Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸ್ವಸ್ತಿಕ್‌ ಸೌಹಾರ್ದ ಸೊಸೈಟಿಯ ಏಳನೇ ವಾರ್ಷಿಕ ಮಹಾಸಭೆ  
    News

    ಸ್ವಸ್ತಿಕ್‌ ಸೌಹಾರ್ದ ಸೊಸೈಟಿಯ ಏಳನೇ ವಾರ್ಷಿಕ ಮಹಾಸಭೆ  

    adminBy adminSeptember 11, 2024

    ದೇಶ ಕಾಯುವ ಯೋಧರಿಗೆ ಲಾಭಾಂಶದ ಒಂದು ಪಾಲು ಘೋಷಣೆ

    ಮಂಗಳೂರು: ಸ್ವಸ್ತಿಕ್‌ ಸೌಹಾರ್ದ ಸೊಸೈಟಿ ಅಳಪೆ ಕರ್ಮಾರ್‌ ಪಡೀಲ್‌ ಇದರ ಏಳನೇ ವಾರ್ಷಿಕ ಮಹಾಸಭೆ ಭಾನುವಾರ ಅಳಪೆ ಕರ್ಮಾರ್‌ನ ಮಹಾದೇವಿ ಭಜನಾ ಮಂದಿರದಲ್ಲಿ ನಡೆಯಿತು.

    ಸ್ವಸ್ತಿಕ್‌ ಸೌಹಾರ್ದ ಸೊಸೈಟಿಯ ಅಧ್ಯಕ್ಷ ವಲ್ಸರಾಜ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶವನ್ನು ಕಾಯುವ ಯೋಧರಿಗಾಗಿ ನಮ್ಮ ಸಂಸ್ಥೆಯ ಲಾಭಾಂಶದ ಒಂದು ಪಾಲು ಮೀಸಲಿಡಲಾಗುವುದು. ದೇಶ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮೀಸಲಿಡುವ ಯೋಧರಿಗೆ ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಚಂದ್ರ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆಯು 28.42.644 ರೂ. ಆದಾಯ ಹೊಂದಿದ್ದು, 16,95,495 ರೂ. ಒಟ್ಟು ವ್ಯವಹಾರ ದಾಖಲಿಸಿದೆ. ಶೇ.7 ಡಿವಿಡೆಂಡ್‌ ಘೋಷಿಸಲಾಗಿದೆ. ಸಂಸ್ಥೆಯು ಸದಸ್ಯರಿಗೆ ಸರಕಾರಿ ಹಾಗೂ ಸರಕಾರೇತರ ಸೇವೆಯನ್ನು ಸಿಎಸ್‌ಇ-ಇ-ಸರ್ವೀಸ್‌ ಮೂಲಕ ನೀಡುತ್ತಿದೆ.

    ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.೮೦ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಸಾವನ್‌ ವಿ.ಶೆಟ್ಟಿ, ಭೂಷಣ್‌ ಎಚ್‌, ತ್ವಿಷಾ ಪಾಂಡುರಂಗ, ಸಿಂಚನಾ ಎಸ್‌.ದಾಸ್‌, ಮಾನ್ಯ ಎಲ್‌.ಸುವರ್ಣ, ಟಿ.ಪ್ರಥಮ್‌ ಎಸ್‌.ಪೈ, ಅಕ್ಷಿತ್‌ ರೈ, ಪಿಯುಸಿ ಸಾಧಕರಾದ ನಿಹಾರಿಕಾ, ದೇವಿಕಾ ಎಂ.ಶೆಟ್ಟಿ, ಪ್ರಿಯಾ ಅನ್ಸಿಟಾ ಡಿಸೋಜ, ಚರಿಶ್ಮಾ ತಾರಾನಾಥ್‌, ಮೆರಿಕ್‌ ಶರ್ವಿನ್‌ ಡಿಸೋಜ, ಸಿಂಚನಾ ಜೆ.ಕೋಟ್ಯಾನ್‌, ಹರ್ಷಿತಾ ಅವರನ್ನು ಗೌರವಿಸಲಾಯಿತು. ನಿರ್ದೇಶಕರಾದ ನಿತಿನ್‌ ಎ, ವಿಜಯ ಕುಮಾರ್‌ ಶೆಟ್ಟಿ, ಕೆ.ಪಿ.ಬಾಲಚಂದ್ರ ಪೆರ್ಲ, ದಯಾನಂದ ಹೆಗ್ಡೆ, ತಾರಾನಾಥ ಜಿ.ಪಡೀಲ್‌, ತಾರಾನಾಥ ಕರ್ಮಾರ್‌, ರಾಜೇಶ್‌ ಶೆಟ್ಟಿ ಜಲ್ಲಿಗುಡ್ಡೆ, ರಾಜೇಶ್‌ ಎಚ್‌.ಜಲ್ಲಿಗುಡ್ಡೆ, ನಯನಾ ವಸಂತ ಕೊಟ್ಟಾರಿ ಮತ್ತು ಪುಷ್ಪಾ ರಮೇಶ್‌ ಆಚಾರ್‌ ಹಾಜರಿದ್ದರು.

    ನಿರ್ದೇಶಕ ಕೆ.ಪಿ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಅಕ್ಷತಾ ಸ್ವಾಗತಿಸಿದರು. ಸವಿತಾ ಡಿ.ಶೆಟ್ಟಿ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Co Operative ministry Cooperative Cooperative Department Cooperative Registrar Sahakara Spandana Spandana Cooperative Spandana Trust Swastik Souharda Society
    Previous Articleದೆಹಲಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟದ ಮಹಾಸಭೆ
    Next Article ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ಕಛೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.