Author: admin
ಭಾರತದ ಸಹಕಾರಿ ಕ್ಷೇತ್ರದ ಭವಿಷ್ಯದ ನಾಯಕತ್ವ ನಿರ್ಧರಿಸಲು ಮಹತ್ವದ ಮತದಾನ ನವದೆಹಲಿ: ದೇಶದ ಸಹಕಾರಿ ವ್ಯವಸ್ಥೆಯಲ್ಲಿ ಅತ್ಯುನ್ನತ ಪ್ರತಿನಿಧಿ ಸಂಸ್ಥೆಗಳಲ್ಲೊಂದಾಗಿರುವ ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ) ಆಡಳಿತ ಮಂಡಳಿಯ ಚುನಾವಣೆ ಇಂದು ನಡೆಯುತ್ತಿದೆ. ಈ ಚುನಾವಣೆಯ ಫಲಿತಾಂಶವು ಮುಂದಿನ ಕೆಲವು ವರ್ಷಗಳ ಕಾಲ ಭಾರತದ ಸಹಕಾರಿ ಕ್ಷೇತ್ರದ ನಾಯಕತ್ವ ಮತ್ತು ನೀತಿ ರೂಪಿಸುವ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಈ ಬಾರಿಯ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವ 10 ಸ್ಥಾನಗಳ ಪೈಕಿ ಹೆಚ್ಚಿನ ಕಡೆ ಬಲಿಷ್ಠವಾಗಿದ್ದು ಇದು ಚುನಾವಣೆ ಮೇಲೆ ಕುತೂಹಲ ಮೂಡಿಸುವಂತೆ ಮಾಡಿದೆ. ಮತದಾನಕ್ಕೂ ಮುನ್ನ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಉದಯ್ ಜೋಶಿ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ದೀಪಕ್ ಚೌರಾಸಿಯಾ ನೇತೃತ್ವದಲ್ಲಿ ಸಂಘಟನೆಯ ಹಿರಿಯ ನಾಯಕರು ಒಂದು ವಾರದಿಂದ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದು ಮತದಾರರೊಂದಿಗೆ ಸಮನ್ವಯ ಸಾಧಿಸಿ ತಮ್ಮ ಅಭ್ಯರ್ಥಿಗಳ ಪರ ಬೆಂಬಲ ಕ್ರೋಡೀಕರಣಕ್ಕೆ ಮುಂದಾಗಿದ್ದಾರೆ. ರಾಜ್ಯ ಸಹಕಾರಿ ಸಂಘಗಳು…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೃಷ್ಣಾಪುರ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಕೃಷ್ಣಾಪುರ ಶಾಖೆಯಲ್ಲಿ ಜರುಗಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಗ್ರಾಹಕರಾದ ಪಿ.ಕೆ ಉಪಾಧ್ಯಾಯ, ಅನಿಲ್ ಕುಮಾರ್, ಬಾಲಚಂದ್ರ ಪಣಂಬೂರು, ಶೋಭಾ, ಅಬ್ದುಲ್ ಖಾದರ್ ಮತ್ತು ಎಚ್. ಆರ್ ಯದುನಂದಿನಿ ಇವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಸದಸ್ಯ ಪಿ.ಕೆ ಉಪಾಧ್ಯಾಯ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕೃಷ್ಣಾಪುರ ಪರಿಸರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ದೈನಂದಿನ ವ್ಯವಹಾರಕ್ಕೆ ಉತ್ತಮ ಸೊಸೈಟಿಯಾಗಿದೆ. ಇನ್ನಷ್ಟು ಶಾಖೆಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಿ ಎಂದು ಶುಭ ಹಾರೈಸಿದರು. ಅನಿಲ್ ಕುಮಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಗ್ರಾಹಕ-ಸ್ನೇಹಿ ಸಹಕಾರಿ ಸಂಘವಾಗಿದ್ದು, ಶಾಖೆಗಳಿಗೆ ಭೇಟಿ ನೀಡಿದಾಗ ಸಿಬ್ಬಂದಿಗಳ ಸಹಕಾರ ಅತ್ಯುತ್ತಮವಾಗಿದ್ದು, ನಗುಮುಖದಿಂದ ಸೇವೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್…
ಮಂಗಳೂರು: ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಿಂದ ಸೋಮವಾರ ನಾಟೆಕಲ್ ಕಣಚೂರು ಸಭಾಂಗಣದಲ್ಲಿ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಅವರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಕಣಚೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಯು. ಕಣಚೂರು ಮೋನು ಅಧ್ಯಕ್ಷತೆಯಲ್ಲಿ ನಡೆದ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಚಿತ್ತರಂಜನ್ ಬೋಳಾರ್ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ಸಹಕಾರ ಕ್ಷೇತ್ರದ ಮೂಲಕ ಸಾಮಾಜಿಕ ಧ್ಯೇಯದೊಂದಿಗೆ ಪ್ರಸ್ತುತ ೧೧೨ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು. ಕರ್ನಾಟಕ ಸರ್ಕಾರದ ನೌಕರರ ರಾಜ್ಯ ವಿಮಾ (ಇಎಸ್‌ಐ) ವೈದ್ಯಕೀಯ ಸೇವೆಗಳ ಆಯುಕ್ತ ಡಾ| ದಿನೇಶ್ ಕುಮಾರ್ ವೈ.ಕೆ., ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಲಹಾ ಸಮಿತಿ ಚೇರ್ಮನ್ ಹಾಗೂ ಕಣ್ಣೂರು…
ಮಂಗಳೂರು: ನಗರದ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮಂಗಳೂರಿನ ಬಲ್ಮಠದಲ್ಲಿನ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು [ಪ್ರೌಢಶಾಲಾ ವಿಭಾಗ] ಇಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ದಿನಪತ್ರಿಕೆಯು ಪಠ್ಯದ ವಿಷಯಗಳ ಸಂಪೂರ್ಣ ಸರಳೀಕೃತ ಮಾಹಿತಿಯುಳ್ಳ ಶಿಕ್ಷಣ ಮಾರ್ಗದರ್ಶಿಯನ್ನು ಒಂದು ವರ್ಷದ ಅವಧಿಗೆ ಉಚಿತವಾಗಿ ನೀಡಲು ಪ್ರಾಯೋಜಕತ್ವ ವಹಿಸಿಕೊಂಡಿದೆ. ಶಾಲಾ ಆವರಣದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ವಿದ್ಯಾರ್ಥಿನಿಯರಿಗೆ ಪತ್ರಿಕೆಯ ಪ್ರತಿಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಎಸ್ ಗುರುರಾಜ್ ಅವರು, ವ್ಯಕ್ತಿಯ ಮುಂದಿನ ಜೀವನದ ಪಥವನ್ನು ನಿರ್ಧರಿಸುವ ವಿಧ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು. ಅದನ್ನು ಕೇವಲ ವಿದ್ಯಾರ್ಜನೆಗಾಗಿ ಮಾತ್ರ ಬಳಸಬೇಕು. ನಿಮ್ಮ ಜ್ಞಾನಾರ್ಜನೆಗೆ ಸಹಾಯವಾಗಲೆಂದು ಪ್ರತಿಷ್ಠಿತ ಉದಯವಾಣಿ ದಿನಪತ್ರಿಕೆಯು ವಾರದಲ್ಲಿ ಮೂರು ದಿನ ಹೊರತರುತ್ತಿರುವ ಪಠ್ಯದ ಮಾಹಿತಿಯುಳ್ಳ ಶಿಕ್ಷಣ ಮಾರ್ಗದರ್ಶಿಯನ್ನು ಪೂರ್ಣ ಒಂದು ವರ್ಷ ಶ್ರೀಶಾ ಸೌಹಾರ್ದ ಸೊಸೈಟಿಯು ಉಚಿತವಾಗಿ ನೀಡುತ್ತಿದೆ.…
ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್ ಶಾಖೆ ಉದ್ಘಾಟಿಸಿ ಡಾ. ಎ.ಸದಾನಂದ ಶೆಟ್ಟಿ ಶುಭ ಹಾರೈಕೆ ಮಂಗಳೂರು: ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್ ಶಾಖೆಯ ಉದ್ಘಾಟನಾ ಸಮಾರಂಭ ಸೋಮವಾರ ಉರ್ವ ಮಾರಿಗುಡಿ ಸಮೀಪದ ಎಂ.ಎಸ್.ಸಿ.ಎಲ್ ಇಂಡೋರ್ ಸ್ಟೇಡಿಯಂ ಬಿಲ್ಡಿಂಗ್‌ನಲ್ಲಿ ಉದ್ಘಾಟನೆಗೊಂಡಿತು. https://chat.whatsapp.com/FCEnlTkAKCC0MGPhXtX4i4 ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎ.ಸದಾನಂದ ಶೆಟ್ಟಿ ಸ್ಥಳಾಂತರಿತ ಶಾಖೆ ಉದ್ಘಾಟಿಸಿ ಮಾತನಾಡಿ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿಬ್ಬಂದಿಗಳ ಸೇವೆ ಶ್ಲಾಘನೀಯ. ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್ ಸೊಸೈಟಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ ಅಮೀನ್ ಕೋಡಿಕಲ್ ಮಾತನಾಡಿ, ಸೊಸೈಟಿಯ ಆರಂಭವಾಗಿ ಲಾಭದ ಹಾದಿಯಲ್ಲಿ ಅದನ್ನು ಮುನ್ನಡೆಸಿ 21 ಶಾಖೆಗಳನ್ನು ಸ್ಥಾಪಿಸುವುದು ದೊಡ್ಡ ಸಾಧನೆ. ಇದರಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ನಿರ್ದೇಶಕರು, ಸಿಬ್ಬಂದಿಗಳ…
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್‌ನ ಪಟ್ಟಣ ಸಹಕಾರಿ ಬ್ಯಾಂಕುಗಳ ಆಡಳಿತ ತಿದ್ದುಪಡಿ ನಿರ್ದೇಶನಗಳು 2026, ನಗರ ಸಹಕಾರಿ ಬ್ಯಾಂಕುಗಳ (UCBs) ನಿರ್ದೇಶಕರಿಗೆ 10 ವರ್ಷಗಳ ಅಧಿಕಾರಾವಧಿಯ ಮಿತಿ ಮತ್ತು ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿಯನ್ನು ಪರಿಚಯಿಸುವುದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸಹಕಾರಿ ಅರ್ಬನ್ ಬ್ಯಾಂಕುಗಳ ಒಕ್ಕೂಟ ಲಿಮಿಟೆಡ್ ಸಲ್ಲಿಸಿದ್ದ ರಿಟ್ ಅರ್ಜಿಗೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ರಿಲೀಫ್ ಅನ್ನು ಕರ್ನಾಟಕ ಹೈಕೋರ್ಟ್ ಮುಂದುವರಿಸಿದೆ. https://chat.whatsapp.com/FCEnlTkAKCC0MGPhXtX4i4 ಜುಲೈ 7ರಂದು ಸಂಪರ್ಕಿತ ಅರ್ಜಿಗಳ ಬ್ಯಾಚ್ ಅನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ಈಗಾಗಲೇ ನೀಡಲಾದ ಮಧ್ಯಂತರ ರಿಲೀಫ್ ಜುಲೈ 31ರಂದು ನಿಗದಿಪಡಿಸಲಾದ ಮುಂದಿನ ವಿಚಾರಣೆಯವರೆಗೆ ಮುಂದುವರಿಯುತ್ತದೆ ಎಂದು ಆದೇಶಿಸಿದ್ದಾರೆ. ಮೇ 25ರಂದು ಹೊರಡಿಸಲಾದ ಆರ್‌ಬಿಐನ ತಿದ್ದುಪಡಿ ನಿರ್ದೇಶನಗಳು ಮತ್ತು ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ, 2025ರ ಸಂಬಂಧಿತ ನಿಬಂಧನೆಗಳು ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಯಿಂದ ನಿಯಂತ್ರಿಸಲ್ಪಡುವ ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಮೇಲೆ ಅಧಿಕಾರಾವಧಿಯ ನಿರ್ಬಂಧಗಳನ್ನು ವಿಧಿಸುವುದರಿಂದ ಅವು ಅಸಾಂವಿಧಾನಿಕ ಎಂದು ಒಕ್ಕೂಟವು ವಾದಿಸಿದೆ.…
ರಿಸರ್ವ್ ಬ್ಯಾಂಕ್ ಹಣಕಾಸು ಪರಿಸ್ಥಿತಿ ನಿಯಂತ್ರಿಸಲಿ, ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕಾರಾವಧಿಯನ್ನಲ್ಲ
ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಪಾದನೆ ಬೆಂಗಳೂರು: ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ನಿಯಂತ್ರಿಸುವುದು, ಠೇವಣಿದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದು ರಿಸರ್ವ್ ಬ್ಯಾಂಕಿನ ಜವಾಬ್ದಾರಿಯಾಗಿದೆ. ರಿಸರ್ವ್ ಬ್ಯಾಂಕ್ ಹಣಕಾಸು ಪರಿಸ್ಥಿತಿಯನ್ನು ನಿಯಂತ್ರಿಸಲಿ, ಅದು ಬಿಟ್ಟು ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕಾರಾವಧಿಯನ್ನು ನಿರ್ಧರಿಸುವುದಲ್ಲ ಎಂದು ಮಾಜಿ ಸಚಿವ ಹಾಗೂ ಕೆನರಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಕೆಡಿಸಿಸಿ) ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಅಧಿಕಾರಾವಧಿ ಮತ್ತು ಅರ್ಹತೆಯನ್ನು ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ, 1959ರಿಂದ ನಿಯಂತ್ರಿಸಲಾಗುತ್ತದೆ ಮತ್ತು ಇದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅವರು ಸುದ್ದಿ ಮಾಧ್ಯಮವೊಂದರ ಜೊತೆ ದೂರವಾಣಿಯಲ್ಲಿ ಮಾತನಾಡುವಾಗ ಪ್ರತಿಪಾದಿಸಿದ್ದಾರೆ. ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಅಧಿಕಾರಾವಧಿ ಮತ್ತು ಅರ್ಹತೆಯ ಕುರಿತು ಆರ್‌ಬಿಐ ನಿರ್ದೇಶನಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ವಿವಾದದ ಕುರಿತು ಪ್ರತಿಕ್ರಿಯಿಸಿರುವ ಅವರು, ಸಹಕಾರಿ ಬ್ಯಾಂಕುಗಳಿಗೆ ಚುನಾವಣೆಗಳನ್ನು ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ…
ಮಂಗಳೂರು: ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2026-27ನೇ ಸಾಲಿನ ವಿತ್ತೀಯ ವರ್ಷದ ಮೊದಲನೇ ತ್ರೈಮಾಸಿಕ ಅವಧಿ ದಿನಾಂಕ 30-06-2026ಕ್ಕೆ ರೂ.721 ಕೋಟಿ ಠೇವಣಿ, ರೂ.641 ಕೋಟಿ ಸಾಲ, ರೂ.1362 ಕೋಟಿ (ಠೇವಣಿ ಮತ್ತು ಸಾಲ) ವ್ಯವಹಾರವನ್ನು ಹೊಂದಿದೆ. 2025ನೇ ಜೂನ್ 30ಕ್ಕೆ ಹೋಲಿಸುವಾಗ ಠೇವಣಾತಿಯಲ್ಲಿ ರೂ.115 ಕೋಟಿ 19% ವೃದ್ಧಿ, ಹೊರಬಾಕಿ ಸಾಲದಲ್ಲಿ ರೂ.120 ಕೋಟಿ ಹೆಚ್ಚಳ 23% ವೃದ್ಧಿಯೊಂದಿಗೆ, ಒಟ್ಟು ವ್ಯವಹಾರದಲ್ಲಿ ರೂ.235 ಕೋಟಿ ವೃದ್ಧಿಯಿಂದ 21% ಹೆಚ್ಚಳ ಸಾಧಿಸಿದೆ. https://chat.whatsapp.com/FCEnlTkAKCC0MGPhXtX4i4 30-06-2026ಕ್ಕೆ ನಿವ್ವಳ ಲಾಭ ರೂ.3.74 ಕೋಟಿ ದಾಖಲಿಸಿದ್ದು, ಇದು 2025ನೇ ಜೂನ್ 30ಕ್ಕೆ ಹೋಲಿಸುವಾಗ ರೂ.1.10 ಕೋಟಿ ಹೆಚ್ಚಳವಾಗಿ 42% ವೃದ್ಧಿಯಾಗಿರುತ್ತದೆ. ನಿರಂತರ ಡಿವಿಡೆಂಡ್ ನೀಡುತ್ತ ಬಂದಿರುವ ರಾಮಕೃಷ್ಣ ಕ್ರೆಡಿಟ್ ಸೊಸೈಟಿ, 2024-25ನೇ ಸಾಲಿಗೆ ಶೇ.25 ಡಿವಿಡೆಂಡ್ ನೀಡಿದ್ದು, ಕಳೆದ ಏಳು…
ಎನ್‌ಸಿಯುಐ ಚುನಾವಣೆ; 10 ಸ್ಥಾನಗಳಿಗೆ ಜುಲೈ 18 ರಂದು ಮತದಾನ; ರಾಜ್ಯದ ಸಹಕಾರಿ ಧುರೀಣರಾದ ಹೆಚ್.ಕೆ ಪಾಟೀಲ್, ಅಣ್ಣಾಸಾಹೇಬ್ ಜೊಲ್ಲೆ ಕಣದಲ್ಲಿ
ನವದೆಹಲಿ: ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಭಾರತೀಯ ರಾಷ್ಟ್ರೀಯ ಸಹಕಾರ ಒಕ್ಕೂಟ (ಎನ್‌ಸಿಯುಐ)ನ ಆಡಳಿತ ಮಂಡಳಿಗೆ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆ ಮತ್ತಷ್ಟು ಗರಿಗೆದರಿದ್ದು ಅಂತಿಮ ಸ್ಪರ್ಧಾಳುಗಳ ಪಟ್ಟಿ ಬುಧವಾರ ರಾತ್ರಿ ಹೊರಬಿದ್ದಿದೆ. ಅದರಂತೆ ಎನ್‌ಸಿಯುಐನ ಆಡಳಿತ ಮಂಡಳಿಯ 20 ಸ್ಥಾನಗಳಲ್ಲಿ 10 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 10 ಸ್ಥಾನಗಳಿಗೆ ಐದು ಕ್ಷೇತ್ರಗಳಲ್ಲಿ ಜುಲೈ 18ರಂದು ಮತದಾನ ನಡೆಯಲಿದೆ. ಭಾರೀ ಕುತೂಹಲ ಕೆರಳಿಸಿರುವ ಪ್ರತ್ಯೇಕ ಎರಡು ವಿಭಾಗದಲ್ಲಿ ಕರ್ನಾಟಕದ ಸಹಕಾರಿ ಧುರೀಣರಾದ ಹೆಚ್.ಕೆ ಪಾಟೀಲ್ ಮತ್ತು ಅಣ್ಣಾಸಾಹೇಬ್ ಜೊಲ್ಲೆ ಅವರು ಕಣಕ್ಕಿಳಿದಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಆಡಳಿತ ಮಂಡಳಿಯ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸಲಿರುವ ಪ್ರವೀಣ್ ದರೇಕರ್, ಜಿ.ಟಿ.ದೇವೇಗೌಡ, ಅಗಡಿ ಅಶೋಕ್, ಜಿ.ಹೆಚ್.ಅಮೀನ್, ಸುನೀಲ್ ಕುಮಾರ್, ಟಿ.ಪ್ರಸಾದ್ ದೋರ, ಮೇಘನಾದ್ ಪಾಲ್, ಮುದಿತ್ ವರ್ಮ, ಧನಂಜಯ್ ಸಿಂಗ್ ಮತ್ತು ಡಿ.ಎನ್. ಠಾಕೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರ ಒಕ್ಕೂಟಗಳಿಗೆ ಮೀಸಲಾದ ಏಳು ಸ್ಥಾನಗಳ ಪೈಕಿ ಐದು ಸ್ಥಾನಗಳು ಅವಿರೋಧವಾಗಿ ಭರ್ತಿಯಾಗಿವೆ.…
ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಅಧಿಕಾರಾವಧಿ: ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್: ಜುಲೈ 31ಕ್ಕೆ ಮುಂದಿನ ವಿಚಾರಣೆ ನಿಗದಿ
ಬೆಂಗಳೂರು: ಸಹಕಾರಿ ಬ್ಯಾಂಕುಗಳು ಮತ್ತು ಇತರ ಸಹಕಾರಿ ಸಂಘಗಳ ನಿರ್ದೇಶಕರ ಅಧಿಕಾರಾವಧಿಗೆ ಸಂಬಂಧಿಸಿ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯನ್ನು ಕರ್ನಾಟಕ ಹೈಕೋರ್ಟ್ ವಿಸ್ತರಿಸಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಜುಲೈ 31ಕ್ಕೆ ನಿಗದಿಪಡಿಸಿದೆ. https://chat.whatsapp.com/FCEnlTkAKCC0MGPhXtX4i4 ಹೊಸದಾಗಿ ಜಾರಿಗೆ ಬಂದಿರುವ ನಿಯಮಗಳು ಮತ್ತು ಆಡಳಿತಾತ್ಮಕ ಬದಲಾವಣೆಗಳ ನಡುವೆ, ನಿರ್ದೇಶಕರ ಅಧಿಕಾರಾವಧಿ ಮತ್ತು ಮಂಡಳಿಗಳ ಮುಂದುವರಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ನಿರ್ಧಾರವನ್ನು ಕೈಗೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿ ಮತ್ತು ನಿರ್ದೇಶಕರ ಅಧಿಕಾರಾವಧಿಗೆ ಸಂಬಂಧಿಸಿದ ತಿದ್ದುಪಡಿಯನ್ನು ಪ್ರಶ್ನಿಸಿ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ವಿಸ್ತರಿಸಿ ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ರಿಟ್ ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದ ಇತರ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆ ಮುಂದಿನ ವಿಚಾರಣೆಯ ದಿನಾಂಕದವರೆಗೆ ಮುಂದುವರಿಯಲಿದೆ ಎಂದು ಆದೇಶಿಸಿದ್ದಾರೆ. 2025ರ ನವೆಂಬರ್ 28ರಂದು ಆರ್‌ಬಿಐ…
