Author: admin
ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಮೂಡುಬಿದಿರೆ ಸೇವಾ ಸಹಕಾರ ಸಂಘ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘ, ರಾಮಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಆಯ್ಕೆ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ, ಒಡಿಯೂರು ಶ್ರೀ ವಿವಿಧೋದ್ದೇಶ, ಎಸ್.ಕೆ.ಗೋಲ್ಡ್‌ಸ್ಮಿತ್ಸ್, ಕಾವೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಪುರಸ್ಕಾರ ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಿಂದ ಅಖಿಲ ಭಾರತ ಸಹಕಾರ ಸಪ್ತಾಹದ ಸಂಭ್ರಮ ಆಚರಣೆಯ ಸಂದರ್ಭದಲ್ಲಿ “ಸಹಕಾರ ಮಾಣಿಕ್ಯ” ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಮೂರು ಸಹಕಾರ ಸಂಘಗಳನ್ನು ಆಯ್ಕೆ ಮಾಡಲಾಗಿದೆ. https://chat.whatsapp.com/Ge11n7QCiMj5QyPvCc0H19 ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ನಡೆಯುವ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಉಭಯ ಜಿಲ್ಲೆಗಳಿಂದ ತಲಾ ಒಂದರಂತೆ ಕೃಷಿ ಪತ್ತಿನ ಸಹಕಾರ ಸಂಘಗಳನ್ನು “ಸಹಕಾರ ಮಾಣಿಕ್ಯ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಮೂಡುಬಿದಿರೆ ಸೇವಾ ಸಹಕಾರ ಸಂಘ, ಉಡುಪಿ ಜಿಲ್ಲೆಯಿಂದ ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಕ್ರೆಡಿಟ್ ಕೋಆಪರೇಟಿವ್ ಸಹಕಾರ ಸಂಘದಿಂದ ಮಂಗಳೂರಿನ ರಾಮಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಆಯ್ಕೆಯಾಗಿದೆ. “ಸಹಕಾರ…
ಹಿರಿಯ ಸಹಕಾರಿ ವಿನಯಕುಮಾರ್ ಸೂರಿಂಜೆ ಮತ್ತು ಡಾ. ಎಸ್ ಆರ್ ಹರೀಶ್ ಆಚಾರ್ಯ ಇವರಿಗೆ ರಾಜ್ಯ ಮಟ್ಟದ ಸಹಕಾರ ರತ್ನ ಪುರಸ್ಕಾರ
ಮಂಗಳೂರು; ಸಹಕಾರ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ಸಹಕಾರ ರತ್ನ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾದ, ಹಿರಿಯ ಸಹಕಾರಿ ವಿನಯಕುಮಾರ್ ಸೂರಿಂಜೆ ಮತ್ತು ವಿಶ್ವಕರ್ಮ ಸಹಕಾರ ಬ್ಯಾಂಕ್ ಹಾಗೂ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಇವರು ಆಯ್ಕೆಯಾಗಿದ್ದಾರೆ. ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಹಕಾರ ರತ್ನ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಿದ್ದು, ರಾಜ್ಯಾದ್ಯಂತ ಒಟ್ಟು 72 ಮಂದಿಗೆ ಪುರಸ್ಕಾರ ಘೋಷಿಸಲಾಗಿದೆ. https://chat.whatsapp.com/Ge11n7QCiMj5QyPvCc0H19 ಕರಾವಳಿಯ ಉಭಯ ಜಿಲ್ಲೆಗಳಿಂದ ಶ್ರೀ ವಿನಯಕುಮಾರ್ ಸೂರಿಂಜೆ ಮತ್ತು ಡಾ. ಎಸ್ ಆರ್ ಹರೀಶ್ ಆಚಾರ್ಯ ಮಾತ್ರವಲ್ಲದೇ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಕಂಬದಕೋಣೆ ರೈತರ ಸೇವಾ ಸಹಕಾರ ಸಂಘ ನಿ. ಉಪ್ಪುಂದ ಇದರ ಅಧ್ಯಕ್ಷರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮೇಕೋಡು, ಇತರೇ ಸಹಕಾರ ಸಂಘಗಳ ನೌಕರರ ಒಕ್ಕೂಟ ನಿ. ಉಡುಪಿ ಇದರ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, ವಿಜಯಾ ಬ್ಯಾಂಕ್ ನೌಕರರ ಹೌಸಿಂಗ್ ಕೋಆಪರೇಟಿವ್ ಸೊಸೈಟಿ…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿ ಆತ್ಮಶಕ್ತಿ ಸೌಧದಲ್ಲಿ ಗುರುವಾರ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಧ್ವಜಾರೋಹಣ ನೆರವೇರಿಸಿದರು. https://chat.whatsapp.com/Ge11n7QCiMj5QyPvCc0H19 ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ, ನಿರ್ದೇಶಕರಾದ ಗೋಪಾಲ್ ಎಮ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಸಲಹೆಗಾರ ಅಶೋಕ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸದಸ್ಯರಿಗೆ ಸಹಕಾರಿ ಸಪ್ತಾಹದ ಅಂಗವಾಗಿ ೧೦೦೦ ದಿನಗಳ ಠೇವಣಿಗೆ ಶೇ.೧೦.೫೦ರವರಗೆ ಆಕರ್ಷಕ ಬಡ್ಡಿ ಯೋಜನೆ ಜಾರಿಗೊಳಿಸಿದೆ. ಜೊತೆಗೆ ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಟ ಮೌಲ್ಯ ರೂ. ೬೨೬೨ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುವುದೆಂದು ತಿಳಿಸಿದರು. ಆತ್ಮವಿಶ್ವಾಸ ಮಕ್ಕಳ ವಿಶೇಷ ಠೇವಣಿ ಯೋಜನೆ ಹಾಗೂ ೫೫೫ ದಿನಗಳ ಠೇವಣಿ ಮೇಲೆ ೯.೭೦% ರ ವರೆಗೆ ಆಕರ್ಷಕ ಬಡ್ಡಿ ಕೊಡುಗೆ ನೀಡುವುದಾಗಿ ತಿಳಿಸಿದರು. ನಿಮ್ಮ ಸಂಸ್ಥೆಗಳ…
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸಲಹೆ ಪುತ್ತೂರು: ಕಷ್ಟದಲ್ಲಿರುವ ಜನರಿಗೆ ಸಾಲ ನೀಡಿ, ಸಹಕರಿಸುವ ಕೆಲಸ ಬ್ಯಾಂಕುಗಳಿಂದ ನಡೆಯಬೇಕು. ಸಮಾಜಕ್ಕೆ ಮಾಡಿದ ಉಪಕಾರವನ್ನು ಪ್ರತಿಯೊಬ್ಬರೂ ನೆನಪಿಡುವ ಕೆಲಸ ಮಾಡಬೇಕು. ರೈತರ ಸಂಕಷ್ಟದಲ್ಲಿ ಸ್ಪಂದಿಸುವ ಕಾರ್ಯವನ್ನು ಟೌನ್ ಬ್ಯಾಂಕ್ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು. ವಿಟ್ಲದಲ್ಲಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ವಿಟ್ಲ ಶಾಖೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. https://chat.whatsapp.com/Ge11n7QCiMj5QyPvCc0H19 ಕ್ಯಾಂಪ್ಕೋ ಮಾಜಿ ಅಧ್ಯಕ್ಷ, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾತನಾಡಿ, ಜಿಡಿಪಿಯಲ್ಲಿ ಶೇ.25ರಷ್ಟು ಸಹಕಾರಿಯ ಕೊಡುಗೆಯಿದೆ. ದೇಶದಲ್ಲಿ 52 ರೀತಿಯ ಸಹಕಾರಿ ಸಂಸ್ಥೆಗಳಿದ್ದು, 8.5 ಲಕ್ಷದ ಸಂಸ್ಥೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿಗೆ ರಾಷ್ಟ್ರೀಯ ನಿಯಮಾವಳಿಗಳನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಮೊಳಹಳ್ಳಿ ಶಿವರಾಯರ ಭಾವಚಿತ್ರ ಅನಾವರಣ ಮಾಡಲಾಯಿತು. ಗೋವರ್ಧನ ವಿಟ್ಲ ಅವರಿಗೆ ಪ್ರಥಮ ಠೇವಣಿ ಪತ್ರವನ್ನು ಹಸ್ತಾಂತರ ಮಾಡಲಾಯಿತು. 2025ನೇ ಸಾಲಿನ ಕ್ಯಾಲೆಂಡರಿನ…
ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರಿಗಳ ಪಾತ್ರ – ಈ ಬಾರಿಯ ಧ್ಯೇಯ ಮಂಗಳೂರು: ದೇಶಾದ್ಯಂತ ಸಹಕಾರಿಗಳು 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯಲ್ಲಿ ತೊಡಗಿದ್ದು ನವಂಬರ್ 14ರಿಂದ 20ರ ತನಕ ಕಾಶ್ಮೀರದಿಂದ ಕನ್ಯಾಕುಮಾರಿ ತನಕದ ಸಹಕಾರಿಗಳು ಈ ಆಚರಣೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಸಹಕಾರಿ ಚಳವಳಿಯ ಬಲವರ್ಧೆನೆಗೆ ಸಹಕಾರ ಸಪ್ತಾಹದ ಆಚರಣೆ ಬಹು ಪ್ರಾಮುಖ್ಯವಾದುದು. https://chat.whatsapp.com/Ge11n7QCiMj5QyPvCc0H19 ದೇಶದ ಸಹಕಾರಿಗಳ ಪ್ರಮುಖ ಸಂಸ್ಥೆ ಎನ್‌ಸಿಯುಐ(ಭಾರತದ ರಾಷ್ಟ್ರೀಯ ಸಹಕಾರಿ ಒಕ್ಕೂಟ) ಇಂದಿನಿಂದ (ನವಂಬರ್ 14ರಿಂದ) 20ರ ತನಕ ಈ ಆಚರಣೆಯಲ್ಲಿ ತೊಡಗಿದ್ದು ವಿವಿಧ ದಿನಗಳಲ್ಲಿ ವಿವಿಧ ಧ್ಯೇಯಗಳನ್ನಿಟ್ಟುಕೊಂಡು ಆಚರಿಸಲಿದೆ. ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರಿಗಳ ಪಾತ್ರ – ಇದು ಈ ಬಾರಿಯ ಪ್ರಮುಖ ಧ್ಯೇಯವಾಗಿದ್ದು ಏಳು ದಿನ ಏಳು ಧ್ಯೇಯಗಳ ಮೂಲಕ ವಿವಿಧೆಡೆ ಕಾರ್ಯಕ್ರಮ ನಡೆಯಲಿದೆ. ಎನ್‌ಸಿಯುಐ ಅಧ್ಯಕ್ಷ ದಿಲೀಪ್ ಸಂಘಾನಿ ನವದೆಹಲಿಯ ಎನ್‌ಸಿಯುಐ ಪ್ರಧಾನ ಕಚೇರಿಯಲ್ಲಿ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಿದ್ದು ವಿವಿಧ ಕ್ಷೇತ್ರಗಳ ಪ್ರಮುಖರು ಇದರಲ್ಲಿ ಭಾಗವಹಿಸಲಿದ್ದಾರೆ. ಸಹಕಾರ ಸಪ್ತಾಹದ ಏಳು…
ಮಂಗಳೂರು: ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಕೋಡಿಕಲ್ ಶಾಖೆ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರ ಕೋಡಿಕಲ್ ಮತ್ತು ಗಿರಿಜಾ ಸರ್ಜಿಕಲ್ಸ್ ಜಂಟಿ ಆಶ್ರಯದಲ್ಲಿ ನವಂಬರ್ 16ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. https://chat.whatsapp.com/Ge11n7QCiMj5QyPvCc0H19 ಕೋಡಿಕಲ್ ಎಸ್.ಎನ್.ಡಿ.ಪಿ ಮಂದಿರದ ಆವರಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ತನಕ ಶಿಬಿರ ನಡೆಯಲಿದೆ. ಶಿಬಿರದಲ್ಲಿ ರಕ್ತದ ಸಕ್ಕರೆ ಅಂಶ, ನಾಡಿಬಡಿತ, ರಕ್ತದೊತ್ತಡ, ರಕ್ತದಲ್ಲಿನ ಆಮ್ಲಜನಕ ತಪಾಸಣೆ ಮಾಡಲಾಗುವುದು. ಕೋಡಿಕಲ್ ಪರಿಸರದ ನಾಗರಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಮೂಲ್ಕಿ: ಮೂಲ್ಕಿ ಸೀಮೆಯ ಪ್ರತಿಷ್ಠಿತ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿಸೆಂಬರ್ 22ರಂದು ನಡೆಯುವ ಅರಸು ಕಂಬಳದ ದಿನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಅರಮನೆಯ ಧರ್ಮಚಾವಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಗೆ 14 ಜನರನ್ನು ಆಯ್ಕೆ ಮಾಡಲಾಗಿದೆ. ಮೂಲ್ಕಿ ಅರಮನೆ ವೆಲ್‌ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಸಹಭಾಗಿತ್ವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು ಪ್ರಶಸ್ತಿಗೆ 78 ಅರ್ಜಿಗಳು ಬಂದಿದ್ದವು. https://chat.whatsapp.com/Ge11n7QCiMj5QyPvCc0H19 ಪ್ರಶಸ್ತಿ ವಿಜೇತರ ವಿವರ: ಸಾಧನಾ ಪುರಸ್ಕಾರ: ಶ್ರೀ ನಿಪ್ಪಾಣಿ ಪೀಠದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಮರಣೋತ್ತರ ಪ್ರಶಸ್ತಿ: 1. ಎಚ್ ನಾರಾಯಣ ಸನಿಲ್(ಸಹಕಾರಿ ಕ್ಷೇತ್ರ), 2. ಬಾಬು ಶೆಟ್ಟಿ ಮುಂಬೈ (ಕಂಬಳ ಕ್ಷೇತ್ರ) ಸಂಘ ಸಂಸ್ಥೆಗಳ ವಿಭಾಗ: 1. ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, 2. ಶಿವ ಸಂಜೀವಿನಿ ಸುರಗಿರಿ ಸಾಹಿತ್ಯ ಕ್ಷೇತ್ರ: 1. ಎಚ್.ಶಕುಂತಲಾ ಭಟ್ ಹಳೆಯಂಗಡಿ, 2. ಪರಮಾನಂದ ಸಾಲಿಯಾನ್ ಸಸಿಹಿತ್ಲು ಯಕ್ಷಗಾನ ಕ್ಷೇತ್ರ: 1. ಶ್ರೀ…
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ 5,000 ಪುಸ್ತಕಗಳ ವಿತರಣೆ ಮಂಗಳೂರು: ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ರೂಢಿಸುವುದು ಶಿಕ್ಷಕರ ಕರ್ತವ್ಯ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು. ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಶ್ರೀನಿವಾಸ ಹೊಟೇಲ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ 50 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಗ್ರಂಥಾಲಯಗಳಿಗೆ 5,000 ಪುಸ್ತಕಗಳ ವಿತರಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. https://chat.whatsapp.com/Ge11n7QCiMj5QyPvCc0H19 ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಮೂಡಿಸುವುದು ಇಂದಿನ ಅವಶ್ಯಕತೆ. ಅವರಲ್ಲಿ ಓದುವ ಹವ್ಯಾಸ ಮೂಡಿಸಲು ಪ್ರಚೋದಿಸಬೇಕು. ಪಾಠದ ಜತೆಗೆ ಇತರ ಉತ್ತಮ ಪುಸ್ತಕಗಳಲ್ಲಿರುವ ವಿಚಾರಗಳ ತುಣುಕುಗಳನ್ನು ಹೇಳಿ ಆಸಕ್ತಿ ಮೂಡಿಸಬೇಕು. ಈ ಮೂಲಕವೂ ಶಿಕ್ಷಕರು ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ನೀಡಲು ಸಾಧ್ಯವಾಗುತ್ತದೆ. ಶಾಲೆಗಳಿಗೆ ಪುಸ್ತಕ ನೀಡುವಂತಹ ಸಮಾಜಸೇವಾ ಕಾರ್ಯ ಮಾದರಿ ಎಂದು ಸ್ವಾಮಿ ಜಿತಕಾಮಾನಂದಜಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಶಾ ಸೌಹಾರ್ದ…
ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘದ 15ನೇ ವಾರ್ಷಿಕೋತ್ಸವ, ದೀಪಾವಳಿ ಪ್ರಯುಕ್ತ ಅಭಿನಂದನೆ ಕಾರ್ಯಕ್ರಮ ಮಂಗಳೂರು ಸ್ಟೋರ್ ಸಭಾಂಗಣದಲ್ಲಿ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು ಅಧ್ಯಕ್ಷತೆಯಲ್ಲಿ ಜರುಗಿತು. https://chat.whatsapp.com/Ge11n7QCiMj5QyPvCc0H19 ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಎನ್‌ಆರ್‌ಐ ರವೀಂದ್ರ ಬೇಕಲ್, ಸುಂದರ ಸಾಲ್ಯಾನ್, ಲತಾ ಎನ್. ಆಳ್ವ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಸದಸ್ಯರಾದ ವಸಂತ ಶೆಟ್ಟಿ ಪ್ರಾರ್ಥನೆ ಮಾಡಿದರು. ಸಂಘದ ಸದಸ್ಯ ಜಗದೀಶ್ ಬಾಬುಗುಡ್ಡ, ಕಿಡ್ನಿ ಡಯಾಲಿಸ್‌ಗಾಗಿ ವೈದ್ಯಕೀಯ ನೆರವು ವಿತರಿಸಲಾಯಿತು. 80+ ಹಿರಿಯ ವಿಭಾಗದ ರಾಷ್ಟ್ರೀಯ ಕ್ರೀಡಾಪಟು ಆನಂದ ಸೋನ್ಸ್, ಸಾಮಾಜಿಕ –ಧಾರ್ಮಿಕ ಸೇವೆ ಮಾಡುತ್ತಿರುವ ಪ್ರಭಾಕರ್ ಶ್ರೀಯಾನ್, ಚರ್ಚ್ –ದೇವಸ್ಥಾನಗಳಿಗೆ ಉಚಿತ ತೆನೆ ವಿತರಣೆ ಮಾಡುತ್ತಿರುವ ಹೂಬರ್ಟ್ ಡಿಸೋಜ, ಗ್ಯಾರೆಂಟಿ ಯೋಜನೆಯ ಸದಸ್ಯರಾಗಿ ಆಯ್ಕೆಗೊಂಡ ವಿದ್ಯಾ ಬಾಬುಗುಡ್ಡ, ಉಪಮೇಯರ್ ಭಾನುಮತಿ ಸುಧಾಮಣಿ ಇವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಆನಂದ ಸೋನ್ಸ್ , ಪ್ರೇಮಾನಂದ ಶೆಟ್ಟಿ, ರವೀಂದ್ರ ಬೇಕಲ್, ಪ್ರಭಾಕರ್ ಶ್ರೀಯಾನ್, ಹೂಬರ್ಟ್ ಡಿಸೋಜ, ಭಾನುಮತಿ ಮಾತನಾಡಿದರು. ಡಾ|ಕೃಷ್ಣಪ್ರಸಾದ್ ಮಾತನಾಡಿ, ಮಂಗಳೂರು ಸೌಹಾರ್ದ…
ಗ್ರಾಹಕರ ಅನುಕೂಲಕ್ಕಾಗಿ ಯುಪಿಐ, ಗೂಗಲ್ ಪೇ ಅಳವಡಿಸುವ ಪ್ರಕ್ರಿಯೆ ಚಾಲನೆಯಲ್ಲಿ: ಅಧ್ಯಕ್ಷ ಅನಿಲ್ ಲೋಬೊ ಹೇಳಿಕೆ ಉಡುಪಿ: ಎಂ.ಸಿ.ಸಿ. ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಉಡುಪಿ ಶಾಖೆಯನ್ನು ಅಜ್ಜರಕಾಡು ಪಾರ್ಕ್ ರಸ್ತೆಯ ಶ್ರೀ ಶಿವಧಾಮ ಕಮರ್ಷಿಯಲ್‌ನ ಸ್ವಂತ ಕಟ್ಟಡಕ್ಕೆ ಭಾನುವಾರ ಸ್ಥಳಾಂತರಿಸಲಾಯಿತು. ಉಡುಪಿ ಶಾಖೆಯ ಸ್ಥಳಾಂತರಿತ ಶಾಖೆಯನ್ನು ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು. ಉಡುಪಿಯ ಮದರ್ ಅಫ್ ಸೊರೊವ್ಸ್ ಚರ್ಚ್‌ನ ಧರ್ಮಗುರು ಅತಿವಂದನೀಯ ಫಾದರ್ ಚಾಲರ್ಸ್ ಮಿನೇಜಸ್ ಆಶೀರ್ವಚನ ಮಾಡಿದರು. ಉಡುಪಿಯ ಸೈಂಟ್ ಸಿಸಿಲಿ ಕಾನ್ವೆಂಟ್‌ನ ಸುಪೀರಿಯರ್ ಸಿ| ಜ್ಯೋತಿ ಡಿಸೋಜ ಸೇಫ್ ಡೆಪಾಸಿಟ್ ಲಾಕರ್ ಉದ್ಘಾಟಿಸಿದರು. ಉಡುಪಿ ನಗರ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಖ್ಯಾತ ನ್ಯಾಯವಾದಿ ಮೊಹಮ್ಮದ್ ಇಕ್ಬಾಲ್ ಮತ್ತು ಉದ್ಯಮಿ ರೋಶನ್ ಶೆಟ್ಟಿ ಗೌರವ ಅತಿಥಿಗಳಾಗಿದ್ದರು. https://chat.whatsapp.com/Ge11n7QCiMj5QyPvCc0H19 ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ, ಗ್ರಾಹಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ಸೌಲಭ್ಯದೊಂದಿಗೆ ಶಾಖೆಯನ್ನು ನೆಲಮಹಡಿಯಲ್ಲಿ ಹೆಚ್ಚು ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 22…
