Author: admin
10 ವರ್ಷಗಳ ಅಧಿಕಾರಾವಧಿ ಮೀರಿಯೂ ಹುದ್ದೆಯಲ್ಲಿ ಮುಂದುವರಿಕೆ: ಅರ್ಹತೆಯ ಆಧಾರದಲ್ಲಿ ಆರು ವಾರಗಳಲ್ಲಿ ನಿರ್ಧಾರ ಕೈಗೊಳ್ಳಲು ಆರ್‌ಬಿಐಗೆ ಹೈಕೋರ್ಟ್ ಸೂಚನೆ
ಮುಂಬೈ/ಔರಂಗಾಬಾದ್: ಲಾತೂರ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಎಂಟು ನಿರ್ದೇಶಕರು ಕಾನೂನಿನಲ್ಲಿ ನಿಗದಿಪಡಿಸಿರುವ 10 ವರ್ಷಗಳ ಅಧಿಕಾರಾವಧಿಯನ್ನು ಮೀರಿಯೂ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂಬ ದೂರಿನ ಕುರಿತು ಆರು ವಾರಗಳೊಳಗೆ ಅರ್ಹತೆಯ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ನಿರ್ದೇಶನ ನೀಡಿದೆ. https://chat.whatsapp.com/FCEnlTkAKCC0MGPhXtX4i4 ಬ್ಯಾಂಕ್‌ನ ಮಾಜಿ ಉದ್ಯೋಗಿ ಸತೀಶ್ ಶೇಷರಾವ್ ಜಾಧವ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನಿತಿನ್ ಬಿ.ಸೂರ್ಯವಂಶಿ ಹಾಗೂ ಅಬಾಸಾಹೇಬ್ ಡಿ.ಶಿಂಧೆ ಅವರಿದ್ದ ವಿಭಾಗೀಯ ಪೀಠವು, 2026ರ ಮೇ 25ರಂದು ಆರ್‌ಬಿಐಗೆ ಸಲ್ಲಿಸಲಾಗಿದ್ದ ಪ್ರಾತಿನಿಧ್ಯವನ್ನು ನ್ಯಾಯಾಲಯದ ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ಆರು ವಾರಗಳೊಳಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದೆ. ಅರ್ಜಿದಾರರ ಪ್ರಕಾರ, ಲಾತೂರ್ ಡಿಸಿಸಿ ಬ್ಯಾಂಕ್‌ನ 19 ನಿರ್ದೇಶಕರ ಪೈಕಿ ಎಂಟು ಮಂದಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ತಿದ್ದುಪಡಿ ನಿಬಂಧನೆಗಳಿಗೆ ವಿರುದ್ಧವಾಗಿ 10 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ನಿರಂತರವಾಗಿ ನಿರ್ದೇಶಕರಾಗಿ ಮುಂದುವರಿದಿದ್ದಾರೆ. ಈ ಕಾರಣದಿಂದ…
8.53 ಲಕ್ಷ ಸಹಕಾರ ಸಂಘಗಳು ನೋಂದಣಿ; ಕರ್ನಾಟಕದಲ್ಲಿ 40,440 ಸಂಘಗಳು ಕಾರ್ಯನಿರ್ವಹಣೆ: ಸಹಕಾರ ಸಚಿವ ಅಮಿತ್ ಷಾ ಮಾಹಿತಿ ನವದೆಹಲಿ: ದೇಶಾದ್ಯಂತ ನೋಂದಣಿಯಾಗಿರುವ 8.53 ಲಕ್ಷ ಸಹಕಾರ ಸಂಘಗಳ ಪೈಕಿ 1.41 ಲಕ್ಷ ಸಂಘಗಳು ನಿಷ್ಕ್ರಿಯವಾಗಿದ್ದು, 49,177 ಸಂಘಗಳು ದಿವಾಳಿತನ/ಲಿಕ್ವಿಡೇಷನ್ ಪ್ರಕ್ರಿಯೆಯಲ್ಲಿವೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. https://chat.whatsapp.com/FCEnlTkAKCC0MGPhXtX4i4 ರಾಷ್ಟ್ರೀಯ ಸಹಕಾರ ಡೇಟಾಬೇಸ್ (NCD)ನಲ್ಲಿ 2026ರ ಜುಲೈ 15ರವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಒಟ್ಟು 6.63 ಲಕ್ಷ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 5.95 ಲಕ್ಷ ಸಂಘಗಳ ಲೆಕ್ಕಪರಿಶೋಧನೆ ಪೂರ್ಣಗೊಂಡಿದ್ದು, ಸುಮಾರು 68,020 ಸಂಘಗಳು ಇನ್ನೂ ಆಡಿಟ್‌ಗೆ ಒಳಪಟ್ಟಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರಕ್ಕೆ ಅಗ್ರಸ್ಥಾನ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ 2,19,775 ಕಾರ್ಯನಿರ್ವಹಣೆಯಲ್ಲಿರುವ ಸಹಕಾರ ಸಂಘಗಳಿದ್ದು, ಅವುಗಳಲ್ಲಿ 2,11,329 ಸಂಘಗಳ ಆಡಿಟ್ ಪೂರ್ಣಗೊಂಡಿದೆ. ಇನ್ನೂ 8,446 ಸಂಘಗಳು…
ಎನ್‌ಸಿಡಿಸಿಗೆ ವಿಸ್ತೃತ ಅಧಿಕಾರ; ಸಹಕಾರ ಸಂಸ್ಥೆಗಳ ಷೇರು ಬಂಡವಾಳದಲ್ಲೂ ಪಾಲ್ಗೊಳ್ಳಲು ಅವಕಾಶ ನವದೆಹಲಿ: ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಹಣಕಾಸು ಬೆಂಬಲ ಒದಗಿಸುವ ಉದ್ದೇಶ ಹೊಂದಿರುವ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (NCDC) ತಿದ್ದುಪಡಿ ಮಸೂದೆ–2026ಕ್ಕೆ ರಾಜ್ಯಸಭೆ ಬುಧವಾರ ಅನುಮೋದನೆ ನೀಡಿದೆ. ಇದಕ್ಕೂ ಮುನ್ನ ಲೋಕಸಭೆಯಲ್ಲೂ ಮಸೂದೆ ಅಂಗೀಕಾರಗೊಂಡಿದ್ದು, ಇದೀಗ ರಾಷ್ಟ್ರಪತಿಗಳ ಅನುಮೋದನೆಯ ಬಳಿಕ ಕಾನೂನಾಗಿ ಜಾರಿಗೆ ಬರುವ ಹಂತ ತಲುಪಿದೆ. https://chat.whatsapp.com/FCEnlTkAKCC0MGPhXtX4i4 ತಿದ್ದುಪಡಿ ಮಸೂದೆಯ ಪ್ರಮುಖ ಅಂಶವೆಂದರೆ, ಅರ್ಹ ಸಹಕಾರ ಸಂಘಗಳು ಹಾಗೂ ಸಹಕಾರ ಅಭಿವೃದ್ಧಿಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಎನ್‌ಸಿಡಿಸಿ ನೇರವಾಗಿ ಸಾಲ ಮತ್ತು ಅನುದಾನ ನೀಡಲು ಸಾಧ್ಯವಾಗಲಿದೆ. ನಿಗದಿತ ಭದ್ರತೆ ಹಾಗೂ ಇತರ ಷರತ್ತುಗಳಿಗೆ ಒಳಪಟ್ಟು ಈ ನೆರವು ಒದಗಿಸಲಾಗುತ್ತದೆ. ಇದರಿಂದ ಮಧ್ಯವರ್ತಿ ವ್ಯವಸ್ಥೆಗಳ ಮೇಲಿನ ಅವಲಂಬನೆ ಕಡಿಮೆಯಾಗುವ ಸಾಧ್ಯತೆ ಇದ್ದು, ಸಹಕಾರ ಸಂಘಗಳಿಗೆ ಎನ್‌ಸಿಡಿಸಿ ಹಣಕಾಸು ನೆರವು ಮತ್ತಷ್ಟು ಸುಲಭವಾಗಿ ದೊರೆಯುವ ನಿರೀಕ್ಷೆ ಇದೆ. ಸಹಕಾರ ಸಂಸ್ಥೆಗಳ ಬಂಡವಾಳ ಬಲವರ್ಧನೆಗೆ ಅವಕಾಶ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಸಹಕಾರ ಸಂಘಗಳು…
ಮಂಗಳೂರು: ರಾಜ್ಯದ ನೂತನ ಸಹಕಾರ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ ಲಕ್ಷ್ಮಣ ಸವದಿ ಅವರಿಗೆ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್ಯ ಅವರು ಹೃತ್ಪೂರ್ವಕ ಅಭಿನಂದನೆ ಹಾಗೂ ಶುಭಾಶಯಗಳನ್ನು ತಿಳಿಸಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಸಹಕಾರ ಕ್ಷೇತ್ರದ ಬಗ್ಗೆ ಆಳವಾದ ತಿಳುವಳಿಕೆ, ಆಡಳಿತಾತ್ಮಕ ಅನುಭವ ಹಾಗೂ ಈ ಹಿಂದೆ ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಲಕ್ಷ್ಮಣ ಸವದಿಯವರ ನೇತೃತ್ವವು ರಾಜ್ಯದ ಸಹಕಾರ ಕ್ಷೇತ್ರಕ್ಕೆ ಹೊಸ ಚೈತನ್ಯವನ್ನು ನೀಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಲಕ್ಷ್ಮಣ ಸವದಿಯವರು ಈ ಹಿಂದೆ ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆ ಮತ್ತು ಬಲವರ್ಧನೆಗೆ ಕೈಗೊಂಡ ಹಲವು ಮಹತ್ವದ ಕ್ರಮಗಳನ್ನು ಈ ನಾಡಿನ ಜನತೆ ಹಾಗೂ ಸಹಕಾರ ಕ್ಷೇತ್ರ ಇಂದಿಗೂ ಸ್ಮರಿಸುತ್ತಿದೆ. ಅದರಲ್ಲೂ ಸಹಕಾರ ಕಾಯ್ದೆಗೆ ಸಮಗ್ರ ತಿದ್ದುಪಡಿ ತಂದು, ಸರಕಾರದ ಅನಗತ್ಯ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಮೂಲಕ ಸಹಕಾರ ಸಂಘಗಳ ಸ್ವಾಯತ್ತತೆ ಮತ್ತು ಸ್ವತಂತ್ರ ಕಾರ್ಯನಿರ್ವಹಣೆಗೆ ಹೆಚ್ಚಿನ…
ಪ್ಯಾಕ್ಸ್‌ಗಳ ಆರ್ಥಿಕ ಸಂಕಷ್ಟಕ್ಕೆ ಸರ್ಕಾರವೇ ಹೊಣೆ ಬೆಂಗಳೂರು: ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್) ಮೂಲಕ ರೈತರಿಗೆ ನೀಡಲಾಗಿದ್ದ ಸಾಲಮನ್ನಾ ಯೋಜನೆಯಡಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಣವನ್ನು ಕೂಡಲೇ ಸಂಪೂರ್ಣವಾಗಿ ಬಿಡುಗಡೆ ಮಾಡುವಂತೆ ಸಹಕಾರ ಭಾರತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. https://chat.whatsapp.com/FCEnlTkAKCC0MGPhXtX4i4 2018–19ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರಿಗೆ ತಲಾ ₹1 ಲಕ್ಷದವರೆಗೆ ಸಾಲಮನ್ನಾ ಘೋಷಿಸಿತ್ತು. ಆದರೆ, ಸರ್ಕಾರದ ಘೋಷಣೆಯಾಗಿ ಹಲವು ವರ್ಷಗಳು ಕಳೆದರೂ ರಾಜ್ಯದ ಅನೇಕ ಪ್ಯಾಕ್ಸ್‌ಗಳಿಗೆ ಸಾಲಮನ್ನಾ ಮೊತ್ತದ ಸಂಪೂರ್ಣ ಹಣ ಇನ್ನೂ ಬಿಡುಗಡೆಯಾಗಿಲ್ಲ. ರೈತರು ‘ಗ್ರೀನ್ ಲಿಸ್ಟ್’ನಲ್ಲಿ ಇದ್ದರೂ, ಅವರಿಗೆ ಸಂಬಂಧಿಸಿದ ಸಾಲಮನ್ನಾ ಹಣ ಸಂಘಗಳಿಗೆ ಪಾವತಿಯಾಗದೆ ಉಳಿದಿರುವುದು ಗಂಭೀರ ವಿಚಾರವಾಗಿದೆ. ಬುಕ್ಕಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೊಂದರಲ್ಲೇ ಸುಮಾರು ₹22.15 ಲಕ್ಷ ಸಾಲಮನ್ನಾ ಹಣ ಬಾಕಿ ಇದೆ. ಇದೇ ರೀತಿ ರಾಜ್ಯದಾದ್ಯಂತ ನೂರಾರು ಸಂಘಗಳಲ್ಲಿ…
₹340.33 ಕೋಟಿ ವ್ಯವಹಾರ; ₹1.04 ಕೋಟಿ ನಿವ್ವಳ ಲಾಭ, ಶೇ.18 ಡಿವಿಡೆಂಡ್ ಘೋಷಣೆ ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಭಾನುವಾರ ಸಂಘದ ಪ್ರಧಾನ ಕಚೇರಿಯ ಶ್ರೀ ಬೈದಶ್ರೀ ಸಭಾಂಗಣದಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘವು 1991ರಲ್ಲಿ ಪ್ರಾರಂಭಗೊಂಡಿದ್ದು, 2005ರಲ್ಲಿ 2 ಲಕ್ಷ ರೂ. ಮೂಲ ಬಂಡವಾಳದೊಂದಿಗೆ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿತ್ತು. ಈಗ 50 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. 2025-26ನೇ ಸಾಲಿನಲ್ಲಿ 340,33,10,514 ರೂ. ವಾರ್ಷಿಕ ವಹಿವಾಟು ನಡೆಸಿದ್ದು, 1,04,35,201 ರೂ. ನಿವ್ವಳ ಲಾಭ ಗಳಿಸಿದೆ. 98.75 ಶೇ. ಸಾಲ ವಸೂಲಾತಿ ಆಗಿದೆ. ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಪಥದಲ್ಲಿ ಸಾಗುತ್ತಿದ್ದು, 1.04 ಕೋಟಿ ರೂ. ಲಾಭ ಗಳಿಸಿರುವುದು ಅತ್ಯುತ್ತಮ ಸಾಧನೆಯಾಗಿದೆ. ಲಾಭಾಂಶವನ್ನು ಬೈಲಾ ಪ್ರಕಾರ ವಿಲೇವಾರಿ ಮಾಡಲಾಗಿದ್ದು, ಸದಸ್ಯರಿಗೆ…
ಕುಂದಾಪುರ: ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಉಪಾಧ್ಯಕ್ಷರಾದ ವಿವೇಕ್ ಯು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ಪ್ರಸಕ್ತ ಸಾಲಿನಲ್ಲಿ 65.37 ಲಕ್ಷ ರೂ. ಲಾಭ ಗಳಿಸಿ ಶೇ.15 ಡಿವಿಡೆಂಡ್ ಘೋಷಿಸಲಾಯಿತು. https://chat.whatsapp.com/FCEnlTkAKCC0MGPhXtX4i4 2010ರಲ್ಲಿ ಪ್ರಾರಂಭಗೊಂಡ ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘವು ತೀವ್ರಗತಿಯಲ್ಲಿ ಮುನ್ನಡೆಯುತ್ತಿದ್ದು, ತನ್ನಲ್ಲಿರುವ ಠೇವಣಾತಿಗಳನ್ನು ಸಮರ್ಪಕವಾಗಿ ಸಾಲ ವಿತರಣೆ ಹಾಗೂ ಸುಸ್ಥಿರ ಹೂಡಿಕೆ ಮಾಡಿ ಪ್ರಗತಿಯ ಸಾಧನೆಯಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ 3,867 ‘ಎ’ ತರಗತಿ ಸದಸ್ಯರು ಮತ್ತು ‘ಬಿ’ ತರಗತಿ 49 ಸದಸ್ಯರಿದ್ದಾರೆ. 2025-26ನೇ ಸಾಲಿನಲ್ಲಿ ರೂ.41.18 ಕೋಟಿ ಠೇವಣಿ ಹೊಂದಿದ್ದು ರೂ.34.34 ಕೋಟಿ ರೂಪಾಯಿ ಸಾಲ ನೀಡಿದೆ. ಠೇವಣಿಯಲ್ಲಿ ಕಳೆದ ಬಾರಿಗಿಂತ ಶೇ.13.91 ಪ್ರಗತಿ ಸಾಧಿಸಿದೆ. ಕಳೆದ ಬಾರಿ ನಿಗದಿಪಡಿಸಿದ ಠೇವಣಿ, ಸಾಲ ನೀಡಿಕೆ, ಸುಸ್ತಿ ಸಾಲ ಗುರಿ ಮೀರಿ ಪ್ರಗತಿ ಸಾಧಿಸಿದೆ. 40 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿದ…
ಸಹಕಾರ ಸಂಘಗಳಿಗೆ ತ್ವರಿತ ಹಾಗೂ ಹೆಚ್ಚು ಸುಗಮ ಹಣಕಾಸು ನೆರವು ಒದಗಿಸುವ ಉದ್ದೇಶ ನವದೆಹಲಿ: ಸಹಕಾರ ಸಂಘಗಳಿಗೆ ಹಣಕಾಸು ನೆರವು ಒದಗಿಸುವ ವ್ಯವಸ್ಥೆಯನ್ನು ಮತ್ತಷ್ಟು ವೇಗವಾಗಿ ಹಾಗೂ ಹೊಂದಿಕೊಳ್ಳುವಂತೆ ಮಾಡಲು ಉದ್ದೇಶಿಸಿರುವ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ) ತಿದ್ದುಪಡಿ ಮಸೂದೆ–2026 ಅನ್ನು ಲೋಕಸಭೆ ಮಂಗಳವಾರ ಧ್ವನಿಮತದ ಮೂಲಕ ಅಂಗೀಕರಿಸಿದೆ. https://chat.whatsapp.com/FCEnlTkAKCC0MGPhXtX4i4 ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರ ಪರವಾಗಿ ಸಹಕಾರ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಮಸೂದೆ ಮಂಡಿಸಿದರು. 1962ರ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಕಾಯ್ದಗೆ (National Co-operative Development Corporation Act) ತಿದ್ದುಪಡಿ ತರಲು ಈ ಮಸೂದೆ ಉದ್ದೇಶಿಸಿದೆ. ದೇಶದ ಸಹಕಾರ ಸಂಘಗಳಿಗೆ ಹಣಕಾಸು ನೆರವು ಹಾಗೂ ಉತ್ತೇಜನ ನೀಡುವಲ್ಲಿ ಕೇಂದ್ರ ಸಹಕಾರ ಸಚಿವಾಲಯದ ಅಧೀನದಲ್ಲಿರುವ ಕಾನೂನುಬದ್ಧ ಸಂಸ್ಥೆಯಾದ ಎನ್‌ಸಿಡಿಸಿಯ ಪಾತ್ರವನ್ನು ವಿಸ್ತರಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಸಹಕಾರ ಸಂಘಗಳ ವಿವಿಧ ಚಟುವಟಿಕೆಗಳಿಗೆ ಅಗತ್ಯವಿರುವ ಹಣಕಾಸು ನೆರವು ತ್ವರಿತವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಮತ್ತು…
ತರಬೇತಿ ಕಾರ್ಯಾಗಾರದಲ್ಲಿ ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಲಹೆ ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿ., ಮಂಗಳೂರು, ಸಹಕಾರ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಉಪವಿಭಾಗದಲ್ಲಿ ಚುನಾವಣೆ ಇರುವ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಚುನಾವಣಾ ತರಬೇತಿ ಕಾರ್ಯಾಗಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆಯವರು, ಸಹಕಾರ ಕ್ಷೇತ್ರದಲ್ಲಿ ಚುನಾವನೆ ಎಂಬುದು ಸದಸ್ಯರನ್ನು ಒಳಗೊಂಡು ಮಾಡುವ ಪ್ರಕ್ರಿಯೆ. ಈ ಚುನಾವಣಾ ಪ್ರಕ್ರಿಯೆ ಜರುಗಿಸಲು ಬೇಕಾದ ನಿಯಮಗಳ ಬಗ್ಗೆ ಸಿಇಒಗಳಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮವಿದಾಗಿದೆ. ಸಿಇಒಗಳಿಗೆ ಜಾಗೃತಿ ಮೂಡಿಸುವ ಮೂಲಕ ಚುನಾವಣೆಯ ಕುರಿತು ಸರಿಯಾದ ನಿಯಮಗಳನ್ನು ತಿಳಿದುಕೊಂಡು ಸುಗಮವಾಗಿ ಚುನಾವಣೆ ನಡೆಸಲು ಸಾಧ್ಯವಾಗಲಿದೆ. ಚುನಾವಣಾ ಪ್ರಕ್ರಿಯೆಗಳನ್ನು ಮಾಡುವಾಗ…
೨೫% ಡಿವಿಡೆಂಡ್ ಘೋಷಣೆ ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಭಾನುವಾರ ಮಂಗಳೂರು ಸ್ಟೋರ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ.ಭಾಸ್ಕರ್ ರಾವ್ (ಮಾಜಿ ಕಾರ್ಪೋರೇಟರ್) ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಅಧ್ಯಕ್ಷ ಭಾಸ್ಕರ್ ರಾವ್ ಸ್ವಾಗತಿಸಿದರು. 2025-26ನೇ ಸಾಲಿನ ಆಡಳಿತ ಮಂಡಳಿಯ ವರದಿ, ನಿವ್ವಳ ಲಾಭ, ಉಪನಿಯಮ ಪ್ರಕಾರ ಅಂದಾಜು ಬಜೆಟ್ ಅನ್ನು ಮಂಡಿಸಲಾಯಿತು. ಲೆಕ್ಕಪರಿಶೋಧನೆಗೆ ಸಿಎ ಕೆ.ವಿ ಚಂದ್ರಮೋಹನ್ ಅವರನ್ನು ಮಂಜೂರು ಪಡೆಯಲಾಯಿತು. ನಿರ್ದೇಶಕರಾದ ಜಯಪ್ರಕಾಶ್ ವರದಿ ಮಂಡಿಸಿದರು. ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಭಾರತಿ ಗಣೇಶ್ ಭಟ್, ಚಂದ್ರಿಕಾ ಡಿ.ರಾವ್ ಅವರನ್ನು ಅಭಿನಂದಿಸಲಾಯಿತು. ಸಹಕಾರಿಗಳು ಯಾವ ರೀತಿ ಸದಸ್ಯರಿಗೆ ಸೇವೆ ಕೊಡಬೇಕು -ಸಹಕಾರಿಯ ಜವಾಬ್ದಾರಿ ಬಗ್ಗೆ ಸದಸ್ಯರ ಜವಾಬ್ದಾರಿ –ಅಭಿವೃದ್ಧಿ ಬಗ್ಗೆ ಅಗತ್ಯ ಮಾಹಿತಿ ನೀಡಿದರು. ಸದಸ್ಯರ ಮಕ್ಕಳಿಗೆ ಪುಸ್ತಕ-ಪೆನ್-ಕಂಪಾಸ್ ಬಾಕ್ಸ್ ವಿತರಣೆ-ಅಗತ್ಯದ ಅಕ್ಕಿ ವಿತರಣೆ, ವೈದ್ಯಕೀಯ ನೆರವು-ಜ್ಯೋತಿ ಕೆ.ಎಂ.ಸಿ ವತಿಯಿಂದ ಬಿ.ಪಿ, ಶುಗರ್-ಶಿಬಿರದ ಮಾಹಿತಿ-ಉಚಿತ ಶಿಬಿರ ನಡೆಯಿತು.…
