Author: admin

ನವದೆಹಲಿ: ಭಾರತೀಯ ರಾಷ್ಟ್ರೀಯ ಸಹಕಾರಿ ಒಕ್ಕೂಟದ (ಎನ್‌ಸಿಯುಐ) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಕರ್ನಾಟಕದ ಜಿ.ಟಿ ದೇವೇಗೌಡ ಮತ್ತು ಅಗಡಿ ಅಶೋಕ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಕರ್ನಾಟಕದ ಹಿರಿಯ ಸಹಕಾರಿ ಎಚ್‌.ಕೆ ಪಾಟೀಲ್‌ ಅವರ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳು ಕಂಡುಬಂದಿವೆ. ನಾಮಪತ್ರ ಪರಿಶೀಲನೆಯ ನಂತರ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ ದೇವೇಗೌಡ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಅಗಡಿ ಅಶೋಕ್‌ ಅವರ ನಾಮಪತ್ರಗಳು ಕ್ರಮಬದ್ಧವಾಗಿರುವುದರಿಂದ ಹಾಗೂ ಅವರ ಸ್ಥಾನಕ್ಕೆ ಎದುರಾಳಿಗಳು ಇಲ್ಲದ ಕಾರಣ ಅವರನ್ನು ಅವಿರೋಧ ಆಯ್ಕೆ ಎಂದು ಘೋಷಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಮಂಗಳವಾರ ನಾಮಪತ್ರ ಪರಿಶೀಲನೆಯ ನಂತರ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ 40 ನಾಮಪತ್ರಗಳು 37 ಮಾನ್ಯವೆಂದು ಕಂಡುಬಂದರೆ, ಮೂರು ನಾಮಪತ್ರಗಳು ತಿರಸ್ಕೃತಗೊಂಡಿವೆ. ತಿರಸ್ಕೃತಗೊಂಡ ನಾಮಪತ್ರಗಳಲ್ಲಿ ಛತ್ತೀಸ್‌ಗಢ ರಾಜ್ಯ ಸಹಕಾರಿ ಸಂಘದ ಆಡಳಿತಾಧಿಕಾರಿ ಸೌರಭ್ ಶರ್ಮ, ತೆಲಂಗಾಣ ಸಹಕಾರಿ ಒಕ್ಕೂಟದ ಟಿಪ್ಪಿ ಮೋಹನ್ ರೆಡ್ಡಿ ಮತ್ತು ಇಫ್ಕೋ…

Read More

ಬೆಳ್ತಂಗಡಿ: ಪ್ರವರ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಪ್ರಥಮ ವಾರ್ಷಿಕ ಮಹಾಸಭೆ ಜುಲೈ 4ರಂದು ಸೊಸೈಟಿಯ ಆವರಣದಲ್ಲಿ ಸಂಘದ ಅಧ್ಯಕ್ಷರಾದ ರಾಜಿತ್‌ ರೈ ಟಿ.ಸಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್‌ ಕುಮಾರ್‌ ಶೆಟ್ಟಿ ವರದಿ ಮಂಡನೆ ಮಾಡಿದರು. ಸಂಘದ ಸಿಬ್ಬಂದಿ ಸ್ವಾತಿ ಸಭೆಯ ನೋಟಿಸ್‌ ಓದಿದರು. ಸಿಬ್ಬಂದಿ ಅನುಷಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಪ್ರೇಮ್ ರೋಷಲ್ ಡಿಸೋಜ ಸ್ವಾಗತಿಸಿ, ವಂದಿಸಿದರು.

Read More

ಮಂಗಳೂರು: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್‌ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಜುಲೈ 13ರಂದು ಸೋಮವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ಉರ್ವ ಎಂ.ಎಸ್‌.ಸಿ.ಎಲ್‌ ಇಂಡೋರ್‌ ಸ್ಟೇಡಿಯಂ ಕಟ್ಟಡದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಹಾಗೂ ಮಂಗಳೂರಿನ ಕ್ವಾಲಿಟಿ ಗ್ರೂಪ್‌ ಆಫ್‌ ಹೋಟೆಲ್ಸ್‌ನ ಅಧ್ಯಕ್ಷರಾದ ಡಾ.ಎ.ಸದಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ. ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸ್ಥಾಪಕಾಧ್ಯಕ್ಷರಾದ ಎಸ್‌.ಜಯರಾಮ್‌ ಶೆಟ್ಟಿ, ಉರ್ವ ಶ್ರೀ ಮಾರಿಯಮ್ಮ ದೈವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್‌ ಕೋಡಿಕಲ್‌ ಮತ್ತು ದ.ಕ. ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷರಾದ ಸಂತೋಷ್‌ ಕುಮಾರ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷರಾದ ಅಜಿತ್‌ ಜಿ.ಶೆಟ್ಟಿ ಕೋರ್ಯಾರು, ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಸೊಸೈಟಿಯ ನಿರ್ದೇಶಕರಾದ ಎಸ್‌.ಜಯರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ…

Read More

ಉಳ್ಳಾಲ: ಅಸೈಗೋಳಿಯ ಕೊಣಾಜೆ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಸನ್ಮಾನ ಸ್ವೀಕರಿಸಿ ಮಾತನಾಡಿದ ಯು.ಟಿ ಖಾದರ್‌, ಸಮಾಜ, ದೇಶ ಕಟ್ಟಲು ಶೈಕ್ಷಣಿಕ ಸಂಸ್ಥೆ, ಸಂಘ ಸಂಸ್ಥೆಗಳು, ಸಹಕಾರಿ ಸಂಘಗಳ ಸಹಕಾರ ಅಗತ್ಯವಿದೆ. ಅಸೈಗೋಳಿ ಮೈದಾನವನ್ನು ಶೀಘ್ರ ಮಿನಿ ಸ್ಟೇಡಿಯಂ ಆಗಿ ರೂಪಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಶುಭ ಹಾರೈಸಿದರು. ಕೊಣಾಜೆ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು ಅಧ್ಯಕ್ಷತೆ ವಹಿಸಿದ್ದರು. ಮೂರ್ನಾಲ್ಕು ಗ್ರಾಮಗಳಿಗೆ ಆಟಕ್ಕಾಗಿ ಅಸೈಗೋಳಿ ಮೈದಾನ ಮಾತ್ರ ಇರುವುದು. ಇದನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿಸುವ ಅವಶ್ಯಕತೆ ಇದೆ. 50 ವರ್ಷಗಳ ಹಿಂದೆ ಸರ್ವಧರ್ಮೀಯರು ಸೇರಿ ಸ್ಥಾಪಿಸಿದ ಸಹಕಾರಿ ಸಂಘದ ಅಭಿವೃದ್ಧಿಗೆ ಸಚಿವರ ಸಹಕಾರ ಬೇಕಿದೆ ಎಂದು ಸಂತೋಷ್‌ ಶೆಟ್ಟಿ ಮನವಿ ಮಾಡಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಅಸೈಗೋಳಿ ಶ್ರೀ ಅಯ್ಯಪ್ಪ…

Read More

ವಿಶ್ವಕರ್ಮ ಕಲಾ ಪರಿಷತ್ ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಚಾರ್ಯ ಹರೀಶ್‌ ಶೆಟ್ಟಿ ಅಭಿಪ್ರಾಯ ಮಂಗಳೂರು: ಇಂದು ಕಲಾವಿದರು, ಕುಶಲಕರ್ಮಿಗಳು, ಶಿಲ್ಪಿಗಳು ಎಐ ಇತ್ಯಾದಿ ವಿನೂತನ ತಂತ್ರಜ್ಞಾನಗಳ ಆಗಮನದಿಂದ ತಮ್ಮ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಆದರೆ ನಿಜವಾದ ಪ್ರತಿಭೆ ಹಾಗೂ ಕೌಶಲ್ಯವುಳ್ಳವರು ಈ ಬಗ್ಗೆ ಆತಂಕ ಪಡಬೇಕಿಲ್ಲ. ಎಐ ಇತ್ಯಾದಿ ಡಿಜಿಟಲ್ ಟೂಲ್‌ಗಳನ್ನು ಬಳಸಿ ಸಮಯ ಹಾಗೂ ಪರಿಕರಗಳ ಬಳಕೆ ಕಡಿಮೆ ಮಾಡಿಕೊಂಡು ಇನ್ನೂ ವ್ಯಾಪಕವಾದ ಮಾರುಕಟ್ಟೆಗೆ ತಮ್ಮ ಕಲಾಕೃತಿಗಳು ತಲುಪುವಂತೆ ಮಾಡಿ ತಮ್ಮಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಬಹುದು ಎಂದು ಖ್ಯಾತ ಸಾಫ್ಟ್‌ವೇರ್ ವಿಕಾಸಕ, ಕೆಪಿಟಿ ಮಂಗಳೂರು ಇದರ ನಿವೃತ್ತ ಪ್ರಾಚಾರ್ಯ ಹರೀಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. https://chat.whatsapp.com/FCEnlTkAKCC0MGPhXtX4i4 ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು, ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಆಶ್ರಯದಲ್ಲಿ ಕಲಾವಿದರು ಹಾಗೂ ಕುಶಲಕರ್ಮಿಗಳಿಗಾಗಿ ಪಾಲ್ಕೆ ಬಾಬುರಾಯ ಆಚಾರ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಇಂಪ್ಯಾಕ್ಟ್’ – ಹಸ್ತಕೌಶಲದಿಂದ ಹ್ಯಾಶ್‌ಟ್ಯಾಗ್‌ವರೆಗೆ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಚಿತ್ರ ಕಲಾವಿದ, ರುದ್ರ ಹನುಮಾನ್…

Read More

ನವದೆಹಲಿ: ದೇಶಾದ್ಯಂತ ಸಹಕಾರಿ ಕ್ಷೇತ್ರದ ವ್ಯಾಪ್ತಿ ಇನ್ನಷ್ಟು ವಿಸ್ತರಿಸಬೇಕು ಎಂಬ ನಿಟ್ಟಿನಲ್ಲಿ ಸಹಕಾರಿ ವಲಯಕ್ಕೆ ಶೀಘ್ರವೇ ಸಹಕಾರಿ ವಿಮಾ ಕಂಪನಿಯನ್ನು ಆರಂಭಿಸಲಾಗುತ್ತದೆ ಎಂದು ಕೇಂದ್ರ ಸಹಕಾರಿ ಸಚಿವ ಅಮಿತ್‌ ಷಾ ಘೋಷಿಸಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಸಹಕಾರ ಸಚಿವಾಲಯದ ಐದನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಸಚಿವಾಲಯದ ಸ್ಥಾಪನೆಯು ದೇಶದಲ್ಲಿ ಸಹಕಾರ ಚಳವಳಿಗೆ ಹೊಸ ಜೀವ ನೀಡಿದೆ ಎಂದಿದ್ದಾರೆ. ಸಹಕಾರ ತತ್ವದ ಆಧಾರದಲ್ಲಿ ಜನ್ಮ ತಳೆದಿರುವ ‘ಭಾರತ್ ಟ್ಯಾಕ್ಸಿ ಸೇವೆಯನ್ನು ಮುಂದಿನ ವರ್ಷಗಳಲ್ಲಿ 500 ನಗರಗಳಿಗೆ ವಿಸ್ತರಿಸಲಾಗುತ್ತದೆ. ದೇಶದಲ್ಲಿ ಅಂದಾಜು 8.5 ಲಕ್ಷ ಸಹಕಾರ ಸಂಘಗಳು ಇವೆ, 30 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ. ನಾವು ಸಹಕಾರ ವಲಯದಲ್ಲಿ ಆರಂಭಿಸಲಿರುವ ಜೀವ ವಿಮಾ ಕಂಪನಿಯು ವಿಮಾ ವಲಯದಲ್ಲಿ ಸಹಕಾರ ಸಂಘಗಳ ಬೆಳವಣಿಗೆಗೆ ನೆರವಾಗಲಿದೆ’ ಎಂದು ಅಮಿತ್‌ ಷಾ ಹೇಳಿದ್ದಾರೆ. ದೇಶದಲ್ಲಿ ಈಗ 26 ಜೀವ ವಿಮಾ ಕಂಪನಿಗಳು ಇವೆ. ಸಹಕಾರ ಸಂಘಗಳು ಹೈನುಗಾರಿಕೆ, ಸಕ್ಕರೆ, ರಸಗೊಬ್ಬರ ಮತ್ತು ಬ್ಯಾಂಕಿಂಗ್ ವಹಿವಾಟು ಮಾತ್ರವೇ ಅಲ್ಲದೆ ಹೊಸದಾಗಿ…

Read More

ಉಪ್ಪಿನಂಗಡಿ: ಸಹಕಾರ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಆಶ್ರಯದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಇದರ ನೇತೃತ್ವದಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕ, ರೋಟರಿ ಕ್ಲಬ್ ಉಪ್ಪಿನಂಗಡಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಹಾಗೂ ಜೆಸಿಐ ಉಪ್ಪಿನಂಗಡಿ ಇದರ ಒಟ್ಟು ಸಹಯೋಗದೊಂದಿಗೆ ಕೆಎಂಸಿ ಆಸ್ಪತ್ರೆ, ಅತ್ತಾವರ ಹಾಗೂ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು ಇದರ ನುರಿತ ವೈದ್ಯ ತಂಡದಿಂದ 112ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರವು ಉಪ್ಪಿನಂಗಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಯೂನಿಯನ್ ಬ್ಯಾಂಕ್ ಸಮೀಪ) ಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಶಿಬಿರವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಉದ್ಘಾಟಿಸಿ ಮಾತನಾಡಿ, 2012ರಲ್ಲಿ ಕೇವಲ ಮೂವರು ಸಿಬ್ಬಂದಿಗಳೊಂದಿಗೆ ₹22 ಲಕ್ಷ ಠೇವಣಿಯಿಂದ ಆರಂಭಗೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಇಂದು 320 ಕೋಟಿ ರೂಪಾಯಿಗೂ ಮಿಕ್ಕಿ ಠೇವಣಿಯೊಂದಿಗೆ,…

Read More

ಉಪ್ಪಿನಂಗಡಿ: ವಿಟ್ಲ ಗ್ರಾಮೀಣ ಸಹಕಾರಿ ಸಂಘದ ನೂತನ 5ನೇ ಶಾಖೆಯು ಶನಿವಾರ ಉಪ್ಪಿನಂಗಡಿಯ ಗಾಂಧಿ ಪಾರ್ಕ್‌ನ ರಾಮ ಗೋಪಾಲ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಲೋಕಾರ್ಪಣೆಗೊಂಡಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಅಧ್ಯಕ್ಷ ಹೆಚ್‌. ಜಗನ್ನಾಥ ಸಾಲಿಯಾನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್ ನೂತನ ಕಚೇರಿ ಉದ್ಘಾಟಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೊಠಡಿ ಉದ್ಘಾಟಿಸಿದರು, ಸಹಕಾರ ಭಾರತಿ ದ.ಕ ಜಿಲ್ಲೆಯ ಉಪಾಧ್ಯಕ್ಷ ಹಾಗೂ ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೆ.ವಿ. ಪ್ರಸಾದ್ ಶಾಖೆಯ ಗಣಕೀಕರಣ ವ್ಯವಸ್ಥೆ ಉದ್ಘಾಟಿಸಿದರು. ಪ್ರತಾಪಸಿಂಹ ನಾಯಕ್ ಮಾತನಾಡಿ, ಸಹಕಾರಿ ರಂಗ ಜನರ ವಿಶ್ವಾಸ ಗಳಿಸಿದ ಕ್ಷೇತ್ರ. ಜನರೊಂದಿಗೆ ಭಾವನಾತ್ಮಕವಾಗಿ ಸಂಬಂಧ ಇಟ್ಟುಕೊಂಡ ಸಂಘಗಳು ಯಶಸ್ವಿ ಪಥದಲ್ಲಿ ಸಾಗುತ್ತವೆ. ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಜನರು ವಿಶ್ವಾಸ ಇಡುವಂತೆ ಸಹಕಾರಿ ಸಂಘಗಳ ನಿರ್ದೇಶಕರ ಮೇಲೂ ನಂಬಿಕೆ ಇಡುತ್ತಾರೆ. ಅದನ್ನು ಉಳಿಸಿಕೊಂಡು ಹೋಗುವುದು ಅತ್ಯಗತ್ಯ ಎಂದು ಹೇಳಿದರು.…

Read More

ಕಚ್ಚೂರು ಶ್ರೀ ಮಾಲ್ತಿದೇವಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಉದ್ಘಾಟಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಯ ಬ್ರಹ್ಮಾವರ: ಸಹಕಾರಿ ಸಂಸ್ಥೆಗಳು ಸಮುದಾಯದ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಬೇಕು. ಆ ಮೂಲಕ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. https://chat.whatsapp.com/FCEnlTkAKCC0MGPhXtX4i4 ಶ್ರೀಕ್ಷೇತ್ರ ಕಚ್ಚೂರಿನಲ್ಲಿ ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಸಮುದಾಯವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲವಾಗಲು ಸಹಕಾರಿ ಸಂಸ್ಥೆಗಳು ಪೂರಕವಾಗಲಿ. ಕೇಂದ್ರದ ಹೊಸ ಸಹಕಾರಿ ಕಾಯ್ದೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ದೇಶದ ಶೇ.30ರಷ್ಟು ಜನರು ಸಹಕಾರಿ ಕ್ಷೇತ್ರಕ್ಕೆ ಒಳಪಟ್ಟಿದ್ದು, ಇದು ಶೇ.60ರಷ್ಟು ವ್ಯಾಪಿಸಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಗೋಕುಲ್‌ದಾಸ್ ಬಾರ್ಕೂರು ಮಾತನಾಡಿ, ಕಚ್ಚೂರು ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸುತ್ತಿದ್ದಾರೆ. ತಂಡ ಪ್ರಯತ್ನದ ಫಲವಾಗಿ ಸಹಕಾರಿ ಸಂಸ್ಥೆಯೂ ಪ್ರಾರಂಭವಾಗಿದೆ. ಪ್ರತಿ ರೂಪಾಯಿಗೂ ಭದ್ರತೆ ಒದಗಿಸುವುದು ಮತ್ತು ಜನರ ನಂಬಿಕೆ, ಆಶಯಕ್ಕೆ ಕುಂದು…

Read More

ಸಿಬ್ಬಂದಿಗಳೊಂದಿಗೆ ಸಂವಾದ: ಬ್ಯಾಂಕಿಂಗ್ ಸೇವೆ, ಸಾಮಾಜಿಕ ಬದ್ಧತೆಗೆ ಮೆಚ್ಚುಗೆ ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗುರುವಾರ ಮಂಗಳೂರಿನ ರಥಬೀದಿಯಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿಮಿಟೆಡ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದರು. https://chat.whatsapp.com/FCEnlTkAKCC0MGPhXtX4i4 ಈ ಸಂದರ್ಭದಲ್ಲಿ ಬ್ಯಾಂಕಿನ ಬೆಳವಣಿಗೆ, ಗ್ರಾಹಕ ಸೇವೆ, ಡಿಜಿಟಲ್ ಬ್ಯಾಂಕಿಂಗ್, ಸಾಮಾಜಿಕ ಹೊಣೆಗಾರಿಕೆ ಹಾಗೂ ಸಹಕಾರ ಕ್ಷೇತ್ರದಲ್ಲಿ ಬ್ಯಾಂಕ್ ಸಲ್ಲಿಸುತ್ತಿರುವ ವಿವಿಧ ಸೇವೆಗಳ ಕುರಿತು ಅವರು ಮಾಹಿತಿ ಪಡೆದರು. ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ಹಲವು ದಶಕಗಳಿಂದ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ತನ್ನ ಸ್ವರ್ಣ ಸಂಭ್ರಮದ ಅಂಗವಾಗಿ ಆಡಂಬರದ ಕಾರ್ಯಕ್ರಮಗಳಿಗೆ ಒತ್ತು ನೀಡದೆ, ಸ್ವಚ್ಛತಾ ಅಭಿಯಾನ, ಸದಸ್ಯ ಕಲ್ಯಾಣ ಯೋಜನೆಗಳು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವುದು ಶ್ಲಾಘನೀಯ ಹಾಗೂ ಇತರ ಸಹಕಾರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಸಹಕಾರ ಬ್ಯಾಂಕುಗಳು ಸಮಾಜದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು…

Read More