Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ
    News

    ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ

    adminBy adminJune 6, 2025

    ಗದಗ: ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ 2025ರ ಅಂಗವಾಗಿ ಗದಗ ಜಿಲ್ಲೆಯ ಸಹಕಾರ ಸಂಘಗಳು ಹಾಗೂ ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಸಹಕಾರದಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಕೆ.ಸಿ.ಸಿ. ಬ್ಯಾಂಕ್‌ನಲ್ಲಿ ಜರುಗಿತು.

    https://chat.whatsapp.com/EbVKVnWB6rlHT1mWtsgbch
    ಕೆ.ಸಿ.ಸಿ. ಬ್ಯಾಂಕ್ ಧಾರವಾಡ ಇದರ ನಿರ್ದೇಶಕ ಎಂ.ಎಫ್ ಕಲಗುಡಿ ಸಹಕಾರ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಸ್ವಚ್ಛ ಭಾರತ ಅಭಿಯಾನ’ದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವು ಈ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಿಸಿದ್ದು ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸಬಲ್ಲವು ಎಂಬುದು ಅದರ ಧ್ಯೇಯವಾಗಿದೆ. ಸಹಕಾರದಿಂದ ಸ್ವಚ್ಛತೆ ಅಭಿಯಾನ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಘಗಳು ವಿವಿಧ ಸ್ಥಳಗಳಲ್ಲಿ ವರ್ಷವಿಡೀ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳುವಂತೆ ಕರೆ ನೀಡಿದರು.


    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗದಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ.ಪಾಟೀಲ, ದೇಶ, ರಾಜ್ಯ, ಜಿಲ್ಲೆ ತಾಲೂಕು ಹಾಗೂ ಹಳ್ಳಿಗಳಿಂದ ಸ್ವಚ್ಛತೆಯ ಕೆಲಸ ಪ್ರಾರಂಭವಾಗಬೇಕು. ಅಂತಾರಾಷ್ಟ್ರೀಯ ಸಹಕಾರ ವರ್ಷದ ಅಂಗವಾಗಿ ಗದಗ ಜಿಲ್ಲೆಯಲ್ಲಿ ಮಹಾಮಂಡಳದ ನಿರ್ದೇಶನದಂತೆ ಸಹಕಾರದಿಂದ ಸ್ವಚ್ಛತಾ ಅಭಿಯಾನ ಪ್ರಾರಂಭಿಸಲಾಗಿದ್ದು ಮುಂದೆ ‘ಏಕ್ ಪೇಡ ಮಾ ಕಿ ನಾಮ್‌ ಸೇ’ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದಕ್ಕೂ ತಮ್ಮೆಲ್ಲರ ಸಹಕಾರ ಇರಲಿ ಎಂದರು.
    ಗದಗ ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಎಸ್.ಕೆ.ಕುರಡಗಿ, ಮರ್ಚಂಟ್ಸ್ ಅರ್ಬನ್ ಬ್ಯಾಂಕ್ ಗದಗ ಇದರ ಅಧ್ಯಕ್ಷ ಕೆ.ಎಸ್.ಚಟ್ಟೆ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್ ಕಬಾಡೆ, ರೋಣ, ಶಿರಹಟ್ಟಿ ಮತ್ತು ನರಗುಂದ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ, ಕೆ.ಸಿ ಕೂಸನೂರಮಠ, ಪ್ರಕಾಶ ನವಲಗುಂದ, ಕೆ.ಸಿ.ಸಿ. ಬ್ಯಾಂಕ್ ಮ್ಯಾನೇಜರ್‌ ಆರ್.ಎಸ್. ಕಟ್ಟೆ, ಪ್ರಭಾರ ಜಿಲ್ಲಾ ನಿಯಂತ್ರಣಾಧಿಕಾರಿ ಎಸ್.ವಿ ಚಳಗೇರಿ ಹಾಗೂ ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಡಾ.ಪ್ರಸನ್ನ ಪಟ್ಟದ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ವಿಸ್ತರಣಾಧಿಕಾರಿಗಳು ಉಪಸ್ಥಿತರಿದ್ದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರ ಶಿಕ್ಷಕಿ ರಶೀದಾಬಾನು ಸಿ.ಯಲಿಗಾರ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Gadaga Jilla Sahakara Union KCC Bank Dharwad M F Kalagudi Sahakar Se Swachhatha Abhiyan
    Previous Articleನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ
    Next Article ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿಯಿಂದ ಹಣ್ಣಿನ ಸಸಿಗಳ ನಾಟಿ, ಗಿಡ ವಿತರಣೆ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.