ಸಂಸ್ಥೆಯು 2025-26ನೇ ಸಾಲಿನಲ್ಲಿ ಉತ್ತಮ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಉತ್ತಮ ರೀತಿಯ ಪಾಲು ಮುನಾಫೆಯನ್ನು ಹಂಚುವ ಗುರಿ ಹೊಂದಿದೆ ಎಂದು ತಿಳಿಸಿದರು.
ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿ ಮತ್ತು ಮೂಡುಬಿದಿರೆಯಲ್ಲಿ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿರುವ ಸೊಸೈಟಿಯು ವರದಿ ವರ್ಷದಲ್ಲಿ ಕೂಡ ಹೊಸ ಶಾಖೆ ಒಂದನ್ನು ತೆರೆಯುವ ಗುರಿ ಇಟ್ಟುಕೊಂಡಿದೆ ಎಂದು ತಿಳಿಸಿದರು.
ಅವಲೋಕನ ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ, ಲೆಕ್ಕಿಗರಾದ ಲೋಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

