ಐದನೇ ವಾರ್ಷಿಕ ಮಹಾಸಭೆಯಲ್ಲಿ 25% ಡಿವಿಡೆಂಡ್ ಘೋಷಣೆ
ಮಂಗಳೂರು: ಶ್ರೀಶಾ ಕೋ ಆಪರೇಟಿವ್ ಸೊಸೈಟಿಯ ಐದನೇ ವಾರ್ಷಿಕ ಮಹಾಸಭೆ ಭಾನುವಾರ ಶ್ರೀನಿವಾಸ ಹೋಟೆಲ್‌ನ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಶಾ ಸೊಸೈಟಿಯ ಅಧ್ಯಕ್ಷ ಶ್ರೀ ಎಂ.ಎಸ್.ಗುರುರಾಜ್, ಶ್ರೀಶಾ ಸೊಸೈಟಿ ಆರಂಭವಾಗಿ ಕೇವಲ ಐದು ವರ್ಷಗಳಲ್ಲೇ ಐದು ಸುಸಜ್ಜಿತ ಶಾಖೆಗಳನ್ನು ತೆರೆದಿದೆ. 2023-24ನೇ ಸಾಲಿನಲ್ಲಿ ಅಭೂತಪೂರ್ವ ವ್ಯವಹಾರ ನಡೆಸಿ 123 ಲಕ್ಷ ರೂ. ನಿವ್ವಳ ಲಾಭ ಗಳಿಸಿ ಇಂದು ಸದಸ್ಯರಿಗೆ ನೀಡುತ್ತಿರುವುದು 25% ಡಿವಿಡೆಂಡ್ ತಮಗೆ ಅತೀವ ಸಂತಸ ತಂದಿದೆ. ಲಾಭ ಗಳಿಕೆಯೊಂದೇ ಧ್ಯೇಯವಾಗಿರದೆ ಗಳಿಸಿದ ಲಾಭಾಂಶದಲ್ಲಿ ದೊಡ್ಡ ಪಾಲನ್ನು ಮರಳಿ ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಶ್ರೀಶಾ ಸೊಸೈಟಿಯು ಐದು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ 10 ದೊಡ್ಡ ಮಟ್ಟದ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಅವುಗಳಲ್ಲಿ ಹೆಚ್ಚಿನವುಗಳನ್ನು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮತ್ತು ಅಲ್ಲಿನ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದೇವೆ. ಮುಂದಿನ ವರ್ಷದಲ್ಲಿ ಮತ್ತೆರೆಡು ಶಾಖೆಗಳನ್ನು ತೆರೆಯುವ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ ಎಂದು ಹೇಳಿದರು.
https://chat.whatsapp.com/Ge11n7QCiMj5QyPvCc0H19
ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ ವಾರ್ಷಿಕ ಲೆಕ್ಕಪತ್ರ, ಲಾಭ ಗಳಿಕೆ ಮತ್ತು ನಿವ್ವಳ ಲಾಭ ವಿಂಗಡಣೆಯನ್ನು ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದರು. 2023 -24ನೇ ಸಾಲಿನಲ್ಲಿ ಆಯ ವ್ಯಯಕ್ಕಿಂತ ಹೆಚ್ಚಿಗೆ ಖರ್ಚು ಆಗಿದ್ದಕ್ಕೆ ವಿವರಣೆ ನೀಡುವ ಮೂಲಕ ಹಂಪನಕಟ್ಟೆ ಶಾಖೆಯ ನಿಬಂಧಕಿ ಲಕ್ಷ್ಮಿ ಸಭೆಯ ಒಪ್ಪಿಗೆ ಪಡೆದರು. ಹಾಗೆಯೇ ವಿವಿಧ ವಿಷಯಗಳ ಬಗ್ಗೆ ಇತರ ಶಾಖೆಗಳ ನಿಬಂಧಕರು ಪ್ರಸ್ತುತ ಪಡಿಸಿ ಸರ್ವ ಸದಸ್ಯರ ಒಪ್ಪಿಗೆ ಪಡೆದರು.
ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೋ ಮಾತನಾಡಿ, ಶ್ರೀಶಾ ಸೊಸೈಟಿಯ ವ್ಯಾವಹಾರಿಕ ವೃತ್ತಿಪರತೆ, ಶಿಸ್ತು ಜೊತೆಗೆ ನಿಸ್ವಾರ್ಥ ಸೇವಾ ಕಾರ್ಯಗಳು ತನಗೆ ನಿಜಕ್ಕೂ ಆಶ್ಚರ್ಯ ತಂದಿದೆ. ಇಂತಹ ಸಂಸ್ಥೆಗಳು ಸಮಾಜದ ಆಸ್ತಿ” ಎಂದರು. ವಿದ್ಯಾ ರಾವ್ ಕಾರ್ಯಕ್ರಮ ನಿರೂಪಿಸಿದರು. ರಾಧಾ ಪ್ರಾರ್ಥನೆ ಹಾಡಿದರು. ಪ್ರಸನ್ನ ಕುಮಾರ್ ವಂದಿಸಿದರು.
ವಿವಿಧ ಸೇವಾಕಾರ್ಯಗಳು:
ಮಹಾಸಭೆಯಲ್ಲಿ ಸಹಕಾರಿಯ ವತಿಯಿಂದ ದ.ಕ.ಜಿಲ್ಲಾ ನಿವೃತ್ತ ಸೈನಿಕರ ಸಂಘಕ್ಕೆ 50000/- ರೂ.ಗಳ ಚೆಕ್ ದೇಣಿಗೆ ನೀಡಲಾಯಿತು. ಸುರತ್ಕಲ್ ನ ಗೋವಿಂದದಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರ ಶುಲ್ಕವಾಗಿ 65000/ ರೂ.ಗಳ ಚೆಕ್ ನೀಡಲಾಯಿತು. ಬಿಜೈ ಕಾಪಿಕಾಡ್‌ನನಲ್ಲಿನ ಸರಕಾರಿ ಕನ್ನಡ ಮಾಧ್ಯಮ ಶಾಲೆಯ 78 ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ನೀಡಲಾಯಿತು. ಶಾಲೆಯ ಪರವಾಗಿ ಶಾಲೆಯ ಮುಖ್ಯ ಶಿಕ್ಷಕಿ ಲೀನಾ ಮತ್ತು ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೋ ಅವರಿಗೆ ಹಸ್ತಾಂತರಿಸಲಾಯಿತು. ಸಾಮಾಜಿಕವಾಗಿ ಹಿಂದುಳಿದ ವರ್ಗದ ಮೂರು ಜನರಿಗೆ ವೀಲ್‌ಚೇರ್ ನೀಡಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com