Author: admin

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅಭಿಪ್ರಾಯ ಬೆಳಗಾವಿ: ಸಹಕಾರಿ ಕ್ಷೇತ್ರದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯವಾಗಿದ್ದು, ಠೇವಣಿದಾರರ ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಇನ್ನಷ್ಟು ಬಲಪಡಿಸಬಹುದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಹೇಳಿದರು. https://chat.whatsapp.com/FCEnlTkAKCC0MGPhXtX4i4 ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬೆಳಗಾವಿ ಉಪವಿಭಾಗದ ಪತ್ತಿನ (ಕ್ರೆಡಿಟ್) ಸಹಕಾರಿ ಸಂಘಗಳು ಹಾಗೂ ನೌಕರರ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸರ್ವತೋಮುಖ ಬೆಳವಣಿಗೆ ಕುರಿತ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಗ್ರಾಹಕರ ಹಣವನ್ನು ಸುರಕ್ಷಿತವಾಗಿ ಕಾಪಾಡಿ, ಅಗತ್ಯ ಸಂದರ್ಭಗಳಲ್ಲಿ ಮರಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವಂತಹ ವಿಶ್ವಾಸವನ್ನು ನಿರ್ಮಿಸಬೇಕು. ಸಹಕಾರಿ…

Read More

ರಾಜ್ಯಸಭೆಯಲ್ಲಿ ಸಹಕಾರ ಸಚಿವ ಅಮಿತ್‌ ಷಾ ಮಾಹಿತಿ ನವದೆಹಲಿ: ದೇಶದಲ್ಲಿ ಸಹಕಾರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಸ್ಥಾಪನೆಯಾಗಿರುವ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವು ತನ್ನ ಶೈಕ್ಷಣಿಕ ಹಾಗೂ ತರಬೇತಿ ಚಟುವಟಿಕೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. https://chat.whatsapp.com/FCEnlTkAKCC0MGPhXtX4i4 ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವು ಸಹಕಾರ ಕ್ಷೇತ್ರಕ್ಕೆ ಪರಿಣತ ಮಾನವ ಸಂಪನ್ಮೂಲವನ್ನು ರೂಪಿಸುವ ಉದ್ದೇಶದಿಂದ ಸಹಕಾರಿ ನಿರ್ವಹಣೆ, ಸಹಕಾರಿ ಬ್ಯಾಂಕಿಂಗ್ ಮತ್ತು ಹಣಕಾಸು, ಕೃಷಿ ವ್ಯವಹಾರ ನಿರ್ವಹಣೆ, ನವೋದ್ಯಮ ಮತ್ತು ಉದ್ಯಮಶೀಲತೆ ಹಾಗೂ ಆಡಳಿತ, ಅಭಿವೃದ್ಧಿ ಮತ್ತು ನೀತಿ ಸೇರಿದಂತೆ ಐದು ಹೊಸ ಶಾಲೆಗಳನ್ನು ಆರಂಭಿಸಿದೆ. ಇದರ ಜೊತೆಗೆ ಸಹಕಾರಿ ನಿರ್ವಹಣೆ, ಸಹಕಾರಿ ಬ್ಯಾಂಕಿಂಗ್ ಮತ್ತು ಹಣಕಾಸು, ಕೃಷಿ ವ್ಯವಹಾರ ನಿರ್ವಹಣೆ ಹಾಗೂ ಅಭಿವೃದ್ಧಿ ನಿರ್ವಹಣೆ ಮತ್ತು ಸಹಕಾರ ವಿಷಯಗಳಲ್ಲಿ ನಾಲ್ಕು ಹೊಸ ಎಂಬಿಎ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. 2025–26ನೇ ಶೈಕ್ಷಣಿಕ ವರ್ಷದಲ್ಲಿ 346 ವಿದ್ಯಾರ್ಥಿಗಳಿದ್ದ ದಾಖಲಾತಿ 2026–27ರಲ್ಲಿ 350ಕ್ಕೆ…

Read More

ಮೈಸೂರು: ದಿವ್ಯ ಸಮಾಜ ನಿರ್ಮಾಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಇದರ 17ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜುಲೈ 26ರಂದು ಅಧ್ಯಕ್ಷರಾದ ಬಿ.ಎಸ್ ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. https://chat.whatsapp.com/FCEnlTkAKCC0MGPhXtX4i4 ಸಂಘವು 2025-26ನೇ ಸಾಲಿನಲ್ಲಿ 6,25,234 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಸದಸ್ಯರು ಸಂಘದ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯೂ ಇದೇ ರೀತಿ ಪ್ರಗತಿಯತ್ತ ಸಂಸ್ಥೆ ನಡೆಯಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಏಳಿಗೆಗೆ ಸಹಕರಿಸಿದ ಸದಸ್ಯರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಾರ್ಷಿಕ ಸಭೆಯ ದಿನದಂದು ಸದಸ್ಯರಿಗೆ ಎಜಿಎಸ್ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ತಪಾಸಣೆಯನ್ನು ನಡೆಸಲಾಯಿತು.

Read More

ಗುರು ಎಂದರೆ ಕೇವಲ ಜ್ಞಾನ ಬೋಧಿಸುವ ವ್ಯಕ್ತಿಯಲ್ಲ; ಜೀವನಕ್ಕೆ ದಿಕ್ಕು ತೋರಿಸುವ, ಮೌಲ್ಯಗಳನ್ನು ಬಿತ್ತುವ ಮತ್ತು ಸಮಾಜದ ಒಳಿತಿಗಾಗಿ ಬದುಕುವ ಮಹನೀಯ. ಸಹಕಾರ ಕ್ಷೇತ್ರದಲ್ಲಿ ಅಂತಹ ಗುರುಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವವರು ದಿವಂಗತ ಮೊಳಹಳ್ಳಿ ಶಿವರಾಯರು. https://chat.whatsapp.com/FCEnlTkAKCC0MGPhXtX4i4 ಸಹಕಾರವನ್ನು ಅವರು ಕೇವಲ ಆರ್ಥಿಕ ವ್ಯವಸ್ಥೆಯಾಗಿ ನೋಡಲಿಲ್ಲ; ಅದು ವಿಶ್ವಾಸ, ಸಮಾನತೆ, ಸ್ವಾವಲಂಬನೆ ಮತ್ತು ಪರಸ್ಪರ ಸಹಾಯದ ಜೀವನದರ್ಶನ ಎಂದು ಪ್ರತಿಪಾದಿಸಿದರು. ಸದಸ್ಯರ ಹಿತಾಸಕ್ತಿ, ಪಾರದರ್ಶಕ ಆಡಳಿತ, ನೈತಿಕತೆ ಮತ್ತು ಸೇವಾ ಮನೋಭಾವವೇ ಸಹಕಾರ ಸಂಸ್ಥೆಗಳ ನಿಜವಾದ ಬಲ ಎಂಬುದನ್ನು ತಮ್ಮ ಬದುಕಿನ ಮೂಲಕವೇ ಅವರು ಸಾರಿದರು. ಸಾವಿರಾರು ಸಹಕಾರಿಗಳಲ್ಲಿ ಜ್ಞಾನ, ಶಿಸ್ತು ಮತ್ತು ಸೇವೆಯ ಮನೋಭಾವವನ್ನು ಬೆಳೆಸಿದ ಅವರ ಮಾರ್ಗದರ್ಶನ ಇಂದಿಗೂ ಪ್ರೇರಣೆಯಾಗಿದೆ. ಶಿಕ್ಷಣವಿಲ್ಲದ ಸಹಕಾರ ಅಪೂರ್ಣ ಎಂಬ ದೃಢ ನಂಬಿಕೆಯೊಂದಿಗೆ ನಿರ್ದೇಶಕರು, ಸಿಬ್ಬಂದಿ ಹಾಗೂ ಸದಸ್ಯರಿಗೆ ನಿರಂತರ ತರಬೇತಿಯ ಮಹತ್ವವನ್ನು ಅವರು ಒತ್ತಿಹೇಳಿದರು. ನಾಯಕತ್ವವನ್ನು ಅಧಿಕಾರವಲ್ಲ, ಸೇವೆಯ ಅವಕಾಶವೆಂದು ಬೋಧಿಸಿದ ಅವರ ಆದರ್ಶಗಳು ಇಂದಿನ ಸಹಕಾರ ಚಳವಳಿಗೂ ದಾರಿದೀಪವಾಗಿವೆ. ಗುರುಪೂರ್ಣಿಮೆಯ…

Read More

ಸಹಕಾರ ಭಾರತಿ ಮೈಸೂರು ವಿಭಾಗದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಎಸ್‌.ಆರ್‌ ಸತೀಶ್ಚಂದ್ರ ಅಭಿಪ್ರಾಯ ಶಿರ್ವ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿಶೇಷವಾಗಿ ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಪ್ರಮುಖರಾದ ಎಸ್.ಆರ್. ಸತೀಶ್ಚಂದ್ರ ಹೇಳಿದರು. https://chat.whatsapp.com/FCEnlTkAKCC0MGPhXtX4i4 ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ ಸಹಕಾರ ಭಾರತಿ ಮೈಸೂರು ವಿಭಾಗದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಸ್ಥೆಗಳು ಹೆಚ್ಚಿನ ವೃತ್ತಿಪರತೆ, ಪಾರದರ್ಶಕತೆ ಹಾಗೂ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಒತ್ತು ನೀಡಬೇಕಿದ್ದು, ಸದಸ್ಯ ಕೇಂದ್ರಿತ ಸೇವೆಗಳ ಮೂಲಕ ಸಹಕಾರಿ ಚಳವಳಿಯನ್ನು ಮತ್ತಷ್ಟು ಬಲಪಡಿಸಬೇಕು. ಸಹಕಾರ ಭಾರತಿ ದೇಶದ ಏಕೈಕ ಸಹಕಾರ ಕ್ಷೇತ್ರದ ಸ್ವಯಂಸೇವಾ ಸಂಘಟನೆಯಾಗಿದ್ದು, ಇನ್ನೆರಡು ವರ್ಷಗಳಲ್ಲಿ ತನ್ನ ಸುವರ್ಣ ಮಹೋತ್ಸವ ಆಚರಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು. ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ…

Read More

ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ. ಸಲಹೆ ನವದೆಹಲಿ: ಗ್ರಾಮೀಣ ಭಾಗದಲ್ಲಿ ರೈತರ ವಿಶ್ವಾಸಾರ್ಹ ಸಂಸ್ಥೆಗಳಾಗಿ ಗುರುತಿಸಿಕೊಂಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಪ್ಯಾಕ್ಸ್‌) ಕೇವಲ ಕೃಷಿ ಸಾಲ ವಿತರಣೆಗೆ ಸೀಮಿತಗೊಳಿಸದೆ, ಗ್ರಾಮೀಣ ಸಮುದಾಯದ ವಿವಿಧ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸುವ ಬಹುಉದ್ದೇಶೀಯ ಸಮುದಾಯ ಸಹಕಾರ ಸಂಸ್ಥೆಗಳಾಗಿ (Primary Multipurpose Community Cooperatives) ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ. ಅಭಿಪ್ರಾಯಪಟ್ಟರು. https://chat.whatsapp.com/FCEnlTkAKCC0MGPhXtX4i4 ನವದೆಹಲಿದಲ್ಲಿರುವ ಕೇಂದ್ರ ಸಹಕಾರ ಸಚಿವಾಲಯದಲ್ಲಿ ಕೆ.ಕೆ. ತ್ರಿಪಾಠಿ ಹಾಗೂ ಇತರರು ರಚಿಸಿರುವ Cooperative Management – The Indian Perspective ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಪ್ಯಾಕ್ಸ್‌ಗಳ ತ್ವರಿತ ಗಣಕೀಕರಣ ಹಾಗೂ ಅವುಗಳನ್ನು ಇ-ಪ್ಯಾಕ್ಸ್‌ಗಳಾಗಿ ಪರಿವರ್ತಿಸಿರುವ ಕ್ರಮವನ್ನು ಶ್ಲಾಘಿಸಿದರು. ಪ್ಯಾಕ್ಸ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಗಳಿಸಿರುವ ವಿಶ್ವಾಸ ಮತ್ತು ಜನರ ನಂಬಿಕೆಯನ್ನು ಬಳಸಿಕೊಂಡು, ಅವುಗಳನ್ನು ಗ್ರಾಮಸ್ಥರಿಗೆ ಅಗತ್ಯವಿರುವ ವಿವಿಧ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಕೇಂದ್ರಗಳಾಗಿ ರೂಪಿಸುವ ಸಮಯ ಬಂದಿದೆ ಎಂದು ಅವರು…

Read More

ಆರ್ಥಿಕ ಒಳಗೊಳ್ಳುವಿಕೆಯನ್ನು ಗಟ್ಟಿಗೊಳಿಸಿ, ಸುಸ್ಥಿರ ಅಭಿವೃದ್ಧಿ ಸಾಧಿಸಲು ಅಗತ್ಯ: ಸತೀಶ್ ಮರಾಠೆ ಪ್ರತಿಪಾದನೆ ನವದೆಹಲಿ: ಭಾರತದಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು (Financial Inclusion) ಇನ್ನಷ್ಟು ಗಟ್ಟಿಗೊಳಿಸಲು, ದೇಶದ ಜಿಡಿಪಿಯ ಬೆಳವಣಿಗೆಯನ್ನು ತ್ವರಿತಗೊಳಿಸಲು ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಕಾರ ಬ್ಯಾಂಕಿಂಗ್ ಜಾಲವನ್ನು ವ್ಯಾಪಕವಾಗಿ ವಿಸ್ತರಿಸುವ ಅಗತ್ಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿ ಸದಸ್ಯ ಹಾಗೂ ಹಿರಿಯ ಸಹಕಾರ ಚಿಂತಕ ಸತೀಶ್ ಮರಾಠೆ ಪ್ರತಿಪಾದಿಸಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಕೆ.ಕೆ.ತ್ರಿಪಾಠಿ ಹಾಗೂ ಇತರರು ರಚಿಸಿರುವ Cooperative Management – The Indian Perspective ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆಯು ಗಮನಾರ್ಹವಾಗಿ ವಿಸ್ತರಿಸಿದೆ. 2011ರಲ್ಲಿ ಸುಮಾರು ಶೇ.50ರಷ್ಟಿದ್ದ ಬ್ಯಾಂಕ್ ಖಾತೆ ಹೊಂದಿರುವ ಜನರ ಪ್ರಮಾಣವು ಇಂದು ಶೇ.80ರ ಸಮೀಪಕ್ಕೆ ಏರಿದೆ. ಆದಾಗ್ಯೂ, ಗ್ರಾಮೀಣ ಹಾಗೂ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸುವ ತಳಮಟ್ಟದ ಬ್ಯಾಂಕಿಂಗ್ ಸಂಸ್ಥೆಗಳ, ವಿಶೇಷವಾಗಿ ಸಹಕಾರ ಬ್ಯಾಂಕುಗಳ ಕೊರತೆ ಇನ್ನೂ ಕಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ದೇಶದ ಸುಮಾರು…

Read More

ತಿರುವನಂತಪುರಂ: ದೇಶದ ಕಾರ್ಮಿಕ ಸಹಕಾರ ಚಳವಳಿಯ ಪ್ರಮುಖ ನಾಯಕರಲ್ಲೊಬ್ಬರಾದ, ಅಗ್ರ ಕಾರ್ಮಿಕ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಯುಎಲ್‌ಸಿಸಿಎಸ್‌ (ಉರಾಲುಂಗಲ್ ಕಾರ್ಮಿಕ ಒಪ್ಪಂದ ಸಹಕಾರ ಸಂಘ) ಅಧ್ಯಕ್ಷರೂ ಆಗಿದ್ದ ರಮೇಶನ್ ಪಾಲೇರಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. https://chat.whatsapp.com/FCEnlTkAKCC0MGPhXtX4i4 ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ತಮಿಳುನಾಡಿನ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಯಿಂದ ಕೋಯಿಕ್ಕೋಡ್‌ನ ಯುಎಲ್‌ ಸೈಬರ್‌ ಪಾರ್ಕ್‌ನಲ್ಲಿ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ಅವರ ಸ್ವಗ್ರಾಮವಾದ ವಡಕರದಲ್ಲಿ ನಡೆಯಲಿದೆ. 1960ರಲ್ಲಿ ಜನಿಸಿದ್ದ ರಮೇಶನ್ ಪಾಲೇರಿ, ಭಾರತೀಯ ಸಹಕಾರ ಕ್ಷೇತ್ರದಲ್ಲಿ ದೂರದೃಷ್ಟಿಯ ನಾಯಕ, ಸಮರ್ಥ ಆಡಳಿತಗಾರ ಹಾಗೂ ಕಾರ್ಮಿಕ ಹಿತಾಸಕ್ತಿಗಳ ಪ್ರಬಲ ಪ್ರತಿಪಾದಕರಾಗಿ ಗುರುತಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಯುಎಲ್‌ಸಿಸಿಎಸ್‌ ಸಹಕಾರ ಮೌಲ್ಯಗಳನ್ನು ಅಡಿಪಾಯವಾಗಿಟ್ಟುಕೊಂಡು ಮೂಲಸೌಕರ್ಯ, ನಿರ್ಮಾಣ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ದೇಶದ ಅತ್ಯಂತ ಯಶಸ್ವಿ ಸಹಕಾರ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು…

Read More

ಸತತ 26ನೇ ವರ್ಷವೂ ಶೇ.25 ಡಿವಿಡೆಂಡ್: ದಾಖಲೆಯ 10,502 ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಭಾಗಿ ಮೂಡುಬಿದಿರೆ: 110 ವರ್ಷಗಳ ಇತಿಹಾಸ ಹೊಂದಿರುವ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಸೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು. ಮಾರ್ಪಾಡಿ ಮತ್ತು ಪ್ರಾಂತ್ಯ ಗ್ರಾಮಗಳ ವ್ಯಾಪ್ತಿ ಹೊಂದಿರುವ ಈ ಸೊಸೈಟಿಯ ಕಾರ್ಯವ್ಯಾಪ್ತಿಯ ಅಧಿಕೃತ ಸದಸ್ಯರ ಪೈಕಿ ವಾರ್ಷಿಕ ಮಹಾಸಭೆಯಲ್ಲಿ 10502 ಸದಸ್ಯರು ಭಾಗವಹಿಸಿದ್ದು ಹೊಸ ದಾಖಲೆಯಾಗಿದೆ. https://chat.whatsapp.com/FCEnlTkAKCC0MGPhXtX4i4 ಸಂಘದ ಅಧ್ಯಕ್ಷ ಸಹಕಾರ ರತ್ನ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, 2025-26ನೇ ಸಾಲಿನಲ್ಲಿ ₹12.50 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ತಿಳಿಸಿ, ಸದಸ್ಯರಿಗೆ ಸತತ 26ನೇ ವರ್ಷವೂ ಶೇ.25 ಡಿವಿಡೆಂಡ್ ವಿತರಿಸಲಾಗುವುದು ಎಂದು ತಿಳಿಸಿದರು. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದ ಕ್ಯಾನ್ಸರ್, ಕಿಡ್ನಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಸದಸ್ಯರಿಗೆ ನೀಡಲಾಗುತ್ತಿದ್ದ ₹15,000 ಸಹಾಯಧನವನ್ನು 25,000ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿರುವ ಸದಸ್ಯರಿಗೆ ಸಹಾಯಧನ ನೀಡುವ ಕುರಿತು…

Read More

ಸಹಕಾರ ಭಾರತಿ ವಿಶೇಷ ಅಭ್ಯಾಸ ವರ್ಗದಲ್ಲಿ ಪ್ರಭುದೇವ ಆರ್ .ಮಾಗನೂರು ಅಭಿಪ್ರಾಯ ಮಂಗಳೂರು: ಸಹಕಾರ ಭಾರತಿ ಮಂಗಳೂರು ಮಹಾನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜಂಟಿ ಸಹಯೋಗದಲ್ಲಿ ವಿಶೇಷ ಅಭ್ಯಾಸ ವರ್ಗವು ಕ್ಯಾಂಪ್ಕೋ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಸಹಕಾರ ಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್‌, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಮರ್ಪಿತ ಕಾರ್ಯಕರ್ತರು, ಸಮರ್ಥ ನಾಯಕತ್ವ ಹಾಗೂ ನಿರಂತರ ಅಧ್ಯಯನ ಅತ್ಯಗತ್ಯವಾಗಿದ್ದು, ಸಹಕಾರ ಸಂಸ್ಥೆಗಳು ಸಮಾಜಮುಖಿ ಸೇವೆಯ ಮೂಲಕ ಇನ್ನಷ್ಟು ಬಲಿಷ್ಠವಾಗಬೇಕು ಎಂದು ಹೇಳಿದರು. https://chat.whatsapp.com/FCEnlTkAKCC0MGPhXtX4i4 ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಸಹಕಾರ ಭಾರತಿಯ ಸ್ಥಾಪನೆಯಿಂದ ಇಂದಿನವರೆಗಿನ ಬೆಳವಣಿಗೆ, ಸಂಘಟನೆಯ ಧ್ಯೇಯ-ದೃಷ್ಟಿಕೋನ, ದೇಶಾದ್ಯಂತ ನಡೆಯುತ್ತಿರುವ ಸಂಘಟನಾ ಚಟುವಟಿಕೆಗಳು ಹಾಗೂ ಕಾರ್ಯಕರ್ತರ ಜವಾಬ್ದಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ಕರ್ನಾಟಕದ ಅಧ್ಯಕ್ಷ ಪ್ರಭುದೇವ ಆರ್. ಮಾಗನೂರು ಮಾತನಾಡಿ, ಸಹಕಾರ…

Read More