Author: admin

ತೊಕ್ಕೊಟ್ಟು : ದಕ್ಷಿಣಕನ್ನಡ ಜಿಲ್ಲೆಯ ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ ತೊಕ್ಕೊಟ್ಟು ಇದರ 14ನೇ ವರ್ಷದ ವಾರ್ಷಿಕ ಮಹಾಸಭೆ ಭಾನುವಾರ ಕುತ್ತಾರು M.Y.M ಸಭಾಂಗಣದಲ್ಲಿ ಅಧ್ಯಕ್ಷರಾದ ವಿಜಯ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಸದಸ್ಯರಾದ ಸುಕೇಶ್ ಮಂಜನಾಡಿ ಸ್ವಾಗತಿಸಿದರು. ಮಹಾಸಭೆಯನ್ನು ಸಹಕಾರಿಯ ಅಧ್ಯಕ್ಷರು ವಿಜಯ ಗೌಡ, ಉಪಾಧ್ಯಕ್ಷರು ಸುಂದರ ಗಟ್ಟಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷರಾದ ವಿಜಯ ಗೌಡ, ಸಂಘವು ಪ್ರಸ್ತುತ ರೂ.4.82 ಕೋಟಿ ವ್ಯವಹಾರ ನಡೆಸಿದ್ದು, ರೂ.7,37,460.83 ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.5 ಪ್ರತಿಶತ ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಕ್ರಮ್ ಶೆಟ್ಟಿಯವರು 2025 – 26ನೇ ಸಾಲಿನ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. 2026ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದ ಸ್ವಸಹಾಯ ಸಂಘದ ಸದಸ್ಯರ 5 ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು 1…

Read More

ಅಧ್ಯಕ್ಷ ಸ್ಥಾನಕ್ಕೆ ಡಿ.ಎನ್. ಠಾಕೂರ್, ಉಪಾಧ್ಯಕ್ಷ ಸ್ಥಾನಕ್ಕೆ ಅಣ್ಣಾಸಾಹೇಬ್ ಜೊಲ್ಲೆ ಹೆಸರು ಮುನ್ನೆಲೆಯಲ್ಲಿ ನವದೆಹಲಿ: ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ)ದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಚುನಾವಣೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತನ್ನದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಹಕಾರ ಭಾರತಿ ಮುಂದಾಗಿದೆ ಎಂದು ವರದಿಯಾಗಿದೆ. https://chat.whatsapp.com/FCEnlTkAKCC0MGPhXtX4i4 ಎನ್‌ಸಿಯುಐ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತಿಯೊಂದಿಗೆ ಗುರುತಿಸಿಕೊಂಡಿರುವ ಅಭ್ಯರ್ಥಿಗಳು 21 ಸ್ಥಾನಗಳ ಪೈಕಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ನಿಲುವಿನಲ್ಲಿ ಬದಲಾವಣೆ ಬಂದಿದೆ ಎನ್ನಲಾಗಿದೆ. ಈ ಹಿಂದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಬೆಂಬಲಿಸುವ ಸಾಧ್ಯತೆಯನ್ನು ಸಹಕಾರ ಭಾರತಿ ಹೊಂದಿತ್ತು. ಆದರೆ ಆಡಳಿತ ಮಂಡಳಿಯಲ್ಲಿ ತನ್ನ ಬೆಂಬಲಿತ ಸದಸ್ಯರ ಸಂಖ್ಯೆಯನ್ನು ಪರಿಗಣಿಸಿ ಇದೀಗ ಉನ್ನತ ಹುದ್ದೆಗಳಿಗೆ ನೇರವಾಗಿ ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಸಹಕಾರ ಭಾರತಿಯ ಆಂತರಿಕ ವಲಯದಲ್ಲಿ ಸಂಸ್ಥೆಯ ಪೋಷಕರಾಗಿರುವ ಡಿ.ಎನ್. ಠಾಕೂರ್ ಅವರನ್ನು…

Read More

ಮೈಸೂರು: ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್‌ ಬ್ಯಾಂಕ್‌ ನಿಯಮಿತದ 2025-26ನೇ ಸಾಲಿನ 120ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. https://chat.whatsapp.com/FCEnlTkAKCC0MGPhXtX4i4 ನಗರದ ಜೆ.ಕೆ.ಮೈದಾನದ ಅಲ್ಯುಮಿನಿಯಂ ಆಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆ ಬ್ಯಾಂಕ್‌ನ ಅಧ್ಯಕ್ಷ ಜೆ.ಯೋಗೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ ಮಾತನಾಡಿದ ಅವರು, ಈ ಸಾರಿ ಸಭೆಯಲ್ಲಿ ನಮ್ಮ ಮೇಲೆ ನಂಬಿಕೆ ಇಟ್ಟು ಆಡಳಿತ ಮಂಡಳಿಯ ಎಲ್ಲಾ ತೀರ್ಮಾನಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಮರಣ ನಿಧಿಗೆ ವಂತಿಗೆ ಕೊಡದಿದ್ದವರಿಗೂ ಮರಣನಿಧಿ ಕೊಡಲು ತೀರ್ಮಾನ ಕೈಗೊಳ್ಳಲು ನಮಗೆ ಅವಕಾಶ ನೀಡಿದ್ದಾರೆ. 1ಕೋಟಿ 30ಲಕ್ಷ ರೂ. ಲಾಭವನ್ನು 33373 ಸದಸ್ಯರ ಉಳಿತಾಯ ಖಾತೆಗೆ ಶೇ.10 ಲಾಭಾಂಶವನ್ನು ಪ್ರತಿ ಸದಸ್ಯರಿಗೂ ನೀಡಲಾಗುತ್ತಿದೆ. ಈಗಾಗಲೇ ಪ್ರತ್ಯೇಕ ಶಾಖೆ ತೆರೆಯಲು ಗುದ್ಧಲಿಪೂಜೆ ನೇರವೇರಿಸಿದ್ದು, ಮುಂದಿನ ಸಭೆಯೊಳಗೆ ಅದರಲ್ಲಿ ಭವನ ನಿರ್ಮಾಣಕ್ಕೆ ಎಲ್ಲರನ್ನು ಗಣನೆಗೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು. ಸಂಘದ ಸದಸ್ಯರ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿಯ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 120ನೇ ವರ್ಷದ ವಾರ್ಷಿಕ ಸಭೆ…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಸಂಘ, ಶ್ರೀಶಾ ಸೌಹಾರ್ದ ಸೊಸೈಟಿಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಂ.ಎಸ್.ಗುರುರಾಜ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿತು. https://chat.whatsapp.com/FCEnlTkAKCC0MGPhXtX4i4 ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಎಂ.ಎಸ್‌ ಗುರುರಾಜ್ ಅವರು, ಶ್ರೀಶಾ ಸೌಹಾರ್ದ ಸೊಸೈಟಿಯು 2019ರಲ್ಲಿ ಉನ್ನತ ಧ್ಯೇಯೋದ್ದೇಶಗಳೊಂದಿಗೆ ಆರಂಭಗೊಂಡಿತು. ಶಿಸ್ತುಬದ್ಧ ಹಾಗೂ ಪಾರದರ್ಶಕ ವ್ಯವಹಾರದ ಮೂಲಕ ಗಳಿಸಿದ ಲಾಭದ ದೊಡ್ಡ ಪಾಲನ್ನು ಮರಳಿ ಸಮಾಜಕ್ಕೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನೀಡುತ್ತ ಬರುತ್ತಿದೆ. ಪ್ರಥಮ ವರ್ಷದಲ್ಲೇ ನಿವ್ವಳ ಲಾಭ ಗಳಿಸಿ ಸಾಧನೆಯ ಶಿಖರ ಏರಲು ಆರಂಭಿಸಿತು. 2025 -26ನೇ ಸಾಲಿನಲ್ಲಿ 2.25 ಕೋಟಿ ರೂ. ನಿವ್ವಳ ಲಾಭ ಗಳಿಸಿ ದಾಖಲೆ ನಿರ್ಮಿಸಿದೆ. ಸಾಲ ವಸೂಲಾತಿಯಲ್ಲಿ ಶೇ.98.5ರ ಗುರಿ ತಲುಪಿರುವುದೇ ಇಷ್ಟು ಲಾಭ ಗಳಿಸಲು ಕಾರಣ. ಠೇವಣಿ ಸಂಗ್ರಹ, ಸಾಲ ನೀಡಿಕೆ, ವಸೂಲಾತಿಯೂ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿರುವುದಕ್ಕೆ ಆಡಳಿತ ಮಂಡಳಿಯ ಸಲಹೆ, ಮಾರ್ಗದರ್ಶನಗಳ ಜೊತೆಗೆ ಸಿಬ್ಬಂದಿ ವರ್ಗದ ಅವಿರತ ಶ್ರಮವೇ…

Read More

ಮಂಗಳೂರು: ಇಲ್ಲಿನ ನಿವೃತ್ತ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಕ್ರೆಡಿಟ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ ನಿಯಮಿತ ಮಂಗಳೂರು ಇದರ 2025-2026ನೇ ಸಾಲಿನ ಸಾಮಾನ್ಯ ಸರ್ವ ಸದಸ್ಯರ ಸಭೆಯು ಭಾನುವಾರ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು. https://chat.whatsapp.com/FCEnlTkAKCC0MGPhXtX4i4 ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ವಹಿಸಿದ್ದರು. ಸೊಸೈಟಿಯ ಉಪಾಧ್ಯಕ್ಷರಾದ ದಿನಕರ ಪೂಂಜಾ, ನಿರ್ದೇಶಕರಾದ ಕೆ.ಟಿ. ರೈ, ಉದಯ ಕುಮಾರ, ಟಿ. ವಿ.ರೈ, ಕೆ.ನರೇಂದ್ರನಾಥ ಕಾಮತ್, ಶಾಲಿನಿ ಶೆಟ್ಟಿ, ಶೋಭಾ ರಾವ್, ಶ್ಯಾಮಸುಂದರ ರಾವ್, ಜೆ.ವಿ. ಶೆಟ್ಟಿ, ಪ್ರೇಮನಾಥ, ಸದಾಶಿವ ವಿ.ಎಸ್, ದಿನಕರ ರೈ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಸದಸ್ಯರಿಗೆ 2025-2026 ಸಾಲಿಗೆ ಶೇ. 14 ಲಾಭಾಂಶ ಘೋಷಣೆ ಮಾಡಲಾಯಿತು.

Read More

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಸಾಧನಾ ಪ್ರಶಸ್ತಿ ಲಭಿಸಿದೆ. ಸಂಘಕ್ಕೆ ಪ್ರಥಮ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್‌ ಸಾಧನಾ ಪುರಸ್ಕಾರ ಲಭಿಸಿದೆ. https://chat.whatsapp.com/FCEnlTkAKCC0MGPhXtX4i4 2025-26ನೇ ಆರ್ಥಿಕ ಸಾಲಿನಲ್ಲಿ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘವು ರೂ. 294.84 ಕೋಟಿ ವ್ಯವಹಾರ, ರೂ.24. 37 ಕೋಟಿ ಠೇವಣಿ, ರೂ. 21.94 ಕೋಟಿ ಸಾಲ ಹಾಗೂ ರೂ. 48.51 ಲಕ್ಷ ಲಾಭ ಗಳಿಸಿ, ಅಭೂತಪೂರ್ವ ಸಾಧನೆ ಮಾಡಿ ಈ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ|| ಎಂ.ಎನ್ ರಾಜೇಂದ್ರ ಕುಮಾರ್ ಅವರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಎನ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಈ ಸಂದರ್ಭ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್ ಎನ್ ರಮೇಶ್, ಸಂಘದ ನಿರ್ದೇಶಕರಾದ ಸಂಜೀವ ಪೂಜಾರಿ ಎಂ ಎಸ್,…

Read More

ವಿಟ್ಲ: ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಸಾಧನಾ ಪ್ರಶಸ್ತಿ ಲಭಿಸಿದೆ. ಸಂಘಕ್ಕೆ ಸತತ ಐದನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್‌ ಸಾಧನಾ ಪುರಸ್ಕಾರ ಲಭಿಸಿದೆ.https://chat.whatsapp.com/FCEnlTkAKCC0MGPhXtX4i4 2025-26ನೇ ಆರ್ಥಿಕ ಸಾಲಿನಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಸಂಘವು ರೂ.1088 ಕೋಟಿ ವ್ಯವಹಾರ, ರೂ.149. 84 ಕೋಟಿ ಠೇವಣಿ, ರೂ.125.63 ಕೋಟಿ ಸಾಲ ಹಾಗೂ ರೂ. 4.04 ಕೋಟಿ ಲಾಭ ಗಳಿಸಿ, ಅಭೂತಪೂರ್ವ ಸಾಧನೆ ಮಾಡಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರು ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್ ಜಗನ್ನಾಥ ಸಾಲಿಯಾನ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶಾಮ್ ಕೆ ಅವರನ್ನು ಪ್ರಶಸ್ತಿ ನೀಡಿ ಸಭೆಯಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್ ಎನ್ ರಮೇಶ್, ಸಂಘದ ನಿರ್ದೇಶಕರಾದ ವಿಶ್ವನಾಥ ಎಂ, ದಯಾನಂದ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Read More

ಬಂಟ್ವಾಳ: 2025-2026ನೇ ಸಾಲಿನಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಆರ್ಥಿಕ ವ್ಯವಹಾರದಲ್ಲಿ ಗಣನೀಯ ಸಾಧನೆ ಮಾಡಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿಯವರನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರು ಗೌರವಿಸಿ ಸಾಧನಾ ಪ್ರಶಸ್ತಿ ನೀಡಿದರು. https://chat.whatsapp.com/FCEnlTkAKCC0MGPhXtX4i4 ಈ ಸಂದರ್ಭದಲ್ಲಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಟಿ.ಜಿ.ರಾಜಾರಾಮ್ ಭಟ್, ದೇವಿಪ್ರಸಾದ್ ಶೆಟ್ಟಿ, ಶಶಿಕುಮಾರ್ ರೈ, ಜಯರಾಮ ರೈ, ಸದಾಶಿವ ಉಳ್ಳಾಲ್ ಸೇರಿದಂತೆ ಎಲ್ಲಾ ನಿರ್ದೇಶಕರು,ಸಹಕಾರ ಸಂಘಗಳ ಉಪ ನಿಭಂದಕರಾದ ಎಚ್.ಎನ್.ರಮೇಶ್, ನಬಾರ್ಡ್ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಣೆ ಮಂಗಳೂರು: ಇಲ್ಲಿನ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅವರ ವಾರ್ಷಿಕ ವರದಿ, ಲೆಕ್ಕಪರಿಶೋಧಿತ ಆರ್ಥಿಕ ಪತ್ರಿಕೆಗಳು, ಅನುಪಾಲನಾ ವರದಿ, ಲಾಭಾಂಶದ ವಿಂಗಡಣೆ ಹಾಗೂ 2026-27ನೇ ಸಾಲಿನ ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿ ಸದಸ್ಯರ ಅನುಮೋದನೆ ಪಡೆಯಲಾಯಿತು. 2025-26ನೇ ಸಾಲಿಗೆ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಪಾವತಿಸಲು ಸಭೆ ಮಂಜೂರಾತಿ ನೀಡಿತು. https://chat.whatsapp.com/FCEnlTkAKCC0MGPhXtX4i4 ಸಾಧನೆಗೈದ ಐವರು ಶಿಲ್ಪಿಗಳಿಗೆ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸ್ವರ್ಣಶಿಲ್ಪಿ ಜಯರಾಮ ಪೇಜಾವರ ಅತ್ತಾವರ, ಕಾಷ್ಠಶಿಲ್ಪಿ ಪ್ರಭಾಕರ ಆಚಾರ್ಯ ಕಂದಾವರ, ಅಯಸ್‌ ಶಿಲ್ಪ ಲಿಂಗಪ್ಪ ಆಚಾರ್ಯ ವಾಮಂಜೂರು, ಎರಕ ಶಿಲ್ಪ ಯಶೋಧರ ಆಚಾರ್ಯ ಪೆರಾಡಿ, ಶಿಲಾ ಶಿಲ್ಪ ಬಿ.ವಿಜಯ್‌ ಆಚಾರ್ಯ ಬಸ್ರೂರು ಇವರಿಗೆ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈದಿಕ ಕ್ಷೇತ್ರದಲ್ಲಿ…

Read More

2025–26ನೇ ಸಾಲಿನ ಪಟ್ಟಣ ಸಹಕಾರ ಬ್ಯಾಂಕ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೆ ಎಸ್ಸಿಡಿಸಿಸಿ ಬ್ಯಾಂಕ್ ಗೌರವ ಮಂಗಳೂರು: ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿರುವ ಎಂಸಿಸಿ ಬ್ಯಾಂಕ್, 2025–26ನೇ ಸಾಲಿನ ಪಟ್ಟಣ ಸಹಕಾರ ಬ್ಯಾಂಕ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್ಸಿಡಿಸಿಸಿ) ಬ್ಯಾಂಕಿನ ಪ್ರತಿಷ್ಠಿತ ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ 2025–26ಗೆ ಭಾಜನವಾಗಿದೆ. https://chat.whatsapp.com/FCEnlTkAKCC0MGPhXtX4i4 2025–26ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ದಾಖಲಿಸಿದ ಸರ್ವತೋಮುಖ ಪ್ರಗತಿ, ಗಮನಾರ್ಹ ಬೆಳವಣಿಗೆ, ಸ್ಥಿರವಾದ ಆರ್ಥಿಕ ಸಾಧನೆ, ಕಾರ್ಯಾಚರಣೆಯ ಶ್ರೇಷ್ಠತೆ ಹಾಗೂ ಸಮರ್ಪಿತ ಗ್ರಾಹಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶನಿವಾರ ನಡೆದ ಎಸ್ಸಿಡಿಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಎಂಸಿಸಿ ಬ್ಯಾಂಕ್ ಪರವಾಗಿ ಉಪಾಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು, ನಿರ್ದೇಶಕರು ಹಾಗೂ ಉಪ ಪ್ರಧಾನ ವ್ಯವಸ್ಥಾಪಕರು ಪ್ರಶಸ್ತಿ ಸ್ವೀಕರಿಸಿದರು. ಈ…

Read More