ಮಂಗಳೂರು: ಸ್ವಸ್ತಿಕ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಭಾನುವಾರ ರೋಟರಿ ಕ್ಲಬ್ ಮಂಗಳೂರು ದಕ್ಷಿಣ, ಶ್ರೀ ಶಾರದಾಂಬ ಸೇವಾ ಪ್ರತಿಷ್ಠಾನ ಅಳಪೆ ಕರ್ಮಾರ್, ಶ್ರೀ ನಾಗನಾಗಿಣಿ ನಾಗಬ್ರಹ್ಮ ಕ್ಷೇತ್ರ ವಳಚ್ಚಿಲ್ ಪದವು ಅರ್ಕುಳ ಇವುಗಳ ಸಹಯೋಗದೊಂದಿಗೆ ವಳಚ್ಚಿಲ್ ಪದವಿನಲ್ಲಿರುವ ಶ್ರೀ ನಾಗನಾಗಿಣಿ ಸಭಾಭವನದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಯಿತು.
ದಂತ, ಕಣ್ಣು, ಇಎನ್‌ಟಿ ಹಾಗೂ ಮಹಿಳಾ ಮತ್ತು ಮೆಡಿಸಿನ್ ವಿಭಾಗದ ನುರಿತ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. 150ಕ್ಕೂ ಅಧಿಕ ಜನ ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಣ್ಣಿನ ಸಮಸ್ಯೆ ಇದ್ದವರಿಗೆ ಉಚಿತವಾಗಿ ಕನ್ನಡಕ ಹಾಗೂ ಎಲ್ಲಾ ಕಾಯಿಲೆಗಳಿಗೆ ಉಚಿತ ಔಷಧ ನೀಡಲಾಯಿತು. ಹೆಚ್ಚಿನ ಸಮಸ್ಯೆ ಇದ್ದವರಿಗೆ ಜಿ.ಆರ್ ಮೆಡಿಕಲ್ ಆಸ್ಪತ್ರೆ ನೀರುಮಾರ್ಗ ಇಲ್ಲಿ ಹೆಚ್ಚಿನ ಚಿಕಿತ್ಸೆ ವ್ಯವಸ್ಥೆ ಮಾಡಲಾಗುತ್ತದೆ.
https://chat.whatsapp.com/Ge11n7QCiMj5QyPvCc0H19
ಶಿಬಿರವನ್ನು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಉದ್ಘಾಟಿಸಿದರು. ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹಾಗೂ ಸಹಾಯಕ ಜೋನ್ ಗವರ್ನರ್ ಅಶೋಕ್ ಕುಮಾರ್ ಉಜ್ಜೋಡಿ ಹಾಗೂ ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಕಾರ್ಯದರ್ಶಿ ನಿತಿನ್ ಎಸ್ ರೈ ಉಪಸ್ಥಿತರಿದ್ದರು. ಜಿ.ಆರ್ ಆಸ್ಪತ್ರೆಯ ಡಾ.ಸತ್ಯಶಂಕರ್ ತಮ್ಮ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ನಾಗನಾಗಿಣಿ ನಾಗಬ್ರಹ್ಮ ಕ್ಷೇತ್ರ ಇದರ ಅಧ್ಯಕ್ಷ ಸತೀಶ್ ಕೆ.ಪಂಡಿತ್, ಅಲ್ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಅಶ್ರಫ್, ನವಜ್ಯೋತಿ ನಾಗರಿಕ ಕ್ರಿಯಾ ಸಮಿತಿಯ ಅನಿಲ್ ಪಿಂಟೋ, ಶ್ರೀ ಶಾರದಾಂಬ ಸೇವಾ ಪ್ರತಿಷ್ಠಾನದ ಜಗದೀಶ್ ಕೊಟ್ಟಾರಿ ಉಪಸ್ಥಿತರಿದ್ದರು. ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಲ್ಸರಾಜ್ ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ನಿತಿನ್ ಅತ್ತಾವರ್ ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com