Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ. 5.85 ಕೋಟಿ ನಿವ್ವಳ ಲಾಭ
    News

    ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ. 5.85 ಕೋಟಿ ನಿವ್ವಳ ಲಾಭ

    adminBy adminApril 21, 2026

    ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ 2025-26ನೇ ಸಾಲಿನಲ್ಲಿ 1953.29 ಕೋಟಿ ರೂ. ಒಟ್ಟು ವ್ಯವಹಾರ ನಡೆಸಿದ್ದು ರೂ. 5.85 ಕೋಟಿ ನಿವ್ವಳ ಲಾಭ ಗಳಿಸಿದೆ. ಈಗಾಗಲೇ ಸಂಘವು 27 ಶಾಖೆಗಳೊಂದಿಗೆ ಮುನ್ನಡೆಯುತ್ತಿದ್ದು ಶೀಘ್ರದಲ್ಲಿ ಇನ್ನೂ ಮೂರು ಶಾಖೆಗಳು ಪ್ರಾರಂಭವಾಗಲಿದೆ ಎಂದು ಸಂಘದ ಅಧ್ಯಕ್ಷ ಭಗೀರಥ ಜಿ. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    https://chat.whatsapp.com/FCEnlTkAKCC0MGPhXtX4i4

    2008ರಲ್ಲಿ ಪ್ರಾರಂಭವಾದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು, ಸಹಕಾರ ಕ್ಷೇತ್ರದಲ್ಲಿ ಕಳೆದ 17 ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಸಂಘವನ್ನು ಕಟ್ಟಿ ಬೆಳೆಸಿದ ಮಾರ್ಗದರ್ಶಕರಾಗಿದ್ದ ಸಂಘದ ಮಾಜಿ ಅಧ್ಯಕ್ಷರಾಗಿದ್ದ ದಿ. ಎನ್.ಪದ್ಮನಾಭ ಮಾಣಿಂಜ, ಸಂಘದ ಮುಖ್ಯ ಪ್ರವರ್ತಕರಾಗಿದ್ದ ಮಾಜಿ ಶಾಸಕ ದಿ.ಕೆ.ವಸಂತ ಬಂಗೇರ ಮತ್ತು ಸ್ಥಾಪಕ ಅಧ್ಯಕ್ಷ ದಿ.ಕೆ.ಜಿ.ಬಂಗೇರ ಇವರ ಸೇವೆಯು ಯಾವತ್ತಿಗೂ ಸ್ಮರಣೀಯ ಎಂದು ಅವರು ನೆನಪಿಸಿಕೊಂಡರು.
    ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿ ಹೊಂದಿರುವ ಈ ಸಂಸ್ಥೆಯು ಬೆಳ್ತಂಗಡಿ, ಶಿರ್ತಾಡಿ, ಕಲ್ಲಡ್ಕ, ಕಕ್ಕಿಂಜೆ, ಬೆಳುವಾಯಿ, ನೆಲ್ಯಾಡಿ, ಮುಡಿಪು, ವೇಣೂರು, ಉಪ್ಪಿನಂಗಡಿ, ಕಡಬ, ಬ್ರಹ್ಮಾವರ, ಹಳೆಯಂಗಡಿ, ಕುಪ್ಪೆಪದವು, ಬಜಗೋಳಿ, ಅರಸಿನಮಕ್ಕಿ, ಸಿದ್ದಕಟ್ಟೆ, ಅಜೆಕಾರು, ಹಿರಿಯಡ್ಕ, ಪಡೀಲ್, ಕಬಕ, ಹೊಸ್ಮಾರು, ಪುರುಷರಕಟ್ಟೆ, ಕುಂಬ್ರ, ವಾಮದಪದವು, ಮಾವಿನಕಟ್ಟೆ, ಮೂಡುಬಿದಿರೆ, ಆಲಂಕಾರು ಸೇರಿ ಒಟ್ಟು 27 ಶಾಖೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಗುರುಪುರ-ಕೈಕಂಬ, ಬೆಳ್ಳಾರೆ ಮತ್ತು ಕುತ್ತಾರ್‌ಪದವು ಇಲ್ಲಿ ಹೊಸ ಶಾಖೆಗಳು ಶುಭಾರಂಭಗೊಳ್ಳಲಿದೆ ಎಂದು ಭಗೀರಥ ಜಿ ಮಾಹಿತಿ ನೀಡಿದರು.
    ತನ್ನದೇ ಆದ IFSC Code ಮೂಲಕ ನೇರವಾಗಿ ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯೊಂದಿಗೆ ಸದಸ್ಯರಿಗೆ ಅತ್ಯುತ್ತಮವಾದ ತಂತ್ರಜ್ಞಾನದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ಸೇವೆಯನ್ನು ನೀಡಲಾಗುತ್ತಿದೆ.
    ಸಂಘದ ಸಾಲಗಾರ ಸದಸ್ಯರು ಮರಣ ಹೊಂದಿದರೆ ಅಂತಹ ಸದಸ್ಯರ ಕಷ್ಟಕ್ಕೆ ಸ್ಪಂದಿಸಿ ಶ್ರೀಗುರು ಸಾಲಗಾರರ ಮರಣ ನಿಧಿಯಿಂದ ಒಟ್ಟು 119 ಜನರಿಗೆ ರೂ. 88,18,140 ಮೊತ್ತದ ಮರಣ ನಿಧಿಯನ್ನು ನೀಡಿ ಸಾಲದಿಂದ ಋಣ ಮುಕ್ತಗೊಳಿಸಲಾಗಿದೆ. 2023ರಲ್ಲಿ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸತತವಾಗಿ 9 ವರ್ಷಗಳಿಂದ ಸಾಧನಾ ಪ್ರಶಸ್ತಿ, ಹಾಗೂ ಇನ್ನಿತರ ಹಲವಾರು ಪ್ರಶಸ್ತಿಗಳನ್ನು ಸಂಘವು ಪಡೆದುಕೊಂಡಿರುವುದು ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
    ಪ್ರತಿ ವರ್ಷದಂತೆ ಕಳೆದ ವರ್ಷವೂ ಆಯ್ದ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಸಂಘದ ವತಿಯಿಂದ ಭರಿಸಲಾಗಿದೆ. ಶ್ರೀ ಗುರುಕೃಪಾ ಎಜುಕೇಶನ್ ಟ್ರಸ್ಟ್ ಬಲ್ಲೊಟ್ಟು ಇಲ್ಲಿಗೆ ರೂ.2 ಲಕ್ಷ ವಿದ್ಯಾನಿಧಿ ನೀಡಲಾಗಿರುತ್ತದೆ. ಈ ಯೋಜನೆಯು ನಿರಂತರವಾಗಿ ಮುಂದುವರಿಯುವುದು. ಈ ಆರ್ಥಿಕ ವರ್ಷದಲ್ಲಿ ಅತ್ಯಂತ ಬಡ ಕುಟುಂಬದ ಅರ್ಹ ಫಲಾನುಭವಿಯನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ.
    ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ‘ಎ’ ತರಗತಿ ಪಡೆಯುತ್ತಿರುವ ಸಹಕಾರ ಸಂಘ ದುಡಿಯುವ ಬಂಡವಾಳದಲ್ಲಿ ನಿರಂತರ ಪ್ರಗತಿ ಹೊಂದಿದೆ. 34,000 ಸಾವಿರಕ್ಕೂ ಮಿಕ್ಕಿ ಸದಸ್ಯ ಬಲ, ರೂ.326 ಕೋಟಿ ಠೇವಣಿ, ರೂ..269 ಕೋಟಿ ಸಾಲ, ರೂ.70. 11 ಕೋಟಿ ಹೂಡಿಕೆ ಹೊಂದಿದೆ.
    109 ಮಂದಿ ನುರಿತ ಸಿಬ್ಬಂದಿ ವರ್ಗ, ಸಂಪೂರ್ಣ ಗಣಕೀಕೃತ ಸಂಸ್ಥೆ-ಕೋ‌ರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದು ಎಲ್ಲಾ ಶಾಖೆಗಳಲ್ಲೂ ಸಿ.ಸಿ ಕ್ಯಾಮರಾ, ಅಲಾರಂ, ಸೈರನ್ ಮತ್ತು ಭದ್ರತಾ ಕೊಠಡಿಯೊಂದಿಗೆ ಭದ್ರತೆಗೆ ಹೆಚ್ಚಿನ ಪ್ರಾಶಸ್ತ್ರ ನೀಡಲಾಗಿದೆ ಎಂದು ಹೇಳಿದರು.
    ಕೃಷಿಯೇತರ ಎಲ್ಲಾ ತರದ ಸಾಲ ಸೌಲಭ್ಯಗಳು. ಎಎಂಎಸ್ ನ ಮೂಲಕ ಮಾಹಿತಿ, ಆಕರ್ಷಕ ಠೇವಣಿ ಯೋಜನೆಗಳು, ಅತೀ ಶೀಘ್ರದಲ್ಲಿ ಚಿನ್ನಾಭರಣ ಸಾಲ, ಇ -ಸ್ಟಾಂಪಿಂಗ್ ಸೌಲಭ್ಯ, ಆಕರ್ಷಕ ಬಡ್ಡಿದರದಲ್ಲಿ ಠೇವಣಿಗಳ ಸ್ವೀಕಾರ ಸಂಘದ ವಿಶೇಷತೆಗಳಾಗಿವೆ.
    ಪಿಂಚಣಿ, ವಿದ್ಯಾಭ್ಯಾಸ ಹಾಗೂ ಹೆಣ್ಮಕ್ಕಳ ಮದುವೆಗೆ ಸಹಕಾರ ನೀಡುವಂತಹ ಆಕರ್ಷಕ ಠೇವಣಿ ಯೋಜನೆಗಳು* ಹಿರಿಯ ನಾಗರೀಕರು, ವಿಧವೆಯರು, ದಿವ್ಯಾಂಗರು ಹಾಗೂ ಸಂಘ ಸಂಸ್ಥೆಗಳಿಗೆ ಶೇಕಡಾ 0.5% ಹೆಚ್ಚುವರಿ ಬಡ್ಡಿ,ಈ ದೇಶದಾದ್ಯಂತ ಪಾವತಿಯಾಗುವ ಮಲ್ಟಿಸಿಟಿ ಚೆಕ್/ಡಿ.ಡಿ ಸೌಲಭ್ಯ, ಬೆಳ್ತಂಗಡಿ ಮತ್ತು ಹಳೆಯಂಗಡಿ ಶಾಖೆಗಳಲ್ಲಿ ಸೇಫ್ ಲಾಕ‌ರ್ ಸೌಲಭ್ಯವಿದೆ. ಇಫ್ಕೊ -ಟೋಕಿಯೋ ವಿಮಾ ಸೌಲಭ್ಯಆ ಪಹಣಿಪತ್ರ ಮೊದಲಾದ ಸೌಲಭ್ಯ ಹೊಂದಿದೆ. ಸಂಘಕ್ಕೆ ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ, ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು. 16 ಮಂದಿ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯು ತಿಂಗಳಿಗೊಮ್ಮೆ ಸಭೆ ಸೇರಿ ಸಂಸ್ಥೆಯ ಬೆಳವಣಿಗೆಗೆ ಸೂಕ್ತ ನಿರ್ದೇಶನ, ಸಕಾಲದಲ್ಲಿ ಉತ್ತಮ ಸಲಹೆ, ನಿಯಮಗಳನ್ನು ಜಾರಿ ಮಾಡಿರುತ್ತದೆ.
    ಸಾಲದ ಉಪಸಮಿತಿಯು ಸಾಲ ವಿತರಣೆಗೆ ಸೂಕ್ತ ಮಾರ್ಗದರ್ಶನದೊಂದಿಗೆ ಅತೀ ಶೀಘ್ರದಲ್ಲಿ ಸದಸ್ಯರಿಗೆ ಸಾಲ ವಿತರಣೆಯಾಗುವಂತೆ ಕ್ರಮ ಕೈಗೊಳ್ಳುತ್ತಿದೆ. ಆಡಳಿತ ಮಂಡಳಿ ಸದಸ್ಯರ ಸಭಾ ಭತ್ಯೆಯನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡುತ್ತಾ ಬಂದಿರುತ್ತಾರೆ. ಸಂಸ್ಥೆಯು ವರದಿ ವರ್ಷದಲ್ಲಿ ಒಬ್ಬರು ವಿಶೇಷಾಧಿಕಾರಿ ಸೇರಿ 109 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅಲ್ಲದೇ ಒಟ್ಟು 62 ಮಂದಿ ನಿತ್ಯನಿಧಿ ಸಂಗ್ರಾಹಕರು ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಂಟಾದ ಸ್ಪರ್ಧೆಯನ್ನು ಎದುರಿಸಲು ಹಾಗೂ ಪರಿಣಾಮಕಾರಿ ಆಡಳಿತ ನಿರ್ವಹಣಾ ದೃಷ್ಟಿಯಿಂದ ವರ್ಷಕ್ಕೊಂದು ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ನುರಿತ ಸಂಪನ್ಮೂಲ ವ್ಯಕ್ತಿಯಿಂದ ನೀಡಿರುತ್ತೇವೆ. ನೌಕರರ ವೃಂದ ಬಲ, ನೇಮಕಾತಿ ಹಾಗೂ ವೇತನ ಶ್ರೇಣಿಯನ್ನು ಪರಿಷ್ಕರಿಸಿ ಮಹಾಸಭೆಯ ಮಂಜೂರಾತಿ ಪಡಕೊಂಡು ಧೃಢೀಕರಿಸಲು ಮಹಾಸಭೆಗೆ ಮಂಡಿಸಲಾಗಿದೆ.

    ಕೇವಲ ಬ್ಯಾಂಕಿಗ್ ಚಟುವಟಿಕೆ ಮಾತ್ರ ಸೀಮಿತವಾಗದ ನಮ್ಮ ಸಹಕಾರ ಸಂಸ್ಥೆಯು ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿರುತ್ತದೆ. ‘ಕಲಿಕೆಗಾಗಿ ಸಹಾಯ ಸಹಾಯಕ್ಕಾಗಿ ಕಲಿಕೆ’ಎನ್ನುವ ನಮ್ಮ ಸಂಸ್ಥೆಯ ಯೋಜನೆಯಡಿ ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ 3 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚು ವೆಚ್ಚ ಭರಿಸಲಾಗಿದ್ದು ಪ್ರಸ್ತುತ ಉತ್ತಮ ಉದ್ಯೋಗ ಲಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದು ನಾವು ಕಂಡ ಕನಸು ನನಸಾಗಿದೆ ಮೆಡಿಕಲ್ ವಿದ್ಯಾರ್ಥಿಯ ವ್ಯಾಸಂಗದ ವೆಚ್ಚವನ್ನು ಭರಿಸಿ ಪ್ರಸ್ತುತ ಉತ್ತಮ ರಲ್ಲಿ ರಿಕಗಳಿಂದ ತೇರ್ಗಡೆಗೊಂಡು ಎಮ್.ಡಿ ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ಆಯ್ದ ಪದವಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ.

    ಎಸ್.ಎಸ್.ಎಲ್.ಸಿ. ಪಿಯುಸಿ ಮತ್ತು ಪದವಿಯಲ್ಲಿ ಹಾಗೂ ಇತರ ಕ್ಷೇತ್ರದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ನಮ್ಮ ಸಂಸ್ಥೆಯ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರತಿವರ್ಷ ಮಹಾಸಭೆಯಲ್ಲಿ ಸನ್ಮಾನಿಸಿರುತ್ತೇವೆ. ಶಾಖೆಗಳ ದಶಮಾನೋತ್ಸವದ ಪ್ರಯುಕ್ತ ಸ್ಥಳಿಯ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಸಾಮಾನ್ಯ ರೋಗ ವಿಭಾಗ, ಕ್ಯಾನ್ಸರ್ ತಪಾಸಣೆ, ಕಣ್ಣಿನ ವಿಭಾಗ, ದಂತ ಚಿಕ್ಕಿತ್ಸೆ, ಎಲುಬು ಮತ್ತು ಕೀಲು ರೋಗ ವಿಭಾಗ ಇದರ ಬೃಹತ್ ಆರೋಗ್ಯ ಶಿಬಿರ ನಡೆದು 1000 ಮಂದಿ ಫಲಾನುಭವಿಗಳು ತಮ್ಮ ಆರೋಗ್ಯ ತಪಾಸಣೆ ನಡೆಸಿರುತ್ತಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಇನ್ನೂ ಹತ್ತು ಹಲವು ಕಾರ್ಯಕ್ರಮ ನಮ್ಮ ಮುಂದಿದೆ. ಸಂಘದ ವಿಶೇಷ ಯೋಜನೆಯಾಗಿರುವ ಶ್ರೀ ಗುರು ಸಾಲಗಾರರ ಮರಣ ನಿಧಿಯ ಮೂಲಕ ಮರಣ ಹೊಂದಿದ ಸಾಲಗಾರನಿಗೆ ರೂ.10,00,000/- ದವರೆಗೆ ನೀಡಿ ಸಾಲಗಾರರ ಕುಟುಂಬವನ್ನು ಸಾಲದಿಂದ ಋಣ ಮುಕ್ತಗೊಳಿಸಲಾಗಿರುತ್ತದೆ.
    ಬೆಳ್ತಂಗಡಿಯಲ್ಲಿ ರೂ.92 ಲಕ್ಷಕ್ಕೆ ಖರೀದಿಸಿದ ನಿವೇಶನದಲ್ಲಿ ನಮ್ಮ ಸಂಘದ ಕೇಂದ್ರ ಕಚೇರಿಯನ್ನು ರೂ.5.28 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣವು ಲೋಕಾರ್ಪಣೆಗೊಂಡಿರುತ್ತದೆ. ಈ ಕಟ್ಟಡದ ತಳ ಮಹಡಿಯ ಅಂತಸ್ತಿನಲ್ಲಿ ವಿಶಾಲವಾದ ವಾಹನ ಪಾರ್ಕಿಂಗ್, ನೆಲ ಅಂತಸ್ತು ಮತ್ತು ಮೊದಲನೇ ಮಹಡಿಯನ್ನು ಬಾಡಿಗೆಗೆ ನೀಡಲಾಗಿರುತ್ತದೆ. ಎರಡನೇ ಮಹಡಿಯಲ್ಲಿ ಕೇಂದ್ರ ಕಚೇರಿಯು ಕಾರ್ಯಾಚರಿಸುತ್ತಿದೆ. ಮೂರನೇ ಮಹಡಿಯಲ್ಲಿ ಸಭಾಂಗಣವನ್ನು ಹೊಂದಿರುತ್ತದೆ. 48 ಕಿಲೋ ವ್ಯಾಟ್ ಉತ್ಪಾದನೆಯ ಸೋಲಾರ್ ಘಟಕವನ್ನು ಸ್ಥಾಪಿಸಲಾಗಿರುತ್ತದೆ. ಹಳೆಯಂಗಡಿ ಶಾಖೆ, ಬೆಳುವಾಯಿ ಶಾಖೆ ಪ್ರಸ್ತುತ ವರ್ಷದಲ್ಲಿ ಕಬಕ ಶಾಖೆಯನ್ನು ಮತ್ತು ಮೂಡುಬಿದಿರೆ ಶಾಖೆಯನ್ನು ಸ್ವಂತ ಮಾಲೀಕತ್ವಕ್ಕೆ ಖರೀದಿಸಲಾಗಿರುತ್ತದೆ. ವರದಿ ವರ್ಷದಲ್ಲಿ ಒಟ್ಟು ರೂ.9 ಕೋಟಿ 23 ಲಕ್ಷ ಮೊತ್ತದ ಸ್ಥಿರಾಸ್ತಿಯನ್ನು ಹೊಂದಿರುತ್ತದೆ.

    ಬಜಗೋಳಿ ಶಾಖೆಯ ಸ್ವಂತ ಮಾಲೀಕತ್ವಕ್ಕೆ ಖರೀದಿಯ ಬಗ್ಗೆ ಒಪ್ಪಂದ ಮಾಡಲಾಗಿರುತ್ತದೆ. ಸಂಘವು ರೂ. 1 ಕೋಟಿ 54 ಲಕ್ಷ ಮೌಲ್ಯದ ಪೀಠೋಪಕರಣಗಳೊಂದಿಗೆ ಒಟ್ಟು ರೂ.4 ಕೋಟಿ 88 ಲಕ್ಷ ಮೌಲ್ಯದ ಇತರ ಆಸ್ತಿಗಳನ್ನು ಹೊಂದಿರುತ್ತದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಗದೀಶ್ವಚಂದ್ರ ಡಿ. ಕೆ., ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾ‌ರ್, ನಿರ್ದೇಶಕರುಗಳಾದ ಸಂಜೀವ ಪೂಜಾರಿ, ಚಂದ್ರಶೇಖ‌ರ್, ಗಂಗಾಧರ ಮಿತ್ತಮಾರು, ಧರಣೇಂದ್ರ ಕುಮಾ‌ರ್, ಚಿದಾನಂದ ಪೂಜಾರಿ ಎಲ್ದಕ್ಕ ಉಪಸ್ಥಿತರಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Bhageeratha G Co Operative ministry Cooperative Registrar Jagadishchandra D. k Shree Gurudeva Vividhoddesha Sahakara Sangha Beltangady
    Previous Articleಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘಕ್ಕೆ ರೂ. 5.28 ಕೋಟಿ ಲಾಭ
    Next Article ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ 3.02 ಕೋಟಿ ರೂ. ನಿವ್ವಳ ಲಾಭ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.