ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಪ್ರತಿ ತಿಂಗಳು ನಡೆಯುವ ಆರೋಗ್ಯ ಶಿಬಿರವನ್ನು ಕಳೆದ ಭಾನುವಾರ ಫ್ರೆಂಡ್ಸ್ ಕೋಡಿಕೆರೆ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಜಂಟಿ ಸಹಯೋಗದೊಂದಿಗೆ ಕೋಡಿಕೆರೆಯ ಪೆರ್ಮುದೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
https://chat.whatsapp.com/EbVKVnWB6rlHT1mWtsgbch
ಶ್ರೀಶಾ ಸೊಸೈಟಿಯಿಂದ ಆಯೋಜನಗೊಂಡ 29ನೇ ಬೃಹತ್ ಉಚಿತ ಆರೋಗ್ಯ-ದಂತ-ಕಣ್ಣಿನ-ತಪಾಸಣಾ ಚಿಕಿತ್ಸಾ ಶಿಬಿರ ಇದಾಗಿತ್ತು. ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆ ಹಾಗೂ ದೇರಳಕಟ್ಟೆ ಯೇನಪೊಯ ದಂತ ಕಾಲೇಜಿನ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಒಟ್ಟು 300ಕ್ಕೂ ಹೆಚ್ಚಿನ ರೋಗಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.ಕಣ್ಣಿನ ಸಮಸ್ಯೆ ಇದ್ದ 65 ಜನರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕ ಹಾಗೂ ಎಲ್ಲಾ ಖಾಯಿಲೆಗಳಿಗೆ ಔಷಧಗಳನ್ನು ಉಚಿತವಾಗಿ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯುಳ್ಳವರನ್ನು ಬುಧವಾರ ಕೆಎಂಸಿ ಅತ್ತಾವರ ಆಸ್ಪತ್ರೆಗೆ 32 ಜನರನ್ನು ಹಾಗೂ ಹಲ್ಲಿನ ಸಮಸ್ಯೆಯುಳ್ಳವರಿಗೆ ದೇರಳಕಟ್ಟೆ ಯೆನೆಪೋಯ ದಂತ ಆಸ್ಪತ್ರೆಗೆ 40 ಜನರನ್ನು ಬರಲು ಸೂಚಿಸಲಾಗಿದೆ. 15 ಜನರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದ್ದು ಅವರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.
ಶ್ರೀಶಾ ಸೌಹಾರ್ದ ಸೊಸೈಟಿಯ ಉಪಾಧ್ಯಕ್ಷ ಉದಯ ಶಾಸ್ತ್ರಿ,ನಿರ್ದೇಶಕ ಪ್ರಸನ್ನ ಕುಮಾರ್, ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ಪೆರ್ಮುದೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ರಮೇಶ್ ರಾವ್ ಕೋಡಿಕೆರೆ, ಫ್ರೆಂಡ್ಸ್ ಕೋಡಿಕೆರೆ ಅಧ್ಯಕ್ಷ ದೇವದಾಸ್ ಕೋಡಿಕೆರೆ, ಶಾರದಾ ಸಮಿತಿ ಎಂಎಸ್‌ಇಝಡ್ ಕಾಲೋನಿ ಕೋಡಿಕೆರೆ ಇದರ ಅಧ್ಯಕ್ಷೆ ಮಾಲತಿ, ಕೆಎಂಸಿ ಆಸ್ಪತ್ರೆಯ ಡಾ.ಪ್ರಕೃತಿ, ಯೇನೆಪೊಯ ಆಸ್ಪತ್ರೆಯ ಡಾ.ಅಪೂರ್ವ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಕೆಎಂಸಿ ಆಸ್ಪತ್ರೆಯ ಪಿ.ಆರ್.ಒ ಹರ್ಬರ್ಟ್, ಯೇನೆಪೊಯ ಆಸ್ಪತ್ರೆಯ ಪಿ.ಆರ್.ಒ. ಭರತ್ ಕುಮಾರ್ ಸಹಕರಿಸಿದರು. ಶ್ರೀಶಾ ಸೊಸೈಟಿಯ ನಿರ್ದೇಶಕ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರದ ಸಂಚಾಲಕ ಸುರೇಶ್ ಬೈಂದೂರ್ ಶಿಬಿರವನ್ನು ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com