Author: admin

ಆರ್‌ಬಿಐ ಸಮಿತಿ ಸಭೆಯಲ್ಲಿ ದಕ್ಷಿಣ ಭಾರತದ ಸಹಕಾರಿ ಬ್ಯಾಂಕ್‌ಗಳ ಪ್ರಮುಖ ಆಕ್ಷೇಪ ಬೆಂಗಳೂರು: ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕುಗಳಿಗೆ (ಯುಸಿಬಿ) ಪ್ರಸ್ತಾಪಿಸಲಾಗಿರುವ ಮಾದರಿ ಬೈಲಾಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸಮಿತಿ ದಕ್ಷಿಣ ಭಾರತದ ಸಹಕಾರಿ ಬ್ಯಾಂಕುಗಳು ಹಾಗೂ ಒಕ್ಕೂಟಗಳ ಪ್ರತಿನಿಧಿಗಳೊಂದಿಗೆ ಬೆಂಗಳೂರಿನ ಆರ್‌ಬಿಐ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ಮಹತ್ವದ ಸಮಾಲೋಚನೆ ನಡೆಸಿತು. ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಪ್ರತಿನಿಧಿಗಳು ಭಾಗವಹಿಸಿ ಪ್ರಸ್ತಾವಿತ ಮಾದರಿ ಬೈಲಾಗಳ ಕುರಿತು ತಮ್ಮ ಅಭಿಪ್ರಾಯ ಹಾಗೂ ಆತಂಕಗಳನ್ನು ಮಂಡಿಸಿದರು. https://chat.whatsapp.com/FCEnlTkAKCC0MGPhXtX4i4 ಸಭೆಯ ಪ್ರಮುಖ ಚರ್ಚೆಯ ವಿಷಯವಾಗಿ ಏಕ-ರಾಜ್ಯ (Uni-State) ಮತ್ತು ಬಹು-ರಾಜ್ಯ (Multi-State) ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕುಗಳಿಗೆ ಪ್ರತ್ಯೇಕ ಮಾದರಿ ಬೈಲಾಗಳ ಅಗತ್ಯ ಎಂಬ ವಿಚಾರ ಮುನ್ನೆಲೆಗೆ ಬಂತು. ಎರಡೂ ವರ್ಗದ ಬ್ಯಾಂಕುಗಳು ವಿಭಿನ್ನ ಕಾನೂನು ಚೌಕಟ್ಟಿನಡಿ ಕಾರ್ಯನಿರ್ವಹಿಸುವುದರಿಂದ ಒಂದೇ ಮಾದರಿ ಬೈಲಾಗಳನ್ನು ಕಡ್ಡಾಯವಾಗಿ ಅನ್ವಯಿಸುವುದು ಪ್ರಾಯೋಗಿಕವಾಗುವುದಿಲ್ಲ ಎಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟರು. ಆಂಧ್ರಪ್ರದೇಶ…

Read More

ನವದೆಹಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (PACS) ಗ್ರಾಮೀಣ ಪ್ರದೇಶಗಳಲ್ಲಿನ ಸಮಗ್ರ ಸೇವಾ ಕೇಂದ್ರಗಳಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸಹಕಾರ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ‘ಒನ್ ಸ್ಟಾಪ್ ಶಾಪ್’ (OSS) ಉಪಕ್ರಮದಡಿ ರೈತರು ಹಾಗೂ ಗ್ರಾಮೀಣ ಜನರಿಗೆ ವಿವಿಧ ಸರ್ಕಾರಿ ಸೇವೆಗಳು, ಯೋಜನೆಗಳು, ಉತ್ಪನ್ನಗಳು, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕವನ್ನು ಸ್ಥಳೀಯ ಮಟ್ಟದಲ್ಲೇ ಒದಗಿಸುವ ಕುರಿತು ಮಂಗಳವಾರ ನವದೆಹಲಿಯಲ್ಲಿ ಅಂತರ ಸಚಿವಾಲಯದ ಮಹತ್ವದ ಸಭೆ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ.ಆಶಿಶ್ ಭೂತಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಪ್ಯಾಕ್ಸ್‌ಗಳ ವ್ಯಾಪಕ ಗ್ರಾಮೀಣ ಜಾಲ ಹಾಗೂ ಅಭಿವೃದ್ಧಿಯಾಗುತ್ತಿರುವ ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಂಡು ಸರ್ಕಾರದ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ಯಾಕ್ಸ್‌ಗಳ ಮೂಲಕ ಗ್ರಾಮೀಣ ಜನರಿಗೆ ಯಾವೆಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ಒದಗಿಸಬಹುದು ಎಂಬುದನ್ನು ಗುರುತಿಸುವಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗುರುತಿಸಲಾದ…

Read More

ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಸಂಘವು ಪ್ರಸ್ತುತ ಸಾಲಿನಲ್ಲಿ ಬೃಹತ್ ₹451.40 ಕೋಟಿ ರೂ.ಗಳ ವ್ಯವಹಾರ ನಡೆಸಿದ್ದು, ₹1.91 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಸಂಘದ ಅರ್ಹ ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಸಂಘದ ಎಲ್ಲಾ ಸದಸ್ಯರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪೂರ್ಣ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಸಂಘದ ಮುಖಾಂತರ ನಡೆಯಲಿದೆ. ಸಂಘವು ಸತತವಾಗಿ 24ನೇ ಬಾರಿ ‘ಎ’ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇ.99.31 ಸಾಲ ಮರುಪಾವತಿ ಸಾಧನೆ ಮಾಡಿದೆ. ವರದಿ ವರ್ಷದಲ್ಲಿ 3,566 ಸದಸ್ಯರಿದ್ದು, ₹5.81 ಕೋಟಿ ಪಾಲು ಬಂಡವಾಳ ಮತ್ತು ₹45.98 ಕೋಟಿ ಠೇವಣಿ ಸಂಗ್ರಹವಾಗಿದೆ. ವರದಿ ವರ್ಷದಲ್ಲಿ ₹6 ಕೋಟಿ…

Read More

“25 ವರ್ಷಗಳ ವಿಶ್ವಾಸ… ಸಹಕಾರದ ಬೆಸುಗೆ… ಅಭಿವೃದ್ಧಿಯ ಸಂಕಲ್ಪ…” ಎಂಬ ಧ್ಯೇಯದೊಂದಿಗೆ ಆಗಸ್ಟ್ 23ರಂದು ವಿಶೇಷ ಕಾರ್ಯಕ್ರಮ ಗೋಕಾಕ: ಗೋಕಾಕ ನಗರದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತವು ತನ್ನ ರಜತ ಮಹೋತ್ಸವವನ್ನು ಆಗಸ್ಟ್ 23ರಂದು ಸಂಭ್ರಮದಿಂದ ಆಚರಿಸಲಿದೆ. https://chat.whatsapp.com/FCEnlTkAKCC0MGPhXtX4i4 ರಜತ ಮಹೋತ್ಸವದ ಅಂಗವಾಗಿ ಆಗಸ್ಟ್ 23, 2026ರಂದು ಬೆಳಗ್ಗೆ 10 ಗಂಟೆಗೆ ಗೋಕಾಕದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ “25 ವರ್ಷಗಳ ವಿಶ್ವಾಸ… ಸಹಕಾರದ ಬೆಸುಗೆ… ಅಭಿವೃದ್ಧಿಯ ಸಂಕಲ್ಪ…” ಎಂಬ ಧ್ಯೇಯದೊಂದಿಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠ, ನವಲಗುಂದ ಇಲ್ಲಿನ ಪೂಜ್ಯ ಶ್ರೀ ವೀರೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠ ನಿಡಸೋಸಿ ಇಲ್ಲಿನ ಪೂಜ್ಯ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ವಿನಾಯಕ ನಾ. ಚಿಪ್ಪಲಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಕಾರ…

Read More

ಕಾವೂರು: ಶ್ರೀ ಗುರುಶಕ್ತಿ ಸೌಹಾರ್ದ ಕೋ-ಆಪರೇಟಿವ್ ನಿ., ಕಾವೂರು ಇದರ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಕಾವೂರು ವಿಲಾಶ್ರೀ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಸಹಕಾರಿಯ ಸದಸ್ಯರಾದ ಪುಷ್ಪರಾಜ್ ಮೊಯ್ಲಿ, ರಮೇಶ್, ಕೃಷ್ಣ ಎನ್. ಪೂಜಾರಿ, ರೇವತಿ ರವಿಚಂದ್ರ , ಬಿ.ವಿಜಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಸಹಕಾರಿಯ ಲೆಕ್ಕಪರಿಶೋಧಕ ಸಿ.ಎ. ಶ್ರವಣ್ ಕುಮಾರ್ ಹಾಗೂ ಸಹಕಾರಿಯ ನಿರ್ದೇಶಕರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಹಕಾರಿಯ ಅಧ್ಯಕ್ಷ ಚಂದ್ರಶೇಖರ್ ಕುಮಾರ್ ಮಾತನಾಡಿ, “2025-26ನೇ ಸಾಲಿನಲ್ಲಿ ಸಹಕಾರಿಯು 13.72 ಲಕ್ಷ ರೂ. ಲಾಭಾಂಶ ಗಳಿಸಿದೆ. ಈ ಬಾರಿಯೂ ಆಡಿಟ್ ವರ್ಗೀಕರಣದಲ್ಲಿ ‘ಎ’ ದರ್ಜೆ ಸ್ಥಾನಮಾನ ದೊರಕಿರುತ್ತದೆ ಎಂದು ಹೇಳಿದರು. ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಯಿತು. ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳನ್ನು ಸಹಕಾರಿಯ ವತಿಯಿಂದ ಗೌರವಿಸಲಾಯಿತು. ಎಂ.ಕಾಂ (Finance…

Read More

ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಕಾನೂನು, ತೆರಿಗೆ ಹಾಗೂ ಸಾಲ ವಸೂಲಾತಿಗೆ ಸಂಬಂಧಿಸಿದ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವ ಉದ್ದೇಶದಿಂದ ಸಹಕಾರ ಭಾರತಿ ಕರ್ನಾಟಕ ಹಾಗೂ ದಿ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICMAI), ಬೆಂಗಳೂರು ಜಂಟಿ ಆಶ್ರಯದಲ್ಲಿ ಆಗಸ್ಟ್ 19ರಂದು ಸಹಕಾರಿಗಳಿಗಾಗಿ ವಿಶೇಷ ‘ಅಭ್ಯಾಸ ವರ್ಗ’ ಆಯೋಜಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಮಲ್ಲೇಶ್ವರಂನಲ್ಲಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಕಾರ್ಯಕ್ರಮ ನಡೆಯಲಿದೆ. ಸಹಕಾರ ಭಾರತಿ ಕರ್ನಾಟಕ ರಾಜ್ಯ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಪ್ರಭುದೇವ್ ಎಂ.ಆರ್. ಅಧ್ಯಕ್ಷತೆ ವಹಿಸಲಿದ್ದಾರೆ. ಐಸಿಎಂಎಐ ಕೇಂದ್ರ ಮಂಡಳಿ ಸದಸ್ಯ ಸಿಎಂಎ ನವನೀತ್ ಕುಮಾರ್ ಜೈನ್ ಹಾಗೂ ಐಸಿಎಂಎಐ ಬೆಂಗಳೂರು ಅಧ್ಯಕ್ಷ ಸಿಎಂಎ ಸಂತೋಷ್ ಕಲಬುರಗಿ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಅಭ್ಯಾಸ ವರ್ಗದಲ್ಲಿ ಸಹಕಾರಿ ಸಂಸ್ಥೆಗಳಿಗೆ ನೇರವಾಗಿ ಸಂಬಂಧಿಸಿದ ಮೂರು ಪ್ರಮುಖ ವಿಷಯಗಳ ಕುರಿತು ತಜ್ಞರಿಂದ ವಿಚಾರಗೋಷ್ಠಿಗಳು ನಡೆಯಲಿವೆ. ಮೊದಲ ಅವಧಿಯಲ್ಲಿ, ಸಹಕಾರ ಭಾರತಿ…

Read More

ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರಾಗಿ ಬೆಳೆಸಾಲ ಪಡೆದು ಮೃತರಾದ ಸದಸ್ಯರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ರೈತ ಕಲ್ಯಾಣ ನಿಧಿ ಯೋಜನೆಯಡಿಯಲ್ಲಿ ಮರಣ ಹೊಂದಿದ 38 ಕುಟುಂಬದ ನಾಮಿನಿ ಸದಸ್ಯರುಗಳಿಗೆ ತಲಾ ರೂ.10 ಸಾವಿರದಂತೆ ರೂ.3.80 ಲಕ್ಷ ರೈತ ಕಲ್ಯಾಣ ನಿಧಿಯನ್ನು ಸಂಘದ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಉಪಾಧ್ಯಕ್ಷ ಸಂದೇಶ ಶೆಟ್ಟಿ ಮಂಗಳವಾರ ವಿತರಣೆ ಮಾಡಿದರು. https://chat.whatsapp.com/FCEnlTkAKCC0MGPhXtX4i4 ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ , ಬೆಳೆ ಸಾಲ ಪಡೆದುಕೊಂಡು ಸಂಘದಲ್ಲಿ ವ್ಯವಹಾರ ಮಾಡಿಕೊಂಡು ಬರುತ್ತಿದ್ದ ರೈತ ಸದಸ್ಯರು ಮರಣ ಹೊಂದಿದಾಗ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಸಂಘವು ರೈತ ಕಲ್ಯಾಣ ನಿಧಿ ಯೋಜನೆಯನ್ನು ಸ್ಥಾಪಿಸಿ , ಸದ್ರಿ ಯೋಜನೆಯಡಿಯಲ್ಲಿ ಮೃತ ಸದಸ್ಯರ ಕುಟುಂಬಕ್ಕೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ಸಂಘದ ನಿರ್ದೇಶಕರಾದ ಸತೀಶ್ ಪೂಜಾರಿ ಅಲಕ್ಕೆ, ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ,…

Read More

ನವದೆಹಲಿ: ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ) ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ವಿಶೇಷ ಅನುಮತಿ ಅರ್ಜಿಗಳನ್ನು (ಎಸ್‌ಎಲ್‌ಪಿ) ವಿಚಾರಣೆಯಿಂದಲೇ ಅಪ್ರಸ್ತುತವಾಗಿವೆ ಎಂದು ಹೇಳಿ ವಜಾಗೊಳಿಸಲಾಗಿದೆ. ಇದರಿಂದ ಎನ್‌ಸಿಯುಐ ಚುನಾವಣಾ ಪ್ರಕ್ರಿಯೆಗೆ ಎದುರಾಗಿದ್ದ ಪ್ರಮುಖ ಕಾನೂನು ತೊಡಕು ನಿವಾರಣೆಯಾದಂತಾಗಿದೆ. https://chat.whatsapp.com/FCEnlTkAKCC0MGPhXtX4i4 ನ್ಯಾಯಮೂರ್ತಿಗಳಾದ ಪಮಿಡಿಘಂಟಂ ನರಸಿಂಹ ಮತ್ತು ಅಲೋಕ್ ಅರಾಧೆ ಅವರನ್ನೊಳಗೊಂಡ ಪೀಠವು, ಕಾಲಾವಧಿ ಕಳೆದಿರುವ ಹಿನ್ನೆಲೆಯಲ್ಲಿ ಈ ಎಲ್ಲ ಅರ್ಜಿಗಳೂ ವಜಾ ಆಗಿವೆ ಎಂದು ಅಭಿಪ್ರಾಯಪಟ್ಟಿತು. ಆದರೆ, ಈ ಪ್ರಕರಣದಲ್ಲಿ ಉದ್ಭವಿಸಿರುವ ಕಾನೂನು ಪ್ರಶ್ನೆಗಳನ್ನು ಸೂಕ್ತ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಪರಿಗಣಿಸಲು ಮುಕ್ತವಾಗಿರಿಸಲಾಗಿದೆ. ಈ ಪ್ರಕರಣದ ಹಿನ್ನೆಲೆ ಸುಪ್ರೀಂ ಕೋರ್ಟ್‌ನ ಮೇ 4ರ ಮಧ್ಯಂತರ ಆದೇಶಕ್ಕೆ ಸಂಬಂಧಿಸಿದೆ. ಅದರಂತೆ ನ್ಯಾಷನಲ್ ಕೋ-ಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ (ಎನ್‌ಸಿಇಎಲ್‌), ನ್ಯಾಷನಲ್ ಕೋ-ಆಪರೇಟಿವ್ ಆರ್ಗಾನಿಕ್ಸ್ ಲಿಮಿಟೆಡ್ (ಎನ್‌ಸಿಒಎಲ್‌) ಮತ್ತು ಭಾರತೀಯ ಬೀಜ್ ಸಹಕಾರಿ ಸಮಿತಿ ಲಿಮಿಟೆಡ್ (ಬಿಬಿಎಸ್‌ಎಸ್‌ಎಲ್‌) ಸಂಸ್ಥೆಗಳಿಗೆ ಎನ್‌ಸಿಯುಐ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು.…

Read More

ಕಾರ್ಕಳ: ಸೂರ್ಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಮೂರನೇ ವಾರ್ಷಿಕ ಮಹಾಸಭೆ ಕಾರ್ಕಳ ಜೋಡು ರಸ್ತೆಯ ಉಷಾ ಪಾರ್ಟಿ ಹಾಲ್‌ನಲ್ಲಿ ಭಾನುವಾರ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಸೊಸೈಟಿಯ ಅಧ್ಯಕ್ಷರಾದ ಶ್ರೀಧರ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿನಿ ಕುಲಾಲ್ ಅವರು ಸಂಸ್ಥೆಯ ಕಳೆದ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು. ನಿರ್ದೇಶಕರಾದ ಮೈತ್ರಿ ನಾಯ್ಕ್ ಅವರು ಹಣಕಾಸಿನ ವರದಿಯನ್ನು ವಾಚಿಸಿದರು. ನಿರ್ದೇಶಕರಾದ ಪ್ರಶಾಂತ್ ಆಚಾರ್ಯ ಸಂಸ್ಥೆಯ ಮುಂದಿನ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿಯೂ ಲಾಭ ಗಳಿಸಿದ್ದು, ಲಾಭದ ವಿಂಗಡಣೆ ಕುರಿತು ನಿರ್ದೇಶಕರಾದ ಶ್ರುತಿ ಅವರು ಸಭೆಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಘದ ಸದ್ಯಸರ ಮಕ್ಕಳಾದ ಪೃಥ್ವಿ ಪೂಜಾರಿ ಹಾಗೂ ಆಯುಶ್ರೀ ಎಂ. ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿಯ ಅಧ್ಯಕ್ಷ ಶ್ರೀಧರ್ ಪೂಜಾರಿ ಮಾತನಾಡಿ, ಸೂರ್ಯ ಸೌಹಾರ್ದ ಸೊಸೈಟಿಯ ಬೆಳವಣಿಗೆಯಲ್ಲಿ ನಿರ್ದೇಶಕರು, ಸಿಬ್ಬಂದಿ ವರ್ಗ, ಸೇವಾ ಪ್ರತಿನಿಧಿಗಳು…

Read More

ಬೆಂಗಳೂರು: ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕಿನ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬ್ಯಾಂಕಿನ ಅಧ್ಯಕ್ಷರಾದ ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ನಂಜೇಗೌಡ ಅವರು, ಬ್ಯಾಂಕು 2025-26ನೇ ವರ್ಷಾಂತ್ಯಕ್ಕೆ ರೂ 69.35 ಕೋಟಿ ಸಾಲ ಹೊರಬಾಕಿ ಹಾಗೂ ರೂ 100.38 ಕೋಟಿ ಠೇವಣಿ ಗಳಿಸಿದೆ. ಬ್ಯಾಂಕಿನ ಪ್ರತಿಯೊಂದು ಸಾಧನೆಗೂ ಬ್ಯಾಂಕಿನ ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳ ಪರಿಶ್ರಮ ಕಾರಣವಾಗಿದೆ. 2025-26ನೇ ಸಾಲಿನಲ್ಲಿ ಬ್ಯಾಂಕು ರೂ 1.15 ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಸದಸ್ಯರಿಗೆ ಈ ಬಾರಿ ಶೇ.16ರಂತೆ ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ಈಗಾಗಲೇ ಬ್ಯಾಂಕಿನ ಮೂರು ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯಲು ಬ್ಯಾಂಕಿನ ಆಡಳಿತ ಮಂಡಳಿ ಕಾರ್ಯಪ್ರವೃತವಾಗಿದೆ. ಪ್ರತಿಬಾರಿಯಂತೆ ಈ ಬಾರಿ 200 ಜನ ಬ್ಯಾಂಕಿನ ಹಿರಿಯ ಸ್ಥಾಪಕ ಸದಸ್ಯರುಗಳಿಗೆ ಸನ್ಮಾಲಿಸಲಾಗಿದೆ ಎಂದು ಹೇಳಿದರು. ಬ್ಯಾಂಕಿನ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಬಾರಿಯಂತೆ…

Read More