ಮಂಗಳೂರು: ದಕ್ಷಿಣ ಕನ್ನಡ ಸೌಹಾರ್ದ ಸಹಕಾರಿ ಅಣ್ಣಳಿಕೆ ಇದರ ಮೂರನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ರಂಗೋಲಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಸಹಕಾರಿಯ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿರುವ ಮನೆ ಮನೆಯಲ್ಲಿ ಸಹಕಾರಿ ಸದಸ್ವತ್ವ ಹೊಂದಿದೆ. ಒಂದು ಕುಟುಂಬದ ಅಭಿವೃದ್ಧಿ ಚಿಂತನೆಗೆ ಮಹತ್ವ ನೀಡಲಾಗುವುದು ಎಂದರು. ಸಹಕಾರಿಯ ಉಪಾಧ್ಯಕ್ಷ ದೇವಪ್ಪ ಕುಲಾಲ್ ಪಂಜಿಕಲ್ಲು ಮಾತನಾಡಿ, ಸಹಕಾರಿಯು ಕೇವಲ 24 ತಿಂಗಳ ಅವಧಿಯಲ್ಲಿ ಮೂರು ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ 1804 ಸದಸ್ಯರನ್ನು ಒಳಗೊಂಡು 2023-24ರ ವರ್ಷಾಂತ್ಯಕ್ಕೆ ರೂ. 1,45,625 ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK ಸಹಕಾರಿ ಪ್ರವರ್ತಕ ಸಂಸ್ಥೆಗಳಾದ ನೇತ್ರಾವತಿ ಕೃಷಿಕರ ಸಂಘಗಳ ಒಕ್ಕೂಟ ಬಂಟ್ವಾಳ, ನೇಸರ ಕೇಂದ್ರೀಯ ಸಮನ್ವಯ ಸಮಿತಿ ಗುರುಪುರ ಕೈಕಂಬ, ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ ಗುರುಪುರ ಕೈಕಂಬ ಇವರ ಸಹಭಾಗಿತ್ವದಲ್ಲಿ ಮಲ್ಲೂರು ಪರಾರಿ ಬರ್ಕೆ ದಿ.ತ್ಯಾಂಪಣ್ಣ ಶೆಟ್ಟಿಯವರ ಸ್ಮರಣಾರ್ಥ ಭತ್ತದ ಬೇಸಾಯದೊಂದಿಗೆ ವಿಶೇಷ ಕೃಷಿ ಸಾಧನೆ ಮಾಡಿದ ರೈತರಿಗೆ ಉತ್ತಮ ಕೃಷಿಕ ಗೌರವ ನೀಡಿ ಅಭಿನಂದಿಸಲಾಯಿತು. ಸಾಧಕ ರೈತರಾದ ಭತ್ತದ ಬೇಸಾಯವನ್ನು ಕೋಣ ಸಾಕಿ ಅದರಿಂದಲೇ ಉಳುಮೆ ಮಾಡುತ್ತಿರುವ ಬಂಟ್ವಾಳದ ಕೊಯಿಲ ಗ್ರಾಮದ ಹಾಂತ್ಲಾಜೆ ನಿವಾಸಿ ಸದಾಶಿವ ಶೆಟ್ಟಿಗಾರ್, ಭತ್ತದ ಬೇಸಾಯಕ್ಕಾಗಿ ತೋಡಿಗೆ ಕಿಂಡಿ ಕಟ್ಟ ರಚಿಸಿ ಎರಡು ಬೆಳೆ ಭತ್ತ ಬೆಳೆಯುತ್ತಿರುವ ಗೌರಿ ಬಡಕಬೈಲು ಕರಿಯಂಗಳ, ಸಾವಯವದಲ್ಲಿ ಭತ್ತದ ಬೆಳೆ ಬೆಳೆಯುವ ರೈತ ಗಂಗಾಧರ ಸಪಲ್ಯ ಬರ್ಕೆ ಗುರುಪುರ, ಭತ್ತ, ತರಕಾರಿ ಮಿಶ್ರ ಕೃಷಿಕ ರಾಜಾರಾಮ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ತಾಲೂಕಿನ ಆಯ್ದ 20 ಗ್ರಾಮಗಳಲ್ಲಿ ಮಣ್ಣು ನೀರು ಸಂರಕ್ಷಣೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ದಿಶಾ ಟ್ರಸ್ಟ್ ಕೈಕಂಬ ಸಂಸ್ಥೆ ಹಾಗೂ ಅದರ ಸಿಬ್ಬಂದಿ ವರ್ಗದವರಿಗೆ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
2024ರಲ್ಲಿ 10ನೇ ತರಗತಿ ಮತ್ತು ಪಿಯುಸಿಯಲ್ಲಿ 90%ಕ್ಕಿಂತ ಅಧಿಕ ಅಂಕ ಪಡೆದ ಸಹಕಾರಿಯ ಸದಸ್ಯರ 22 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ನೀಡಲಾಯಿತು. ಸಹಕಾರಿ ನಿರ್ದೇಶಕರಾದ ರಮೇಶ್ ಹೆಗ್ಡೆ ಬೆಳ್ಳಿಬೆಟ್ಟು ಗುತ್ತು ಗುರುಪುರ, ಚಂದಪ್ಪ ಮೂಲ್ಯ ರಾಯಿ, ನಿರಂಜನ ಸೇಮಿತ ತೆಂಕಬೆಳ್ಳೂರು, ಗೋಡ್ಫಿ ಫೆರ್ನಾಂಡಿಸ್ ಅಮ್ಮುಂಜೆ, ಪ್ರಮೀಳಾ ಉಳಾಯಿಬೆಟ್ಟು, ಜಯಲಕ್ಷ್ಮಿ, ಸುಭಾಶ್ಚಂದ್ರ ಅಡ್ಡೂರು, ವಸಂತಿ ಸುರೇಶ್ ಸೋರ್ನಾಡ್, ಮಹಮ್ಮದ್ ಇಡ್ಮ ಮಲ್ಲೂರು, ಸಾಹಿರಬಾನು ಅಡ್ಡೂರು, ಹೆನ್ರಿ ವಾಲ್ಡರ್ ಕಿನ್ನಿಕಂಬಳ, ಕರುಣಾಕರ ಪೂಜಾರಿ ಕೊಪ್ಪಳ ಪಿಲಿಮೊಗರು, ಆನಂದ ಗಾಡಿಪಲ್ಕೆ, ವಸಂತಿ ಕುಪ್ಪೆಪದವು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ರುದೇಶ್, ಸಹಕಾರಿ ಸಿಬ್ಬಂದಿಗಳಾದ ಸುಮಂಗಳ, ವಿನೋದಾ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com