Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ
    News

    ನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ

    adminBy adminJune 6, 2025

    ಮೂಲಾಂಶ ಶೇ.50ರಷ್ಟು ಕಡಿತ, ಶೇ.೫.೫ ಇಳಿಕೆಯಾದ ರೆಪೋ ದರ

    ನವದೆಹಲಿ: ಸತತ ಮೂರನೇ ಬಾರಿ ರೆಪೋ ದರ ಕಡಿತಗೊಳಿಸುವ ನಿರೀಕ್ಷೆ ಹುಟ್ಟಿಸಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಬ್ಯಾಂಕ್‌ ಸಾಲಗಾರರಿಗೆ ಶುಭ ಸುದ್ದಿ ನೀಡಿದೆ. ದೇಶದ ಜಿಡಿಪಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್‌ಬಿಐ ನಿರೀಕ್ಷೆಗೂ ಮೀರಿ ರೆಪೋ ದರದಲ್ಲಿ 50 ಮೂಲಾಂಶ ಕಡಿತ ಮಾಡಿದೆ.

    https://chat.whatsapp.com/EbVKVnWB6rlHT1mWtsgbch
    ರೆಪೋ ದರದಲ್ಲಿ ಶೇ.25ರಷ್ಟು ಕಡಿತ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆರ್‌ಬಿಐ ಶೇ.50 ಕಡಿತ ಮಾಡಿ ಅಚ್ಚರಿ ಹುಟ್ಟಿಸಿದೆ. ಜಿಡಿಪಿಯು ನಾಲ್ಕು ವರ್ಷದ ಕನಿಷ್ಠ ಮಟ್ಟ ಶೇ.6.5ಕ್ಕೆ ಕುಸಿದಿದ್ದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಆರ್‌ಬಿಐ ಶೇ.5.50ರಷ್ಟು ಪ್ರಮಾಣದಲ್ಲಿ ರೆಪೋ ದರ ಕಡಿತಗೊಳಿಸಿದ್ದರಿಂದ ಗೃಹ ಸಾಲಗಳು ಹಾಗೂ ಕಾರು ಸಾಲಗಳ ಬಡ್ಡಿ ಕಡಿಮೆಯಾಗುವ ಸಾಧ್ಯತೆಗಳಿವೆ. ಆರ್‌ಬಿಐ ಹಣಕಾಸು ನೀತಿ ಸಮಿತಿ(ಎಂಪಿಸಿ)ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸತತ ಮೂರನೇ ಬಾರಿ ಪ್ರಮುಖ ಬಡ್ಡಿ ದರಗಳನ್ನು ಕಡಿತ ಮಾಡಿರುವುದರಿಂದ ಸಾಲಗಾರರಿಗೆ ಸಾಕಷ್ಟು ನೆರವು ಲಭಿಸಲಿದೆ.
    ಹಣದುಬ್ಬರವು ಶೇ.4ಕ್ಕಿಂತ ಕಡಿಮೆಯಾಗಿರುವುದು ಮತ್ತು ಅಮೆರಿಕದ ಸುಂಕ ನೀತಿಗಳಿಂದಾಗಿ ವ್ಯಾಪಾರದಲ್ಲಿ ಅನಿಶ್ಚಿತತೆಗಳು ಇರುವುದರಿಂದ, ಬೆಳವಣಿಗೆಯ ಪ್ರಮಾಣ ಹೆಚ್ಚಿಸಲು ಆರ್‌ಬಿಐ ಬಡ್ಡಿ ದರಗಳನ್ನು ತೀವ್ರವಾಗಿ ಕಡಿತಗೊಳಿಸಿದೆ. ಹಿಂದೆ ಎರಡು ಬಾರಿ ಬಡ್ಡಿ ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದ್ದ ಆರ್‌ಬಿಐ, ಇದೀಗ ಮೂರನೇ ಬಾರಿ ಬಡ್ಡಿ ದರಗಳನ್ನು ಕಡಿತಗೊಳಿಸಿರುವುದು ಉತ್ತಮ ಬೆಳವಣಿಗೆ ಎನ್ನಲಾಗುತ್ತಿದೆ.
    ಆರ್‌ಬಿಐ ಘೋಷಣೆಗೆ ಅನುಗುಣವಾಗಿ, ಅನೇಕ ಬ್ಯಾಂಕ್‌ಗಳು ರೆಪೋ ಸಾಲ ದರಗಳು ಮತ್ತು ಎಂಸಿಎಲ್‌ಆರ್ ಅನ್ನು ತೀವ್ರವಾಗಿ ಕಡಿಮೆ ಮಾಡಿವೆ. ಮೂರನೇ ಬಾರಿ ರೆಪೋ ದರ ಕಡಿಮೆಯಾಗಿದ್ದರಿಂದ ಸಾಲಗಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ರೆಪೋ ದರ ಕುಸಿತಗೊಂಡ ಬೆನ್ನಲ್ಲೇ ಗೃಹ ಸಾಲ (ಹೋಮ್ ಲೋನ್) ಮತ್ತು ಕಾರು ಸಾಲದ ಮೇಲೆ ವಿಧಿಸಲಾದ ಇಎಂಐ ಕೂಡ ಕಡಿಮೆಯಾಗಲಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Car Loan Home Loan mpc RBI REPO RATE Reserve Bank Of India
    Previous Articleಜೂನ್‌ 8ರಂದು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಕ್ಷಯ ಸೌಧ ಕಟ್ಟಡ ಉದ್ಘಾಟನೆ
    Next Article ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.