Author: admin

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಈ ಮೂಲಕ ರೆಪೋ ದರ ಇದೀಗ ಶೇ.6ಕ್ಕೆ ಇಳಿಸಿದೆ. https://chat.whatsapp.com/EbVKVnWB6rlHT1mWtsgbch ಆರ್‌ಬಿಐ ರೆಪೋ ದರ ಇಳಿಸಿರುವುದರಿಂದ, ಬ್ಯಾಂಕ್‌ಗಳಿಗೆ ಸಾಲ ಪಡೆಯುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ವೈಯಕ್ತಿಕ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಅನುವು ಮಾಡಿಕೊಡುತ್ತದೆ. ಸಾಲಗಳ ಮೇಲಿನ ಇಎಂಐಗಳನ್ನು ಕೂಡ ಈ ನಿರ್ಧಾರ ಕಡಿಮೆ ಮಾಡಲಿದೆ. ನವದೆಹಲಿಯಲ್ಲಿ ಬುಧವಾರ ಮುಂಜಾನೆ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ವರದಿ ಬಿಡುಗಡೆ ಮಾಡಿ, ರೆಪೋ ದರವನ್ನು ಕಡಿಮೆ ಮಾಡಲು ಎಂಪಿಸಿ ಸರ್ವಾನುಮತದಿಂದ ಮತ ಚಲಾಯಿಸಿದೆ ಎಂದು ತಿಳಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಪ್ರತಿ ತಿಂಗಳು ನಡೆಯುವ ಆರೋಗ್ಯ ಶಿಬಿರವನ್ನು ಕಳೆದ ಭಾನುವಾರ ಫ್ರೆಂಡ್ಸ್ ಕೋಡಿಕೆರೆ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಜಂಟಿ ಸಹಯೋಗದೊಂದಿಗೆ ಕೋಡಿಕೆರೆಯ ಪೆರ್ಮುದೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. https://chat.whatsapp.com/EbVKVnWB6rlHT1mWtsgbch ಶ್ರೀಶಾ ಸೊಸೈಟಿಯಿಂದ ಆಯೋಜನಗೊಂಡ 29ನೇ ಬೃಹತ್ ಉಚಿತ ಆರೋಗ್ಯ-ದಂತ-ಕಣ್ಣಿನ-ತಪಾಸಣಾ ಚಿಕಿತ್ಸಾ ಶಿಬಿರ ಇದಾಗಿತ್ತು. ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆ ಹಾಗೂ ದೇರಳಕಟ್ಟೆ ಯೇನಪೊಯ ದಂತ ಕಾಲೇಜಿನ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಒಟ್ಟು 300ಕ್ಕೂ ಹೆಚ್ಚಿನ ರೋಗಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.ಕಣ್ಣಿನ ಸಮಸ್ಯೆ ಇದ್ದ 65 ಜನರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕ ಹಾಗೂ ಎಲ್ಲಾ ಖಾಯಿಲೆಗಳಿಗೆ ಔಷಧಗಳನ್ನು ಉಚಿತವಾಗಿ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯುಳ್ಳವರನ್ನು ಬುಧವಾರ ಕೆಎಂಸಿ ಅತ್ತಾವರ ಆಸ್ಪತ್ರೆಗೆ 32 ಜನರನ್ನು ಹಾಗೂ ಹಲ್ಲಿನ ಸಮಸ್ಯೆಯುಳ್ಳವರಿಗೆ ದೇರಳಕಟ್ಟೆ ಯೆನೆಪೋಯ ದಂತ ಆಸ್ಪತ್ರೆಗೆ 40 ಜನರನ್ನು ಬರಲು ಸೂಚಿಸಲಾಗಿದೆ. 15 ಜನರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ…

Read More

ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್‌ ಗಂಭೀರ ಎಚ್ಚರಿಕೆ ನವದೆಹಲಿ: ಕರ್ನಾಟಕ ರಾಜ್ಯದ 42,551 ಸಹಕಾರಿ ಸಂಘಗಳಲ್ಲಿ ಶೇ.34.7ರಷ್ಟು ಸೊಸೈಟಿಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ…!! ಕಳೆದ ವಾರ ಸಂಸತ್‌ ಅಧಿವೇಶನದಲ್ಲಿ ಈ ಬಗ್ಗೆ ಗಂಭೀರ ಎಚ್ಚರಿಕೆ ನೀಡುತ್ತ ಮಾತನಾಡಿದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ರಾಜ್ಯದ 42,551 ಸಹಕಾರಿ ಸಂಘಗಳಲ್ಲಿ ಶೇ.34.7ರಷ್ಟು ಸೊಸೈಟಿಗಳು ನಷ್ಟದಲ್ಲಿ ನಡೆಯುತ್ತಿವೆ ಎಂದು ಉಲ್ಲೇಖಿಸಿದರು. ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಐದು ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆದಿರುವ ಬೃಹತ್ ಹಣಕಾಸು ಹಗರಣವನ್ನು ಬಹಿರಂಗಪಡಿಸಿ ಗಮನ ಸೆಳೆದ ಅವರು, ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆದಿರುವ ಈ ಹಗರಣಗಳಿಂದ ಸುಮಾರು ಎರಡು ಲಕ್ಷ ಠೇವಣಿದಾರರ ಕುಟುಂಬಗಳ ಮೇಲೆ ಅಡ್ಡ ಪರಿಣಾಮ ಬೀರಿವೆ ಎಂದು ಹೇಳಿದರು. https://chat.whatsapp.com/EbVKVnWB6rlHT1mWtsgbch ಪ್ರಭಾವಿ ವ್ಯಕ್ತಿಗಳು ಸಹಕಾರಿ ಬ್ಯಾಂಕುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಹಕಾರಿ ವಲಯವು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ಜೀವನಾಡಿಯಾಗಿದೆ. ಆದರೆ ಆ ಕ್ಷೇತ್ರವೇ ಈಗ ಭ್ರಷ್ಟಾಚಾರದಿಂದ ಬಳಲುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ, ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್,…

Read More

ಲೆಕ್ಕಪರಿಶೋಧನೆಯಲ್ಲಿ ಸತತ ಎ ಶ್ರೇಣಿ ಸಂಘದ ಹೆಗ್ಗಳಿಕೆ: ಚಿತ್ತರಂಜನ್‌ ಬೋಳಾರ್‌ ಮಾಹಿತಿ ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 33 ಶಾಖೆಗಳನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ. 3.50 ಕೋಟಿಗೂ ಮಿಕ್ಕಿ ಲಾಭ ಗಳಿಸಿದೆ. https://chat.whatsapp.com/EbVKVnWB6rlHT1mWtsgbch 2012ರಲ್ಲಿ 1200 ಸದಸ್ಯರ ಪಾಲು ಬಂಡವಾಳದಿಂದ ಸ್ಥಾಪನೆಯಾದ ಆತ್ಮಶಕ್ತಿ ಸಹಕಾರಿ ಸಂಘದಲ್ಲಿ ಪ್ರಸಕ್ತ 7507 ಸದಸ್ಯರಿದ್ದು ರೂ. 1.58 ಕೋಟಿಗೂ ಅಧಿಕ ಪಾಲು ಬಂಡವಾಳ ಹೊಂದಿದೆ. ರೂ. 22 ಲಕ್ಷ ಠೇವಣಿಯೊಂದಿಗೆ ಆರಂಭಗೊಂಡ ಸಂಘವು 2024-25ನೇ ಸಾಲಿನಲ್ಲಿ ರೂ.247 ಕೋಟಿಗೂ ಮಿಕ್ಕಿ ಠೇವಣಾತಿ ಹೊಂದಿದೆ. ಸಂಘವು 2024-25ನೇ ಸಾಲಿನಲ್ಲಿ ರೂ. 214 ಕೋಟಿಗೂ ಮಿಕ್ಕಿ ಹೊರಬಾಕಿ ಸಾಲ ಹೊಂದಿದೆ. ಪ್ರತಿವರ್ಷವೂ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿ ಕಾಯ್ದುಕೊಳ್ಳುತ್ತಿದೆ ಎಂದು ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ತಿಳಿಸಿದ್ದಾರೆ. ಮೂವರು ಸಿಬ್ಬಂದಿಯೊಂದಿಗೆ ಆರಂಭವಾದ ಆತ್ಮಶಕ್ತಿ ಸಹಕಾರಿ ಸಂಘವು ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಮುನ್ನಡೆಯುತ್ತಿದ್ದು, ಸಂಘದ ಉದ್ಯೋಗಿಗಳಲ್ಲಿ ಶೇ.95ರಷ್ಟು…

Read More

ಮಂಗಳೂರು: ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT)ದ ಐಟಿಸಿ (ಎಚ್.ಎಸ್) ಕೋಡ್ 20081920 ಅಡಿಯಲ್ಲಿ ಪರಿಗಣಿತವಾಗಿದ್ದ ಹುರಿದ ಅಡಿಕೆಯ(ರೋಸ್ಟೆಡ್ ಸುಪಾರಿ) ಅನಿರ್ಬಂಧಿತ ವ್ಯಾಪಾರವನ್ನು ರದ್ದುಗೊಳಿಸಿದೆ. ಈ ಮೂಲಕ ‘ರೋಸ್ಟೆಡ್ ನಟ್ಸ್ ಮತ್ತು ಸೀಡ್ಸ್’ ಶಿರೋನಾಮೆಯ ಮೂಲಕ ಆಮದಾಗುತ್ತಿದ್ದ ಅಡಿಕೆಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಶ್ಲಾಘಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಏಪ್ರಿಲ್‌ 2ರಂದು ಕೇಂದ್ರ ಸರಕಾರದ ವಾಣಿಜ್ಯ ಇಲಾಖೆ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು ಅದರ ಪ್ರಕಾರ ಐಟಿಸಿ (ಎಚ್ಎಸ್) ಕೋಡ್ 08028090 ಮತ್ತು 20081920 ಅಡಿಯಲ್ಲಿ ಬರುವ “ಹುರಿದ ಅಡಿಕೆ”ಯನ್ನು “ಉಚಿತ” ದಿಂದ “ನಿಷೇಧಿತ” ಎಂದು ಪರಿಷ್ಕರಿಸಿ ವರ್ಗೀಕರಿಸಲಾಗಿದೆ. ಆದಾಗ್ಯೂ,ಕನಿಷ್ಠ ಆಮದು ದರವನ್ನು ಪ್ರತೀ ಕೆಜಿ ಗೆ ರೂ.351/- ನಿಗದಿ ಪಡಿಸಿದ್ದು, ಆಮದು ಮಾಡಲ್ಪಡುವ ಅಡಿಕೆಯ ವೆಚ್ಚ, ವಿಮೆ ಮತ್ತು ಸರಕು ಸಾಗಣೆ ( CIF) ಮೌಲ್ಯವು ಪ್ರತಿ ಕಿಲೋಗ್ರಾಂಗೆ ರೂ. 351/- ಮತ್ತು ಅದಕ್ಕಿಂತ ಹೆಚ್ಚಿದ್ದರೆ, 100% ರಫ್ತು ಆಧಾರಿತ ಘಟಕಗಳು…

Read More

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಉಪ ಗವರ್ನರ್ ಆಗಿ ಪೂನಂ ಗುಪ್ತಾ ನೇಮಕಗೊಂಡಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಈ ಹುದ್ದೆ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. https://chat.whatsapp.com/EbVKVnWB6rlHT1mWtsgbch ಪೂನಂ ಗುಪ್ತಾ ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ನಲ್ಲಿ 20 ವರ್ಷಗಳ ಅನುಭವ ಹೊಂದಿರುವ ಪ್ರಸಿದ್ಧ ಅರ್ಥಶಾಸ್ತ್ರಜ್ಞೆ. ಅವರು ಭಾರತದಲ್ಲಿ ಸರ್ಕಾರಿ ಸಲಹೆಗಾರರೂ ಆಗಿದ್ದಾರೆ. ಇದಕ್ಕೂ ಮೊದಲು ಅವರು ನವದೆಹಲಿಯಲ್ಲಿರುವ ಪ್ರಸಿದ್ಧ ಚಿಂತಕರ ಚಾವಡಿಯಾಗಿರುವ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ (ಎನ್‌ಸಿಎಇಆರ್‌) ಮಹಾನಿರ್ದೇಶಕರಾಗಿದ್ದರು. ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರಗಳನ್ನು ಕಡಿಮೆ ಮಾಡಿರುವ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಗೆ ಪೂನಂ ಗುಪ್ತಾ ಸೇರುವ ನಿರೀಕ್ಷೆಯಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಭಾಗದಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್‌ ಕ್ರೆಡಿಟ್ ಸೊಸೈಟಿಯು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 45.35 ಕೋಟಿ ರೂ. ಲಾಭ ಗಳಿಸಿದೆ. https://chat.whatsapp.com/EbVKVnWB6rlHT1mWtsgbch ಬೀರೇಶ್ವರ ಸಹಕಾರಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಆರಂಭಿಸಿ ವರ್ಷದಿಂದ ವರ್ಷಕ್ಕೆ ಸದೃಢವಾಗಿ ಬೆಳೆಯುತ್ತಿದೆ. ಅಂತಾರಾಜ್ಯ ಕಾಯ್ದೆಯಡಿ ಕರ್ನಾಟಕದಲ್ಲಿ 176, ಮಹಾರಾಷ್ಟ್ರದಲ್ಲಿ 46 ಹಾಗೂ ಗೋವಾದಲ್ಲಿ ನಾಲ್ಕು ಒಟ್ಟು ಸೇರಿ 226 ಶಾಖೆಗಳನ್ನು ಹೊಂದಿದೆ. ಲಾಭಾಂಶದಲ್ಲಿ ಕಳೆದ ವರ್ಷಕ್ಕಿಂತ 4.79 ಕೋಟಿ ರೂ. ಹೆಚ್ಚಳವಾಗಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬೀರೇಶ್ವರ ಕೋ ಆಪರೇಟಿವ್‌ ಸೊಸೈಟಿಯಲ್ಲಿ 4,08,233 ಸದಸ್ಯರು, 34,92,16,400 ರೂ. ಷೇರು ಬಂಡವಾಳ, 4338.58 ಕೋಟಿ ರೂ. ಠೇವಣಿ ಸಂಗ್ರಹ, 5030.90 ಕೋಟಿ ರೂ. ದುಡಿಯುವ ಬಂಡವಾಳ ಇದೆ. ಎಸ್‌ಎಂಎಸ್ ಸೇವೆ, ಕಿರು ಸಾಲ ಯೋಜನೆ, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್‌, ಎಕ್ಸ್‌ಪ್ರೆಸ್ ಮನಿ ಟ್ರಾನ್ಸ್‌ಫರ್,…

Read More

ಬೆಂಗಳೂರು: ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 2024-25ರ ಆರ್ಥಿಕ ವರ್ಷದಲ್ಲಿ 86.94 ಕೋಟಿ ರೂ.ಗಳ ಲಾಭ ಗಳಿಸಿದೆ. ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಸಾಲಗಳು ಶೂನ್ಯವಾಗಿವೆ. ಬ್ಯಾಂಕ್‌ನ ಒಟ್ಟು ವಹಿವಾಟು 3540.24 ಕೋಟಿ ರೂ. ಮೀರಿದ್ದು, ಪ್ರಸಕ್ತ 2024-25ರ ಸಾಲಿನಲ್ಲಿ ಆದಾಯ ತೆರಿಗೆ ಪೂರ್ವ 64.50 ಕೋಟಿ ರೂ. ಲಾಭ ಗಳಿಸಿದೆ ಮತ್ತು ತೆರಿಗೆ ನಂತರ 29.03 ಕೋಟಿ ನಿವ್ವಳ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅವಲಹಳ್ಳಿ ಆರ್‌.ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. https://chat.whatsapp.com/EbVKVnWB6rlHT1mWtsgbch ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 1907ರ ಏಪ್ರಿಲ್ 6ರಂದು ಆರಂಭಗೊಂಡಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ 118 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಾ ಬಂದಿದೆ. ಬ್ಯಾಂಕ್ ರಾಜ್ಯಾದ್ಯಂತ ಕ್ಷೇತ್ರವ್ಯಾಪ್ತಿ ಹೊಂದಿದ್ದು, ಬೆಂಗಳೂರಿನಲ್ಲಿ 20, ಮೈಸೂರು ಮತ್ತು ರಾಮನಗರದಲ್ಲಿ ತಲಾ ಒಂದು ಸೇರಿ ಒಟ್ಟು 22 ಶಾಖೆಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ 2779.00 ಕೋಟಿ ರೂ.ನಷ್ಟಿದ್ದು, 2158.77 ಕೋಟಿ ರೂ. ಠೇವಣಿ ಸಂಗ್ರಹ…

Read More

ದೇಶದಲ್ಲಿ 2,02,521 ಸಂಘಟಿತ ಡೈರಿ ಸಹಕಾರ ಸಂಘಗಳು, ದಿನಕ್ಕೆ 60,654 ಸಾವಿರ ಕೆಜಿ ಹಾಲು ಸಂಗ್ರಹ: ರಾಜ್ಯಸಭೆಯಲ್ಲಿ ಅಮಿತ್‌ ಷಾ ಹೇಳಿಕೆ ನವದೆಹಲಿ: ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಒದಗಿಸಿದ ಮಾಹಿತಿಯ ಪ್ರಕಾರ 2023-24ರ ಸಾಲಿನಲ್ಲಿ ಭಾರತದಲ್ಲಿ 2,02,521 ಸಂಘಟಿತ ಡೈರಿ ಸಹಕಾರ ಸಂಘಗಳಿದ್ದು, ದಿನಕ್ಕೆ ಒಟ್ಟು 60,654 ಸಾವಿರ ಕೆಜಿಯಷ್ಟು ಹಾಲು ಸಂಗ್ರಹಿಸಲಾಗುತ್ತಿದೆ. https://chat.whatsapp.com/EbVKVnWB6rlHT1mWtsgbch ‘ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಕಾಯ್ದೆ, 1987’ರ ಅಡಿಯಲ್ಲಿ ಸ್ಥಾಪಿಸಲಾದ ಎನ್‌ಡಿಡಿಬಿ ರಾಷ್ಟ್ರೀಯ ಮಟ್ಟದ ಪ್ರಮುಖ ಸಂಸ್ಥೆಯಾಗಿದೆ. ರಾಷ್ಟ್ರವ್ಯಾಪಿ ಡೈರಿ ಮತ್ತು ಹಾಲು ಉತ್ಪನ್ನಗಳಿಗೆ ಸಂಬಂಧಿತ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಉತ್ತೇಜಿಸುವುದು, ಯೋಜಿಸುವುದು ಮತ್ತು ಸಂಘಟಿಸುವಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಷಾ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು. ಎನ್‌ಡಿಡಿಬಿಯು ಡೈರಿ ವಲಯದಲ್ಲಿ ಸಹಕಾರಿ ಕಾರ್ಯತಂತ್ರಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುತ್ತದೆ ಮತ್ತು ಸಹಕಾರಿಗೆ ಸಂಬಂಧಿಸಿದ ಆದೇಶಗಳನ್ನು ಕಾರ್ಯಗತಗೊಳಿಸಲು ಅಗತ್ಯ…

Read More

ಗುರುಪುರ: ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಓಂಪ್ರಕಾಶ್ ಶೆಟ್ಟಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉದಯ ಭಟ್ ಆಯ್ಕೆಯಾಗಿದ್ದಾರೆ. https://chat.whatsapp.com/EbVKVnWB6rlHT1mWtsgbch ನ್ಯಾಯಾಲಯದ ಆದೇಶದಂತೆ ರಿಟರ್ನಿಂಗ್‌ ಅಧಿಕಾರಿ ಎನ್‌.ಜೆ ಗೋಪಾಲ್‌ ಫಲಿತಾಂಶ ಘೋಷಣೆ ಮಾಡಿದರು. ಎಪ್ರಿಲ್‌ 2ರಂದು ಒಟ್ಟು ಸದಸ್ಯರ ಪೈಕಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು. ನೂತನ ಸದಸ್ಯರಾಗಿ ಪದ್ಮನಾಭ ಆಳ್ವ ಕೆ., ದಿನೇಶ್ ಜೆ.ಕರ್ಕೇರ, ಶೀನ ಕೋಟ್ಯಾನ್ ಜಿ, ಕಿಶೋರ್ ಕುಮಾರ್, ಸಚಿನ್ ಕುಮಾರ್ ಅಡಪ, ನಳಿನಾಕ್ಷಿ, ಲತಾ ಆರ್.ಶೆಟ್ಟಿ, ನಾಗಪ್ಪ ಬಿ., ರಾಜೇಶ್, ಶ್ರೀನಿವಾಸ ಸುವರ್ಣ ಹಾಗೂ ಸಂಜಯ ಅತಿಕಾರಿ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More