ಇಂಗ್ಲಿಷ್, ಫ್ರೆಂಚ್, ಸ್ಪಾನಿಷ್, ಅರೆಬಿಕ್, ಚೈನೀಸ್ ಮತ್ತು ರಷ್ಯನ್ ಭಾಷೆಗಳಲ್ಲಿ ಬಿಡುಗಡೆ
ನವದೆಹಲಿ: ವಿಶ್ವಸಂಸ್ಥೆಯು 2025ರ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಿಸಿದ್ದು ಅದರ ಲೋಗೋವನ್ನು ಸೋಮವಾರ ಬಿಡುಗಡೆ ಮಾಡಿದೆ ಎಂದು ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ ತಿಳಿಸಿದೆ.
ಲೋಗೋ ಇಂಗ್ಲಿಷ್, ಫ್ರೆಂಚ್, ಸ್ಪಾನಿಷ್, ಅರೆಬಿಕ್, ಚೈನೀಸ್ ಮತ್ತು ರಷ್ಯನ್ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇದನ್ನು ಬಳಸುವ ಸಂಸ್ಥೆಗಳು ನಿಗದಿಪಡಿಸಿರುವ ಸೂಚನೆಗಳ್ನು ಪಾಲಿಸಬೇಕು ಎಂದು ಒಕ್ಕೂಟವು ತಿಳಿಸಿದೆ.
https://chat.whatsapp.com/Ge11n7QCiMj5QyPvCc0H19
ಬಿಡುಗಡೆಯಾಗಿರುವ ಲೋಗೋವು ಸಹಕಾರ ಕ್ಷೇತ್ರದಲ್ಲಿ ಜನಕೇಂದ್ರಿತ ಸಾಮೂಹಿಕ ಸಹಭಾಗಿತ್ವ ಮತ್ತು ಅದರಲ್ಲಿರುವ ಬಣ್ಣಗಳು 2030ರ ವೇಳೆಗೆ ಸಹಕಾರಿಗಳು ಹೇಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಸಹಕಾರಿ ಆಯಾಮಕ್ಕೆ ಒಡುಗೆ ನೀಡಬಹುದು ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದು ಸಹಕಾರ ಒಕ್ಕೂಟದ ಮಹಾನಿರ್ದೇಶಕ ಜೆರೋನ್ ಡಗ್ಲಾಸ್ ತಿಳಿಸಿದ್ದಾರೆ.
ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಸಂಸ್ಥೆಗಳು ಮತ್ತು ಸಹಕಾರಿಗಳು ಏನು ಮಾಡಬಹುದು ಎಂಬುದನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷ 2025ರ ವೇಳೆ ಚರ್ಚೆಗೆ ತೆಗೆದುಕೊಳ್ಳಬಹುದು ಎಂದು ಡಗ್ಲಾಸ್ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com