Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕೊಡಗು ಪ್ರೆಸ್‌ಕ್ಲಬ್‌ ಸೌಹಾರ್ದ ಸಹಕಾರಿ ಸಂಘದಿಂದ ಸೌಹಾರ್ದ ಕಪ್‌ ಕ್ರಿಕೆಟ್‌ ಪಂದ್ಯಾವಳಿ
    News

    ಕೊಡಗು ಪ್ರೆಸ್‌ಕ್ಲಬ್‌ ಸೌಹಾರ್ದ ಸಹಕಾರಿ ಸಂಘದಿಂದ ಸೌಹಾರ್ದ ಕಪ್‌ ಕ್ರಿಕೆಟ್‌ ಪಂದ್ಯಾವಳಿ

    adminBy adminApril 21, 2026

    ಮಡಿಕೇರಿ: ಕೊಡಗು ಪ್ರೆಸ್‌ಕ್ಲಬ್‌ ಸೌಹಾರ್ದ ಸಹಕಾರಿ ಸಂಘದ ಆಶ್ರಯದಲ್ಲಿ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಜಿಲ್ಲಾಮಟ್ಟದ ಸೌಹಾರ್ದ ಕಪ್ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಮೀಡಿಯಾ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಕಾವೇರಿ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.

    https://chat.whatsapp.com/FCEnlTkAKCC0MGPhXtX4i4
    ಫೈನಲ್ ಪಂದ್ಯದಲ್ಲಿರೆಜಿತ್ ಕುಮಾರ್ ಗುಹ್ಯ ಪಂದ್ಯಶ್ರೇಷ್ಠ, ಇಸ್ಮಾಯಿಲ್ ಕಂಡಕ್ಕರೆ ಬೆಸ್ಟ್ ಬ್ಯಾಟ್ಸ್‌ಮನ್‌, ಯುಗ ದೇವಯ್ಯ ಬೆಸ್ಟ್ ಬೌಲರ್, ಜಯಪ್ರಕಾಶ್ ಬೆಸ್ಟ್ ಕೀಪರ್, ಪ್ರದೀಪ್ ಬೆಸ್ಟ್ ಕ್ಯಾಚ್, ಆದರ್ಶ್ ಸರಣಿಶ್ರೇಷ್ಠ, ಪ್ರಮೀಳಾ ನಾಚಯ್ಯ ಉತ್ತಮ ಮಹಿಳಾ ಆಟಗಾರ್ತಿ, ಹನೀಫ್ ಕೊಡ್ಲಿಪೇಟೆ ಉತ್ತಮ ಹಿರಿಯ ಆಟಗಾರ, ವಿನು ಕುಶಾಲಪ್ಪ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದುಕೊಂಡರು.
    ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಕ್ರಿಕೆಟ್‌ ಟೂರ್ನಿ ಉದ್ಘಾಟಿಸಿದರು. ಯುವ ಮುಖಂಡ ಎಡಿಕೇರಿ ಪ್ರಸನ್ನ, ಕೊಡಗು ಪ್ರೆಸ್‌ಕ್ಲಬ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಪ್ರೆಸ್‌ಕ್ಲಬ್‌ ಅಧ್ಯಕ್ಷ ಬೊಳ್ಳಜೀರ ಬಿ.ಅಯ್ಯಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್ ಸವಿತಾ ರೈ, ಅಯರ ತಂಡದ ಮಾಲೀಕ ಪಿ.ವಿಷ್ಣು, ಸಮಾಜಸೇವಕ ಎ.ಎನ್ ಪದ್ಮನಾಭ ಹಾಜರಿದ್ದರು. ಸಮಾರೋಪ ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಉದ್ಯಮಿ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿದರು. ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಹಾಜರಿದ್ದರು.


    ಭಾಗವಹಿಸಿದ್ದ ತಂಡಗಳು: ಇಸ್ಮಾಯಿಲ್ ಕಂಡಕ್ಕರೆ ಮಾಲೀಕತ್ವದ, ನೌಫಲ್ ಕಡಂಗ ನಾಯಕತ್ವದ ಮೀಡಿಯಾ ಸೂಪರ್‌ಕಿಂಗ್ಸ್‌, ಸಂತೋಷ್ ರೈ ಹಾಗೂ ಸವಿತಾ ರೈ ಮಾಲಿಕತ್ವದ ಎ.ಎಸ್ ಮುಸ್ತಫ ನಾಯಕತ್ವದ ಮೀಡಿಯಾ ರಾಯಲ್ಸ್, ಎಂ.ಎನ್ ಚಂದ್ರಮೋಹನ್ ಮಾಲೀಕತ್ವದ ಎಚ್.ಸಿ ಜಯಪ್ರಕಾಶ್ ನಾಯಕತ್ವದ ಕಾವೇರಿ ಮೀಡಿಯಾ ಕ್ರಿಕೆಟರ್ಸ್, ಸಣ್ಣುವಂಡ ಕಿಶೋರ್ ನಾಚಪ್ಪ ಹಾಗೂ ವಿ.ವಿ. ಅರುಣ್ ಕುಮಾರ್ ಮಾಲಿಕತ್ವದ ಮಂಡೇಡ ಅಶೋಕ್ ನಾಯಕತ್ವದ ಗೋಣಿಕೊಪ್ಪ ಮೀಡಿಯಾ ಕಿಂಗ್ಸ್, ವಿರಾಜಪೇಟೆಯ ಉದ್ಯಮಿ ಪಿ.ವಿಷ್ಣು ಮಾಲಿಕತ್ವದ ಡಾ. ಹೇಮಂತ್ ಕುಮಾರ್ ನಾಯಕತ್ವದ ಟೀಮ್ ಅಯರ, ಅನಿವಾಸಿ ಭಾರತೀಯ ಎ.ಎನ್.ಪದ್ಮನಾಭ ಮಾಲೀಕತ್ವದ ಪ್ರೇಮ್ ನಾಯಕತ್ವದ ನನ್ನ ಧ್ವನಿ, ಚೆಯ್ಯಂಡ ಸತ್ಯ ಮಾಲಿಕತ್ವದ ಆದರ್ಶ್ ನಾಯಕತ್ವದ ಬ್ರಾಡ್‌ಕಾಸ್ಟ್ ಇಬ್ಬಿ ಬ್ಲಾಸ್ಟರ್ಸ್, ಮಚ್ಚಮಾಡ ಅನೀಶ್ ಮಾದಪ್ಪ ಮಾಲಿಕತ್ವದ ದಿವಾಕರ್ ಜಾಕಿ ನಾಯಕತ್ವದ ಟೀಂ ಕಾಫಿ ನಾಡ್ ತಂಡಗಳು ಭಾಗವಹಿಸಿದ್ದವು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Co Operative ministry Cooperative Cooperative Department Cooperative Registrar Kodagu Press Club Souharda Sahakari Sangha Souharda Cricket Tourney
    Previous Articleಸಾಮಾಜಿಕ ಬದ್ಧತೆಯ ಯೋಜನೆಗಳನ್ನು ಜಾರಿಗೆ ತರುವುದೇ ಆತ್ಮಶಕ್ತಿ ಸಹಕಾರಿ ಸಂಘದ ಶಕ್ತಿ
    Next Article ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘಕ್ಕೆ ರೂ. 5.28 ಕೋಟಿ ಲಾಭ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.