ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸಂಸ್ಥಾಪಕ ಜೀವನ್ ಡಿಸೋಜ ಅಭಿಪ್ರಾಯ
ಸೊಸೈಟಿಯ ಎರಡನೇ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಉದ್ಯಾವರದ ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿ ಕಾನ್ವೆಂಟ್‌ಗೆ ದಿನಸಿ ಸಾಮಗ್ರಿ ವಿತರಣೆ
ಉದ್ಯಾವರ: ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಎರಡನೇ ವರ್ಷಕ್ಕೆ ಪದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಉದ್ಯಾವರದ ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿ ಕಾನ್ವೆಂಟ್‌ನ ಮಕ್ಕಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೀವನ್ ಡಿಸೋಜ ಮಾತನಾಡಿ, ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮೂಲ ಉದ್ದೇಶ ಮತ್ತು ಪ್ರೇರಣೆ ದಿ.ಫಾ.ವಲೇರಿಯನ್ ಮೆಂಡೋನ್ಸ ಅವರು. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಚಿಂತನೆ ಮತ್ತು ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿ ನಮ್ಮನ್ನು ಪ್ರೇರೇಪಿಸಿದ್ದರು. ಇವರ ಅಗಲುವಿಕೆ ನಮಗೆ ತುಂಬಲಾಗದ ನಷ್ಟ. ಈ ಕಾರ್ಯಕ್ರಮದ ಶ್ರೇಯಸ್ಸು ದಿ.ಫಾ.ವಲೇರಿಯನ್ ಮೆಂಡೋನ್ಸ ಇವರಿಗೆ ಅರ್ಪಿಸುತ್ತೇನೆ. ಅವರಿಗೆ ಗೌರವ ಸಮರ್ಪಣೆಯಿಂದ ನಾವು ಮೊದಲು ಮಾನಸ ಪುನರ್ವಸತಿ ಕೇಂದ್ರ ಪಾಂಬೂರು ಇಲ್ಲಿನ ವಿಶೇಷ ಚೇತನ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದು ಇಂದು ಇಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
https://chat.whatsapp.com/Ge11n7QCiMj5QyPvCc0H19
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಾವರದ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಧರ್ಮಗುರು ರೆ.ಫಾ.ಅನಿಲ್ ಡಿಸೋಜ ಮಾತನಾಡಿ ಸಂಸ್ಥೆಯಿಂದ ಇನ್ನಷ್ಟು ಜವಾಬ್ದಾರಿಯುತ ಸಾಮಾಜಿಕ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಸೈಂಟ್ ಮೇರಿಸ್ ಕ್ಯಾಥೆಡ್ರಲ್ ಬ್ರಹ್ಮಾವರ ಇಲ್ಲಿನ ಧರ್ಮಗುರು ಫಾ.ಲಾರೆನ್ಸ್ ಡೇವಿಡ್ ಕ್ರಾಸ್ತ ಮಾತನಾಡಿ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ದಿ.ವಲೇರಿಯನ್ ಮೆಂಡೋನ್ಸ ಅವರು ನುಡಿದಂತೆ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಥೆ ಬೆಳೆಯುತ್ತಾ ಇತರರನ್ನು ಬೆಳೆಸಿಕೊಂಡು ಸಾಗಲಿ ಎಂದು ಶುಭ ಹಾರೈಸಿದರು.
ಸೀಮಾ ಎಸ್.ಹಳದಿಪುರ ಮಾತನಾಡಿ ಮಹಿಳೆಯರು ಇಂದು ಉನ್ನತ ಸ್ಥಾನ ಅಲಂಕರಿಸಿಕೊಂಡು ಜವಾಬ್ದಾರಿಯುತವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅವಿರತ ಪರಿಶ್ರಮದೊಂದಿಗೆ ಉನ್ನತ ಮಟ್ಟದಲ್ಲಿ ಸ್ಥಾನ ಅಲಂಕರಿಸಿಕೊಂಡಿದ್ದಾರೆ. ಇಂದು ಚಪ್ಪಾಳೆ ತಟ್ಟುವ ಕೈಗಳು ಮುಂದೆ ಚಪ್ಪಾಳೆ ಗಿಟ್ಟಿಸಿಕೊಳ್ಳುವುದೇ ಸಾಧನೆ ಎಂದು ಕಿವಿಮಾತು ತಿಳಿಸಿದರು.
ಸಂಸ್ಥೆಯ ಸದಸ್ಯರಾದ ಹಾಗೂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದ ನಿವೃತ್ತ ಪ್ರಾಂಶುಪಾಲರಾದ ನೇರಿ ಕರ್ನೇಲಿಯೊ ಮಾತನಾಡಿ ಸಂಸ್ಥೆಯು ಎರಡನೇ ವರ್ಷಕ್ಕೆ ಪದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಮತ್ತು ದಿ.ಫಾ ವಲೇರಿಯನ್ ಮೆಂಡೋನ್ಸ ಸ್ಮರಣಾರ್ಥ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದಕ್ಕೆ ಸಂತೋಷವಾಗಿದೆ ಈ ಸಂಸ್ಥೆಯು ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸಿ ಇನ್ನು ಅನೇಕ ರೀತಿಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸೇವೆಯನ್ನು ನೀಡಲಿ ಎಂದು ಶುಭ ಹಾರೈಸಿದರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮತ್ತು ಖ್ಯಾತ ನಿರೂಪಕ ಸ್ಟೀವನ್ ಕುಲಾಸೊ ಮಾತನಾಡಿ ಸಂಸ್ಥೆಯ ಏಳಿಗೆಯ ಬಗ್ಗೆ ಶ್ಲಾಘಿಸಿ ಶುಭ ಹಾರೈಸಿದರು.
ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿಯ ಸಿಸ್ಟರ್ ಲೀನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ಇದರ ಲೆಕ್ಕವ್ಯವಸ್ಥಾಪಕ ಕುಮಾರ್ ಹೆಚ್.ಎನ್, ಕಿರಿಯ ಸಹಾಯಕರಾದ ದೀಕ್ಷಿತ್ ನಾಯ್ಕ್ ಮತ್ತು ಸಂಸ್ಥೆಯ ಪರಿಚಾರಕವಿವಿಯನ್ ಮರ್ವಿನ್ ನೊರೊನ್ಹಾ ಹಾಗೂ ರೋಟರಿ ಕ್ಲಬ್ ಉದ್ಯಾವರದ ಸದಸ್ಯರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com