Close Menu
    Top News

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು
    News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    adminBy adminApril 22, 2026

    ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು, ಬ್ಯಾಂಕ್ ನೀಡುವ ರಿಟರ್ನ್ ಮೆಮೊಗಳಲ್ಲಿ ಅಧಿಕಾರಿಗಳ ಸಹಿ ಇಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂದಿನ ಡಿಜಿಟಲ್ ವ್ಯವಸ್ಥೆಯಲ್ಲಿ ತಾಂತ್ರಿಕ ದಾಖಲೆಗಳೇ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬ್ಯಾಂಕ್‌ಗಳು ನೀಡುವ ಕಂಪ್ಯೂಟರ್‌ ಆಧಾರಿತ ‘ರಿಟರ್ನ್ ಮೆಮೊ’ಗಳಲ್ಲಿ (ಚೆಕ್ ಅಮಾನ್ಯಗೊಂಡ ಬಗ್ಗೆ ಬ್ಯಾಂಕ್ ನೀಡುವ ಚೀಟಿ) ಬ್ಯಾಂಕ್ ಅಧಿಕಾರಿಗಳ ಸಹಿ ಅಥವಾ ಅಧಿಕೃತ ಸೀಲು ಇಲ್ಲ ಎಂಬ ಏಕೈಕ ಕಾರಣಕ್ಕೆ ಕ್ರಿಮಿನಲ್ ದೂರನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    https://chat.whatsapp.com/FCEnlTkAKCC0MGPhXtX4i4
    ಬೆಂಗಳೂರಿನ ವ್ಯಕ್ತಿಯೊಬ್ಬರು ಎಂಬುವವರು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯೊಂದರಿಂದ 3 ಲಕ್ಷ ರೂ. ಸಾಲ ಪಡೆದಿದ್ದರು. ಸಾಲಕ್ಕೆ ಖಾತರಿಯಾಗಿ ಅವರು ಮುಂದಿನ ದಿನಾಂಕದ ಚೆಕ್ ನೀಡಿದ್ದರು. ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಸೊಸೈಟಿಯು ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ, ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಕೆಳಹಂತದ ನ್ಯಾಯಾಲಯವು ಆರೋಪಿಗೆ 4 ಲಕ್ಷ ರೂ. ದಂಡ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಿಗೆ ಈಗ ಹಿನ್ನಡೆಯಾಗಿದೆ.
    ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿ, “ಪ್ರಸ್ತುತ ದಿನಗಳಲ್ಲಿ ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯು ಇಲೆಕ್ಟ್ರಾನಿಕ್ ವಿಧಾನದಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಂಪ್ಯೂಟರ್ ಮೂಲಕ ಸಿದ್ಧವಾಗುವ ಬ್ಯಾಂಕ್ ರಿಟರ್ನ್ ಮೆಮೊಗಳಿಗೆ ಹಸ್ತಚಾಲಿತ ಸಹಿ ಅಥವಾ ಬ್ಯಾಂಕಿನ ಅಧಿಕೃತ ಮುದ್ರೆ ಕಡ್ಡಾಯವಲ್ಲ. ಈ ತಾಂತ್ರಿಕ ಕಾರಣಗಳನ್ನು ಒಡ್ಡಿ ಚೆಕ್ ಬೌನ್ಸ್ ದೂರನ್ನು ತಿರಸ್ಕರಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದೆ. ಆರೋಪಿಯು ತಾನು ನೀಡಿದ್ದ ಖಾಲಿ ಚೆಕ್ ಅನ್ನು ಸೊಸೈಟಿಯು ದುರ್ಬಳಕೆ ಮಾಡಿಕೊಂಡಿದೆ ಮತ್ತು ತಾನು ಈಗಾಗಲೇ ಸಾಲ ತೀರಿಸಿದ್ದೇನೆ ಎಂದು ವಾದಿಸಿದ್ದರು. ಆದರೆ ಸಾಲ ತೀರಿಸಿದ ಬಗ್ಗೆ ದಾಖಲೆಗಳನ್ನು ಒದಗಿಸಲು ಅವರು ವಿಫಲರಾಗಿದ್ದರು. “ಚೆಕ್ ತನ್ನದೇ ಮತ್ತು ಅದರಲ್ಲಿರುವ ಸಹಿ ಕೂಡ ತನ್ನದೇ ಎಂದು ಒಪ್ಪಿಕೊಂಡ ಮೇಲೆ, ವರ್ಗಾವಣೆಯ ಲಿಖಿತಗಳ ಅಧಿನಿಯಮದ ಸೆಕ್ಷನ್ 139ರ ಅಡಿ ದೂರುದಾರರ ಪರವಾಗಿ ಕಾನೂನುಬದ್ಧ ಸಾಲದ ಅಸ್ತಿತ್ವದ ಬಗ್ಗೆ ಇರುವ ಅನುಮಾನಕ್ಕೆ ಆಸ್ಪದವಿಲ್ಲ ಎಂದು ಕೋರ್ಟ್ ತಿಳಿಸಿದೆ.

    ಪ್ರಕರಣದ ಪ್ರಮುಖ ಮುಖ್ಯಾಂಶಗಳು:
    ಡಿಜಿಟಲ್ ದಾಖಲೆ ಸಾಕು: ಬ್ಯಾಂಕ್ ನೀಡುವ ರಿಟರ್ನ್ ಮೆಮೊಗಳಲ್ಲಿ ಹಸ್ತಚಾಲಿತ ಸಹಿ ಇಲ್ಲದಿದ್ದರೂ ಅದನ್ನು ಪುರಾವೆಯಾಗಿ ಪರಿಗಣಿಸಬಹುದು.
    ಸಾಲದ ಹೊಣೆಗಾರಿಕೆ: ಒಮ್ಮೆ ಚೆಕ್ ಮೇಲಿರುವ ಸಹಿ ತನ್ನದೇ ಎಂದು ಒಪ್ಪಿಕೊಂಡ ಮೇಲೆ, ಸಾಲಗಾರನು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ.
    ಸಾಕ್ಷ್ಯಾಧಾರದ ಕೊರತೆ: ಸಾಲ ಮರುಪಾವತಿ ಮಾಡಿದ್ದೇನೆ ಎಂದು ವಾದಿಸುವವರು ಅದಕ್ಕೆ ಸೂಕ್ತ ರಸೀದಿ ಅಥವಾ ದಾಖಲೆಗಳನ್ನು ಒದಗಿಸುವುದು ಕಡ್ಡಾಯ.
    ದೂರು ದಾಖಲಿಸದ ನಿರ್ಲಕ್ಷ್ಯ: ಒಂದು ವೇಳೆ ಚೆಕ್ ದುರುಪಯೋಗವಾಗಿದ್ದರೆ, ಆ ಬಗ್ಗೆ ಮೊದಲೇ ಪೊಲೀಸರಿಗೆ ಅಥವಾ ಬ್ಯಾಂಕಿಗೆ ದೂರು ನೀಡದಿದ್ದಲ್ಲಿ ಅಂತಹ ವಾದವನ್ನು ನ್ಯಾಯಾಲಯ ಪುರಸ್ಕರಿಸುವುದಿಲ್ಲ.
    ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಸಾಲದ ಭದ್ರತೆಗಾಗಿ ನೀಡಿದ ಚೆಕ್ ಬೌನ್ಸ್ ಆದಾಗ ಅದರಿಂದ ತಪ್ಪಿಸಿಕೊಳ್ಳಲು ತಾಂತ್ರಿಕ ಕಾರಣಗಳನ್ನು (ಸಹಿ ಇಲ್ಲದ ಮೆಮೊ ಇತ್ಯಾದಿ) ಮುನ್ನೆಲೆಗೆ ತರುವುದು ಸರಿಯಲ್ಲ ಎಂದು ಹೇಳಿದೆ. ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಇರಬೇಕೆಂದು ಪೀಠವು ಈ ಮೂಲಕ ಎಚ್ಚರಿಸಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

     

    Bank Cheque Banking Cash memo Co Operative ministry Cooperative Department Cooperative Registrar Karnataka Highcourt Souharda Sahakari
    Previous Articleಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ
    Next Article ಶ್ರೀಶಾ ಸೌಹಾರ್ದ ಸೊಸೈಟಿಯಿಂದ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ: ಅರ್ಜಿ ಆಹ್ವಾನ

    Related Posts

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.